Saturday

ಮೂವರು ರೋಲ್ ಕಾಲ್ ಪತ್ರಕರ್ತರೂ ಮಾಧ್ಯಮಗಳೂ



ಪತ್ರಿಕೋದ್ಯಮಿಗಳು ಹೇಗೆ ಬೆಳೆಯುತ್ತಾರೆ ಎಂಬುದು ಬಟಾ ಬಯಲಾಗುತ್ತಿದೆ. ನಮ್ಮ ಬೆಂಗಳೂರಿನ ಮೂರು ಖತರ್ನಾಕ್ ವರದಿಗಾರರು ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿ ದೋಚಲು ಹೊಂಚು ಹಾಕಲು ಹೋಗಿ ಇಂಗು ತಿಂದ ಮಂಗನಂತಾಗಿದ್ದಾರೆ.



ಈ ಬ್ಲ್ಯಾಕ್ ಮೇಲ್ ಪತ್ರಕರ್ತರನ್ನು ಬೆಂಗಳೂರಿನ ಕಳ್ಳ ಪೊಲೀಸರು ಬಂಧಿಸಿಲ್ಲ. ಈ ಸುದ್ದಿಯನ್ನು ಎಲ್ಲ ಪತ್ರಿಕೆಗಳು ಪ್ರಕಟಿಸಿಲ್ಲ. ಪ್ರಕಟಿಸಿದವರು ವರದಿಗಾರರ ಹೆಸರು ಹಾಕಿಲ್ಲ. ಒಬ್ಬಾತ ಅಹಿಂದೂ ಪತ್ರಿಕೆಯ ತುಂಬಾ ಹಳೆಯ ವರದಿಗಾರ ಮತ್ತು ಕಸುಬಿನಲ್ಲಿ ಪಳಗಿದ ಹಳೇ ಗಿರಾಕಿ. ಇನ್ನಿಬ್ಬರು ಪತ್ರಿಕೋದ್ಯಮದಲ್ಲಿ ಇರದ ಉ ಟಿವಿ ವಂಚಕರು. ಯಾವ ಟಿವಿ ಚಾನಲುಗಳು ಎಫ್ ಐ ಆರ್, ಪೋಲೀಸ್, ಕ್ರೈಮ್ ಸ್ಟೋರಿಗಾಗಿ ಅರ್ಧ ಗಂಟೆ ಕಾರ್ಯಕ್ರಮ ಮಾಡುವ ಮನಸ್ಸು ಮಾಡಿಲ್ಲ.



ಕುಲ ಬಾಂಧವರ ಬಗ್ಗೆ ಅಸ್ಟೊಂದು ಕನಿಕರ. ಖದೀಮರು ಸಚಿವೆ ಶೋಭಾ ಕರಂದ್ಲಾಜೆ ಹೆಸರು ಹೇಳಿಕೊಂಡು ಡೀಲ್ ಮಾಡಲು ಹೋಗಿದ್ದರು. ಆಂಧ್ರ ಕರೆಂಟು ಕಂಪೆನಿಗೆ ಸರಕಾರ ೧೭ ಕೋಟಿ ಹಣಕೊಡಲು ಇತ್ತು. ಅದನ್ನು ವಸೂಲು ಮಾಡಲು ಕಂಪನಿಯಿಂದ ಹತ್ತು ಪೆರ್ಸೆಂಟ್ ಕೇಳಲಾಗಿತ್ತು. ಇದರ ಹಿಂದಿರುವ ಸೂತ್ರದಾರ ಒಬ್ಬ ಬಿಜೆಪಿ ಎಮೆಲ್ಸಿ ಇದ್ದಾನೆ.ಯಡ್ಡಿ ಸರಕಾರ ಬಂದ ಮೇಲೆ ಪತ್ರಿಕೋದ್ಯಮದ ಭ್ರಷ್ಟಚಾರ ಪರಕಾಷ್ಟೆ. ತಲುಪಿದೆ. ವಿಧಾನಸೌಧ, ಎಂ ಎಸ್ ಕಟ್ಟಡ, ಸಿಟಿ ಕಾರ್ಪೊರೇಷನ್ ದೊಡ್ಡ ಅಡ್ಡಗಾಲು. ಮಿಡ್ಲು ಮ್ಯಾನ್ ಬೇಕಾಗಿಲ್ಲ. ಬಿಲ್ ಪಾಸು ಮಾಡುತ್ತಾರೆ, ಟೆಂಡರ್ ಫಿಕ್ಸ್ ಆಗುತ್ತೆ. ಹೀಗಿದೆ ಪತ್ರಿಕೋದ್ಯಮ.



ಕೃಪೆ: ನ್ಯೂ ಮೀಡಿಯಾ ಬ್ಲಾಗ್.....



ಪೇಪರ್ "ಖುಸಿತ" ವಿಸಯ ! ಇದು ವಿಕೆ ವಿಸ್ಮಯ



ವಿಶಿಷ್ಟ ರಂಗನಾಥ, ವಿಚಿತ್ರ ಅನಾಥರ ಬಗ್ಗೆ ಬರೆದಷ್ಟು ಮುಗಿಯದು. ಮಂಗಳೂರಿನ ವಿಕೆಯಲ್ಲಿ ಮೂಡಿ ಬರುತ್ತಿರುವ ಅಭಿಯಾನ ಪ್ರೆಸ್ ಕ್ಲಬ್ ಗಳಲ್ಲಿ ಸಕಾರಾತ್ಮಕವಾಗಿ ಚರ್ಚೆ ಆಗುತ್ತಿದ್ದರೆ ಒಳಗೊಳಗೆ ಚೇಳುಗಳು ಕೊತ ಕೊತ ಕುದಿಯುತ್ತಿವೆ. ನಾವಡ ಎಕ್ಸ್ ಪೆರಿಮೆಂಟ್ ಗಳಿಂದ ತಾನು ಎಕ್ಸ್ ಚೀಪ್ ಆಗಿಬಿಟ್ಟರೆ ಎಂಬ ಭಯ. ಕೊನೆಗೆ ಅನಾಥನಾಗಿಬಿಟ್ಟರೆ ಎಂಬ ಹೆದರಿಕೆ ಆಸ್ಥಾನ ಸಂಪಾದಕೆ.



ಪೇಪರ್ ಸಂಖ್ಯೆ ಇಳಿಯುತ್ತಿದೆ ಎಂಬ ದೂರು ನೀಡಿ ನಾವಡರನ್ನು ನೀವಾಳಿಸಬಹುದೋ ಎಂಬ ದುರಾಸೆ. ಕಳೆದ ಬಾರಿ ಜಾಹೀರಾತು ವಿಭಾಗ ಮೂಲಕ ಹಣಿಯಲು ಯತ್ನಿಸಿದ್ದರೂ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ ದೂರನ್ನು ಈ ಬಾರಿ ಸರ್ಕುಲೇಶನ್ ವಿಭಾಗ ಮೂಲಕ ಪ್ರಸರಣಕ್ಕೆ ಷಡ್ಯಂತ್ರ ನಡೆಯುತ್ತಿದೆ. ಅಭಿಯಾನದ ಪರಿಣಾಮ ಸರ್ಕುಲೇಶನ್ ಇಳಿದಿದೆ ಎಂಬ ವರಾತ ಎತ್ತಿರುವ ಅನಾಥ ಪಡೆ ದೂರು ಸಿ ಇ ಒಗೆ ನೀಡುವಂತೆ ಎಲ್ಲರ ಬಳಿ ದಂಬಾಲು ಬೀಳುತ್ತಿದೆ. ಏಕೆಂದರೆ ಸಂಪಾದಕರಿಗೆ ಹೇಳಿದರೆ ಕ್ಯಾರೆ ಅನ್ನದೆ ನಾವಡರಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬ ಹೆದರಿಕೆ, ಇದು ಹಿಂದಿನ ಅನುಭವ ಕುನಾಥಗೆ ಲಭಿಸಿದೆ.



ಹೀಗಾಗಿ ಸ್ಥಳೀಯ ಹೆಡ್ಡ್ ಗಳ ಬಳಿ " ಬೇರೆ ಯಾರಲ್ಲಿಯೂ ಹೇಳುವುದು ಬೇಡ ನೀವು ಸಿ ಇ ಒಗೆ ದೂರು ನೀಡಿ' ಎಂದು ಚಾಡಿ ಕೆಲಸ ಹೇಳಲು ಆರಂಭಿಸಿದ್ದಾನೆ.



ಈ ಬಾರಿ ಸರ್ಕುಲೇಶನ್ ಮೂಲಕ ಮಣಿಯದಿದ್ದರೆ ಇನ್ನು ಮಂಗಳೂರಿ ಗಣ್ಯರ ಮೂಲಕ ದೂರು ಕೊಡಿಸಬೇಕು ಎಂಬ ಸ್ಕೆಚ್ ರೆಡಿಯಾಗುತ್ತಿದೆ. ನಾವಡರು ಎಷ್ಟೇ ಚಾಣಾಕ್ಷ ನಾದರೂ ಕುನಾಥ ಕೌಟಿಲ್ಯದ ಮುಂದೆ ಯಶಸ್ವಿಯಾಗುವುದೇ ಎಂಬ ಬಗ್ಗೆ ಪ್ರೆಸ್ ಕ್ಲಬ್ ನಲ್ಲಿ ಚರ್ಚೆ ನಡೆಯುತ್ತಿದೆ.



ಅಲ್ಲ ಸ್ವಾಮಿ ಕುನಾಥನ ಹಿಂದೆ ಮಾಡಿದ ಎಡವಟ್ಟಿನಿಂದ ಪತ್ರಿಕೆ ಸಂಖ್ಯೆ ಇಳಿದಿರಬಹುದು, ಒಂದು ತಿಂಗಳ ಅಭಿಯಾನದಿಂದ ಪತ್ರಿಕೆ ಇಳಿಯುವುದಾದರೂ ಹೇಗೆ ? ಕೃಷ್ಣ ಪರಮಾತ್ಮನೇ ಬಲ್ಲ. ಇದರ ಪ್ರಭಾವ ಏನಿದ್ದರೂ ಮುಂದಿನ ೩ ತಿಂಗಳ ಬಳಿಕ ಗೊತ್ತಾಗಬಹುದು. ಮಿಂಚು ಹೊಡೆದ ಬಳಿಕ ಸಿಡಿಲು ಬರುತ್ತದೆ. ಆದರೆ ಭೂಕಂಪ ಆದ ಬಳಿಕ ಸುನಾಮಿ ಬರಲು ಅನೇಕ ಗಂಟೆಗಳು ಹಿಡಿಯುತ್ತವೆ. ಇದೇ ರೀತಿ ವ್ಯತ್ಯಾಸ ತಿಳಿಯದ ದಡ್ಡರು ಕತ್ತೆಗೆ ಮೂರೇ ಕಾಲು ಎನ್ನುತ್ತಾರೆ.

Tuesday

ರಂಗಾಯಣ -ಟೀವಿ ೫


ಹೌದು ರಂಗಾಯಣ ಎಲ್ಲೀವರೆಗೆ ಬಂತು ಎಂದು ಓದುಗರು ಕೇಳಿದ್ದಾರೆ. ಪ್ರಪಂಚವೇ ಹಾಗೆ. ಚಲಾವಣೆಯಲ್ಲಿದ್ದರೆ ಮಾತ್ರ ನೆನಪು, ಇಲ್ಲಾಂದ್ರೆ ಮರೆತೇ ಹೋಗುತ್ತೆ, ಇದು ಮನಸ್ಸಿನ ಹುಟ್ಟುಗುಣ. ಹಾಗೇನೇ ಕಿರು ತೆರೆ ಪರದೆಯಿಂದ ರಂಗ ಮರೆಯಾದ ಬಗ್ಗೆ ಮರೆತೇ ಹೋಗಿತ್ತು. ವಿಷಯ ಏನಪ್ಪಾ ಅಂದ್ರೆ ಮತ್ತೆ ಆಂಧ್ರ ಟೀವಿ ೫ ಹಿಡಿದುಕೊಂಡು ಕರ್ನಾಟಕಕ್ಕೆ ದಾಂಗುಡಿ ಇಡುತ್ತಿದ್ದಾರೆ ನಮ್ಮ ರಂಗನಾಥರು. ಟೀವಿ ೫ ಹೆಸರು ಮಾತ್ರ ಖರೀದಿ ಮಾಡಿದ್ದಾರೆ. ಉಳಿದೆಲ್ಲ ಸಂಪನ್ಮೂಲ ರಂಗಣ್ಣನೇ ವಹಿಸ್ಕೋಬೇಕು. ಈಗ ಹಣ ಹೇಗೆ ಹೊಂದಿಸೋದು ಎಂಬ ಬಗ್ಗೆ ಮಾತ್ರ ಚಿಂತೆ. ಹಿಂದೆ ಮಾಡಿಟ್ಟ ಹಣ ಸ್ವಲ್ಪ ಇದೆ, ಸುವರ್ಣ ಚಾನೆಲ್ ಶೇರ್ ಹಣ. ದೊಡ್ಡದಾಗಿ ರಂಗಕ್ಕೆ ಇಳಿಯಲು ಹಣ ಇಷ್ಟು ಸಾಲದು. ವಂತಿಗೆ ಎತ್ತಿ ಅಭ್ಯಾಸ ಇದ್ದರೂ ಅಷ್ಟೂ ಸಂಗ್ರಹವಾಗುವುದು ಡೌಟ್. ರಾಜಕೀಯ ನಾಯಕರ ಸಹವಾಸ ಕಷ್ಟ. ಧನಿಕರ ಬಳಿ ಹೋಗಬಹುದು ಆದರೆ ಕೊನೆಗೆ ಕನಿಕರ ತೋರದೆ ಕಿತ್ತು ಹಾಕುತ್ತಾರೆ. ಹೀಗಾಗಿ ಸಹಾಯ ಧನ ಸಂಗ್ರಹ ಚಿಂತೆಯಿಂದ ಸ್ವಲ್ಪ ವಿಳಂಬ ಆಗುತ್ತಿದೆ. ಆದರೂ ಶೀಘ್ರದಲ್ಲಿಯೇ ಹೊಸ ಕನ್ನಡ ಚಾನೆಲ್ ಮೂಲಕ ರಂಗಾಯಣ, ರಾಮಾಯಣ ಕದನ ನೋಡಬಹುದು.
ಸುವರ್ಣ ಪ್ರಭೆ
ಇಷ್ಟರಲ್ಲಿಯೇ ಸುವರ್ಣ-ಕೆಪಿ ಒಟ್ಟಾಗಿ ಬೆಂಗಳೂರಿನ ಎಂಜಿ ರೋಡ್ ನಲ್ಲಿ ಭವ್ಯ ಕಟ್ಟೋಣದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಒಳ್ಳೆ ಕ್ಯಾಫ್ಟನ್ ನಿರೀಕ್ಷೆಯಲ್ಲಿದ್ದಾರೆ ರಾಜೀವ್ ಚಂದ್ರ ಶೇಖರ್. ವಿ ಭಟ್ಟರು ಸಮರ್ಥರು ಆದರೆ ಅವರಿನ್ನೂ ವಿಕೆ ಹ್ಯಾಂಗ್ ಓವರ್ ನಿಂದ ಹೊರ ಬಂದಿಲ್ಲ ಅಂಥಾ ಕಾಣುತ್ತೆ. ಇದಕ್ಕೆ ಕೆಪಿಯ ಭಾನುವಾರದ ಅಂಕಣವೇ ಸಾಕ್ಷಿ. (ಆದರೆ ಅದರಲ್ಲಿಯೂ ಓದುಗರಿಗೆ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ವಿಶೇಷ). ಹಳೆಯ ಶಿಲಾಯುಗದ ನೆನಪು ಮಾಸಿದ ಬಳಿಕ ಹೊಸ ಪ್ರಭೆಯಿಂದ ಸುವರ್ಣ ಯುಗಕ್ಕೆ ಚಾಲನೆ ಸಿಗಬಹುದು. ಅಲ್ಲೀವರೆಗೆ ಏನ್ ಮಾಡ್ತಾರೆ ಅನ್ನೋದನ್ನು ನಾವೂ ನೋಡ್ತಾ ಇರ್ತೀವಿ.

Sunday

ನೋ-ಎಡಿಟರ್ ೫ ಸಾವಿರ ಓದುಗರು !


ಮಾಧ್ಯಮಗಳಲ್ಲಿನ ಒಳ ಸುಳಿಗಳ ಕುರಿತು, ಅನ್ಯಾಯ, ದೌರ್ಜನ್ಯಗಳ ವಿರುದ್ಧ ರೂಪುಗೊಂಡಿರುವ ಬ್ಲಾಗ್ ಕಳೆದ ಎರಡು ತಿಂಗಳಲ್ಲಿ ೫ ಸಾವಿರ ಓದುಗರನ್ನು ಸಂಪಾದಿಸಿ ದಾಖಲೆ ಮಾಡಿದೆ. ೪ ವರ್ಷಗಳ ಹಿಂದೆ ಬ್ಲಾಗ್ ಆರಂಭಗೊಂಡಿದ್ದರೂ. ಹೊಸ ಖದರ್ ನಲ್ಲಿ ಮಾರ್ಚ್ ಅಂತ್ಯದಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಪೇಸ್ ಬುಕ್ ಗೆಳೆಯರ ಸಹಕಾರದಿಂದ ಪತ್ರಕರ್ತರ ಒಳ್ಳೆ ಗುಣ ಮತ್ತು ಅವಗುಣಗಳ ಬಗ್ಗೆ ಬರೆಯಲು ಸಾಧ್ಯವಾಯಿತು. ಇದೆಲ್ಲ ಶ್ರೇಯ ಎಂದಿನಂತೆ ಸುದ್ದಿಮನೆಯ ಬಾಣಸಿಗರಿಗೆ ಸಲ್ಲುತ್ತದೆ. ಅವಸರದ ಕೆಲಸದ ನಡುವೆಯೂ ಸ್ವಲ್ಪ ಹೊತ್ತು ನೋ ಎಡಿಟರ್ ನೋಡುವ ಪರಿಪಾಠ ಬೆಳೆಸಿಕೊಂಡಿರುವುದು ಒಳ್ಳೆ ಬೆಳವಣಿಗೆ. ಕನಿಷ್ಠ ವಾರಕ್ಕೆ ಎರಡು ಬಾರಿ ಒಳ್ಳೆ ಸುದ್ದಿ (ಕೆಟ್ಟದ್ದು-ಒಳ್ಳೆಯದು ನಿಮ್ಮ ವಿವೇಚನೆಗೆ ಬಿಟ್ಟಿದ್ದು) ಕೊಡಲು ಪ್ರಯತ್ನಿಸುತ್ತೇನೆ-
ನೊ- ಎಡಿಟರ್ ಸಂಪಾದಕಿ!

ನೊ -ಎಡಿಟರ್ ಪರಿಣಾಮ.. ಕೀಚಕರ ನಿರ್ನಾಮ !


ಲೈಂಗಿಕವಾಗಿ ಪೀಡಿಸುವ ಚೀಪ್ ಬ್ಯೂರೊಗಳಿಗೆ ತಕ್ಕ ಪಾಠ. ಈ ಬಗ್ಗೆ ನೋ-ಎಡಿಟರ್ ಮೊದಲೇ ಎಚ್ಚರಿಕೆ ನೀಡಿತ್ತು. ಒಂದು ವಿಕೆಟ್ ಉರುಳಿದೆ.. ಇದು ಬ್ಲಾಗ್ ಸದಾಶಯ ಪರಿಣಾಮ. ಕೀಚಕರ ಬಗ್ಗೆ ಈ ಗಾಗಲೇ ಎರಡು ಇಮೇಲ್ ಗಳು ಬಂದಿವೆ. ಒಂದು ತನಿಖೆ ಹಂತದಲ್ಲಿದ್ದು, ಇನ್ನೊಂದನ್ನು ಪರಿಶೀಲಿಸಬೇಕಾಗಿದೆ. ಹೈದರಾಬಾದ್ ಮೂಲದ ಟಿವಿ ಚಾನೆಲ್ ಒಂದರಲ್ಲಿರುವ ಕೀಚಕ ನಿಗೆ ಸದ್ಯದಲ್ಲಿಯೇ ಶಾಸ್ತಿ ಆಗುವ ಸಾಧ್ಯತೆ ಇದೆ.
ಕಚೇರಿಗಳಲ್ಲಿ ದುಡಿಯುವ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುವ ಕೀಚಕರು ಇನ್ನಾದರೂ ಎಚ್ಚೆತ್ತುಕೊಂಡು ತಪ್ಪು ತಿದ್ದಿಕೊಂಡರೆ ಬಚಾವ್ ಆಗುತ್ತೀರಿ ಇಲ್ಲವಾದರೆ ಎಚ್ಚರಿಕೆ ಬಗ್ಗೆ "ವಿಸಿಲ್'" ಊದುವ ಕೆಲಸ ಬ್ಲಾಗ್ ಮಾಡಬೇಕಾಗುತ್ತದೆ.

Tuesday

ಲೈಂಗಿಕ ಪೀಡಕ ಬ್ಯೂರೊ ಚೀಪ್ ಗಳೇ ಎಚ್ಚರ..

(ಸಂಪಾದಕೀಯಬ್ಲಾಗ್ ಕೃಪೆ) ಪ್ರಮುಖ ಪತ್ರಿಕೆಯೊಂದರ ಬ್ಯೂರೋ ಮುಖ್ಯಸ್ಥರಿಂದ ನಿನ್ನೆ ರಾಜೀನಾಮೆ ಪಡೆದು ಹೊರಹಾಕಲಾಗಿದೆ. ಆತ ತನ್ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅಶ್ಲೀಲ ಇ-ಮೇಲ್ ಕಳುಹಿಸಿದ್ದು ಇದಕ್ಕೆ ಕಾರಣ. ಈ ಇ-ಮೇಲ್ ಅನ್ನು ನೇರವಾಗಿ ಪತ್ರಿಕೆಯ ಸಂಪಾದಕರಿಗೆ ರವಾನಿಸಿದ ದಿಟ್ಟ ಮಹಿಳೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಸಂಪಾದಕರೂ ಹಿಂದೆಮುಂದೆ ನೋಡದೆ ಬ್ಯೂರೋ ಮುಖ್ಯಸ್ಥರನ್ನು ಸೇವೆಯಿಂದ ಕಿತ್ತು ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕಡೆಗೆ ಬ್ಯೂರೋ ಮುಖ್ಯಸ್ಥನ ಮನವಿಯ ಮೇರೆಗೆ ಆತನಿಂದ ರಾಜೀನಾಮೆ ಪಡೆದು ಸಾಗಹಾಕಲಾಗಿದೆ.ಈ ಬ್ಯೂರೋ ಮುಖ್ಯಸ್ಥರ ಮೇಲೆ ಆರೋಪಗಳ ಮಹಾಪೂರವೇ ಹಿಂದಿನಿಂದಲೇ ಇದ್ದವು. ಆದರೂ ಆತನನ್ನು ಕಾಣದ ಕೈಗಳು ರಕ್ಷಿಸುತ್ತಲೇ ಬಂದಿದ್ದವು. ಈತನ ವಿರುದ್ಧದ ಆರೋಪಗಳ ಕುರಿತು ಹಿಂದೆ ಸಂಪಾದಕೀಯದಲ್ಲೂ ತಾವು ಓದಿರುತ್ತೀರಿ. ದೂರು ಕೊಟ್ಟ ಮಹಿಳೆಯ ಹೆಸರು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಇಡೀ ಘಟನೆಯ ಸಂಸ್ಥೆ, ವ್ಯಕ್ತಿಗಳ ಹೆಸರನ್ನು ನಾವು ಇಲ್ಲಿ ಕಾಣಿಸುತ್ತಿಲ್ಲ.ಇದು ಕೇವಲ ಒಂದು ಅಶ್ಲೀಲ ಇ-ಮೇಲ್‌ನಿಂದ ಆಗಿರುವ ರಾದ್ಧಾಂತದಂತೆ ಕಾಣುತ್ತಿಲ್ಲ. ನೊಂದ ಮಹಿಳೆ ಲೈಂಗಿಕ ಕಿರುಕುಳದ ದೂರನ್ನೂ ನೀಡಿದ್ದಾರೆ ಎಂಬ ಮಾಹಿತಿಯಿದೆ. ಇದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಎಲ್ಲ ಸಾಧ್ಯತೆಗಳೂ ಇದ್ದಿದ್ದರಿಂದಾಗಿ ಪತ್ರಿಕಾ ಸಂಸ್ಥೆ ಆತುರಾತುರವಾಗಿ ಕ್ರಮ ಕೈಗೊಂಡಿದೆ. ಪತ್ರಕರ್ತ ದೊಡ್ಡ ಶಿಕ್ಷೆಯಿಂದ ಪಾರಾಗಿ ಚಿಕ್ಕ ಶಿಕ್ಷೆ ಅನುಭವಿಸಿದ್ದಾನೆ.ಇದು ಒಂದು ಘಟನೆ ಮಾತ್ರವಲ್ಲ. ಇಂಥದ್ದು ಅಲ್ಲಲ್ಲಿ, ಆಗಾಗ ನಡೆಯುತ್ತಲೇ ಇವೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಸುದ್ದಿಸಂಪಾದಕರೊಬ್ಬರು ತಮ್ಮ ಅಧೀನ ಮಹಿಳಾ ಸಿಬ್ಬಂದಿಗೆ ಮದುವೆಯಾಗು ಎಂದು ಪೀಡಿಸಿದ ಪರಿಣಾಮ ಇತ್ತೀಚಿಗೆ ಆಕೆ ಪತ್ರಿಕೆಯನ್ನೇ ತೊರೆದುಹೋದರು. ದೊಡ್ಡ ಸ್ಥಾನದಲ್ಲಿ ಕುಳಿತ ಕೆಲ ಕೀಚಕ ಪತ್ರಕರ್ತರು ತಮ್ಮ ಕೈಕೆಳಗಿನ ಮಹಿಳೆಯರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಆದರೆ ಇದ್ಯಾವುದೂ ಸುದ್ದಿಯಾಗುವುದಿಲ್ಲ. ಯಾಕೆಂದರೆ ಸುದ್ದಿ ಮಾಡುವವರೇ ಇಲ್ಲಿ ಆರೋಪಿಗಳು.ನಿಜ, ಇದು ಕೇವಲ ಮಾಧ್ಯಮರಂಗದ ಸಮಸ್ಯೆ ಮಾತ್ರವಲ್ಲ. ಉದ್ಯೋಗಸ್ಥ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಇಂಥ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಇಂಥ ಕೀಚಕರನ್ನು ಎದುರಿಸುವ ಧೈರ್ಯ, ಸಾಮರ್ಥ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಲೇಬೇಕು. ಈ ಪ್ರಕರಣದಲ್ಲಿ ಆದಂತೆ ಇಂಥವರನ್ನು ಮನೆಗೆ, ಜೈಲಿಗೆ ಅಟ್ಟುವ ಸಾಹಸವನ್ನು ತೋರಬೇಕಿದೆ.

ಬಿಸಿಲ ನಾಡಿನ ಪಜೆವಾಣಿಯಿಂದ ಉದಯ ಅಸ್ತ

ಶಂಕರ ಭಟ್ಟರ ಉದಯ ಆಗದೆ ಅಸ್ತವಾಗಿದೆ ಶಂಕರ ಭಟ್ಟರನ್ನು ಪಜೆವಾಣಿಯಿಂದ ಮೇ ೩೧ ರಂದು ಅವರನ್ನು ಗುಲ್ಬರ್ಗಆಫೀಸಿನಿಂದ ರಾಜಿನಾಮೆ ಪಡೆದು ಕಳುಹಿಸಲಾಗಿದೆ. ಭಟ್ಟರು ಗುಲ್ಬರ್ಗ ಕಚೇರಿಯ ಪ್ರಧಾನ ವರದಿಗಾರರು. ಬ್ಯೂರೊ ಮುಖ್ಯಸ್ಥರು. ಕಳೆದ ವರ್ಷ ಹುಬ್ಬಳ್ಳಿಯಿಂದ ವರ್ಗಾವಣೆ ಆಗಿತ್ತು.
ಕೆಲವು ಅವ್ಯವಹಾರದಲ್ಲಿ ಅವರ ಹೆಸರು ಬಂದಿತ್ತು ಎನ್ನುವುದು ವಿರೋಧಿಗಳ ಆರೋಪ. ಅದಕ್ಕಾಗಿ ಕೆಲಸದಿಂದ ತೆಗೆದು ಹಾಕಿಲ್ಲ. ಬದಲಾಗಿ ಹುಬ್ಬಳ್ಳಿ ಇರುವಾಗ ಮಾಡಿದ ಸಮಾಜ ಸೇವಾ ಕೆಲಸಕ್ಕಾಗಿ ಕೂಡ ಅಲ್ಲ. ಹುಬ್ಬಳಿಯಿಂದ ಗುಲ್ಬರ್ಗಕ್ಕೆ ಹೋದ ಅನಂತರ ಅವರು ಬರೆದ ಒಂದು ಪತ್ರ ಅವರನ್ನು ಬಳಿ ತೆಗೆದುಕೊಂಡಿದೆ. ಅದು ಒಂದು ಹೆಣ್ಣು ಮಗಳಿಗೆ ಸಂಬಂದಿಸಿದ್ದು. ಆಕೆ ಇವರ ಮಗಳಂತೆ ಇದ್ದವಳು. ಅದೇಕೋ ಸ್ವಲ್ಪ ಹಳಸಿತ್ತು.
ಪಜೆವಾಣಿ ಇತಿಹಾಸದಲ್ಲೇ ಒಂದು ಅಪೂರ್ವ ಘಟನೆ.
(ನ್ಯೂಮೀಡಿಯಾಬ್ಲಾಗ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ಕೃಪೆ)