Tuesday

ಲೈಂಗಿಕ ಪೀಡಕ ಬ್ಯೂರೊ ಚೀಪ್ ಗಳೇ ಎಚ್ಚರ..

(ಸಂಪಾದಕೀಯಬ್ಲಾಗ್ ಕೃಪೆ) ಪ್ರಮುಖ ಪತ್ರಿಕೆಯೊಂದರ ಬ್ಯೂರೋ ಮುಖ್ಯಸ್ಥರಿಂದ ನಿನ್ನೆ ರಾಜೀನಾಮೆ ಪಡೆದು ಹೊರಹಾಕಲಾಗಿದೆ. ಆತ ತನ್ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅಶ್ಲೀಲ ಇ-ಮೇಲ್ ಕಳುಹಿಸಿದ್ದು ಇದಕ್ಕೆ ಕಾರಣ. ಈ ಇ-ಮೇಲ್ ಅನ್ನು ನೇರವಾಗಿ ಪತ್ರಿಕೆಯ ಸಂಪಾದಕರಿಗೆ ರವಾನಿಸಿದ ದಿಟ್ಟ ಮಹಿಳೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಸಂಪಾದಕರೂ ಹಿಂದೆಮುಂದೆ ನೋಡದೆ ಬ್ಯೂರೋ ಮುಖ್ಯಸ್ಥರನ್ನು ಸೇವೆಯಿಂದ ಕಿತ್ತು ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕಡೆಗೆ ಬ್ಯೂರೋ ಮುಖ್ಯಸ್ಥನ ಮನವಿಯ ಮೇರೆಗೆ ಆತನಿಂದ ರಾಜೀನಾಮೆ ಪಡೆದು ಸಾಗಹಾಕಲಾಗಿದೆ.ಈ ಬ್ಯೂರೋ ಮುಖ್ಯಸ್ಥರ ಮೇಲೆ ಆರೋಪಗಳ ಮಹಾಪೂರವೇ ಹಿಂದಿನಿಂದಲೇ ಇದ್ದವು. ಆದರೂ ಆತನನ್ನು ಕಾಣದ ಕೈಗಳು ರಕ್ಷಿಸುತ್ತಲೇ ಬಂದಿದ್ದವು. ಈತನ ವಿರುದ್ಧದ ಆರೋಪಗಳ ಕುರಿತು ಹಿಂದೆ ಸಂಪಾದಕೀಯದಲ್ಲೂ ತಾವು ಓದಿರುತ್ತೀರಿ. ದೂರು ಕೊಟ್ಟ ಮಹಿಳೆಯ ಹೆಸರು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಇಡೀ ಘಟನೆಯ ಸಂಸ್ಥೆ, ವ್ಯಕ್ತಿಗಳ ಹೆಸರನ್ನು ನಾವು ಇಲ್ಲಿ ಕಾಣಿಸುತ್ತಿಲ್ಲ.ಇದು ಕೇವಲ ಒಂದು ಅಶ್ಲೀಲ ಇ-ಮೇಲ್‌ನಿಂದ ಆಗಿರುವ ರಾದ್ಧಾಂತದಂತೆ ಕಾಣುತ್ತಿಲ್ಲ. ನೊಂದ ಮಹಿಳೆ ಲೈಂಗಿಕ ಕಿರುಕುಳದ ದೂರನ್ನೂ ನೀಡಿದ್ದಾರೆ ಎಂಬ ಮಾಹಿತಿಯಿದೆ. ಇದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಎಲ್ಲ ಸಾಧ್ಯತೆಗಳೂ ಇದ್ದಿದ್ದರಿಂದಾಗಿ ಪತ್ರಿಕಾ ಸಂಸ್ಥೆ ಆತುರಾತುರವಾಗಿ ಕ್ರಮ ಕೈಗೊಂಡಿದೆ. ಪತ್ರಕರ್ತ ದೊಡ್ಡ ಶಿಕ್ಷೆಯಿಂದ ಪಾರಾಗಿ ಚಿಕ್ಕ ಶಿಕ್ಷೆ ಅನುಭವಿಸಿದ್ದಾನೆ.ಇದು ಒಂದು ಘಟನೆ ಮಾತ್ರವಲ್ಲ. ಇಂಥದ್ದು ಅಲ್ಲಲ್ಲಿ, ಆಗಾಗ ನಡೆಯುತ್ತಲೇ ಇವೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಸುದ್ದಿಸಂಪಾದಕರೊಬ್ಬರು ತಮ್ಮ ಅಧೀನ ಮಹಿಳಾ ಸಿಬ್ಬಂದಿಗೆ ಮದುವೆಯಾಗು ಎಂದು ಪೀಡಿಸಿದ ಪರಿಣಾಮ ಇತ್ತೀಚಿಗೆ ಆಕೆ ಪತ್ರಿಕೆಯನ್ನೇ ತೊರೆದುಹೋದರು. ದೊಡ್ಡ ಸ್ಥಾನದಲ್ಲಿ ಕುಳಿತ ಕೆಲ ಕೀಚಕ ಪತ್ರಕರ್ತರು ತಮ್ಮ ಕೈಕೆಳಗಿನ ಮಹಿಳೆಯರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಆದರೆ ಇದ್ಯಾವುದೂ ಸುದ್ದಿಯಾಗುವುದಿಲ್ಲ. ಯಾಕೆಂದರೆ ಸುದ್ದಿ ಮಾಡುವವರೇ ಇಲ್ಲಿ ಆರೋಪಿಗಳು.ನಿಜ, ಇದು ಕೇವಲ ಮಾಧ್ಯಮರಂಗದ ಸಮಸ್ಯೆ ಮಾತ್ರವಲ್ಲ. ಉದ್ಯೋಗಸ್ಥ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಇಂಥ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಇಂಥ ಕೀಚಕರನ್ನು ಎದುರಿಸುವ ಧೈರ್ಯ, ಸಾಮರ್ಥ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಲೇಬೇಕು. ಈ ಪ್ರಕರಣದಲ್ಲಿ ಆದಂತೆ ಇಂಥವರನ್ನು ಮನೆಗೆ, ಜೈಲಿಗೆ ಅಟ್ಟುವ ಸಾಹಸವನ್ನು ತೋರಬೇಕಿದೆ.

ಬಿಸಿಲ ನಾಡಿನ ಪಜೆವಾಣಿಯಿಂದ ಉದಯ ಅಸ್ತ

ಶಂಕರ ಭಟ್ಟರ ಉದಯ ಆಗದೆ ಅಸ್ತವಾಗಿದೆ ಶಂಕರ ಭಟ್ಟರನ್ನು ಪಜೆವಾಣಿಯಿಂದ ಮೇ ೩೧ ರಂದು ಅವರನ್ನು ಗುಲ್ಬರ್ಗಆಫೀಸಿನಿಂದ ರಾಜಿನಾಮೆ ಪಡೆದು ಕಳುಹಿಸಲಾಗಿದೆ. ಭಟ್ಟರು ಗುಲ್ಬರ್ಗ ಕಚೇರಿಯ ಪ್ರಧಾನ ವರದಿಗಾರರು. ಬ್ಯೂರೊ ಮುಖ್ಯಸ್ಥರು. ಕಳೆದ ವರ್ಷ ಹುಬ್ಬಳ್ಳಿಯಿಂದ ವರ್ಗಾವಣೆ ಆಗಿತ್ತು.
ಕೆಲವು ಅವ್ಯವಹಾರದಲ್ಲಿ ಅವರ ಹೆಸರು ಬಂದಿತ್ತು ಎನ್ನುವುದು ವಿರೋಧಿಗಳ ಆರೋಪ. ಅದಕ್ಕಾಗಿ ಕೆಲಸದಿಂದ ತೆಗೆದು ಹಾಕಿಲ್ಲ. ಬದಲಾಗಿ ಹುಬ್ಬಳ್ಳಿ ಇರುವಾಗ ಮಾಡಿದ ಸಮಾಜ ಸೇವಾ ಕೆಲಸಕ್ಕಾಗಿ ಕೂಡ ಅಲ್ಲ. ಹುಬ್ಬಳಿಯಿಂದ ಗುಲ್ಬರ್ಗಕ್ಕೆ ಹೋದ ಅನಂತರ ಅವರು ಬರೆದ ಒಂದು ಪತ್ರ ಅವರನ್ನು ಬಳಿ ತೆಗೆದುಕೊಂಡಿದೆ. ಅದು ಒಂದು ಹೆಣ್ಣು ಮಗಳಿಗೆ ಸಂಬಂದಿಸಿದ್ದು. ಆಕೆ ಇವರ ಮಗಳಂತೆ ಇದ್ದವಳು. ಅದೇಕೋ ಸ್ವಲ್ಪ ಹಳಸಿತ್ತು.
ಪಜೆವಾಣಿ ಇತಿಹಾಸದಲ್ಲೇ ಒಂದು ಅಪೂರ್ವ ಘಟನೆ.
(ನ್ಯೂಮೀಡಿಯಾಬ್ಲಾಗ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ಕೃಪೆ)

ಸಂಕೇಶ್ವರ ಇನ್ನೊಂದುವಿಜಯ ಪತಾಕೆ (ಪತ್ರಿಕೆ)

(ಸಂಪಾದಕೀಯ ಕೃಪೆ)
ಮಾಧ್ಯಮ ಕ್ಷೇತ್ರದಲ್ಲಿ ವಿಜಯ ಸಂಕೇಶ್ವರರ ಎರಡನೇ ಇನ್ನಿಂಗ್ಸ್ ಇದು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಗಳಿಸಿದ ಭರ್ಜರಿ ಯಶಸ್ಸು ಈಗ ಇತಿಹಾಸ. ವಿಜಯ ಕರ್ನಾಟಕದ ಮೂಲಕ ಸಂಕೇಶ್ವರರು ಎಬ್ಬಿಸಿದ ಬಿರುಗಾಳಿ ಕರ್ನಾಟಕದ ಪತ್ರಿಕಾಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು. ಸಂಕೇಶ್ವರರು ತಮ್ಮ ವ್ಯಾವಹಾರಿಕ ಜಾಣ್ಮೆಯನ್ನು ಪ್ರಯೋಗಿಸಿ ವಿಜಯ ಕರ್ನಾಟಕವನ್ನು ನಂ.೧ ಮಾಡುವಲ್ಲಿ ಯಶಸ್ವಿಯಾಗಿದ್ದರು. ವಿಶ್ವೇಶ್ವರ ಭಟ್ಟರಂಥ ಪ್ರಯೋಗಶೀಲ ಸಂಪಾದಕರು ಲಭಿಸಿದ್ದೂ ಸಹ ಅವರಿಗೆ ಅನುಕೂಲಕರವಾಗಿತ್ತು. ಕನ್ನಡ ಪತ್ರಿಕಾರಂಗದಲ್ಲಿ ಹಿಂದೆಂದೂ ಕಾಣದಂಥ ಬೆಲೆಸಮರವನ್ನು ಆರಂಭಿಸಿ, ಇತರ ಎಲ್ಲ ಪತ್ರಿಕೆಗಳಿಗೆ ಹೊಡೆತ ಕೊಡುವಲ್ಲಿ ಸಂಕೇಶ್ವರರು ಯಶಸ್ವಿಯಾಗಿದ್ದರು. ಇವತ್ತಿನ ಪತ್ರಿಕೆಯನ್ನು ನಾಳೆ ಓದುವಂಥ ವ್ಯವಸ್ಥೆಯಿದ್ದ ರಾಜ್ಯದ ಮೂಲೆಮೂಲೆಯ ಹಳ್ಳಿಗಳಿಗೆ ಬೆಳಿಗ್ಗೆ ೬ ಗಂಟೆಗೆಲ್ಲ ತಮ್ಮ ವಿಶಾಲ ನೆಟ್‌ವರ್ಕ್‌ನ ಮೂಲಕ ತಲುಪಿಸಿದ್ದು ಸಂಕೇಶ್ವರರ ಮಹತ್ವಪೂರ್ಣ ಸಾಧನೆ. ಇತರ ಪತ್ರಿಕೆಗಳ ಓದುಗರನ್ನು ಕಿತ್ತುಕೊಳ್ಳುವುದರ ಜತೆಜತೆಗೆ ಹೊಸ ಓದುಗರನ್ನು ಸೃಷ್ಟಿಸಿದ್ದು ವಿಜಯ ಕರ್ನಾಟಕದ ಹೆಮ್ಮೆ. ಆದರೆ ವಿಜಯ ಕರ್ನಾಟಕ ತನ್ನ ಬೆಲೆ ಸಮರದ ಮೂಲಕ ಸಣ್ಣ ಪತ್ರಿಕೆಗಳ ಬೇರುಗಳನ್ನೇ ಅಲ್ಲಾಡಿಸಿಬಿಟ್ಟಿತು. ಹಲವಾರು ಪತ್ರಿಕೆಗಳು ಮುಚ್ಚಿಹೋಗುವಂಥ ಪರಿಸ್ಥಿತಿ ನಿರ್ಮಾಣವಾಯಿತು.

ಸಂಕೇಶ್ವರರು ತಮ್ಮ ವಿಜಯ ಕರ್ನಾಟಕವನ್ನು ಅದರ ಜತೆಗೆ ಉಷಾಕಿರಣ ಎಂಬ ತಮ್ಮದೇ ಪರ್ಯಾಯ ಪತ್ರಿಕೆಯನ್ನು, ವಿಜಯ ಟೈಮ್ಸ್ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಟೈಮ್ಸ್ ದೊರೆಗಳಿಗೆ ಮಾರುವುದರ ಮೂಲಕ ತಮ್ಮ ಮೊದಲ ಇನ್ನಿಂಗ್ಸ್ ಮುಗಿಸಿದ್ದರು. ಹೀಗೆ ಪತ್ರಿಕೆಗಳನ್ನು ಮಾರುವಂತಾಗಲು ನಿರ್ಮಾಣಗೊಂಡ ಸನ್ನಿವೇಶಗಳಿಗೆ ಹಲವು ಆಯಾಮಗಳಿವೆ. ಕಾರಣಗಳು ಮಾತ್ರ ಇನ್ನೂ ನಿಗೂಢ.

ಈಗ ಮತ್ತೊಂದು ಇನ್ನಿಂಗ್ಸ್ ಆಡಲು ಸಂಕೇಶ್ವರರು ಪ್ಯಾಡು ಕಟ್ಟಿ ಇಳಿಯುತ್ತಿದ್ದಾರೆ. ಹೇಳಿಕೇಳಿ ಅವರು ಅಪ್ಪಟ ವ್ಯವಹಾರಸ್ಥರು. ರಾಜಕೀಯ ಜಾಣ್ಮೆಯಿಲ್ಲದೆ ಆ ಕ್ಷೇತ್ರದಲ್ಲಿ ಏಟು ತಿಂದಿದ್ದೇನೋ ನಿಜ. ಆದರೆ ವ್ಯವಹಾರದಲ್ಲಿ ಅವರು ನಿಸ್ಸೀಮರೆಂದು ಎಲ್ಲರಿಗೂ ಗೊತ್ತಿರುವುದರಿಂದಲೇ ಹೊಸ ಪತ್ರಿಕೆಯ ಸ್ವರೂಪ, ಉದ್ದೇಶ, ಗುರಿ ಇತ್ಯಾದಿಗಳ ಕುರಿತು ಮಾಧ್ಯಮ ಪಂಡಿತರಲ್ಲಿ ಸಾಕಷ್ಟು ಕುತೂಹಲವಿದೆ.

ಅದೆಲ್ಲ ಸರಿ, ಸಂಕೇಶ್ವರರ ಹೊಸ ಪತ್ರಿಕೆಗೆ ಸಾರಥಿಗಳು ಯಾರು? ನಮಗೆ ಗೊತ್ತಾಗಿರುವ ಮಾಹಿತಿ ಪ್ರಕಾರ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ ಹಾಗು ತಿಮ್ಮಪ್ಪ ಭಟ್ಟರ ಹೆಸರು ಮುಂಚೂಣಿಯಲ್ಲಿದೆ. ಇಬ್ಬರೂ ಸಜ್ಜನರು, ಸಂಭಾವಿತರು. ಇಬ್ಬರಿಗೂ ಹೊಸ ಪತ್ರಿಕೆಯನ್ನು ನಿರ್ವಹಿಸಲು ಬೇಕಾದ ಅನುಭವವಿದೆ. ಈ ಪೈಕಿ ಉದಯವಾಣಿ ಮಾಜಿ ಸಂಪಾದಕರಾದ ತಿಮ್ಮಪ್ಪ ಭಟ್ಟರು ಸಂಕೇಶ್ವರರ ಹೊಸ ಪತ್ರಿಕೆಯಲ್ಲಿ ಇದ್ದೇ ಇರುತ್ತಾರೆ ಎಂಬುದು ನಮಗೆ ಗೊತ್ತಾದ ಖಚಿತ ಮಾಹಿತಿ.

ಶರ್ಮಾಜಿ" ಠೀವಿ ಹೋಯ್ತು ! ಜೋತಿಶಿಗೆಶನಿಗ್ರಹ ಪೀಡೆ

ಮತ್ತೊಂದು ಸಂತಸದ ವಿಷಯ. ಜೀ ಟಿವಿಯ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದಿಂದ ನರೇಂದ್ರ ಶರ್ಮ ಅವರನ್ನು ತೊಲಗಿಸಲಾಗಿದೆ. ಇದು ನಮಗೆ ಗೊತ್ತಾಗಿರುವ ಮಾಹಿತಿ. ಜೀ ಟಿವಿಗೆ ಒಂದು ಥ್ಯಾಂಕ್ಸ್ ಹಾಗು ಜಗನ್ಮಾತೆಗೆ ಕೋಟಿ ವಂದನೆ. ಬಾಯಿಬಡುಕ ನರೇಂದ್ರ ಶರ್ಮನನ್ನು ತೊಲಗಿಸಿ ಎಂದು ನಾವೆಲ್ಲರೂ ಆರಂಭಿಸಿದ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಕಡೆಗೂ ಯಶಸ್ವಿಯಾಗಿದೆ. ಜೀ ಟಿವಿ ಮುಖ್ಯಸ್ಥರಿಗೆ ಸಾವಿರಾರು ಪತ್ರಗಳನ್ನು ಬರೆದು ಈ ಕೊಳಕು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕೋರಿದ ಎಲ್ಲರ ಶ್ರಮವೂ ಸಾರ್ಥಕಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು.

ನರೇಂದ್ರ ಶರ್ಮ ಅನಾಮತ್ತಾಗಿ ಮೂರು ಚಾನಲ್‌ಗಳನ್ನು ಸುತ್ತಾಡಿ ಮುಗಿಸಿಯಾಗಿದೆ. ಕಸ್ತೂರಿ, ಸುವರ್ಣ ಹಾಗು ಜೀ ಟಿವಿಗಳ ಪ್ರಯಾಣ ಮುಗಿದಾಗಿದೆ. ಮುಂದೆ ಆತ ಇನ್ನ್ಯಾವ ಚಾನಲ್ ಹಿಡಿಯುತ್ತಾರೋ ಕಾದು ನೋಡಬೇಕು. ಆದರೆ ಈತನ ವಿರುದ್ಧ ಎದ್ದಿರುವ ಆಕ್ರೋಶವನ್ನು ಗಮನಿಸಿರುವ ಇತರ ಚಾನಲ್‌ಗಳು ಈ ಸೆರಗಿನ ಕೆಂಡವನ್ನು ಕಟ್ಟಿಕೊಂಡರೆ ಎದುರಿಸುವ ಅಪಾಯಗಳನ್ನು ಈಗಾಗಲೇ ಊಹಿಸಿರಬಹುದು. ಇನ್ನುಳಿದದ್ದು ಅವರಿಗೆ ಸೇರಿದ್ದು. (ಸಂಪಾದಕೀಯ)

ಅನಾಥಗೆ ಸ್ವಾಮೀಜಿ ರಕ್ಷೆ !


ಭಜರಂಗ ದಳದ ಪ್ರಧಾನ ಮಾರ್ಗದರ್ಶಕ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ ಕಾಲಿಗೆ ರೆಸಿಡೆಂಟ್ ಎಡಿಟರ್ರ್ ವಿಕೆ ಅನಾಥ ಬಿದ್ದಿರುವ ಲೇಟೆಸ್ಟ್ ಸುದ್ದಿ ಬಂದಿದೆ. ಶ್ರೀರಾಮ ಸೇನೆ ಬಜರಂಗ ದಳದ ಕಂಟ್ರೋಲ್ ಹೊಂದಿರುವ ವಜ್ರದೇಹಿ ಮಠಕ್ಕೆ ಕುನಾಥ ಭೇಟಿ ಕೊಡುವುದು ಹೊಸತಲ್ಲ. ತನ್ನನ್ನು ಎಬ್ಬಿಸಲಾಗುತಿರುವ ಬಗ್ಗೆ ಕೇಳಿಕೊಂಡಿದ್ದಾನೆ. ...
ಹೆಚ್ಚಿನ ವಿವರಗಳಿಗೆ ನ್ಯೂವ್ ಮೀಡಿಯಾಬ್ಲಾಗ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ನೋಡಿ

Monday

ರಾಮ -ರಾಘವ ಯುದ್ಧ.. ಕು. ಸನ್ನದ್ಧ



ರಾಘವನ ಮೇಲೆ ರಾಮನೇ ಕುಂಭಕರ್ಣನ ಜತೆ ಸೇರಿ ಯುದ್ಧ ಘೋಷಿಸಿದರೆ... ಹೌದು ಸ್ವಾಮಿ ಇದು ಕಲಿಕಾಲ. ವಿಕೆ ರಾಮ ಮತ್ತು ಕುಂಭಕರ್ಣ (ಕುನಾಥ) ಮಂಗ ಳೂರಿನ ಕಪಿಸೇನೆ ಬಳಸಿಕೊಂಡು ರಾಘವ ಮತ್ತು ಲಕ್ಷ್ಮಣ (ನಾವಡ)ರನ್ನು ಮಣಿಸಲು ಪಕ್ಕಾ ಸ್ಕೆಚ್ ರೂಪಿಸಿದ್ದಾರೆ.
ಪ್ರತಿಯೊಬ್ಬ ಎದುರಾಳಿಯನ್ನು ದಾಖಲೆಯ ಬಲೆಯಲ್ಲಿ ಕೆಡವಿ ಗೆದ್ದು ಬಿಡುವುದು ಇವರ ವೈಶಿಷ್ಟ್ಯ. ಈ ಬಾರಿ ಮಾತ್ರ ಸಂಪಾದಕರಿಗೇ ಕೆಡ್ಡಾ ತೋಡಿದ್ದಾರೆ ರಾಮನ ಬಂಟರು ! ವಿಶ್ವ ಈಶ್ವರನೇ ಇರಲಿ, ರಾಘವನೇ ಬರಲಿ ಅವರ ವಿರುದ್ಧ ಅಭಿಯಾನ ನಡೆಸುವುದೇ ಇವರ ಕೆಲಸ. ಈಗ ರಾಘವ, ನಾವಡರ ಸರದಿ.
ಪ್ರತಿ ದಿನ ಮರಣವಾಣಿಯಲ್ಲಿ ಬಂದ ಜಾಹೀರಾತುಗಳು ಮತ್ತು ಜಾಹೀರಾತು ಸುದ್ದಿಗಳ ಕಟ್ಟಿಂಗ್ ರೆಡಿ ಮಾಡುವುದಷ್ಟೇ ಜಾಹೀರಾತು ಸಿಬ್ಬಂದಿ ಕೆಲಸ ಆಗಿಬಿಟ್ಟಿದೆ. ಒಂಥರಾ ಮುಷ್ಕರ ಹೂಡಿದ್ದಾರೆ. ಕೆಲಸ ಮಾಡದಿದ್ದರೆ ಜಾಹೀರಾತು ಬರುವುದಾದರೂ ಹೇಗೆ.. ಶ್ರೀರಾಮಚಂದ್ರನೇ ಬಲ್ಲ.



" ಜಾಹೀರಾತು ಸುದ್ದಿ ಪ್ರಕಟವಾಗದೆ ಲಕ್ಷಗಟ್ಟಲೆ ಜಾಹೀರಾತು ಮಿಸ್ ಆಗುತ್ತಿದೆ. ಇದರಿಂದ ನನಗೆ, ಅದಕ್ಕಿಂತಲೂ ಕಂಪನಿಗೆ ಹೆಚ್ಚು ನಷ್ಟ ಆಗಿದೆ'



ಎಂಬ ಒಕ್ಕಣೆ ವಿವರಗಳನ್ನು ಗ್ರಾಮೀಣ ಅರೆಕಾಲಿಕ ವರದಿಗಾರಿಂದ ಪಡೆದು ಅದರ ದಾಖಲೆ ಮೂಟೆಗಳನ್ನು ಬೆಂಗಳೂರಿಗೆ ನೀಡಿದ್ದಾರೆ. ಜಾಹೀರಾತು ಸುದ್ದಿಗಳಿಗೆ ಕಠಿಣ ನಿಬಂಧನೆ ಹೇರಿದ್ದರಿಂದ ಒಂದು ತಿಂಗಳಲ್ಲಿ 20 ಲಕ್ಷ ರೂ. ಆದಾಯ ಖೋತಾ ಆಗಿದೆ ಎಂಬ ವಿಶೇಷ ನೋಟ್ ಕೂಡಾ ನೀಡಿದ್ದಾರೆ. ಕಮಲ ಪಕ್ಸದ ಭಟ್ಟರ ನೇತೃತ್ವದಲ್ಲಿ ಫೈಲ್ ರೆಡಿಯಾಗಿದೆ. ಇನ್ನೇನು ಸಿಇಒ ನೋಡಿ ಓಕೆ ಅಂದರೆ, ನಾವು ಗೆದ್ದೆವು ಎಂಬ ಭ್ರಮೆಯಲ್ಲಿ ಇದ್ದಾರೆ ಕಪಿ ಸೇನೆ ನಾಯಕರು.



ಆದರೆ ಬುಡಕ್ಕೆ ಬಂದು ಬಿಟ್ಟಿದೆ. ಆರಾಮನ 35 ಲಕ್ಷದ ವೈಭವೋಪೇತ ಅರಮನೆ, ಹೊಸ ಕಾರು, ಕುಂಭಕರ್ಣ (ನಾಥ)ನ ೨೮ಲಕ್ಷದ ಉರುವಮನೆ, ಕಾರು, ಇದಕ್ಕೆ ಒಟ್ಟಾದ ವಂತಿಗೆ, ದುಬೈ ಹಣದ ಬಗ್ಗೆ ಕಂಪನಿ ತನಿಖೆ ನಡೆಸಿದರೆ... ! ಘನ ಘೋರ ಯುದ್ಧದಲ್ಲಿ ಭಸ್ಮಾಸುರನಂತೆ ಸ್ವತಃ ತಲೆ ಮೇಲೆ ಕೈ ಇಟ್ಟು ಸಾಯಬೇಕು ಇದೆಲ್ಲಾ ಬೇಕಾ ?

ಶಶಿ ಜಾರಿದಾ.. ಬಾ..ರವಿ ಮೂಡಿದ..

ಸಮಯ ಜಂಪ್ ಟಿ ಆರ್ ಪಿ ಜಂಪ್ ಆಗಿದೆ. ಸುವರ್ಣ ಹಾಗೂ ಹೀಗೂ ಕುಂಟುತ್ತಾ ನಡೆಯುತ್ತಿದ್ದು, ಮುಂದಿನ ನಾಯಕನನ್ನು ಎದಿರು ನೋಡುತ್ತಾ ಸುವರ್ಣ ಯುಗಕ್ಕಾಗಿ ಕಾಯುತ್ತಿದೆ. ಸುವರ್ಣದಲ್ಲಿ ರಾಜಕೀಯ ಹಿರಿಯ ವರದಿಗಾರ ಸುಭಾಷ್ ಹೂಗಾರ ಮತ್ತು ರವಿರಾಜ ವಳಂಬೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ವಿಚಿತ್ರ ವರದಿಗಾರರಾದ ಶಂಕರ ಘಟ್ಟ ಚಂದ್ರೇಗೌಡ ನನ್ನು ನಿವಾಳಿಸಿ ಕಳುಹಿಸಿದ್ದಾರೆ. ಚಂದ್ರೇಗೌಡ ಎಂಬ ಗಿರಾಕಿ ಸಂಸ್ಥೆಯ ಎಲ್ಲ ಸೊತ್ತುಗಳನ್ನೂ ಸಂಪೂರ್ಣ ಻ನುಭವಿಸಿದ ಸುಖ ಲೋಲುಪ. ಇಂಥ ಭಟ್ಟಂಗಿಗಳಿಂದಲೇ ಶಶಿಧರ ಭಟ್ಟರು ಮೈ ಸುಟ್ಟುಕೊಂಡರು. ಪರಮೇಶ್ವರ, ಚಂದ್ರ ಮೊದಲಾದವರ ಸಂಪಾದನೆ ನೋಡಿದ ಭಟ್ಟರು ಸುಮ್ಮನೆ ಯಾಕೆ ಉಳಿದು ಬಿಟ್ಟರು ಎಂಬ ಸಂಶಯ ಸಿಬ್ಬಂದಿ ವರ್ಗಕ್ಕೆ ಇತ್ತು. ಅಷ್ಟರಲ್ಲಿ ಭಟ್ಟರನ್ನು ಕಳುಹಿಸಿದ ಚಾನೆಲ್ ರಂಗನನ್ನು ಸೇರಿಸಿದ್ದರು. ಈಗ ಜಯಪ್ರಕಾಶ್ ಶೆಟ್ಟರು ಸುವರ್ಣದ ರಾಜಕೀಯ ಬ್ಯೂರೊ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೂಲತಃ ಈಟಿವಿ ಆಂಕರ್ ರಾಜಕೀಯದಲ್ಲಿ ಅಷ್ಟೇನೂ ಪಳಗಿಲ್ಲ. ರಂಗ ಇರುವವರೆಗೂ ಮೂಲೆ ಸೇರಿದ್ದರು. ಆದರೆ ಹಿರಿಯರೆಲ್ಲ ಬಿಟ್ಟು ಹೋದ ಬಳಿಕ ಸ್ಥಾನಕ್ಕೆ ಏರಿದ್ದಾರೆ.
ಶಶಿ ಅಸ್ತ :
ಶಶಿಧರ ಭಟ್ಟರು ಸಮಯ ನೋಡಿ ಸಮಯಕ್ಕೆ ಸೇರಿದ್ದರು. ಶಶಿ ಮೂಡಿದ ಎನ್ನುವಷ್ಟರಲ್ಲಿ ಮತ್ತೆ ಅಸ್ತಮಿಸುತ್ತಿರುವ ಲಕ್ಷಣ ಕಂಡು ಬಂದಿದೆ. ಸಮಯ ಸೇಲ್ ಆದರೆ ಭಟ್ಟರಿಗೆ ಮತ್ತೆ ಟೆಂಡರು ಕರೆಯುವವರು ಯಾರು ? ಎಂಬ ಪ್ರಶ್ನೆ ಮೂಡಿದೆ. ಸಮಯ ಆಧ್ಯಾತ್ಮಿಕದತ್ತ ವಾಲುವ ಎಲ್ಲ ಲಕ್ಷಣ ಕಾಣಿಸಿದೆ. ನಮ್ಮ ಸಂಸ್ಕೃತಿಯ ಅಂದರೆ ಋಷಿ ! , ಮಠ, ಮಂದಿರಗಳಿಗೆ ಹೆಚ್ಚಿನ "ಸಮಯ" ಮೀಸಲಿಡುವ ಸಾಧ್ಯತೆ ಗಳಿವೆ.
ರಂಗನಾಥನ ಗುಣ ...
ರಂಗ ಸುವರ್ಣ ದಲ್ಲಿ ಕ್ಯಾಪ್ಟನ್ ಆಗಿ ಬದಲಾದ ಮೇಲೆ ಪರ ವಿರೋಧ ಅಭಿಪ್ರಾಯಗಳು ಮೂಡಿದವು. ಏನೇ ಹೇಳಲಿ ಸಪ್ಪೆಗಿಂತ ವಿಚಿತ್ರ, ವಿಕ್ಷಿಪ್ತ ವ್ಯಕ್ತಿತ್ವ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬುವುದಕ್ಕೆ ರಂಗ ಸಾಕ್ಷಿ. ಎಷ್ಟೇ ದೂಷಿಸಿದರೂ ಅವರು ಹೋದ ಬಳಿಕ ಏನೋ ಕಳೆದುಕೊಂಡ ಅನುಭವ. ಮರೆತರೂ ಮರೆಯದ ಮಾಯೆ ರಂಗನಾಥರದ್ದು.
ಸುವರ್ಣದಲ್ಲಿ ಲಾದೆನ್ ಕುರಿತು ಅನುಭವ ! ಹೇಳಿಕೊಂಡ ಬೆಳಗರೆ ಜನಶ್ರೀಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಅವಕಾಶವಾದಿಗಳೆಂದರೆ ಹೀಗೆ.. ಎಲ್ಲೂ ಗಿಟ್ಟಿಸಿಕೊಳ್ಳುತ್ತಾರೆ, ಅವಶ್ಯಕತೆ ಇಲ್ಲಾ ಅಂದರೆ ಒದ್ದು ಹೊರಕಳುಹಿಸುತ್ತಾರೆ... ಒಂದಲ್ಲಾ ಒಂದು ದಿನ ಒದೆಸಿಕೊಂಡವರೆಲ್ಲಾ ಒಟ್ಟಾಗಿ ಒದೆಯುವ ದಿನ ದೂರ ಇಲ್ಲ.

Sunday

ಪಜೆವಾಣಿ ಮಹೀ ಪಡೆ ಹಿಟ್ 'ವಿಕೆ' ಟ್


ವಿಕೆಯನ್ನು ಮಣ್ಣು ಮುಕ್ಕಿಸುತ್ತೇನೆ, ತಿಂಗಳ ಒಳಗೆ ಸರ್ಕುಲೇಶನ್ ೨೫ ಸಾವಿರ ಮಾಡಿ ತೋರಿಸುತ್ತೇನೆ ಎಂದು ಮುನ್ನುಗ್ಗುತ್ತಿದ್ದ ಮಂಗಳೂರು ಪಜೆವಾಣಿ ಚೀಪ್ ಬ್ಯೂರೊ ಈಗ ಪಜೆ ಹಾಕಿ ಮಲಗಿದ್ದಾರೆ ! ವಿಕೆಗಿಂತ ಮೊದಲು ಎಡಿಶನ್ ಆರಂಭಿಸಿದರೂ ಅದರ ಹತ್ತನೇ ಒಂದು ಅಂಶ ಮಾತ್ರ ಪ್ರಸರಣ ಇರುವ ಬಗ್ಗೆ ಚಿಂತಿತರಾಗಿದ್ದ ಆಡಳಿತ ಮಂಡಳಿಗೆ ಭರವಸೆ ಮಹಾಪೂರ ನೀಡಿದ್ದೇ ವಿಕೆಯ ಮಾಜಿ ಉದ್ಯೋಗಿ ಮಹಿ. ಮಂಗಳೂರಿನ ವಿಕೆಯನ್ನು ಮಲಗಿಸಿ ಪಜೆವಾಣಿ ಪ್ರಸರಣವನ್ನು ಹೇಗಾದರೂ ಮಾಡಿ ಮೇಲೆತ್ತುತ್ತೇನೆ ಎಂದು ಮ್ಯಾನೇಜ್ ಮೆಂಟ್ ಗೆ ಭರವಸೆ ನೀಡಿದ್ದ ಮಹಿ ಪಡೆಯ ಸಾಮ್ರಾಜ್ಯ ಈಗ ಅವನತಿಯಲ್ಲಿದೆ.
ಪ್ರತಿ ದಿನ ವಿಕೆ ನೋಡಿ ಈ ಸುದ್ದಿ ಬಂದಿಲ್ಲ. ಆ ಸುದ್ದಿ ಬಂದಿಲ್ಲ ಎಂದು ಗ್ರಾಮೀಣ ಮತ್ತು ನಗರ ಸುದ್ದಿಗಾರರ ಬೆಂಡೆತ್ತುತ್ತಿದ್ದ ಪರಾಕ್ರಮ ಕಂಡೇ ಸಿಬ್ಬಂದಿ ಇವರಿಗೆ ಭಸ್ಮಾಸುರ ಎಂದು ಹೇಳಿ ತೃಪ್ತಿ ಪಟ್ಟುಕೊಳ್ಳುತ್ತಿದ್ದರು. ಒಂದಿಬ್ಬರು ಹೊಸ ಮುಖಗಳಿಗೆ ಮಣೆ ಹಾಕಿ ಸೀನಿಯರ್ ಗಳನ್ನು ದೂರ ಇಟ್ಟು ಎಲ್ಲ ಬ್ಯೂರೋ ಚೀಫ್ ಗಳ ಚೀಪ್ ಮೆಂಟಾಲಿಟಿ ತೋರಿಸಿ ಕೊನೆಗೆ ಸಾಧಿಸಿದ್ದು ಮಾತ್ರ ಶೂನ್ಯ. ತಳ ಹಿಡಿದ ಪಜೆವಾಣಿ ಮೇಲೆ ಬಂದಿಲ್ಲ. ಪತ್ರಿಕೆ ಗುಣಮಟ್ಟ ಸುಧಾರಿಸಿತೇ ಹೊರತು ಓದುಗರು ಹೆಚ್ಚಲಿಲ್ಲ. ಪ್ರತಿ ತಿಂಗಳು ಪತ್ರಿಕೆ ಸಂಖ್ಯೆ ಹೆಚ್ಚಾಯಿತೇ ಎಂದು ಆಸೆ ಕಣ್ಣುಗಳಿಂದ ನೋಡುತ್ತಿದ್ದದ್ದೇ ಬಂತು.
ಅನಂತಮೂರ್ತಿ ದೂರು !
ಸಂಗ್ರಾಹಕರನ್ನು ಪೀಡಿಸುವ ಈ ಧೋನಿ ವಿರುದ್ಧ ಅನಂತಮೂರ್ತಿ ಮಹಾಶಯರು ಶಾಂತ ಕುಮಾರ್ ಬಳಿ ದೂರು ನೀಡಿದ್ದರು. ಸುದ್ದಿ ಸಂಗ್ರಾಹಕರಿಗೂ ಜ್ಞಾನಪೀಠ ಅನಂತಮರ್ತಿಗೂ ಏನು ಸಂಬಂಧ ಎಂದು ಕೇಳಬೇಡಿ, ಯಾರೋ ಶಿಷ್ಯರ ಮೂಲಕ ಮಹಿ ಕಿತಾಪತಿಗಳನ್ನು ಮ್ಯಾನೇಜ್ ಮೆಂಟ್ ಗೆ ನೀಡಿದ್ದಾರೆ. ಶಾಂತಕುಮಾರ್ ಕರೆಸಿ ಮಾತನಾಡಿದ್ದಾರೆ.
ನನ್ನಿಂದ ಪತ್ರಿಕೆ ಪ್ರಸರಣ ಸಂಖ್ಯೆ ಹೆಚ್ಚಿಸಲು ಸಾಧ್ಯವಿಲ್ಲ ಎಂದ ಮಹಿ ವರ್ಗಾವಣೆ ಕೇಳಿದ್ದಾರೆ. ಆದರೆ ಇನ್ನೂ ಒಂದು ವರ್ಷ ಅಲ್ಲೇ ಮಣ್ಣು ಹೊರುವಂತೆ ಮ್ಯಾನೇಜ್ ಮೆಂಟ್ ಸೂಚಿಸಿದೆ. ಈಗ ಶಿಕ್ಷೆ ರೂಪದಲ್ಲಿ ಸೂರೆ ಹೋದ ಮಂಗಳೂರು ಕೋಟೆಯನ್ನು ಕಾವಲು ಕಾಯುತ್ತಿದ್ದಾರೆ ದೊರೆ ರಾಜಾಧಿರಾಜ ಪತ್ರಿಕಾ ಕುಲತಿಲಕ ಶ್ರೀ ಶ್ರೀ ಮಹೇಂದ್ರವರ್ಮ ಮಹಾರಾಜರು.
ಲಗೋರಿ, ತಿಲ್ಲಾನ ಬದಿಗಿಟ್ಟು ಈಗ
ಹಿಟ್ ವಿಕೆಟ್:
ಹೌದು ಈಗ ವಿಕೆ ಪ್ರಸರಣ ಹೆಚ್ಚಿಸುತ್ತೇನೆ ಎಂದು ಭರವಸೆ ನೀಡಿ ಬಂದ ನಾವಡರ ಕತೆಯೂ ಭಿನ್ನವಾಗಿಲ್ಲ. ಒಳಗೊಳಗೆ ಕತ್ತಿಮಸೆಯುತ್ತಿರುವ ಪೈಯ್ಡ್ ನ್ಯೂಸ್ ನ ಅನೈತಿಕ ಸಂಬಂಧದ ಆ ರಾಮ-ನಾಥ ಪಡೆ ನಾವಡರನ್ನು ಹಿಟ್ ವಿಕೆಟ್ ಮಾಡಿಸಲು ತಂತ್ರ ರೂಪಿಸಿದೆ. ಸುದ್ದಿಸಂಗ್ರಾಹಕರ ಮೂಲಕವೇ ದೂರುಗಳನ್ನು ರೆಡಿ ಮಾಡಿ ಮ್ಯಾನೇಜ್ ಮೆಂಟ್ ಗೆ ಒಪ್ಪಿಸಿದೆ. ಪಾಪ ನಾವಡ ಕತೆ ಗೋವಿಂದ.. ಒಡ್ಡೋಲಗ ಆರಂಭದಲ್ಲಿಯೇ ಅಕಟಕಟಾ.. ಮತ್ತು (ಅ)ಮಂಗಳ ಹಾಡು ಕೇಳಿಬರುತ್ತಿದೆ. ದ್ರೌಪದಿ ವಸ್ತ್ರಾಪಹರಣಕ್ಕೆ ಬಂದ ಕೃಷ್ಣ ಇಲ್ಲಿ (ರಾಘವ) ರಕ್ಷಣೆಗೆ ಬರುತ್ತಾನೆಯೋ ಕಾದು ನೋಡಬೇಕಿದೆ..

Wednesday

ನೆಟ್ವರ್ಕ್- ನಾಟ್ ವರ್ಕ್ !

ಸೋಶಿಯಲ್ ನೆಟ್‌ವರ್ಕಿಂಗ್‌ನ ಏಳು ಅಪಾಯಗಳ ಬಗ್ಗೆ ಇಲ್ಲೊಂದು ಲೇಖನವಿದೆ. ಸಮಯ ಮಾಡಿಕೊಂಡು ಓದಿ. ಆಮೇಲೆ ನಿಂಗ್, ಟ್ವಿಟರ್ ಇತ್ಯಾದಿಗಳಿಗೆ ಸದಸ್ಯರಾಗಬೇಕೋ ಅಂತ ನಿರ್ಧಾರ ಮಾಡಿ. ಗುಡ್ ಲಕ್….. ———————————————————–

7 Hazards of Social Networking

Most of the risks of social networking fall into one of the following categories, which I call the 7 Hazards of Social Networking:

1. Impersonation. Does the social networking account (e.g., Twitter Account) belong to the actual person or company it is representing? For example, if you look at the Twitter account@johnsileo, you will see that my name is used to send business to a gentleman who is also an identity theft speaker. My actual account is @john_sileo. Whether this is considered social networking squatting or social networking identity theft, it’s impersonation.

2. Ownership. Who owns the data on the social networking sites’ servers? Do you own what you post on Facebook, what you email through GoogleMail or the financials you backup off-site on someone else’s servers? The fact that you don’t know should trouble you as much as it does me.

3. Breach. How is your social networking site protecting your profile and posting data? Are they susceptible to bots like ZombieSmiles that allow hackers into your Facebook profile through Facebook’s own client interface? Is it easy for a hacker to post something or appeal to your friends as if the hacker is actually you (account takeover impersonation)?

4. Fraud. Social networking is based in relationships of trust. You trust the people you befriend. Unfortunately, some studies suggest that 25% of the users accept friend requests from total strangers. This, along with account takeover impersonation, opens you up to “friend in distress” scams, information gathering and other forms of social networking fraud.

5. Disclosure. We are far bolder and far less discretionary with what we share online versus what we share in person. This means we risk giving out information that, given a second thought, we didn’t want to. Think of the New York Times reporters who tweeted about a closed-door meeting where they discussed charging for online content.

6. Human Error. Have you ever hit the button on an email that was meant to go to someone else? The same phenomenon happens on social networking sites, but the damage is exponential because of the medium – you might have just sent it to hundreds or thousands of followers or friends. I call this phenomenon Tweet Breach.

7. Underestimation. Because social networking started out as a personal application and still has the flavor of being controlled by individuals (as opposed to corporations), we often underestimate the sheer destruction caused by mishandling this tool. I believe that this is what happened to the military. They originally underestimated the data leakage taking place in the social networking sphere and have since, wisely, begun to rethink their strategy.

Until we recognize that anything posted on the internet (especially if social networking is involved) is Public, Permanent and Admissible in court, we will continue to underestimate the hazards of social networking.

About the author: John Sileo became America’s leading Identity Theft Speaker & Expert after he lost his business and more than $300,000 to identity theft and data breach. His clients include the Department of Defense, Pfizer and the FDIC. To further bulletproof yourself and your business, visit John’s blog at Sileo.com and receive a free white-paper: Privacy Means Profit: Safe Data = Profitable Data.

Saturday

ಇಂದು ಪತ್ರಕರ್ತರ ಚಿತಾವಣೆ ! ಗೆಲ್ಲೋದ್ಯಾರು ?





ಪತ್ರಕರ್ತರಿಗೆ ಇದು ಚುನಾವಣೆ ಕಾಲ. ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಮುಗಿದ ಬೆನ್ನಲ್ಲೇ ಈಗ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನಡೆಯುತ್ತಿದೆ. ನಾಳೆಯೇ ಚುನಾವಣೆ. ರಾಜ್ಯ ಹಾಗು ಜಿಲ್ಲಾ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆಗೆ ಇಂದು ಮತದಾನ ನಡೆಯುತ್ತಿದೆ. ಬಳಿಕ ತಾಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಗಳು ನಡೆಯುತ್ತವೆ.

ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಎಲ್ಲಡೆ ಒಳಜಗಳ, ಭಿನ್ನಮತ ಸಾಮಾನ್ಯ. ರಾಜಕಾರಣಿಗಳ, ಅಧಿಕಾರಿಗಳ ಭಿನ್ನಮತ ಬರೆಯುವ ಪತ್ರಕರ್ತರದ್ದು ಮಾತ್ರ ಬಗೆಹರಿಸಲಾಗದ ಭಿನ್ನಮತ, ಒಗ್ಗಟ್ಟೇ ಇಲ್ಲ, ಎಲ್ಲ ಬಿಕ್ಕಟ್ಟು. ಪೆಟ್ಟಿಗೆಯಲ್ಲಿ ಚೇಳು ಹಾಕಿ ಬಾಯಿ ಮುಚ್ಚದಿದ್ದರೂ ಹೊರ ಬರುವುದಿಲ್ಲವಂತೆ. ಹಾಗೆ ಪತ್ರಕರ್ತರ ಸ್ಥಿತಿ. ಗುಂಪುಗಾರಿಕೆ, ಜಾತೀಯತೆ, ಸ್ವಪ್ರತಿಷ್ಠೆ, ಇಸಮ್ ಗಳಿಗೆ ಸಿಕ್ಕಿ ನಲುಗಿ ಹೋಗಿದೆ. ಅಮೂಲ್ಯ ಆಸ್ತಿಯನ್ನು ಹೊಡೆಯುವ ಸೈಲೆಂಟ್ ಕಿಲ್ಲರ್ ಗಳು ಹುದ್ದೆಯಲ್ಲಿ ಭದ್ರವಾಗಿ ಬೇರೂರುತ್ತಿದ್ದಾರೆ. ವಿರೋಧಿಸಲು ಒಳ್ಳೆಯ ಪತ್ರಕರ್ತರಿಗೆ ಪುರುಸೊತ್ತು ಇಲ್ಲ,

ಕಾರ್ಯ ಮರೆತ ಪತ್ರಕರ್ತರೇ ಹೆಚ್ಚಾಗಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವುದು ರೂಢಿ ಮಾತು. ಸಂಘದಲ್ಲಿ ಕೆಟ್ಟವರ ಸಂಗವೇ ಹೆಚ್ಚಾಗಿದೆ ಎನ್ನುದು ಪತ್ರಕರ್ತರ ಬೋಂಗು. ಹೆಚ್ಚಿನವರು ಅಕ್ರಿಡಿಶನ್ ಕಾರ್ಡ್ ಮಾಡಿಕೊಳ್ಳುವುದು, ಸೈಟ್ ಹೊಡೆಯುವುದೇ ಕ್ರಿಯಾತ್ಮಕ ಕೆಲಸ ಎಂದುಕೊಂಡಿದದಾರೆ.
ಪತ್ರಕರ್ತರು ಗುತ್ತಿಗೆ ಕಾರ್ಮಿಕರಂತೆ ನೇಮಕಗೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಎಸೆಯಲಾಗುತ್ತದೆ, ಕಣ್ಣುಮುಚ್ಚುವುದರ ಒಳಗೆ ಕಿತ್ತು ಹಾಕುತ್ತಿದ್ದಾರೆ, ಜಾಣರೂ ಹೇಗೋ ಬಚಾವ್ ಆಗುತ್ತಾರೆ, ಸಾಮಾನ್ಯ ಪತ್ರಕರ್ತರ ಬಗ್ಗೆ ಸಂಘ ಕಿಂಚಿತ್ತಾದರೂ ಗಮನ ಹರಿಸಿದೆಯೇ ?
ಬುದ್ಧಿವಂತ ಎಂದು ಹೇಳಿಕೊಳ್ಳುವ ನಾಗರಿಕರು ಮತ ಚಲಾವಣೆಗೆ ಬರುವುದಿಲ್ಲವೋ ಹಾಗೆಯೇ ಪ್ರಮುಖ ಪತ್ರಿಕೆಗಳ, ಪ್ರಮಖ ಪತ್ರಕರ್ತರು ಚುನಾವಣೆಗೆ ಬರುವುದೇ ಇಲ್ಲ. ಪತ್ರಕರ್ತರ ಚುನಾವಣೆಯಲ್ಲಿ ಗುಂಡು, ತುಂಡು, ಹಣ, ಜಾತಿ ರಾಜಕೀಯ ನುಸುಳಿದೆ. ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಇದಕ್ಕೆ ಉದಾಹರಣೆ.
ರೈಗೆ ಜೈ
ಇನ್ನು ಮಂಗಳೂರಲ್ಲಿಯೂ ಚುನಾವಣೆ ನಡೆಯುತ್ತಿದೆ. ವಿ ಬಿ ಯ ಪುಷ್ಪರಾಜ್ ಮತ್ತು ವಿಕೆ ಹರೀಶ್ ರೈ ನಡುವೆ. ಇಬ್ಬರೂ ಸಭ್ಯರೇ. ಆದರೆ ಬಲಪಂಥೀಯ ಮತ್ತು ಎಡಪಂಥೀಯ ಎಂದು ವಿಭಾಗಆಗುವುದರಿಂದ ರೈಗೆ ಹೆಚ್ಚಿನವರು ಜೈ ಎನ್ನುತ್ತಾರೆ ಎಂಬುದು ಸತ್ಯ. ಈ ನಡುವೆ ಕೆಲ ಅವಕಾಶವಾದಿಗಳು ಎರಡೂ ತಂಡದಲ್ಲಿದ್ದೇವೆ ಎಂದು ಕನ್ನಿಂಗ್ ಬುದ್ಧಿ ಪ್ರದರ್ಶಿಸಿದ್ದಾರೆ. ಈ ಹಿಂದೆ ಅಧಿಕಾರ ಅನುಭವಿಸಿ ಹಾರಾಡಿದ ಇದೇ ಗೋಮುಖ ವ್ಯಾಘ್ರರು ಎಡಪಂಥೀಯರು ಎಂಬ ಕಾರಣಕ್ಕೆ ಹಿಂದೆ ಪುಷ್ಪರಾಜ್ ಗೂ, ಮುಂದುಗಡೆ ರೈಗೂ ಜೈ ಘೋಷ ಹಾಕಿದ್ದಾರೆ. ಒಟ್ಟಾರೆ ಚುನಾವಣೆಯಲ್ಲಿ ಅನೇಕ ಮಂದಿ ಹಳ್ಳಕ್ಕೆ ಬಿದ್ದಿದ್ದಾರೆ. ಪ್ರಜ್ಞಾವಂತ ಮಂಗಳೂರಿನ ಪತ್ರಕರ್ತರಿಗೆ ನರಿಗಳ ಬುದ್ಧಿ ತಿಳಿದುಬಿಟ್ಟಿದೆ.

ಸುವರ್ಣ ಯುಗ ಅಂತ್ಯವೋ ಆರಂಭವೋ ?




ಏನಾಯಿತು ಎಂದು ತಿಳಿಯುವಷ್ಟರಲ್ಲಿ ಬಂದು ಹೋಯಿತು. ಇದಕ್ಕೆ ಮಿಂಚಿನಂತೆ ಬಂದು ಹೋದ ಅಧಿಕಾರ ಎನ್ನಬಹುದು. ಹಮೀದ ಪಾಳ್ಯ ಸುವರ್ಣ ನ್ಯೂಸ್ ಮುಖ್ಯಾ ಎಂದೇ ಎಲ್ಲರೂ ಹೇಳಿದ್ದೇ ಹೇಳಿದ್ದು, ಬ್ಲಾಗ್ ಗಳು ಸರ್ವೆ ಮಾಡಿ ಅಟ್ಟಕ್ಕೆ ಏರಿಸಿದ್ದೇ ಏರಿಸಿದ್ದು. ತಪ್ಪಲ್ಲ, ಎಲ್ಲರ ಜತೆಯೂ ಚೆನ್ನಾಗಿರುವ ಪಾಳ್ಯ ಪಾಳೇಗಾರಿಕೆ ಮನುಷ್ಯನಲ್ಲ. ಆದರೆ ಹಣವಂತ, ಅಧಿಕಾರವಂತರ ಬಳಿ ಅತಿಯಾದ ಸ್ನೇಹವೇ ಶಂಕಿಸಲು ಕಾರಣ.
ರಂಗಣ್ಣ ಹೋದ ಮೇಲೆ ತಾನೇ ಮುಖ್ಯಸ್ಥ ಎಂದು ಪಾಳ್ಯ ಸಿಕ್ಕ ಸಿಕ್ಕವರಿಗೆ, ಮಂತ್ರಿ ಮಹೋದಯರಿಗೆ ಫೋನು ಮಾಡಿ ಹೇಳಿದ್ದೇ ಬಂತು. ಸುವರ್ಣ ನ್ಯೂಸ್ ಸ್ಟಾಫ್ ಕೂಡ ಪಾಳ್ಯನೇ ಪಾಳೇಗಾರ ಎಂದು ಕೊಂಡಿದ್ದರು. ಅವಕಾಶವಾದಿ ರವಿ ಬೆಳಗರೆ ಸ್ಟುಡಿಯೊಕ್ಕೆ ಬಂದು ಲಾದೆನ್ ಬಗ್ಗೆ ಬೊಗಳೆ ಬಿಟ್ಟದ್ದು, ಬಳಿಕ ಆಸ್ಥಾನ ಪತ್ರಿಕೆಯಲ್ಲಿ ಪಾಳ್ಯನ ಫೋಟೊ ಹಾಕಿ ರುಣ ತೀರಿಸಿದ್ದು ಎಲ್ಲ ಸುವರ್ಣ ಮ್ಯಾನೇಜ್್ ಮೆಂಟ್್ ಕಣ್ಣಿಗೆ ಬಿದ್ದಿದೆ. ಕ್ಲೈಮ್ಯಾಕ್ಸ್ ನಲ್ಲಿ ಕತೆ ಗೊತ್ತಾಗಿದೆ. ಪಾಳ್ಯನ ಡೆಸಿಗ್ನೇಶನ್ ಬದಲಾಗಿಲ್ಲ ಬದಲಾಗಿ ಮಂಡಳಿ ಕೆಲವು ಅದಿಕಾರಕ್ಕೆ ಕತ್ತರಿ ಹಾಕಿದೆ. ರಂಗಣ್ಣ ಹೋದಾಗ ನೋಡಿಕೋ ಅಂದದ್ದೇ ತಪ್ಪಾಯಿತು. ಬೆರಳು ತೋರಿಸಿದರೆ ದೇಹವನ್ನೇ ನುಂಗಲು ಹೋಗುವುದೇ ?
ಸುವರ್ಣ ನ್ಯೂಸ್ ಗೆ ಪ್ರಮೋಶನ್ ಪಡೆದ ಶ್ಯಾಮ್ ನೋಡಿಕೊಳ್ಳುತಿದ್ದಾರೆ. ಖಚಿತ ಮೂಲಗಳ ಪ್ರಕಾರ ಕೆ.ಪಿ. ಸ್ಟಾರ್ ವಿಶ್ವೇಶ್ವರ ಭಟ್ಟರು ಯಾವುದೇ ಸಮಯದಲ್ಲಿ ಸುವರ್ಣ ನ್ಯೂಸ್ ಮುಖ್ಯಸ್ಥರಾಗಬಹುದು. ಆದರೆ ಕೆಪಿಗೆ ಚಾರ್ಮ ನೀಡುವುದರಲ್ಲಿ ಸದ್ಯ ಬ್ಯುಸಿ ಆಗಿರುವ ಭಟ್ಟರು, ಕೆಲವು ಸಮಯದ ಬಳಿಕ ಒಡ್ಡೋಲಗ ನಡೆಸಲಿದ್ದಾರೆ. ಈಗಾಗಲೇ ಭಟ್ಟರ ಜಾಹೀರಾತು ಸುವರ್ಣ ನ್ಯೂಸ್ ನಲ್ಲಿ ಬರುತಿದೆ. ಜಾಹೀರಾತು ಗುಣಮಟ್ಟ (ಕ್ಯಾಮೆರಾ- ಐಡಿಯಾ) ಅಷ್ಟೇನು ಚೆನ್ನಾಗಿಲ್ಲವಾದರೂ ಅಭಿಮಾನಿಗಳು ಖುಷ್ ಆಗಿದ್ದಾರೆ, ವರ್ಕ್ ಔಟ್ ಆಗುತ್ತಿದೆ ಎಂಬ ವರ್ತಮಾನ ಸುದ್ದಿಮನೆಗಳಲ್ಲಿ ಕತೆಯಾಗಿ ಕೇಳಿ ಬರುತ್ತಿದೆ.
ಈ ವಿಷಯ ಒತ್ತಟ್ಟಿಗಿರಲಿ, ರಂಗ ಹೊರ ಹೋದ ಮೇಲೆ ಸುವರ್ಣ ಬೆಳ್ಳಿ ರೇಟ್ ನಂತೆ ಇಳಿದಿದೆ. ಸ್ಟಾರ್ ಬೇಕೆಂಬ ಕಾರಣಕ್ಕೆ ರವಿ ಬೆಳಗೆರಯನ್ನು ಕರೆದು ತರಲಾಯಿತು. ಎಲ್ಲೆಡೆ ಲಾಭ ಗಿಟ್ಟಿಸುವ ರವಿ ಇಲ್ಲೂ ಲಾಟರಿ ಹೊಡೆದಿದ್ದಾರೆ. ಜನಶ್ರೀ ಬೆಳಗೆರೆಯನ್ನು ಮರಳಿ ಕರೆದಿದೆ. ಆದರೆ ಪಾಳ್ಯ ಪಾಲಿಗೂ ರವಿ ವಕ್ರ ಶನಿಯಾಗಿ ಪರಿಣಮಿಸಿದ್ದಾರೆ. ಈ ಬಗ್ಗೆ ಗುರುಗಳಲ್ಲಿ ಕೇಳಿದಾಗ ಶುಕ್ರ ಮೌಢ್ಯ, ಗುರುಬಲ ಇಲ್ಲ, ಅಧಿಕಾರ ನಷ್ಟ ಯೋಗ ಇದೆ ಎಂದು ಹೇಳಿ ಶೂನ್ಯದಲ್ಲಿ ಚಿನ್ನದ ಉಂಗುರ ನೀಡಿ ಹರಸಿದ್ದಾರೆ. ಆದರೆ ಇದೇ ಉಂಗುರ ಉರುಳಾದೀತು ಎಂಬ ಹೆದರಿಕೆ ಪಾಳ್ಯರಿಗೆ.
ಇನ್ನು ನೇರ ನಿಷ್ಟುರ ರಂಗ ಭಾರದ್ವಾಜನ ಕಥೆ. ಪಾಳ್ಯನನ್ನು ಎಳೆತಂದ್ದದ್ದು ಭಾರದ್ವಾಜ. ಇಬ್ಬರು ಒಳ್ಳೆಯವರೇ. ಆದರೆ ಭಾರದ್ವಾಜ ರಂಗನಿಂದ ಹೊರ ದಬ್ಬಿಸಿಕೊಂಡಾಗ ಪಾಳ್ಯ ಕ್ಯಾಪ್ಟನ್ ರಂಗನಿಗೆ ಸಾಥ್ ನೀಡಿ, ಬಾರದ್ವಾಜನಮನಸ್ಸಿಗೆ ಶಾಕ್ ನೀಡಿದರು. ದೊಡ್ಡ ದೊಡ್ಡ ತಲೆಗಳೇ ಬೋಳಾಗುತ್ತಿರುವುದನ್ನು ನೋಡಿದ ಮೇಲೂ ಪಾಳ್ಯ ಅರ್ಥ ಮಾಡಿಕೊಂಡಿಲ್ಲ. ಲಕ್ಷ್ಮೀ ಚಂಚಲೆ ಎಂಬುದನ್ನು ಅರಿಯಬೇಕು. ಈ ಟಿವಿ ಮೋಣ, ಕ್ಯಾಪ್ಟನ್ ( ಗಡ್ಡ )ರಂಗ, ಬುದ್ಧಿ ಜೀವಿ ಶಶಿದರ ಭಟ್ಟ ಮಕಾಡೆ ಮಲಗಿ, ಈಗ ಹೊರಳುತ್ತಿರುವುದನ್ನು ನೋಡಿದ ಮೇಲೂ ಈ ರೀತಿ ಮಾಡುವುದು ಸರಿ ಅಲ್ಲ. ಇನ್ನೂ ಕಾಲ ಮಿಂಚಿಲ್ಲ. ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡ ಅಭಿಮನ್ಯು ಆಗಬೇಡಿ, ತೊಡೆ ಮುರಿದುಕೊಂಡ ಕೌರವನೂ ಬೇಡ, ದೃತರಾಷ್ಟನಂತೆ ಕಣ್ಣು ಮುಚ್ಚಿರುವುದು ಬೇಡ ಧರ್ಮರಾಯನಂತಿರಬೇಕು ಎಂಬ ನಿರೀಕ್ಷೆ ಇಲ್ಲ, ಕನಿಷ್ಠ ನಕುಲ-ಸಹದೇವರಂತೆರಗಳೆ ಮಾಡದೆ ಕೆಲಸ ಮಾಡಿಕೊಂಡಿದ್ದರೆ ನಮಗೂ ನಿಮ್ಮನ್ನು ಪರದೆಯಲ್ಲಿ ನೋಡಿ ಖುಷಿ ಪಡುತ್ತೇವೆ. ಜೈ ಭವಾನಿ

Friday

ಇದು ತೇಜೋ ವಧೆ ಪ್ರಯತ್ನ ಅಲ್ಲ..

ಬ್ಲಾಗ್ ಕುರಿತು ದೂರು ನೀಡಲು ಸಿದ್ಧತೆ ನಡೆದಿದೆ ಎಂದು ನನ್ನ ಹಿತೈಷಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರ ಎಚ್ಚರಿಕೆಗೆ ಥ್ಯಾಂಕ್ಸ್. ಇದರಲ್ಲಿಯೂ ಬೇಸರ ವಿಷಯ ಎಂದರೆ ಬಲಿತರೇ ದೂರು ಹಿಡಿದುಕೊಂಡು ಸಂತ್ರಸ್ತನ ಮುಖವಾಡ ಹಾಕಿಕೊಂಡಿರುವುದು.
ವಸ್ತು ವಿಷಯ ಎಂದರೆ ಇಲ್ಲಿ ಪ್ರಕಟವಾಗುವ ಪೋಸ್ಟ್ಗ್ ಗಳು ಕಾಲ್ಪನಿಕ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಕುರಿತಾಗಿ ಬರೆದದ್ದಲ್ಲ. ಯಾರ ತೇಜೋವಧೆ ಮಾಡುವ ಕೀಳು ಮಟ್ಟದ ಪ್ರಯತ್ನವೂ ಅಲ್ಲ. ಒಂದು ವೇಳೆ ಸನ್ನಿವೇಶ, ಪಾತ್ರ ಘಟನೆಗಳು ಹೋಲಿಕೆಯಾಗಿದ್ದಲ್ಲಿ ಅದಕ್ಕೆ ನಾನು ಹೊಣೆಯಲ್ಲ. ಭ್ರಷ್ಟಾಚಾರ, ದೌರ್ಜನ್ಯ , ಮೋಸ, ಹಲಾಲುಕೋರತನ ವಿರುದ್ಧ ಪ್ರಕಟವಾದ ಲೇಖನಗಳಲ್ಲಿ ಯಾರಿಗಾದರೂ ಇದು ತಮಗೆ ಬರೆದಿರಬಹುದು, ಅಥವಾ ಪಾತ್ರ ತಮ್ಮಂತೆಯೇ ಇರಬಹುದು ಎನಿಸಿದ್ದರೆ ಅದಕ್ಕೆ ಅವರೇ ಹೊಣೆ !ಈ ಮೂಲಕವಾದರೂ ಪ್ರಾಮಾಣಿಕರಾಗಲು ಪ್ರಯತ್ನಿಸಲಿ. -ಸಂಪಾದಕಿ

Monday

ಕು ನಾಥ ಮತ್ತು ಮೂರು ಮಿಕಕ್ಕೆ ಮಂಗಳಾರತಿ








"ವಿ ಕೆ ಮುಚ್ಚಿ ಮರಣ ವಾಣಿ ಸೇರಿ ಮರಣ ವಾರ್ತೆ ಪತ್ರಿಕೆ ಹೊರ ತನ್ನಿ"


ರಾಘವನ್ ಕು. ನಾಥ ಮತ್ತು ಕರಕಟ ದಮನಕ ಜೋಡಿಗೆ ಎಚ್ಚರಿಸಿದ ಸ್ಟೈಲ್.

ಚೆನ್ನಾಗಿ ಹೇಳಿದ್ರಿ.. ಹಿ ಹಿ ಹಿ..


  1. ಭಳಿರೆ ಶಹಬ್ಬಾಸ್ ಮೆಚ್ಚಿದೆ. ಇದು ಸಂಪಾದಕರೆ ಇಲ್ಲದ ಬ್ಲಾಗ್ ನ ಮೆಚ್ಚುಗೆ. ಯುವಕರೇ ನಾಚಿಸುವ ಗಂಡೆದೆಯ ಚುಚ್ಚುವ ಮಾತುಗಳಿಂದ ಬೆಚ್ಚಿಸಿದ್ದು, ಸಚಿನ್ ನಂತೆ ಬ್ಯಾಟ್ ಬೀಸಿ ಶೋಇಬ್ ಅಕ್ತರನಂತೆ ಕು ನಾಥ ದಾಖಲೆಗಳ ಬೌನ್ಸೆರ್ ಎಸೆಯುತ್ತಿದ್ದರೂ ಹುಕ್ ಶೋಟ್ನಂತೆ ನ್ಯೂ ಎಡಿಟರ್ ಬೌಂಡರಿ ಸಿಕ್ಷ್ ಹೊಡೆದದ್ದೇ ಹೊಡೆದದ್ದು. ಇದನ್ನು ನೋಡಿ ನಾಥ ಬಳಗ ಇಂಗು ತಿಂದ ಮಂಗ ನ ಹಾಗೆ ಆದದದ್ದು.. .. !

ನಾವಡ ಪಟ್ಟಾಭಿಷೇಕ ಕ್ಕೆ ಬಂದು ಕಪಿ ಸೇನೆಯ ನಾಯಕ ಆನಾಥನನ್ನುಪಕ್ಕಕ್ಕೆ ಇರಿಸಿ ಮೆರೆಸಿದ ರಾಘವನ ಪರಾಕ್ರಮ ನೋಡಿದ ವಿ ಕೆ ಸಂಪಾದಕೀಯದ ಸಿಬ್ಬಂದಿಗಳೇ ವೋಳಗೊಳಗೆ ಖುಷಿ ಪಟ್ಟುಕೊಂಡದ್ದು ಅದನ್ನು ಗೆಳೆಯರಲ್ಲಿ ಹೇಳಿಕೊಂದದ್ದ್ದೆ ಹೇಳಿದ್ದ್ದು. ಇದಕ್ಕೂ ಅರ್ಥ ಇದೆ.





  • ಬೆಂಗಳೂರು ಪತ್ರಕರ್ತ ಮಿತ್ರರೂ ರಾಘವನ್ ಕುರಿತು ಹೇಳಿದ್ದ ಮಾತಿನಲ್ಲಿ ಅರ್ಥ ಇಲ್ಲ ಅಂತ ಈಗ ಅನಿಸುತ್ತಿದೆ. ಕು.ನಾಥ ನ ಅನಾಥಾಲಯಕ್ಕೆ ಬಂದ ಸಂಕೇಶ್ವರ, ವಿ ಭಟ್, ಎಚ್ ಅರ್ ಡಿವಿಭಾಗ ಜಾಹೀರಾತು, ಬ್ರಾಂಡ್ ಎಂಥೆಂಥ ಮುಕ್ಯಸ್ತರನ್ನೇ ಬಲೆಗೆ ಬೀಳಿಸಿದ ಕು. ಖ್ಯಾತಿಯ ನಾಥ್ಈ ಬಾರಿ ಮಕಾಡೆ ಮಲಗಿದ್ದು ನೋಡಿದರೆ ರಾಘವನ್ ಸಾಮಾನ್ಯ ಸಂಪಾದಕ ಅಂತ ಕಾಣುವುದಿಲ್ಲ. ಮಂಗಳವಾರ ಮಂಗಳೂರಿನ ಮಹಾ ಸಭೆಗೆ ಬಂದ ಎಡಿಶನ್ ನ ಎಲ್ಲ ವಿ ಕೆ ಸುದ್ದಿಗಾರರಿಗೆ ನಾಥನನ್ನು ಝಾದಿಸಿದ್ದು ನೋಡಿ ಅಚ್ಚರಿ moodiದ್ದು ಸುಳ್ಳಲ್ಲ. ಜಾಹೀರಾತು ಸಂಗ್ರಹಕ್ಕೆ, ಮಂತ್ಹ್ಲಿ ಕಲೆಕ್ಷನ್ಗೆ ಪತ್ರಿಕೆ ಬಳಸುತ್ತಿರುವ ದಂಡಪಿಂದಗಳಿಗೆ ಝಾಡಿಸಿದ ಸ್ಟೈಲ್ ವೀಡಿಯೋ
    ಮಾಡುವಂತಿತ್ತು.
ಪತ್ರಿಕೆ ಪ್ರಸಾರ ಹೆಚ್ಚಾಗಲು ನನ್ನ ಐದಿಯ ಗಳೇ ಎಂದು ಬೊಗಳೆ ಬಿಡುತ್ತಿದ್ದ ನಾಥ ನನ್ನ ತೆಗೆದು ಹಾಕಿದರೆ ಪ್ರಸಾರ ಕುಸಿಯುತ್ತದೆ ಎಂಬ ಭ್ರಮೆ ಮೂಡಿಸಲು ಪ್ರಯತ್ನಿಸುತ್ತಿದ್ದ. ಈಗಾಗಲೇ ಬಿದ್ದಿರುವ ಪೇಪರ್ ಲೆಕ್ಕ ಹಾಕಿರುವ ಸಂಸ್ಥೆ ನಾಥ್ ನೀಡಿದ ಎಲ್ಲದಾಕಲೆಗಳ ಮೂಟೆಯನ್ನು mooಲೆಗೆ ಎಸೆದಿದೆ. ಹೀಗಾಗಿ ಎಲ್ಲ ಅಧಿಕಾರಗಳನ್ನು ನಾವಡ ಗೆ ಒಪ್ಪಿಸಿದೆ ಎಂದು ಹೇಳ ಲಾಗುತ್ತಿದೆ.





ಹಿ ಹಿ ಹಿ ಹಿ ...

Sunday

ಕೃಷ್ಣ ಲೀಲೆ ತೋರುವ ಬಾಸ್ ಗಳೇ ಎಚ್ಚರ.. ಕಾದಿದೆ ಶಿಕ್ಷೆ

ಟೀವಿ ಚಾನೆಲ್ ಗಳಲ್ಲಿ ಮುಖ್ಯಸ್ಥರು ಹೆಣ್ಣು ಮಕ್ಕಳಿಗೆ, ಕೆಲವೆಡೆ ಗಂಡು ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸಂತ್ರಸ್ತರು ಕಮೆಂಟ್ ಮೂಲಕ ನೋವು ತೋಡಿಕೊಂಡಿದ್ದಾರೆ. ಸಹೋದ್ಯೋಗಿಗಳಿಗೆ ಕಿರುಕುಳ ನೀಡುವುದು, ಅದರಲ್ಲಿಯೂ ಲೈಂಗಿಕ ಕಿರುಕುಳ ಕ್ಕೆ ದೊಡ್ಡ ಶಿಕ್ಷೆ ಇದೆ. ಕ್ರಾಸ್ ಚೆಕ್ ಬಳಿಕ ಕಾಮೆಂಟ್ ಪ್ರಕಟಿಸಲಾಗುವುದು.
ಇದು ಕಿರಕುಳ ನೀಡುತ್ತಿರುವ ಬಾಸ್ ಗಳಿಗೆ ಎಚ್ಚರಿಕೆ ಕರೆಗಂಟೆ..
ಹೈದರಾಬಾದ್ ಮೂಲದ ಕನ್ನಡ ಚಾನೆಲ್ ಒಂದರ ಮುಖ್ಯಸ್ಥರ ಮೇಲೆ ಆರೋಪ ಬಂದಿದೆ.
ಇನ್ನು ಹಲವು ಕಚೇರಿಗಳಲ್ಲಿ ತಮ್ಮ ಅಧಿಕಾರ ಪ್ರಯೋಗಿಸಿ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಯಾರಾದರೂ ದೂರು ನೀಡುವುದಿದ್ದರೆ ನಾವೇ ಮುಂದೆ ಬಂದು ಪ್ರಕಟಿಸುತ್ತೇವೆ. ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ.
ಇ ಮೇಲ್ ಕೂಡಾ ಮಾಡಬಹುದು..
-ಸಂಪಾದಕ ಇಲ್ಲದ ವ್ಯವಸ್ಥಾಪಕ

Friday

ಕದಿಯುವ ಪತ್ರಿಕೆಗಳಿವೆ ಎಚ್ಚರ !



ನಿಲುಮೆ ಬ್ಲಾಗ್ನಲ್ಲಿ ಪ್ರಕಟವಾದ ಪೋಸ್ಟ್ ಇಲ್ಲಿ ಪ್ರಕಟಿಸಿದ್ದೇವೆ.




ಇದಕ್ಕೆ ಮುನ್ನ

http://new-mediablog.blogspot.com/

ನೋಡಿ ಪತ್ರಕರ್ತರ ಬಗ್ಗೆ ತಿಳಿಯಿರಿ


ಇಂತದ್ದೊಂದು ತಲೆಬರಹ ಕೊಡುವುದೇ ಅಷ್ಟು ಚಂದ ಕಾಣುತ್ತಿಲ್ಲ,ಆದರೇನು ಮಾಡುವುದು ನಡೆದ ವಿಷಯವನ್ನ ಹೇಳ ಹೊರಟಾಗ ಹೀಗೆ ಆಗುತ್ತದೆ. ಕಳೆದ ತಿಂಗಳ ೨೭ರಂದು ಅರೆಹೊಳೆ ಸದಾಶಿವ ರಾವ್ ಅವರ ’‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು’ ಲೇಖನ ಹಾಗೆ ೨೫ರಂದು ರಶ್ಮಿ ಕಾಸರಗೋಡು ಅವರ ’‘ಎಂಡೋ ನಿಷೇಧಿಸಿ’ – ಶರದ್ ಪವಾರ್ ಗೊಂದು ಬಹಿರಂಗ ಪತ್ರ’ ಅನ್ನುವ ಲೇಖನವನ್ನ ನಿಲುಮೆಯ ಓದುಗರೆಲ್ಲ ನೋಡಿಯೆ ಇರುತ್ತೀರಿ. ಕಳೆದ ೨೮ರಂದು ’ಕರಾವಳಿ’ಯ ಪತ್ರಿಕೆಯೊಂದು ಏಕಾಏಕಿ ಲೇಖಕ/ನಿಲುಮೆಯ ಅನುಮತಿಯಿಲ್ಲದೆ ಈ ಲೇಖನಗಳನ್ನ ಕದ್ದಿದ್ದು ಅಲ್ಲದೇ ಕಡೆ ಪಕ್ಷ ಕೃಪೆ ಅಂತಲೂ ಹಾಕದೇ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ’ಕರಾವಳಿ’ಯ ಜನರಿಗೆ ಹಂಚಿದೆ.(ಆ ಪತ್ರಿಕೆಯ ಹೆಸರಿಗೆ ನಮ್ಮಿಂದ ಸ್ವಲ್ಪವು ಧಕ್ಕೆ ಬಾರದಿರಲಿ ಅನ್ನುವ ಏಕೈಕ ಉದ್ದೇಶದಿಂದ ಆ ಪತ್ರಿಕೆಯ ಹೆಸರನ್ನ ನೇರವಾಗಿ ಬರೆಯುತ್ತಿಲ್ಲ).

ಹಿಂದೊಮ್ಮೆ ರಾಕೇಶ್ ಶೆಟ್ಟಿಯವರ ‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !? ಅನ್ನುವ ಲೇಖನವನ್ನ ಮೈಸೂರು ಮೂಲದ ಯುವರಾಜಕಾರಣಿಯೊಬ್ಬರು ಕದ್ದಿದ್ದು ಅಲ್ಲದೇ ಅವರ ಹೆಸರನ್ನ ತೆಗೆದು ತನ್ನದೇ ಹೆಸರು/ಪೋಟೋ ಹಾಕಿಕೊಂಡಿದ್ದರು.ಕಡೆಗೆ ಎಚ್ಚರಿಸಿದ ಮೇಲೆ ತಪ್ಪಾಯಿತು ಅಂದಿದ್ದರು.ಅವ್ರಿಗೇನೋ ಬೌದ್ದಿಕ ಹಕ್ಕು ಅನ್ನುವುದೆಲ್ಲ ತಿಳಿದಿರಲಿಕ್ಕಿಲ್ಲ ಅಂದುಕೊಳ್ಳೋಣ.ಆದರೆ,ಕಂಡೋರಿಗೆಲ್ಲ ಬುದ್ದಿ ಹೇಳೊ ಪತ್ರಿಕೆಯವರಿಗೆ ಬೌದ್ದಿಕ ಹಕ್ಕು ಅನ್ನುವುದರ ಅರಿವಿಲ್ಲವೇ? ಈ ಇಬ್ಬರೂ ಲೇಖಕರು ಬೇರೊಂದು ಪತ್ರಿಕೆಗೆ ಬರೆಯುವವರು ಅದನ್ನ ಅನುಮತಿಯಿಲ್ಲದೆ ಪ್ರಕಟಿಸುವುದು ಪತ್ರಿಕಾ ಧರ್ಮವಲ್ಲ ಅನ್ನುವುದನ್ನ ನಾವು ಹೇಳಿಕೊಡಬೇಕಾ? ಸದಾಶಿವ ರಾವ್ ಅವರು ಆ ಪತ್ರಿಕೆಗೆ ಈ ಬಗ್ಗೆ ಪತ್ರ ಬರೆದು ಕೇಳಿದಾಗ ’ಇನ್ಮುಂದೆ ಈ ರೀತಿ ಆಗುವುದಿಲ್ಲ,ತಪ್ಪಾಗಿದೆ’ ಅಂದಿದ್ದಾರೆ.ಆದರೆ ರಶ್ಮಿಯವರು ಕರೆ ಮಾಡಿದರೂ ಸರಿಯಾಗಿದೆ ಉತ್ತರಿಸದೆ ನಿರ್ಲಕ್ಷಿಸಿದ್ದಾರೆ…! ಇದೆಂತ ಉದ್ಧಟತನ?

ವಿಷಯ ಹೆಚ್ಚು ಜನರಿಗೆ ತಲುಪಿಸುವ ಉದ್ದೇಶವೇನೋ ಒಳ್ಳೆಯದೇ,ಆದರೆ ಅದಕ್ಕೊಂದು ನೀತಿ-ರೀತಿ ಅನ್ನುವುದು ಇರುತ್ತದೆ.ಇದು ಕೇವಲ ಈ ಪತ್ರಿಕೆಯೊಂದರ ಚಾಳಿಯಲ್ಲ ಕೆಲವೊಂದು ಪತ್ರಿಕೆಗಳು ಈ ಹಿಂದೆ ಹೀಗೆ ಮಾಡಿರುವ ಉದಾಹರಣೆಗಳು ನಮಗೆ ಹಲವು ಬ್ಲಾಗುಗಳಲ್ಲಿ ಸಿಗುತ್ತವೆ.ಇನ್ಮುಂದಾದರೂ ಪತ್ರಿಕೆಗಳು ಪತ್ರಿಕಾ ಧರ್ಮವನ್ನ ಪಾಲಿಸಲಿ ಅನ್ನುವುದು ನಮ್ಮ ಆಶಯ.ಇಲ್ಲದಿದ್ದರೇ ಬುದ್ದಿ ಹೇಳೊ ಮಾಧ್ಯಮದ ಮಂದಿಯ ಬುದ್ದಿ ಎಲ್ಲಿದೆ ಅಂತ ಜನ ಕೇಳುವಂತಗಾಬಾರದು ನೋಡಿ…!

ಸದಾಶಿವ ರಾವ್ ಅವರು ’ಆ’ ಪತ್ರಿಕೆಗೆ ಬರೆದೆ ಪತ್ರವಿಲ್ಲಿದೆ.

ಪ್ರೀತಿಯ ಸ೦ಪಾದಕರಿಗೆ
ಅರೆಹೊಳೆ ಸದಾಶಿವ ರಾವ್ ಮಾಡುವ ನಮಸ್ಕಾರಗಳು
ದಿನಾ೦ಕ ೨೮.೦೪.೨೦೧೧ರ ತಮ್ಮ ಸ೦ಚಿಕೆಯಲ್ಲಿ ಪ್ರಕಟಿಸಿದ ನನ್ನ ಲೇಖನದ ಬಗ್ಗೆ ಬರೆಯಬೇಕಾದ ಅನಿವಾರ್ಯತೆ ಬ೦ತು.
ಮೊದಲಾಗಿ ನೀವು ‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು ಎ೦ಬ ನನ್ನ ಲೇಖನವನ್ನು ನನ್ನ ಅನುಮತಿ ಅಥವಾ ಅವಾಗಾಹನೆಗೆ ತರದೇ ಪ್ರಕಟಿಸಿದ್ದು ಬೇಸರವೆನಿಸಿತು. ಮತ್ತೆ ಲೇಖನದ ಪೂರ್ಣ ಪಾಠ ಪ್ರಕಟಿಸದೆ, ಲೇಖನದ ಒಟ್ಟು ಆಶಯ ಅಸ್ಪಷ್ಟ ವಾಗುವ೦ತೆ ಮಾಡಿದ್ದಿರಿ. ಲೇಖನದ ಶಿರ್ಶಿಕೆಗು ನೀವು ಪ್ರಕಟಿಸಿರುವ ‘ತು೦ಡು ಲೇಖನ’ ಕ್ಕೂ ಎಲ್ಲಿಯೂ ಸ೦ಬ೦ಧವೇ ಇಲ್ಲದ೦ತಾಗಿದೆ.
ಇನ್ನು ಒ೦ದು ಮುಖ್ಯ ವಿಚಾರವೆ೦ದರೆ, ನಾನು ನೇರವಾಗಿ ಅ ಲೇಖನವನ್ನು ತಮಗೆ ಕಳುಹಿಸಿರಲಿಲ್ಲ. ಅದು ನಾನು ನಿಯಮಿತವಾಗಿ ಬರೆಯುವ ಪತ್ರಿಕೆ ಹಾಗು ನಿಲುಮೆಗೆ ಅ೦ಕಣಕ್ಕೆ೦ದು ನಾನು ಸಿದ್ದ ಪಡಿಸಿದ ಲೇಖನ. ನನ್ನ ಅನಿಸಿಕೆಯ೦ತೆ ನೀವು ಅದನ್ನು ನಿಲುಮೆಯ ಮೂಲಕ ತೆಗೆದುಕೊ೦ಡಿದ್ದೀರಿ. ತಾವು ನಿಲುಮೆಯ ಕ್ರಪೆಯನ್ನು ಆ ಲೇಖನದಲ್ಲಿ ನಮುದಿಸಿದ್ದರೆ, ಈ ಯಾವ ಗೊ೦ದಲಗೂ ಉದ್ಭವಿಸುತ್ತಿರಲಿಲ್ಲವಾಗಿತ್ತು. ಅದನ್ನು ನೀವು ಮಾಡದ್ದು ಮತ್ತೊ೦ದು ಬೇಸರದ ವಿಚಾರ.

ಯಾವುದೇ ಪ್ರಕರಣವನ್ನು ಎಳೆಯುವುದು ನನಗಿಷ್ಟವಿಲ್ಲ. ಆದರೆ ತಾವು ಈ ವಿಷಯದಲ್ಲಿ ಪತ್ರಿಕಾ ಧರ್ಮವನ್ನು ನಿರ್ಲಕ್ಷಿಸಿದ್ದಿರಿ ಎ೦ಬುದು ಕ೦ಡು ಬರುತ್ತದೆ . ಇನ್ನು ಮು೦ದೆ ಇ೦ತಹಾ ಯಾವುದೇ ಬರಹಗಳನ್ನು ಬೇರೆಡೆಯಿ೦ದ ತೆಗೆದುಕೊ೦ಡಲ್ಲಿ, ದಯವಿಟ್ಟು ಅನುಮತಿಯೊ೦ದಿಗೆ ಅಥವಾ ಕನಿಷ್ಠ ಯಾರ ಕ್ರಪೆಯೆ೦ಬ ವಿಷಯದೊ೦ದಿಗೆ ಪ್ರಕಟಿಸುವಿರಾಗಿ ಭಾವಿಸುತ್ತೇನೆ.

ನಿಮ್ಮ ಉತ್ತರದ ನಿರಿಕ್ಷೆಯಲ್ಲಿರುತ್ತೇನೆ.

Wednesday

ಮಾಧ್ಯಮ ಬದಲಾವಣೆ ಪರ್ವ ಕಾಲ. ರಂಗ ಮತ್ತು ರವಿ ಕಪ್ರದಿಂದ ಸುವರ್ಣಗೆ ಹೋದರು. ಚಾರ್ಮ್ ಕಳಕೊಂಡಿದ್ದ ಶಶಿಧರ ಭಟ್ಟರು ಹೊರಬಿದ್ದರು. ಕೆಲವೇ ತಿಂಗಳಲ್ಲಿ ಈ ಟೀವಿಯಾ ರಾಮೋಜಿ ರಾವ್ ಅವರ ಕೆಂಪು ಕಣ್ಣಿನ ಹುಡುಗ ಕೂಡ ಅಲ್ಲಿಂದ ಹೊರಬಂದರು.
ಸುವರ್ಣ ನ್ಯೂಸ್ ಬಕೆಟ್ ಕಥೆ ನಿಮಗೆ ಗೊತ್ಹಿದೆ. ರಂಗ ರವಿ ಕಥೆ ಗೊತ್ಹಿದೆ. ಆಮೇಲೆ ವಿ ಭಟ್ಟರು ವಿಕ ಬಿಟ್ಟರು. ಶಶಿಧರ ಭಟ್ಟರು ಸಮಯ ಸೇರಿದರು. ಸಮಯ ಸೇಲ್ ಆಗಿದ್ದು ಯಾವಾಗ ಅಲ್ಲಿಂದ ಹೊರಬೀಳುತ್ತಾರೆ ನೋಡಬೇಕು. ಪ್ರಜಾವಾಣಿಯಲ್ಲಿ ಅತೀ ಹೆಚ್ಚು ವರ್ಗಾವಣೆ ಅಗೀದೆ. ದಂಡಾವತಿ ಈಗ ಕಾರ್ಯಕಾರಿ ಸಂಪಾದಕ. ಗೇಮ್ expert ಗೋಪಾಲ ಆ ಸ್ಥಾನಕ್ಕೆ ಬಂದಿದ್ದಾರೆ. ದಿನೇಶ್ ಅಮೀನ್ ಮಟ್ಟು ತಮ್ಮ ಟೀಕಾ ಪ್ರಹಾರ ಮುಂದುವರಿಸಿದ್ದಾರೆ.
ಇಂಗ್ಲೀಷ್ ಗೆ ಬರೋಣ ಬಲರಾಮ್, ಕಾಮತ್, ರವಿ ಜೋಷಿ ಹೊಸ ಕಡೆಗೆ ಹೋದರು. ಮುಖ್ಯಮಂತ್ರಿಯ ಆಪ್ತ ವಲಯದ ಶಿವಮೊಗ್ಗದ ಅರುಣ್ ಪ್ರಶಸ್ತಿ ಮಾತ್ರ ಅಲ್ಲದೆ ಎಕ್ಷ ಪ್ರೆಸ್ ಸಂಪಾದಕ ಕೂಡ ಆಗಿ ಡಬ್ಬಲ್ ಲಾಟರಿ ಹೊಡೆದರು. ಅಲ್ಲಿರುವ ಪ್ರತಿಭಾವಂತ ಹುಡುಗ ರಾಜಶೇಖರನಿಗೆ ಯಾಕೋ ಕಿರಿ ಕಿರಿ.
ಮುಂದಿನ ದಿನಗಳಲ್ಲಿ ಸುವರ್ಣ ನ್ಯೂಸ್ ಹೊಸ ಮುಖ ಬರಲಿದ್ದಾರೆ.ಬಲರಾಮ್ ಹೊಸ ಟೀಂ ಕಟ್ಟಲಿದ್ದಾರೆ. ಸಮಯದಲ್ಲಿ ಕೂಡ ಎಡಪಂಥಿಯರು ಹೊರನಡೆದು ಬಳಪಂಥಿಯರಿಗೆ ಅವಕಾಶ ನೀಡಲಿದ್ದಾರೆ. ವಿಜಯ್ ಸಂಕೇಶ್ವರ್ ಅವರ ಹೊಸ ಪೇಪರ್ ಶೀಘ್ರ ಬರಲಿದೆ. ರಾಜ್ ಟೀವಿ ಬರಲಿದೆ. ಏನ್ ಡಿ ಟೀವಿ ಬರಲಿದೆ. ಉದಯಜಕ್ಕೆ ಹೊಸ ಆಡಳಿತ ಸಾರಥಿ ಬರಲಿದ್ದಾನೆ. ಈ ಟೀವಿ ನ್ಯೂಸ್ ಸೆಕ್ಷನ್ ಬಂದ್ ಆಗಲಿದೆ.ಅಥವಾ ಬೇರೆಯವರಿಗೆ ಕೊಡುವ ಅಂದರೆ outsource ಸಾಧ್ಯತೆ ಇದೆ. ಮಿಡ್ ಡೇ ರೀ ಲಾಂಚ್ ಆಗಲಿದೆ.
ಅನೇಕ ತಲೆಗಳು ಉರುಳಲಿವೆ ಅಥವಾ ಹಾoಡ್ಸ್ ಹೋಗಲಿವೆ. ಹಲವರು ವೃತ್ತಿ ಬಿಡಲಿದ್ದಾರೆ, ಬಿಡುತಿದ್ದಾರೆ. ಅಂತು ಇದು ಸಂಪಾದಕರಿಗೆ ಪತ್ರಕರ್ತರಿಗೆ ಒಳ್ಳೆ ಕಾಲ.

ಎಡಿಟ್ ಮಾಡಿ ಸಂಗ್ರಹ : ಬ್ಲಾಗ್ www.newmediablog.blo

ಪತ್ರಕರ್ತರ, ಫೋಟೊಗ್ರಾಫರ್ಗಳ ಕೃಷ್ಣ ಲೀಲೆ


ಮದುವೆ ಮನೆಗೆ ಹೋಗಿ ಚೆಂದದ ಹುಡುಗಿ ಫೋಟೊ ತೆಗೆಯುವುದು, ಕಚೇರಿಗೆ ಬಂದ ಯುವತಿಯನ್ನು ಲವ್ ಮಾಡುವುದು. ಮದುವೆಯಾಗು ಎಂದು ಗಂಟು ಬೀಳುವುದು. ಎಲ್ಲರ ಎದುರೇ ಮದುಮಗನನ್ನು ಬಿಟ್ಟು ಫೋಟೊ ಗ್ರಾಫರ್ನನ್ನು ವರಿಸುವುದು ಈ ರೀತಿಯ ಸನ್ಸೇಶನಲ್ ಸುದ್ದಿ ಆಗಾಗ ನಡೆಯುತ್ತಿದೆ. ಸದ್ಯಕ್ಕೆ ಬಂಟ್ವಾಳದ ಫೋಟೊ ಗ್ರಾಫರ್ ಹಳೆ ಪ್ರೇಮ್ ಕಹಾನಿ ಕೇಳಿ. ಆಮೇಲೆ ಫೋಟೊ ಪತ್ರಕರ್ತ ಸ್ಸಾರಿ.. ಮಂಗಳೂರಿನ ಜಾಹೀರಾತು ಪತ್ರಕರ್ತ, ಕೃಷ್ಣನಂತೆ ಪೋಸು ಕೊಡುವ ರಾಮನ ಹರಾಮಿ ಲವ್ ಸ್ಟೋರಿ, ಮೊನ್ನೆ ಮೊನ್ನೆ ಲವರ್ ಮದುವೆಗೆ ಹೋಗಿ ಗೂಸಾ ತಿಂದ ವಿಚಾರ ಇನ್ನೊಮ್ಮೆ ಹೇಳುತ್ತೇನೆ.
ಈಗ ಕೇಳಿ ಫೋಟೊ ಗ್ರಾಫರ್ ಕಹಾನಿ
ಮದುವೆ ಮನೆಯಲ್ಲಿ ಮದುಮಕ್ಕಳ ಫೋಟೊ ಬದಲು ಇನ್ನಾರದೋ ಚೆಂದ ಚೆಂದದ ಫೋಟೊ ತೆಗೆಯುವ ಫೋಟೋ ಗ್ರಾಫರ್ ರ್್ಗಳಿಗೆ ಇದು ಪಾಠ.
ಕುತೂಹಲ ತಡೆಯಲಾರದೆ ಮನೆಗೆ ಬಂದ ಆಲ್ಬಂ ನೋಡುತ್ತಿದ್ದ ಹದಿಹರೆಯದ ಹುಡುಗಿ ಮತ್ತಷ್ಟು ಕೆಂಪೇರುವಂತೆ ಮಾಡಿದ್ದು ಮದುವೆಮನೆಯಲ್ಲಿ ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದ ಅವಳದ್ದೇ ಫೊಟೋ.
ಅರೇ.. ನನ್ನ ಫೋಟೋ ಹೀಗೂ ಚೆನ್ನಾಗಿ ಬರುವುದುಂಟೇ ಎಂದು ಹಿರಿಹಿರಿ ಹಿಗ್ಗಿದ ಹುಡುಗಿಯ ಮನ ಫೋಟೋ ತೆಗೆದ ಯುವಕನನ್ನು ನೆನಪಿಸಿಕೊಂಡಳು. ವ್ಹಾ..! ಅವನೂ ಮನ್ಮಥನಂತಿದ್ದಾನಲ್ಲ ಎಂದು ನಾಚಿ ನೀರಾದಳು. ಅವನು ಹ್ಯಾಗೆ ಸಿಗ್ತಾನೆ? ಎಂದು ಯೋಚಿಸುತ್ತಾ ಬುದ್ದಿ ಓಡಿಸಿದಾಕೆಗೆ ಸಿಕ್ಕಿದ್ದು ಆಲ್ಬಂನಲ್ಲಿ ಫೊಟೊಗ್ರಾಫರ್ ನಂಬ್ರ.
ಅಲ್ಲಿಂದ ಕಥೆ ಆರಂಭ
**************
ಇದು ಭಾರತ ದೇಶದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕೆಂಬ ಪ್ರದೇಶದಲ್ಲಿ ನಡೆದ ಲವ್ ಸ್ಟೋರಿ.
ಫೋಟೋಗ್ರಾಫರ್ ನ ಅಂದ ಚೆಂದಕ್ಕೆ ಮರುಳಾದ ಹುಡುಗಿ ಫೋನ್ ಮಾಡಿ ‘ಈ ವಾ ಪೊರ್ಲು ಯಾ..(ನೀನು ಚೆಂದಾನೋ)’ ಎಂದು ಹೇಳಿಯೇ ಬಿಟ್ಟಳು. ಇಂಥ ಹುಡುಗಿಯರನ್ನೆಸ್ಟು ಆತ ನೋಡಿದ್ದನೋ.. ಸಿಕ್ಕಿದ್ದು ಬಿಡುವುದು ಯಾಕೆ ಎಂದು ಅವನೂ ಚೆನ್ನಾಗಿ ನಾಟಕವಾಡಿದ. ಅವನಿಗಿದ್ದದ್ದು ಪ್ಯೂರ್ ಕಾಮ. ಅವಳಿಗಿದ್ದದ್ದು ಪ್ಯೊರ್ ಪ್ರೇಮ. ಹೀಗೆ ಪ್ರೇಮ, ಕಾಮದಾಟದಲ್ಲಿ ಕಾಮ ಗೆದ್ದಿತು. ಅವರಿಬ್ಬರು ಗುಡ್ಡೆ, ಪಾರ್ಕು, ಸಿನಿಮಾ, ಹೋಟೆಲ್ ಓಡಾಡಿ ಸುಸ್ತಾದರು. ಅವಳು ತನು, ಮನ ಅವನಿಗರ್ಪಿಸಿದಳು. ಅವನು ತನುವನ್ನು ಮಾತ್ರ ಕೊಟ್ಟ!
*********
ಹೀಗೆಲ್ಲಾ ನಡೆಯುತ್ತಿದ್ದರೂ ಹುಡುಗಿ ಅಪ್ಪ, ಅಮ್ಮಂದಿರಿಗೆ ವಿಶಯವೇ ಗೊತ್ತಿಲ್ಲ. ಹಾಗಾಗಿಯೇ ಹುಡುಗಿಯ ಅಣ್ಣನಿಗೆ ಮದುವೆ ನಿಘಂಟು ಮಾಡುವಾಗ ಹುಡುಗಿಗೂ ಒಳ್ಳೆ ಹುಡುಗನನ್ನು ನೋಡಿದರು. ಎಂಗೇಜ್ ಮೆಂಟ್ ಆಯಿತು. ಅಪ್ಪ, ಅಮ್ಮಂದಿರಿಗೆ ಹೇಳಲು ಹುಡುಗಿಗೂ ಧೈರ್ಯ ಬರಲಿಲ್ಲ. ಫೋಟೋಗ್ರಾಫರ್ ಸದ್ದೇ ಮಾಡಲಿಲ್ಲ.
**********
ಮದುವೆಯ ದಿನ ಬಂದೇ ಬಿಟ್ಟಿತು. ಬಿ.ಸಿ.ರೋಡಿನ ರಂಗೋಲಿ ಎಂಬ ಮಂಟಪದಲ್ಲಿ ಎರಡು ಮದುವೆ. ಫೋಟೋಕ್ಕೆ ಅದೇ ಹುಡುಗ. ಮೆಲ್ಲನೆ ಹುಡುಗಿಯ ಕಿವಿಯ ಬಳಿ ಬಂದು ಉಸುರಿದ. ‘ನೀನು ಅವನನ್ನೇ ಮದುವಯಾಗು. ನಾಳೆ ನಿನ್ನನ್ನು ಹಾರಿಸಿಕೊಂಡು ಹೋಗ್ತೇನೆ’
ಅವಾಕ್ಕಾದ ಹುಡುಗಿ ಒಂದು ಗಟ್ಟಿ ನಿರ್ಧಾರಕ್ಕೆ ಬಂದಳು.
*********
ಪುರೋಹಿತರ ಮಂತ್ರ, ಗಟ್ಟಿಮೇಳದ ಸದ್ದು ನಡೆಯುತ್ತಿತ್ತು. ವರ ಮಾಲೆ ಹಾಕಿಸಿಕೊಳ್ಳಲು ಸಿದ್ದನಾಗಿದ್ದ. ಆದರೆ ವಧು ಒಮ್ಮೆಗೇ ಫೋಟೋ ತೆಗೆಯುತ್ತಿದ್ದವನ ಬಳಿ ಧಾವಿಸಿ, ಅವನಿಗೇ ಮಾಲೆ ಹಾಕಲು ಹೆಜ್ಜೆ ಹಾಕಿದಳು. ಆಗ ಸಭಾಂಗಣವೆಲ್ಲ ಗಪ್ ಚಿಪ್!
********
ದಡಬಡನೆ ಫೋಟೋಗ್ರಾಫರ್ ಓಡಿದ. ಅವನನ್ನು ಹಿಡಿದು ಪೋಲೀಸ್ ಸ್ಟೇಶನ್ ಗೆ ಒಪ್ಪಿಸಲಾಯಿತು. ಮತ್ತೆ ಮಾತುಕತೆ ನಡೆಯಿತು. ಹುಡುಗಿ ನಾನು ಅವನನ್ನೇ ಲವ್ ಮಾಡಿದ್ದೇನೆ ಅಂದಳು. ಹುಡುಗ ಇಲ್ಲ, ಇಲ್ಲ ಎಂದ..
******
ಕೊನೆಗೂ ಹುಡುಗಿಯ ಹಟ ಗೆದ್ದಿತು. ಈಗವರು ಸತಿ, ಪತಿ.
ಅದಕ್ಕಾಗಿಯೇ ಏನೋ ದ.ಕ.ಫೋಟೋಗ್ರಾಫರ್ ಗಳ ಮೊಬೈಲ್ ಗಳಲ್ಲಿ ಸಂದೇಶ ಹರಿದಾಡುತ್ತಿದೆ.
“ಮದುವ ಸಮಾರಂಭಗಳಿಗೆ ಫೊಟೊ ತೆಗೆಯಲು ಹೋಗುವಾಗ ಮಾಲೆ ಹಾಕುವ ಸಮಯ ಫೋಟೋಗ್ರಾಫರ್ ಕ್ಯಾಮ್ರಾ ಜೂಮ್ ಇಟ್ಟು, ೧೮ ಮೀಟರ್ ದೂರ ನಿಲ್ಲಿ!”