Wednesday

ಹೊಸ ಪತ್ರಿಕೆಗೆ ಡಿ ಎನ್ ಎ ಟೆಸ್ಟ್ !

ವಿಜಯ ಸಂಕೇಶ್ವರ ಅವರು ಹೊಸ ಸಿ ಇ ಒ ನಿರೀಕ್ಷೆಯಲ್ಲಿದ್ದಾರೆ, ಒಂದು ವರ್ಷ ಪತ್ರಿಕೆ ಚೆನ್ನಾಗಿ ರೂಪಿಸಿದ ಬಳಿಕ ಎಂದಿನಂತೆ ಇಂಗ್ಲೀಷ್ ಪೇಪರ್ ಗೆ ಮಾರಾಟ ಮಾಡಲಿದ್ದಾರೆ. ಈ ಬಾರಿ ಡಿ ಎನ್ ಎ ಜತೆ ವ್ಯವಹಾರ ಕುದುರಿದೆ. ಹೀಗಾಗಿ ಎಷ್ಟೆ ಖರ್ಚಾದರೂ ತಲೆ ಬಿಸಿ ಮಾಡುವ ದರ್ದು ಇಲ್ಲ, ಏಕೆಂದರೆ ಅಡ್ವಾನ್ಸ್ ಸಿಕ್ಕಿಯಾಗಿದೆ, ಪತ್ರಕರ್ತರ ವಲಸೆಯೂ ಜೋರಾಗಿ ನಡಿಯುವ ಸಾದ್ಯತೆ ಇದೆ, ಈಗ ಹಳೆ ಉಷಾ ಕಿರಣ ಟೀಮ್ ಸೆಟ್ ಮಾಡುತ್ತಿರುವ ಸಂಕೇಶ್ವರ ಬಳಿಕ ಸ್ಟಾರ್ ಗಳನ್ನು ಬಳಗಕ್ಕೆ ಸೇರಿಸಲಿದ್ದಾರೆ. ನಂ. ವನ್ ಪತ್ರಿಕೆ ವಿಕೆಯಿಂದ ಬರುವ ಸ್ಟಾರ್ ಗಳಿಗೆ ಹೆಚ್ಚಿನ ಆಮಿಷ. ಆದರೆ ಬರುವವರ ಹಿನ್ನೆಲೆ ಬಗ್ಗೆ ಸಂಕೇಶ್ವರ ಬಹಳ ುಮೇದ ತೋರಿಸುತ್ತಿದ್ದಾರೆ.

ವಿಜಯಕ್ಕೆ ಇನ್ನು ಎರಡೇ ಮೆಟ್ಟಿಲು !

(ಮೀಡಿಯಾ ಮನ ಕೃಪೆ)ಎಡಿಶನ್, ೧೦ ಪ್ರಿಂಟಿಂಗ್ ಮೆಷಿನ್, ಒಬ್ಬ ಪ್ರಿಂಟಿಂಗ್ ತಂತ್ರಜ್ಞ !

ಸಂಕೇಶ್ವರ ಅವರ ಹೊಸ ಪತ್ರಿಕೆ ಕಾರ್ಯ ಬಿರುಸಿನಿಂದ ಸಾಗಿದೆ.ಎಸ್. ಕುಲಕರ್ಣಿ ವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಿ, ಸಂಕೇಶ್ವರರ ಜೊತೆ ಸೇರಿದ್ದಾರೆ. ಇವರೊಬ್ಬ ಪ್ರಿಂಟಿಂಗ್ ಡಾನ್ ಎನ್ನಬಹುದು!
ಮೂಲಗಳ ಪ್ರಕಾರ ಸಂಕೇಶ್ವರ ಅವರು ಒಂದೇ ಏಟಿಗೆ ೧೦ ಆವೃತ್ತಿ ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ. ೧೦ ಕಡೆಯೂ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸುವ ಉದ್ದೇಶ ಅವರದ್ದು. ಬಲು ಜೋರಿನಿಂದಲೇ ಮಾರುಕಟ್ಟೆ ಪ್ರವೇಶಿಸುವುದು ಸಂಕೇಶ್ವರರ ಉದ್ದೇಶ. ಪೂನಾ ಮೂಲದ ಮೊನೋಗ್ರಾಪ್ ಕಂಪನಿಯಾ ಅಶ್ವಥ ಆರಾಯಣ ಎಂಬವರ ಜೊತೆ ಶನಿವಾರ ಮಾತುಕತೆ ನಡೆಸಿದ್ದಾರೆ.ಉಳಿದ ಮಾಹಿತಿಗೆ ಮೀಡಿಯಾ ಮನ ನೋಡಿ/.

>ರಂಗ< ಸ್ಥಳಕ್ಕೆ ಕನ್ನಡ ಚಾನೆಲ್...

ರಂಗನಾಥರು ದಟ್ಸ್ ಕನ್ನಡಕ್ಕೆ ಕೊಟ್ಟ ಸಂದರ್ಶನ ಇದು...



ಕನ್ನಡ ಸುದ್ದಿ ಚಾನಲ್ಲುಗಳ ಸಾಲಿಗೆ ಸದ್ಯದಲ್ಲೇ ಹೊಸ ವಾಹಿನಿಯೊಂದು ಸೇರ್ಪಡೆಯಾಗಲಿದೆ. ಉದ್ದೇಶಿತ ವಾಹಿನಿಯು ಸುವರ್ಣ ಟಿವಿಯಲ್ಲಿ ಸಂಪಾದಕರಾಗಿದ್ದ ಎಚ್ ಆರ್ ರಂಗನಾಥ್ ಅವರ ಮುಂದಾಳತ್ವದಲ್ಲಿ ಜನ್ಮತಾಳಲಿದೆ.

ಇಂದಿನಿಂದ 80 ದಿನಗಳೊಳಗಾಗಿ ತಮ್ಮ ಚಾನಲ್ ಪ್ರಸಾರ ಆರಂಭಿಸಲಿದ್ದು. ಚಾನಲ್ ನಿರ್ಮಾಣ ಚಟುವಟಿಕೆಗಳು ಭರದಿಂದ ಸಾಗಿವೆ ಎಂದು ರಂಗನಾಥ್ ಇದೇ ಮೊದಲಬಾರಿಗೆ ಅಧಿಕೃತವಾಗಿ ಪ್ರಕಟಣೆ ಮಾಡಿದ್ದಾರೆ.

ಕನ್ನಡ ಟಿವಿ ವೀಕ್ಷಕರ ಆಶೋತ್ತರಗಳನ್ನು ಯಥಾವತ್ತಾಗಿ ಬಿಂಬಿಸುವ, ಮೊಟ್ಟ ಮೊದಲ ಜನಪರ ವಾಹಿನಿಯಾಗಿ ತಮ್ಮ ಚಾನಲ್ ರೂಪುಗೊಳ್ಳಲಿದೆ ಎಂದು ಅವರು ದಟ್ಸ್ ಕನ್ನಡಕ್ಕೆ ತಿಳಿಸಿದರು.

ಇಪ್ಪತ್ನಾಲ್ಕು ಗಂಟೆ ಕನ್ನಡದಲ್ಲಿ ಸುದ್ದಿ ನೀಡುವ ಟಿವಿ9, ಸುವರ್ಣ ನ್ಯೂಸ್, ಜನಶ್ರೀ ಮತ್ತು ಸಮಯ ಚಾನಲ್ಲುಗಳ ಸಾಲಿಗೆ ರಂಗ ಅವರ ಇನ್ನೂ ಹೆಸರಿಡದ ಚಾನಲ್, 5 ನೇ ವಾಹಿನಿಯಾಗಿ ಸೇರ್ಪಡೆಯಾಗುತ್ತದೆ.

ಇಪ್ಪತ್ತು ಸಾವಿರ ಚದರ ಅಡಿ ಜಾಗ ಇರುವ ಚಾನಲ್ ಕಚೇರಿ ಯಶವಂತಪುರದಲ್ಲಿ ತೆರೆಯಲಾಗಿದೆ. ಚಾನಲ್ ಸ್ಥಾಪನೆಗೆ ಅಗತ್ಯವಾಗ ತಾಂತ್ರಿಕ ಉಪಕರಣಗಳು, ಇಂಟೀರಿಯರ್ ಡೆಕೋರೇಷನ್ ಮತ್ತು ಅಗತ್ಯ ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ರಂಗಾ ಹೇಳಿದರು.

ನಿಮ್ಮ ಹೊಸ ಸಾಹಸಕ್ಕೆ ಬಂಡವಾಳ ಹಾಕುವವರು ಯಾರು ಎಂಬ ಪ್ರಶ್ನೆಗೆ ಸೀದಾ ನೇರ ಉತ್ತರ ನೀಡಲು ನಿರಾಕರಿಸಿದ ರಂಗ, ಕಪ್ಪುಹಣ ಮತ್ತು ರಾಜಕೀಯ ವ್ಯಕ್ತಿಗಳ ಹಣದಿಂದ ತಮ್ಮ ಚಾನಲ್ ಮುಕ್ತವಾಗಿರುತ್ತದೆ ಎಂದಷ್ಟೇ ಹೇಳಿದರು.

ತಮ್ಮ ಹೊಸ ಸಾಹಸ ಪತ್ರಕರ್ತರ ಪಾಲುದಾರಿಕೆಯಿಂದ ನಡೆಯುವ ಚಾನಲ್ ಆಗಿರುತ್ತದೆ ಎಂದೂ ಅವರು ಒತ್ತಿ ಹೇಳಿದರು. ತಾವು 1 ರು. ಸಂಬಳ ಪಡೆಯುವ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.

ತಮ್ಮ ಚಾನಲ್ ಲಾಭ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ. ಉದ್ಯಮ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಷ್ಟು ಆದಾಯ ಮಾಡಿದರಷ್ಟೇ ಸಾಕು ಎಂದ ರಂಗ, ಯಾವುದೇ ರಾಜಕೀಯ, ಉದ್ಯಮದ ಲಾಬಿಗಳಿಗೆ ಮಣಿಯದ ತಮ್ಮ ಸಂಸ್ಥೆ, ಸ್ವಚ್ಛ, ಸೀದಾ, ಸಾದಾ, ಪತ್ರಿಕೋದ್ಯಮದಲ್ಲಿ ಬಲವಾದ ನಂಬಿಕೆ ಇಟ್ಟ ಒಂದು ವಿನೂತನ ಮಾಧ್ಯಮ ಸಂಸ್ಥೆ ಆಗಲಿದೆ ಎಂದರು.

ಚಾನಲ್ ಆರಂಭಿಸುವುದಕ್ಕೆ ಮೂಲ ಬಂಡವಾಳ 10 ಕೋಟಿ ರು. ಬೇಕು. ಪ್ರತೀ ತಿಂಗಳು 1 ಕೋಟಿ ರು. ಪುನರಾವರ್ತಿತ ವೆಚ್ಚದಂತೆ ವರ್ಷಕ್ಕೆ 25 ಕೋಟಿ ರು. ಬಂಡವಾಳ ಅಗತ್ಯ ಎಂದು ನುಡಿದರು.

Friday

ರಾಘವಾಂಕ ಚರಿತ, ಕುಮಾರ ಪತನ, ವಿಶ್ವೇಶ್ವರ ವಿಜಯ ತ್ರೀ ಶತಕಂ ಇದಂ


ವಿಕ ಚಕ್ರಾಧಿಪತ್ಯವ ಧಿಕ್ಕರಿಸಿ, ಹಾಲಾಹಲವ ಉಂಡು ಭಕ್ತರ ರಕ್ಷಿಸಿ ತಾ ನೀಲ ಕಂಠನೆನಿಸಿದ ತ್ಯಾಗಮೂರ್ತಿ ವಿಶ್ವೇಶ್ವರ ಕೈಲಾಸ ಸೇರಿ ಧನಲಕ್ಷ್ಮೀ ಸಹಿತಂ ಚಂದಂದಿಂ ಆಡಳಿತ ನಡೆಸುತ್ತಿರೆ, ವಿನಾಯಕ, ಮುರುಗ ಸರ್ವ ದೇವ, ಭೂತ ಗಣಂಗಳಿಗೆ ಚೈತನ್ಯ ಸಂಗಡಂ ಭಡ್ತಿಯ ನೀಡಿ ತನ್ನ ಪ್ರತಾಪವಂ ತೋರಿಸುತ ಅಭಯಂ ಗೈಯುತ್ತಿರಲಾಗಿ, ಇತ್ತ ಭರತ ಖಂಡದ ವಿಕ ಚಕ್ರಾಧಿಪತಿ ರಘುಕುಲ ತಿಲಕ ರಾಘವ ಲಂಡನಾ ನಗರಕ್ಕೆರಜಾ ಮಜಾ ಬಿಜಯಂ ಗೈಯುತ್ತಿರಲು..

ಇತ್ತ ಭೂಲೋಕದ ಪಂಪಾಮಾರ್ಗದೊಳು ವೈಕುಂಠ ದ್ವಾರದಲ್ಲಿ ನಿಂತಿರ್ಪ ಅಶೋಕಿಲಾಲ ಮತ್ತು ಕರಿ ಮುಖದ ಗಣಪ ತಾನೇ ದ್ವಾರಪಾಲಕರೆಂದಿನಿಪ ಜಯ ವಿಜಯರೆಂಬ ಗರ್ವದೊಳು ಪ್ರಕಾಶಮಾನ ಆಡಳಿತ ನಡೆಸುತಿರೆ, ಕೆಂಚಣ್ಣ, ಕರಿಯಣ್ಣ ನನಗೆ ಎನೂ ಗೊತ್ತಿಲ್ಲಣ್ಣ ಎಂದುಸಿರದನೂ....

ಅರರೇ...ಇದೇನಿದು... ಮಂಗನೂರಿನ ಸಾಮ್ರಾಜ್ಯದೊಳು ಬಂಡಾಯ ಭುಗಿಲೇಳುತಿರೆ.. ಕುಮಾರ ತನ್ನ ಕಪಿ ಸೇನೆ ಜಾಗೃತಗೊಳಿಸುತ್ತಿರಲು... ಇವರ ಮಂಗಾಟವ ಕಂಡು ಬೆದರದ ಮೈಸೂರಿನ ಝೂ ನಾಡ ಅಧಿಪತಿಯಾಗಿ ಈ ಪರಿಯ ಅಸಂಖ್ಯ ಕಂಡಿರ್ಪ ನಾವಡ, ತನ್ನ ಚೆಂಡೆ ಮದ್ದಳೆ ಬಾರಿಸುತಿರಲು, ಈ ಚರ್ಮ ವಾದ್ಯಕೆ ಕಪಿಸೇನೆ ವಿಲ ವಿಲನೆ ಒದರಾಡಿ ಹಾ ರಾಮಾ, ಹಾ ಕೃಷ್ಣ ಪ್ರಲಾಪಿಸುತಿರಲಾಗಿ..

ಸೀರೆ ಪ್ರಸಂಗವಾದರೆ ಕೃಷ್ಣ ನೆನೆಸು ಬಾ, ಯಾರಿಗಾದರೂ ಕಾಡಿಗೋ, ನೀರಿಲ್ಲದ ನಾಡಿಗೋ ಅಟ್ಟಬೇಕಾದರೆ ವನವಾಸಿ ಕುಮಾರ-ರಾಮನ ನೆನೆಯೋ,

ಅಯ್ಯೋ ಇದೇನಿದು ನಾ ಕಾಣುತಿರೆ.. ಇದು ನಾವಡನ ಬಸಿರು, ಕುಮಾರನ ಹೆಸರಾಯ್ತು, ಇದು ಎಂಚಪೊರ್ಲಾಂಡು, ಇದಂ ಎತ್ತಣಿಂದೆತ್ತ ಸಂಬಂಧವಯ್ಯಾ

ಎಂದು ದಾಸ ವರೇಣ್ಯ ಚಾಡಿ ದಾಸ, ಹೊನ್ನು, ಕ್ವಾಟರ್ ದಾಸ, ಹರ ಹರಾ ಹರಾಮಿ ಕೊಳಕು ಬಾಯಿಯಿಂದಂ ಕುವಚನಗಳನ್ನು ಉದುರಿಸಿ, ಹಲುಬಿದ ಎಂಬಲ್ಲಿಗೆ ಒಂದು ಷಟ್ಪದಿ ಮುಕ್ತಾಯಂ.

ಇತ್ತ ಇದ್ದಲ್ಲಿಯೇ ಚರಂಡಿ ಹೂಳೊಳು ನಲುಗುತ್ತಿರೆ ವ ರದ್ದಿಗಾರರು ಇನ್ ಕ್ರಿಮಿನೆಂಟ್ ಇಲ್ಲದೆ ನಾ ಕೆಲಸ ಮಾಡೆವು ಎಂದು ಕಂಪನಿಗಳಲ್ಲಿ ತಾ ಕ್ರಿಮಿಗಳೆಂಬ ಕೊಂಚಮೂ ಮಾಹಿತಿ ಇಲ್ಲದೆ ಒದರುತ್ತಿರಲು.. ನೆಟ್ ಗಳೇ ನೆಟ್ ವರ್ಕ ಆಗಿರ್ಪ ಬರಿದೇ ಕಾಸು ಹಾಸೆನ್ನುವ, ಹಳೆ ಫೈಲುಗಳನೇ ದೋಸೆಯಂತೆ ಮಗುಚಿ ಹಾಕುತ್ತ ಬರಿದೇ ತಮ್ಮ ನಾಮಕರಣವ ಮಾಡತಿರ್ಪ ಪರ್ತಕರ್ತರ ಕಂಡು ವಿಹ್ವಲನಾದ ಕೆಲಸ ಖೋರ ನಾವಡ, ಮುದಿ ಹುಲಿಗಳಿಗೆ ರಾಘವ ಕೊಡಮಾಡಿದ ರಿಂಗ್ ಹಿಡಿದು ಚೆಂದದಿಂ ಆಡಿಸುತ್ತಿರಲು, ಕಪಿಸೇನೆ ಬಾಲ ಮುದುರಿ ರೋದಿಸುತ್ತಿರಲು... ಇಲ್ಲಿಗೆ ಪಂಚಪದಿ ಮುಕ್ತಾಯಂ

(ಕೃಪೆ: ರಾಘಾವಂಕ ಚರಿತ ಮತ್ತು ವಿಶ್ವೇಶ್ವರ ವಿಜಯ)

Saturday

ಮೂವರು ರೋಲ್ ಕಾಲ್ ಪತ್ರಕರ್ತರೂ ಮಾಧ್ಯಮಗಳೂ



ಪತ್ರಿಕೋದ್ಯಮಿಗಳು ಹೇಗೆ ಬೆಳೆಯುತ್ತಾರೆ ಎಂಬುದು ಬಟಾ ಬಯಲಾಗುತ್ತಿದೆ. ನಮ್ಮ ಬೆಂಗಳೂರಿನ ಮೂರು ಖತರ್ನಾಕ್ ವರದಿಗಾರರು ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿ ದೋಚಲು ಹೊಂಚು ಹಾಕಲು ಹೋಗಿ ಇಂಗು ತಿಂದ ಮಂಗನಂತಾಗಿದ್ದಾರೆ.



ಈ ಬ್ಲ್ಯಾಕ್ ಮೇಲ್ ಪತ್ರಕರ್ತರನ್ನು ಬೆಂಗಳೂರಿನ ಕಳ್ಳ ಪೊಲೀಸರು ಬಂಧಿಸಿಲ್ಲ. ಈ ಸುದ್ದಿಯನ್ನು ಎಲ್ಲ ಪತ್ರಿಕೆಗಳು ಪ್ರಕಟಿಸಿಲ್ಲ. ಪ್ರಕಟಿಸಿದವರು ವರದಿಗಾರರ ಹೆಸರು ಹಾಕಿಲ್ಲ. ಒಬ್ಬಾತ ಅಹಿಂದೂ ಪತ್ರಿಕೆಯ ತುಂಬಾ ಹಳೆಯ ವರದಿಗಾರ ಮತ್ತು ಕಸುಬಿನಲ್ಲಿ ಪಳಗಿದ ಹಳೇ ಗಿರಾಕಿ. ಇನ್ನಿಬ್ಬರು ಪತ್ರಿಕೋದ್ಯಮದಲ್ಲಿ ಇರದ ಉ ಟಿವಿ ವಂಚಕರು. ಯಾವ ಟಿವಿ ಚಾನಲುಗಳು ಎಫ್ ಐ ಆರ್, ಪೋಲೀಸ್, ಕ್ರೈಮ್ ಸ್ಟೋರಿಗಾಗಿ ಅರ್ಧ ಗಂಟೆ ಕಾರ್ಯಕ್ರಮ ಮಾಡುವ ಮನಸ್ಸು ಮಾಡಿಲ್ಲ.



ಕುಲ ಬಾಂಧವರ ಬಗ್ಗೆ ಅಸ್ಟೊಂದು ಕನಿಕರ. ಖದೀಮರು ಸಚಿವೆ ಶೋಭಾ ಕರಂದ್ಲಾಜೆ ಹೆಸರು ಹೇಳಿಕೊಂಡು ಡೀಲ್ ಮಾಡಲು ಹೋಗಿದ್ದರು. ಆಂಧ್ರ ಕರೆಂಟು ಕಂಪೆನಿಗೆ ಸರಕಾರ ೧೭ ಕೋಟಿ ಹಣಕೊಡಲು ಇತ್ತು. ಅದನ್ನು ವಸೂಲು ಮಾಡಲು ಕಂಪನಿಯಿಂದ ಹತ್ತು ಪೆರ್ಸೆಂಟ್ ಕೇಳಲಾಗಿತ್ತು. ಇದರ ಹಿಂದಿರುವ ಸೂತ್ರದಾರ ಒಬ್ಬ ಬಿಜೆಪಿ ಎಮೆಲ್ಸಿ ಇದ್ದಾನೆ.ಯಡ್ಡಿ ಸರಕಾರ ಬಂದ ಮೇಲೆ ಪತ್ರಿಕೋದ್ಯಮದ ಭ್ರಷ್ಟಚಾರ ಪರಕಾಷ್ಟೆ. ತಲುಪಿದೆ. ವಿಧಾನಸೌಧ, ಎಂ ಎಸ್ ಕಟ್ಟಡ, ಸಿಟಿ ಕಾರ್ಪೊರೇಷನ್ ದೊಡ್ಡ ಅಡ್ಡಗಾಲು. ಮಿಡ್ಲು ಮ್ಯಾನ್ ಬೇಕಾಗಿಲ್ಲ. ಬಿಲ್ ಪಾಸು ಮಾಡುತ್ತಾರೆ, ಟೆಂಡರ್ ಫಿಕ್ಸ್ ಆಗುತ್ತೆ. ಹೀಗಿದೆ ಪತ್ರಿಕೋದ್ಯಮ.



ಕೃಪೆ: ನ್ಯೂ ಮೀಡಿಯಾ ಬ್ಲಾಗ್.....



ಪೇಪರ್ "ಖುಸಿತ" ವಿಸಯ ! ಇದು ವಿಕೆ ವಿಸ್ಮಯ



ವಿಶಿಷ್ಟ ರಂಗನಾಥ, ವಿಚಿತ್ರ ಅನಾಥರ ಬಗ್ಗೆ ಬರೆದಷ್ಟು ಮುಗಿಯದು. ಮಂಗಳೂರಿನ ವಿಕೆಯಲ್ಲಿ ಮೂಡಿ ಬರುತ್ತಿರುವ ಅಭಿಯಾನ ಪ್ರೆಸ್ ಕ್ಲಬ್ ಗಳಲ್ಲಿ ಸಕಾರಾತ್ಮಕವಾಗಿ ಚರ್ಚೆ ಆಗುತ್ತಿದ್ದರೆ ಒಳಗೊಳಗೆ ಚೇಳುಗಳು ಕೊತ ಕೊತ ಕುದಿಯುತ್ತಿವೆ. ನಾವಡ ಎಕ್ಸ್ ಪೆರಿಮೆಂಟ್ ಗಳಿಂದ ತಾನು ಎಕ್ಸ್ ಚೀಪ್ ಆಗಿಬಿಟ್ಟರೆ ಎಂಬ ಭಯ. ಕೊನೆಗೆ ಅನಾಥನಾಗಿಬಿಟ್ಟರೆ ಎಂಬ ಹೆದರಿಕೆ ಆಸ್ಥಾನ ಸಂಪಾದಕೆ.



ಪೇಪರ್ ಸಂಖ್ಯೆ ಇಳಿಯುತ್ತಿದೆ ಎಂಬ ದೂರು ನೀಡಿ ನಾವಡರನ್ನು ನೀವಾಳಿಸಬಹುದೋ ಎಂಬ ದುರಾಸೆ. ಕಳೆದ ಬಾರಿ ಜಾಹೀರಾತು ವಿಭಾಗ ಮೂಲಕ ಹಣಿಯಲು ಯತ್ನಿಸಿದ್ದರೂ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ ದೂರನ್ನು ಈ ಬಾರಿ ಸರ್ಕುಲೇಶನ್ ವಿಭಾಗ ಮೂಲಕ ಪ್ರಸರಣಕ್ಕೆ ಷಡ್ಯಂತ್ರ ನಡೆಯುತ್ತಿದೆ. ಅಭಿಯಾನದ ಪರಿಣಾಮ ಸರ್ಕುಲೇಶನ್ ಇಳಿದಿದೆ ಎಂಬ ವರಾತ ಎತ್ತಿರುವ ಅನಾಥ ಪಡೆ ದೂರು ಸಿ ಇ ಒಗೆ ನೀಡುವಂತೆ ಎಲ್ಲರ ಬಳಿ ದಂಬಾಲು ಬೀಳುತ್ತಿದೆ. ಏಕೆಂದರೆ ಸಂಪಾದಕರಿಗೆ ಹೇಳಿದರೆ ಕ್ಯಾರೆ ಅನ್ನದೆ ನಾವಡರಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬ ಹೆದರಿಕೆ, ಇದು ಹಿಂದಿನ ಅನುಭವ ಕುನಾಥಗೆ ಲಭಿಸಿದೆ.



ಹೀಗಾಗಿ ಸ್ಥಳೀಯ ಹೆಡ್ಡ್ ಗಳ ಬಳಿ " ಬೇರೆ ಯಾರಲ್ಲಿಯೂ ಹೇಳುವುದು ಬೇಡ ನೀವು ಸಿ ಇ ಒಗೆ ದೂರು ನೀಡಿ' ಎಂದು ಚಾಡಿ ಕೆಲಸ ಹೇಳಲು ಆರಂಭಿಸಿದ್ದಾನೆ.



ಈ ಬಾರಿ ಸರ್ಕುಲೇಶನ್ ಮೂಲಕ ಮಣಿಯದಿದ್ದರೆ ಇನ್ನು ಮಂಗಳೂರಿ ಗಣ್ಯರ ಮೂಲಕ ದೂರು ಕೊಡಿಸಬೇಕು ಎಂಬ ಸ್ಕೆಚ್ ರೆಡಿಯಾಗುತ್ತಿದೆ. ನಾವಡರು ಎಷ್ಟೇ ಚಾಣಾಕ್ಷ ನಾದರೂ ಕುನಾಥ ಕೌಟಿಲ್ಯದ ಮುಂದೆ ಯಶಸ್ವಿಯಾಗುವುದೇ ಎಂಬ ಬಗ್ಗೆ ಪ್ರೆಸ್ ಕ್ಲಬ್ ನಲ್ಲಿ ಚರ್ಚೆ ನಡೆಯುತ್ತಿದೆ.



ಅಲ್ಲ ಸ್ವಾಮಿ ಕುನಾಥನ ಹಿಂದೆ ಮಾಡಿದ ಎಡವಟ್ಟಿನಿಂದ ಪತ್ರಿಕೆ ಸಂಖ್ಯೆ ಇಳಿದಿರಬಹುದು, ಒಂದು ತಿಂಗಳ ಅಭಿಯಾನದಿಂದ ಪತ್ರಿಕೆ ಇಳಿಯುವುದಾದರೂ ಹೇಗೆ ? ಕೃಷ್ಣ ಪರಮಾತ್ಮನೇ ಬಲ್ಲ. ಇದರ ಪ್ರಭಾವ ಏನಿದ್ದರೂ ಮುಂದಿನ ೩ ತಿಂಗಳ ಬಳಿಕ ಗೊತ್ತಾಗಬಹುದು. ಮಿಂಚು ಹೊಡೆದ ಬಳಿಕ ಸಿಡಿಲು ಬರುತ್ತದೆ. ಆದರೆ ಭೂಕಂಪ ಆದ ಬಳಿಕ ಸುನಾಮಿ ಬರಲು ಅನೇಕ ಗಂಟೆಗಳು ಹಿಡಿಯುತ್ತವೆ. ಇದೇ ರೀತಿ ವ್ಯತ್ಯಾಸ ತಿಳಿಯದ ದಡ್ಡರು ಕತ್ತೆಗೆ ಮೂರೇ ಕಾಲು ಎನ್ನುತ್ತಾರೆ.

Tuesday

ರಂಗಾಯಣ -ಟೀವಿ ೫


ಹೌದು ರಂಗಾಯಣ ಎಲ್ಲೀವರೆಗೆ ಬಂತು ಎಂದು ಓದುಗರು ಕೇಳಿದ್ದಾರೆ. ಪ್ರಪಂಚವೇ ಹಾಗೆ. ಚಲಾವಣೆಯಲ್ಲಿದ್ದರೆ ಮಾತ್ರ ನೆನಪು, ಇಲ್ಲಾಂದ್ರೆ ಮರೆತೇ ಹೋಗುತ್ತೆ, ಇದು ಮನಸ್ಸಿನ ಹುಟ್ಟುಗುಣ. ಹಾಗೇನೇ ಕಿರು ತೆರೆ ಪರದೆಯಿಂದ ರಂಗ ಮರೆಯಾದ ಬಗ್ಗೆ ಮರೆತೇ ಹೋಗಿತ್ತು. ವಿಷಯ ಏನಪ್ಪಾ ಅಂದ್ರೆ ಮತ್ತೆ ಆಂಧ್ರ ಟೀವಿ ೫ ಹಿಡಿದುಕೊಂಡು ಕರ್ನಾಟಕಕ್ಕೆ ದಾಂಗುಡಿ ಇಡುತ್ತಿದ್ದಾರೆ ನಮ್ಮ ರಂಗನಾಥರು. ಟೀವಿ ೫ ಹೆಸರು ಮಾತ್ರ ಖರೀದಿ ಮಾಡಿದ್ದಾರೆ. ಉಳಿದೆಲ್ಲ ಸಂಪನ್ಮೂಲ ರಂಗಣ್ಣನೇ ವಹಿಸ್ಕೋಬೇಕು. ಈಗ ಹಣ ಹೇಗೆ ಹೊಂದಿಸೋದು ಎಂಬ ಬಗ್ಗೆ ಮಾತ್ರ ಚಿಂತೆ. ಹಿಂದೆ ಮಾಡಿಟ್ಟ ಹಣ ಸ್ವಲ್ಪ ಇದೆ, ಸುವರ್ಣ ಚಾನೆಲ್ ಶೇರ್ ಹಣ. ದೊಡ್ಡದಾಗಿ ರಂಗಕ್ಕೆ ಇಳಿಯಲು ಹಣ ಇಷ್ಟು ಸಾಲದು. ವಂತಿಗೆ ಎತ್ತಿ ಅಭ್ಯಾಸ ಇದ್ದರೂ ಅಷ್ಟೂ ಸಂಗ್ರಹವಾಗುವುದು ಡೌಟ್. ರಾಜಕೀಯ ನಾಯಕರ ಸಹವಾಸ ಕಷ್ಟ. ಧನಿಕರ ಬಳಿ ಹೋಗಬಹುದು ಆದರೆ ಕೊನೆಗೆ ಕನಿಕರ ತೋರದೆ ಕಿತ್ತು ಹಾಕುತ್ತಾರೆ. ಹೀಗಾಗಿ ಸಹಾಯ ಧನ ಸಂಗ್ರಹ ಚಿಂತೆಯಿಂದ ಸ್ವಲ್ಪ ವಿಳಂಬ ಆಗುತ್ತಿದೆ. ಆದರೂ ಶೀಘ್ರದಲ್ಲಿಯೇ ಹೊಸ ಕನ್ನಡ ಚಾನೆಲ್ ಮೂಲಕ ರಂಗಾಯಣ, ರಾಮಾಯಣ ಕದನ ನೋಡಬಹುದು.
ಸುವರ್ಣ ಪ್ರಭೆ
ಇಷ್ಟರಲ್ಲಿಯೇ ಸುವರ್ಣ-ಕೆಪಿ ಒಟ್ಟಾಗಿ ಬೆಂಗಳೂರಿನ ಎಂಜಿ ರೋಡ್ ನಲ್ಲಿ ಭವ್ಯ ಕಟ್ಟೋಣದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಒಳ್ಳೆ ಕ್ಯಾಫ್ಟನ್ ನಿರೀಕ್ಷೆಯಲ್ಲಿದ್ದಾರೆ ರಾಜೀವ್ ಚಂದ್ರ ಶೇಖರ್. ವಿ ಭಟ್ಟರು ಸಮರ್ಥರು ಆದರೆ ಅವರಿನ್ನೂ ವಿಕೆ ಹ್ಯಾಂಗ್ ಓವರ್ ನಿಂದ ಹೊರ ಬಂದಿಲ್ಲ ಅಂಥಾ ಕಾಣುತ್ತೆ. ಇದಕ್ಕೆ ಕೆಪಿಯ ಭಾನುವಾರದ ಅಂಕಣವೇ ಸಾಕ್ಷಿ. (ಆದರೆ ಅದರಲ್ಲಿಯೂ ಓದುಗರಿಗೆ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ವಿಶೇಷ). ಹಳೆಯ ಶಿಲಾಯುಗದ ನೆನಪು ಮಾಸಿದ ಬಳಿಕ ಹೊಸ ಪ್ರಭೆಯಿಂದ ಸುವರ್ಣ ಯುಗಕ್ಕೆ ಚಾಲನೆ ಸಿಗಬಹುದು. ಅಲ್ಲೀವರೆಗೆ ಏನ್ ಮಾಡ್ತಾರೆ ಅನ್ನೋದನ್ನು ನಾವೂ ನೋಡ್ತಾ ಇರ್ತೀವಿ.

Sunday

ನೋ-ಎಡಿಟರ್ ೫ ಸಾವಿರ ಓದುಗರು !


ಮಾಧ್ಯಮಗಳಲ್ಲಿನ ಒಳ ಸುಳಿಗಳ ಕುರಿತು, ಅನ್ಯಾಯ, ದೌರ್ಜನ್ಯಗಳ ವಿರುದ್ಧ ರೂಪುಗೊಂಡಿರುವ ಬ್ಲಾಗ್ ಕಳೆದ ಎರಡು ತಿಂಗಳಲ್ಲಿ ೫ ಸಾವಿರ ಓದುಗರನ್ನು ಸಂಪಾದಿಸಿ ದಾಖಲೆ ಮಾಡಿದೆ. ೪ ವರ್ಷಗಳ ಹಿಂದೆ ಬ್ಲಾಗ್ ಆರಂಭಗೊಂಡಿದ್ದರೂ. ಹೊಸ ಖದರ್ ನಲ್ಲಿ ಮಾರ್ಚ್ ಅಂತ್ಯದಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಪೇಸ್ ಬುಕ್ ಗೆಳೆಯರ ಸಹಕಾರದಿಂದ ಪತ್ರಕರ್ತರ ಒಳ್ಳೆ ಗುಣ ಮತ್ತು ಅವಗುಣಗಳ ಬಗ್ಗೆ ಬರೆಯಲು ಸಾಧ್ಯವಾಯಿತು. ಇದೆಲ್ಲ ಶ್ರೇಯ ಎಂದಿನಂತೆ ಸುದ್ದಿಮನೆಯ ಬಾಣಸಿಗರಿಗೆ ಸಲ್ಲುತ್ತದೆ. ಅವಸರದ ಕೆಲಸದ ನಡುವೆಯೂ ಸ್ವಲ್ಪ ಹೊತ್ತು ನೋ ಎಡಿಟರ್ ನೋಡುವ ಪರಿಪಾಠ ಬೆಳೆಸಿಕೊಂಡಿರುವುದು ಒಳ್ಳೆ ಬೆಳವಣಿಗೆ. ಕನಿಷ್ಠ ವಾರಕ್ಕೆ ಎರಡು ಬಾರಿ ಒಳ್ಳೆ ಸುದ್ದಿ (ಕೆಟ್ಟದ್ದು-ಒಳ್ಳೆಯದು ನಿಮ್ಮ ವಿವೇಚನೆಗೆ ಬಿಟ್ಟಿದ್ದು) ಕೊಡಲು ಪ್ರಯತ್ನಿಸುತ್ತೇನೆ-
ನೊ- ಎಡಿಟರ್ ಸಂಪಾದಕಿ!

ನೊ -ಎಡಿಟರ್ ಪರಿಣಾಮ.. ಕೀಚಕರ ನಿರ್ನಾಮ !


ಲೈಂಗಿಕವಾಗಿ ಪೀಡಿಸುವ ಚೀಪ್ ಬ್ಯೂರೊಗಳಿಗೆ ತಕ್ಕ ಪಾಠ. ಈ ಬಗ್ಗೆ ನೋ-ಎಡಿಟರ್ ಮೊದಲೇ ಎಚ್ಚರಿಕೆ ನೀಡಿತ್ತು. ಒಂದು ವಿಕೆಟ್ ಉರುಳಿದೆ.. ಇದು ಬ್ಲಾಗ್ ಸದಾಶಯ ಪರಿಣಾಮ. ಕೀಚಕರ ಬಗ್ಗೆ ಈ ಗಾಗಲೇ ಎರಡು ಇಮೇಲ್ ಗಳು ಬಂದಿವೆ. ಒಂದು ತನಿಖೆ ಹಂತದಲ್ಲಿದ್ದು, ಇನ್ನೊಂದನ್ನು ಪರಿಶೀಲಿಸಬೇಕಾಗಿದೆ. ಹೈದರಾಬಾದ್ ಮೂಲದ ಟಿವಿ ಚಾನೆಲ್ ಒಂದರಲ್ಲಿರುವ ಕೀಚಕ ನಿಗೆ ಸದ್ಯದಲ್ಲಿಯೇ ಶಾಸ್ತಿ ಆಗುವ ಸಾಧ್ಯತೆ ಇದೆ.
ಕಚೇರಿಗಳಲ್ಲಿ ದುಡಿಯುವ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುವ ಕೀಚಕರು ಇನ್ನಾದರೂ ಎಚ್ಚೆತ್ತುಕೊಂಡು ತಪ್ಪು ತಿದ್ದಿಕೊಂಡರೆ ಬಚಾವ್ ಆಗುತ್ತೀರಿ ಇಲ್ಲವಾದರೆ ಎಚ್ಚರಿಕೆ ಬಗ್ಗೆ "ವಿಸಿಲ್'" ಊದುವ ಕೆಲಸ ಬ್ಲಾಗ್ ಮಾಡಬೇಕಾಗುತ್ತದೆ.