Friday

ಗೂಗಲ್ ಸರ್ಚ್ ನಲ್ಲಿ ವಿ ಭಟ್ಟರು ನಂ.1 (ಮನೆ ವಿಳಾಸ)


ಸುವರ್ಣ ಚಾನೆಲ್ ಬ್ರೇಕಿಂಗ್ ಸುದ್ದಿ. ಅಚ್ಚರಿಯ ಬೆಳವಣಿಗೆಯಲ್ಲಿ ಗೂಗಲ್ ಸರ್ಚ್ ನಲ್ಲಿ ಅಗ್ರ ಸ್ಥಾನದಲ್ಲಿದ್ದ ಬ್ರಿಟ್ನಿ ಸ್ಪಿಯರ್ಸ್ ಈಗ ಎರಡನೇ ಸ್ಥಾನಕ್ಕೆ ಇಳಿದಿದ್ದಾಳೆ. ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟವರು ಭಾರತೀಯರು ಎನ್ನುವುದು ವಿಶೇಷ. ಯಾರೆಂದು ಬಲ್ಲಿರಾ ? ವಿ ಭಟ್ಟರು ! ಕರ್ನಾಟಕದ ಸುವರ್ಣ ಪ್ರಭೆಯ ಪೀಠಾರೋಹಣ ಬಳಿಕ ಮೊದಲನೇ ದಿನ ವಿಭಟ್ಟರ ಹೊಸ ಮನೆ ವಿಳಾಸವನ್ನು ಗೂಗಲ್ಹು ಸರ್ಚ್ ನಲ್ಲಿ ಹುಡುಕುವವರ ಸಂಖ್ಯೆ ಮಿಲಿಯಕ್ಕೇರಿದೆ !
ಮನೆ ಮುಂದೆ ಜೋಳಿಗೆ ಹಿಡಿದುಕೊಂಡು ಬಂದವರ ಸಂಖ್ಯೆ ಮಾಭ್ ನಲ್ಲಿದ್ದ ಕಾರಣ ಕೆಂಗೇರಿಯಿಂದಲೇ ಟ್ರಾಪಿಕ್ ಜಾಮ್ ಉಂಟಾಗಿದೆ. ಪೊಲೀಸರು ಕೊನೆಗೆ ಆಶ್ರು ವಾಯು ಸಿಡಿಸಬೇಕಾಯಿತು. ಭಟ್ಟರ ಮೊಬೈಲ್ ಕರೆಗಳ ಹಾವಳಿ ಎಷ್ಟಿತ್ತೆಂದರೆ ಮೊಬೈಲ್ ಚಾರ್ಜ್ ಮಾಡಿಸಲೆಂದೇ ಸಿಬ್ಬಂದಿ ನೇಮಿಸಿದ್ದಾರಂತೆ. ಅಂದ ಹಾಗೆ ಈ ಸುದ್ದಿ ಯಾವ ಮಾಧ್ಯಮದಲ್ಲಿಯೂ ಬಂದಿಲ್ಲ, ಏಕೆಂದರೆ ಬಂದವರೆಲ್ಲ ಪತ್ರಕರ್ತರೇ ಆಗಿದ್ದರಂತೆ.. !
ದೈತ್ಯ ಸಂಸ್ಥೆಯಲ್ಲಿ ಸಿಕ್ಕಿದ ಚಿಲ್ಲರೆ ಇನ್ ಕ್ರಿಮಿ ನೆಂಟ್ ಕಂಡು ಕೆಂಡವಾದ ಮಂದಿ ಕಂಡ ಕಂಡವರಲ್ಲಿ ಅವಲತ್ತುಕೊಂಡರಂತೆ. ದೊಡ್ಡ ದೊಡ್ಡ ಬಕಿಟ್ ಇಟ್ಟುಕೊಂಡವರ ಹುಂಡಿಯೂ ಭರ್ತಿಯಾಗಿಲ್ಲ ವಂತೆ. ಹೀಗಾಗಿ ಹೆಚ್ಚಿನ ದಕ್ಷಿಣೆ ಆಸೆಯಿಂದ ವಿ ಭಟ್ಟರ ಮನೆ ಮುಂದೆ ಮೈಲುದ್ದ ಕ್ಯೂ ನಿಂತಿದೆ. ಶತ್ರುಗಳನ್ನೂ ಪ್ರೀತಿಸುವ ಭಟ್ಟರು ನಮ್ಮನ್ನು ತೆಗೆದು ಹಾಕರು ಎಂಬ ನಂಬಿಕೆ.
ಕೆಪಿ ಟಿಕೆಟ್ ಆಕಾಂಕ್ಷಿಕಗಳ (ಸಂಭಾವ್ಯರ) ಮೂರನೇ ಪಟ್ಟಿ
1.ಎಚ್ ಕೆ... (ಲವಲವಿಕೆ ಮನುಷ್ಯ
2.. ಜೆ.ಕೆ.ಎಸ್. (ಗಂಡೆದೆ ಮನುಷ್ಯ)
3ಜೆ.ಕೆ. (ಕಂಡದ್ದು ಕೆಂಡದ ಹಾಗೆ ! )
4.ಜೀಕೆ (ಬದುಕಿದರೆ ಬೇಡಿ ತಿಂದೇನು )
4. ಸಿ ಕೆ (ಬದುಕಿದರೆ ಸಾಕು)
5. ಆರ್ ಎಂಡಿ (ಮುಂಡಿಗೆ ಹೂವಿನಂಥವರು )
6 ಎಚ್ ಆರ್ (ಮಾನವ ಸಂಪನ್ಮೂಲ ಅಲ್ಲ. ಎಲ್ಲದಕ್ಕೂ ಸೈ)
7 ಎಸ್ ಆರ್ ( ಯಾರಿಗೂ ರೇಗುವುದಿಲ್ಲ !)
8. ಆರ್ ಎನ್ ಕೆ.. (ಲವಲವಿಕೆ ಹುಡುಗ)


9.ವೈ ಕೆ (ಕಮರ್ಷಿಯಲ್ ಮನುಷ್ಯ)
10.ಎಂಬಿ. ಬಿಎಸ್
ಇತರ
ಆರ್್ ಕೆ..
ಕೆ.ಬಿ
ಎಸ್.ಕೆ.
ವಯ್ಟಿಂಗ್ ಲೀಸ್ಟ್
>ಎಲ್ ಕೆ
>ಕೆಕೆ
....
ಇನ್ನು ಎಸ್ ಕೆ ಅಂದರೆ ಸಂಕೇಶ್ವರ ಬಸ್ ಟಿಕೆಟ್ ಕಾಯ್ದಿರಿಸಿದವರು
ಎಲ್ಲ ಬ್ಯೂರೊಗಳಿಂದಲೂ ಅರ್ಜಿಗಳ ಮಹಾಪೂರ... ಬಂದಿದ್ದು ಪ್ರಮುಖರ ಮಾಹಿತಿ ಮಾತ್ರ ನೀಡಲಾಗಿದೆ.
ಯುಕೆ ಬಾಬಾ ಮತ್ತು 20 ಮಂದಿ .....ರು
ಆರ್ ಕೆ ಮತ್ತು ತಂಡ (ರೆಸ್ಪಾನ್ಸ್)
ಎ ಕೆ (ಬಿಎನ್ ಜಿ)
ಎಲ್ ಕೆ (ಬಿಎನ್ ಜಿ)
ಕೆಕೆ (ಬಿಎನ್ ಜಿ)

ವೆಯ್ಟಿಂಗ್ ಲೀಸ್ಟ್ ನ ಲ್ಲಿರುವನ್ನು ಮತ್ತು ಎರಡೂ ಕಡೆ ಆಕಾಂಕ್ಷಿಗಳನ್ನು ಪರಿಗಣಿಸುವ ಸಾಧ್ಯತೆ ಗಳು ಇಲ್ಲ ಎಂದು ಭಟ್ಟರ ಉನ್ನತ ಮೂಲಗಳು ತಿಳಿಸಿವೆ.10

1 comment:

Anonymous said...

ಸುಮಾರು 11 ವರ್ಷಗಳ ಕಾಲ ದುಡಿದ ವಿಜಯ ಕರ್ನಾಟಕದಿಂದ ದೂರವಾಗುತ್ತಿದ್ದೇನೆ. ಕಂಪನಿ ನನ್ನಿಂದ ಬಲವಂತದ ಡೈವೋರ್ಸ್ ಕೇಳಿದೆ.ನಕ್ಸಲ್, ಮಂಗಳೂರು ಟೆರರ್, ಅಂಡರ್ ವಲ್ಡ್, ಸರಣಿ ಹಂತಕ ಮೋಹನ, ಬೀದಿ ಮಕ್ಕಳ ಕುರಿತ ಸಾಮಾಜಿಕ ಕಳಕಳಿ, ಬುಡಕಟ್ಟು ಜನಾಂಗ ಕೊರಗರ ಬಗ್ಗೆ ಸರಣಿ ಲೇಖಗಳಿಗೆ ವಡ್ಡರ್ಸೆ, ಗ್ರಾಮೀಣ ವರದಿಗಾರಿಕೆಗೆ ಪ.ಗೋ. ಇತ್ತೀಚೆಗೆ ಮಾನವೀಯ ವರದಿಗಳಿಗೆ ಗವರ್ನರ್ ಕೈಯಲ್ಲಿ ಚರಕ ಅವಾರ್ಡ್ ಕೂಡಾ ಪಡೆದಿದ್ದೆ. ವಿಮಾನ ದುರಂತ ವರದಿಗಾಗಿ ಸಂಪಾದಕರಿಂದ ಶಹಬ್ಬಾಸ್ ಪತ್ರ, ಸಿಇಒ ರಿಂದ ವಿಶೇಷ ಪ್ರಶಂಸಾಪತ್ರ ಬಂದ ಆರೇ ತಿಂಗಳಲ್ಲಿ ಗಂಗಾವತಿಗೆ ವರ್ಗಾವಣೆ ಮಾಡಿಸಿದರು. ಸಂಪಾದಕರಿಂದ ಶಿಫಾರಸು, ಸಿ ಇ ಒ ನಿಂದ ಮೆಚ್ಚುಗೆ ಪತ್ರ ನೀಡಿದ್ದರು, ವಿಶ್ವೇಶ್ವರ ಭಟ್ಟರು ವಿಕೆ ಬಿಟ್ಟ ಬಳಿಕ ನನಗೆ ವರ್ಗಾವಣೆ ಪತ್ರ ಕೊಟ್ಟರು. ಗಂಗಾವತಿಯಲ್ಲಿ ನನಗೆ ಆಫೀಸ್ ಅಸಿಸ್ಟೆಂಟ್ ಕೆಲಸ ನೀಡಿ ಅವಮಾನಿಸಿದರು. ಈಗ ರಾಜೀನಾಮೆ ಪತ್ರ ಕೇಳಿದರು. ಕಿರುಕುಳಕ್ಕೆ ನೊಂದು ರಾಜೀನಾಮೆ ನೀಡಿದ್ದೇನೆ. ಹಣತಿನ್ನುವ ಭ್ರಷ್ಟರೇ ನನ್ನ ಮೇಲೆ ಸವಾರಿ ಮಾಡಿದರು ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಇದೆಂಥ ಅನ್ಯಾಯ?
ಸದ್ಯಕ್ಕೆ ಮನೆವಾಸವೇ ಗತಿ.-ಜಿತೇಂದ್ರ ಕುಂದೇಶ್ವರ ಮಾಜಿ ಪ್ರಧಾನ ವರದಿಗಾರ ವಿಕೆ.