Wednesday

ಯಾರು ಅನಾಥ ಕು. ನಾಥ ! ಫಿಟ್ಟಿಂಗ್ ಮಾಸ್ತರ್ ರೀ ಪಿಟ್

ಯಾರು ಅನಾಥ ಕು. ನಾಥ !
ವಿ ಕೆ ಯಲ್ಲಿ ಇಂದು ಮಂಗಳೂರಿನ ಮುಖ ಪುಟದಲ್ಲಿ ಪ್ರಕಟವಾದ ಸಾಯಿ ಆಪ್ತ ಅನಾಥ ಸುದ್ದಿ ಹೊಸದಿಗಂತ, ಕೆ ಪಿ , ಉದಯವಾಣಿಯಲ್ಲಿ ಒಂದು ದಿನ ಮುಂಚಿತವಾಗಿ ಫ್ರಂಟ್ ಪೇಜ್ ಸುದ್ದಿ. ವಿ ಕೆ ಯಲ್ಲಿ ಮಿಸ್ಸಿಂಗ್ ! ಮರುದಿನ ಕುದ್ದು ಕುಮಾರ ಉಳಿದ ಪೇಪರ್ ಓದಿ ಅದನ್ನು ಕದ್ದು ವರದಿ ರೆಡಿ ಮಾಡಿದ್ದ. ಪಾಪ ಸತ್ಯಜಿತ್ ಯಾರಿಗೂ ಸಿಕ್ಕಿಲ್ಲ. ಆದರೆ ಮಂಗಲೋರಿನ ಅವರ ಅಪ್ಪಬಳಿ ಮಾತನಾಡಿ ಅವರು ಹೇಳಿದ್ದನ್ನೇ ಮಗ (ಸತ್ಯ) ಹೇಳಿದ ಎಂದು ಇವ ಸುಳ್ಳೇ ಬರೆದ. ಇದು ಓದುಗರಿಗೆ ಮತ್ತು ಸಂಪಾದಕರಿಗೆ ಮಾಡಿದ ಅನ್ಯಾಯ.
ಕಳೆದ ೧೫ ದಿನಗಳಿಂದ ಲವಲವಿಕೆ ಪೇಜ್ ಪೇಜ್ ಗಳೇ ೪ ದಿನಗಳಿಗೆ ಒಮ್ಮೆ ಮತ್ತೆ ಪ್ರಕಟ ಆಗುತ್ತಿವೆ. (ಕಳೆದ ಶುಕ್ರವಾರದ ಪುಟ ಶನಿವಾರ ಪೂರ್ತಿ ಪುಟ , ಮತ್ತು ಮೊನ್ನೆ ಮಂಗಳ ವಾರದ ಪುಟ ಬುಧವಾರ ಏಪ್ರಿಲ್ ೨೨ ರ ಪೇಜ್ ಲವಲವಿಕೆ ೭ , ೨೭ರ ಸಿನಿ ಲವಲವಿಕೆ ಪೇಜ್ ೩ ! ರೀ ಪೀಟ್ ). ಯಾರದೋ ಫೋಟೋ ಯಾರಿಗೋ ತಗುಲಿಸಿ ಸುದ್ದಿ ಪ್ರಕಟಿಸುತ್ತಿದ್ದಾರೆ. ( ಇ ಬಗ್ಗೆ ಇನ್ನೊಮ್ಮೆ ದಾಖಲೆ ಸಹಿತ ರಿಪೀಟ್ ಪುಟಗಳನ್ನೂ ನೀಡುತ್ತೇನೆ. ಜೆ. ರಾಮ ಪ್ರಸಂಗ ಮತ್ತೆ ಮರುಕಲಿಸುವ್ ಸಾಧ್ಯತೆ ಇದೆ. ಒಳ್ಳೆ ಪತ್ರಿಕೆ ಎಂಬ ವಿ ಕೆ ಇಮೇಜ್ ಕು.ನಾಥ ಹೋಗುವ ಮುಂಚೆ ಹಾಳೂ ಮಾಡುವ ಪ್ರಯತ್ನದಲ್ಲಿ ಇದ್ದಾನೆ. ಉದಯವಾಣಿ ಒಂದು ದಿನ ಮುಂಚಿತವಾಗಿ ಪ್ರಕಟವಾದ ಸುದ್ದಿ (ಮನೋಹರ ಪ್ರಸಾದ್ ) ಮತ್ತು ಒಂದು ದಿನ ಬಳಿಕ ಅನಾಥ ಸುದ್ದಿ ತುಲನೆ ಮಡಿ. ಇನ್ನು ಇ ಬಾರಿ ಸಂಪಾದಕರಿಗೆ ಬ್ಲಾಗ್ ತೋರಿಸುವ ದುಸ್ಸಾಹಸ ಮಾಡುವ ಸಾಧ್ಯತೆ ಇಲ್ಲ. ಕಳ್ಳ ಸಿಕ್ಕಿ ಬೀಳುತ್ಥನಲ್ಲ ಹ ಹ ..
ನಾವಡ ಬರುತ್ತಾನೆ ಅಂದಾಗ ನಡುಗಿದ ನಾಥ ಮತ್ತು ಮತ್ತು ಎಡವಟ್ಟು ಮಾಡಿಕೊಳ್ಳುತ್ತಲೇ ಇದ್ದಾನೆ.. ನೋಡೋಣ ಇನ್ನೂ ಏನು ತಪ್ಪು ಮಾಡ್ತಾನೆ ಅಂತ. ಆದ್ರೆ ಪೆಟ್ಟು ಅಭಿಮಾನದ ಪತ್ರಿಕೆ ವಿ ಕೆ ಗೆ ಎನ್ನುವುದೇ ಬೇಸರ.

Tuesday

ಕು ನಾಥ ಸಾಧನೆ... !ಸಂಪಾದನೆ

ಕುಮಾರನಾಥ ಸಾದನೆ ಸೊನ್ನೆ ಎಂದು ಬರೆದ ನಮ್ಮ ಮೇಲೆ ಬ್ಲಾಗ್ ಓದುಗ ವಿನೋದ್ ಸಿಟ್ಟಾಗಿ ಕಾಮೆಂಟ್ ಕಳಿಸಿದ್ದಾರೆ ಅದನ್ನು ಯಥಾವತ್ ಪ್ರಕಟಿಸುತ್ತಿದ್ದೇವೆ

ವಿಕ ಮಂಗಳೂರು ಬ್ಯೂರೋಚೀಪ್. ಸಾಧನೆ ಸೊನ್ನೆ...
who said ? ask the bar attender and cashier ! and who else response team leaders..
Ask Bank Mangers..ಸಾಧನೆ
ಸೊನ್ನೆ too many zeros
banker can count it
wow..wow...

April 12, 2011 8:01 AM

Monday

ನೇ ..ಸಾರ ನೋಡು..ನೇಸರ ನೋಡು...

ತ್ರಿಕಾ ಕಛೇರಿಗಳಲ್ಲಿ ಓತ್ಲಾ ಹೊಡೆದುಕೊಂಡು ಇರುವವರಿದ್ದಾರೆ. ಅದನ್ನು ಸ್ವಯಂ ಘೋಷಿಸಿಕೊಂಡವರು ಕಡಿಮೆ. ಇಲ್ಲೊಬ್ಬರು ಆ ಕೆಲಸವನ್ನು ಮಾಡಿದ್ದಾರೆ. ಒಬ್ಬರು ಕೆಪಿ ಬಿಟ್ಟು ವಿಜಯ ನೆಕ್ಸ್ಟ್ ಸೇರಿಕೊಂಡವರು. ಇನ್ನೊಬ್ಬರು ಕನ್ನಡಪ್ರಭದಲ್ಲಿ ಮೈಸೂರಿನಲ್ಲಿ ಇರುವವರು. ಇಬ್ಬರ ನಡುವೆ ಶಿವ!

ನೇಸರ ಕಾಡನಕುಪ್ಪೆ ಮತ್ತು ವಿಜಯ ನೆಕ್ಸ್ಟ್ ನಲ್ಲಿರುವ ಚೇತನ ತೀರ್ಥಹಳ್ಳಿ ಅವರ ನಡುವಿನ ಚಾಟ್ ಸಂಭಾಷಣೆಯನ್ನು ವಿಜಯ ನೆಕ್ಸ್ಟ್ ನಲ್ಲಿರುವ ನನ್ನ ವಿದ್ಯಾರ್ಥಿನಿ ಕಳುಹಿಸಿದ್ದಾರೆ. ಟೈಮ್ಸ್ ನಲ್ಲಿ ಇಂತಹ ಚಾಟ್ ಗಳೆಲ್ಲ ರೆಕಾರ್ಡ್ ಆಗುತ್ತಂತೆ. ಅದನ್ನೇ ಆಕೆ ಕಳುಹಿಸಿದ್ದಾಳೆ. ನಿಮ್ಮ ಅವಗಾಹನೆಗಾಗಿ ಇಲ್ಲಿ ಕೊಡಲಾಗಿದೆ.

ಕೆಲವರು ಊರಿಗೆಲ್ಲ ಉಪದೇಶ ಮಾಡುತ್ತಾರೆ. ತಾವು ಮಾತ್ರ ಕಚೇರಿಯಲ್ಲಿ ಕುಳಿತು ಇಂತಹ ಚಿಲ್ಲರೆ ಬುದ್ದಿ ತೋರಿಸುತ್ತಾರೆ. ಪ್ರೆಸ್ ಮೀಟ್ ಗಳಲ್ಲಿ ರಾಜಕಾರಣಿಗಳನ್ನು ಗೊಳುಹೊಯ್ದುಕೊಳ್ಳುವ, ಬರಹಗಳ ಮೂಲಕ ನೀತಿಪಾಠ ಹೇಳುವ, ಸಮಾಜ ಸುಧಾರಕರ ರೂಪ ಧರಿಸುವ ಪತ್ರಕರ್ತರ ಒಳಮನಸ್ಸು ಹೇಗಿರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.
ಫಾರ್ ಮೋರ್ ಡಿಟೇಲ್ಸ್ ವಿಸಿಟ್
http://mediamana.blogspot.com/

Thursday

ಆನಂದ ಕರ್ನಾಟಕಕ್ಕೆ ಎ ನಾರಾಯಣ ಸಂಪಾದಕ

Kumarnath new associate editor of Ananda karnataka news paper by Vijya Sankeshwar. He wil be posted in Hubli.
A.Narayana will be the Editor.

ಹೆಚ್ಚಿನ ಮಾಹಿತಿಗೆ... ನಿರೀಕ್ಷಿಸಿ...


http://chillymedia.blogspot.com/

Tuesday

ನಾವಡ ಮಂಗಳೂರಿಗೆ, ಕುಮಾರ ....?

ಓದುಗರೊಬ್ಬರು ಕಾಮೆಂಟಿಸಿದ್ದರು. ಆಗ ಗೊತ್ತಾಯ್ತು ಕುಮಾರನಾಥ್ ಎಂಬೊಬ್ಬ ವ್ಯಕ್ತಿ ಪತ್ರಿಕೊದ್ಯಮದಲ್ಲಿದ್ದಾನೆ, ಬ್ಯೂರೋಚೀಪ್ ಆಗಿದ್ದಾನೆ ಎಂದು. ವಿಕ ಮೈಸೂರು ಬ್ಯೂರೋ ಮುಖ್ಯಸ್ಥರಾಗಿರುವ ಅರವಿಂದ ನಾವಡ ಅವರನ್ನು ಮಂಗಳೂರಿಗೆ ವರ್ಗಾಯಿಸಲಾಗಿದೆಯಂತೆ. ಅವರು ಮಕ್ಕಳ ಕಾರಣಕ್ಕೆ ಮಂಗಳೂರಿಗೆ ವರ್ಗಾವಣೆ ಬೇಕು ಎಂದು ಬಹು ಸಮಯದಿಂದ ಬೇಡಿಕೆ ಇಟ್ಟಿದ್ದರಂತೆ. ವಿ.ಭಟ್ಟರು ಕುಮಾರನಾಥನ ಮೇಲೆ ಅದೇನು ಪ್ರೀತಿ ಇಟ್ಟಿದ್ದರೋ, ಅವನನ್ನು ವರ್ಗಾಯಿಸಲಿಲ್ಲ. ನಾವಡರ ಆಸೆ ತೀರಲಿಲ್ಲ. ಹೊಸ ಸಂಪಾದಕರು ಬಂದ ಮೇಲೆ ನಾವಡರನ್ನು ಮಂಗಳೂರಿಗೆ ವರ್ಗಾಯಿಸಿದ್ದಾರೆ. ವಿಚಿತ್ರವೆಂದರೆ ಕುಮಾರನಾಥನನ್ನು ವರ್ಗಾಯಿಸಲಾಗಿಲ್ಲ.
ಕೃಪೆ: ಮೀಡಿಯಾ ಮನ
ಹೆಚ್ಚಿನ ವಿವರಗಳಿಗ
ಮೀಡಿಯಾಮನಬ್ಲಾಗ್ ಸ್ಪಾಟ್ ಡಾಟ್ ಕಾಮ್ ಸಂಪರ್ಕಿಸಿರಿ
http://www.mediamana.blogspot.com/

Sunday

ಸಂಕೇಶ್ವರ ವಿಜಯವಾಣಿಗೆ ವಿಕ ಚೀಪ್ ಬ್ಯೂರೊಗಳ ಕ್ಯೂ


ಯುಗಾದಿ ಬ್ರೇಕಿಂಗ್ ನ್ಯೂಸ್
ಮಾನ್ಯ ವಿಜಯ ಸಂಕೇಶ್ವರ ಅವರು ಮುಂದಿನ ಆ.17ಕ್ಕೆ ಹೊಸ ಪತ್ರಿಕೆ ವಿಜಯವಾಣಿ ಹೊರತರಲಿದ್ದಾರೆ. (ವಿ ಕ ಕೂಡಾ ಇದೇ ದಿನಕ್ಕೆ ಹೊರತಂದಿದ್ದರು)" ಹತ್ತೂ ಆವೃತ್ತಿಗಳಲ್ಲಿ ಪತ್ರಿಕೆ ಹೊರ ತರುವ ಬಗ್ಗೆ ಪ್ಲಾನ್ ಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಪ್ರಿಂಟಿಂಗ್ ಮಿಷನ್ ಜೋಡಿಸಲಾಗುತ್ತಿದೆ. ರಾಜ್ಯದಲ್ಲಿರುವ ವಿಕ ಶೇ.೯೦ ಏಜೆಂಟರುಗಳ ಸಂಕೇಶ್ವರನ ವಿ ಆರ್ ಎಲ್ ಬಸ್ ಏಜೆಂಟ್ ಗಳೇ ಆಗಿದ್ದಾರೆ. ಹೀಗಾಗಿ ಮೊದಲ ಹೊಡೆತ ವಿಕಕ್ಕೆ. ಸಂಕೇಶ್ವರನ ಪತ್ರಿಕೆಗೆ ಸೇರಲು ಹಲವು ಆಸ್ಥಾನಿಕ ಸಂಪಾದಕರು ತುದಿಗಾಲಲ್ಲಿ ನಿಂತಿದ್ದಾರೆ. ಕ.ಪ್ರ. ಬಿಟ್ಟು ವಿ ಭಟ್ಟರು ಬರಲು ಒಪ್ಪದ ಕಾರಣ ಹೊಸ ಸಂಪಾದಕರ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
ಬಾಲ್ಡಿ ಅನಾಥನಿಗೆ ಹೊಸ ಆಶ್ರಯ
ದಾವಣಗೆರೆ, ಹಾಸನ, ಮಂಗಳೂರು, ಹುಬ್ಬಳ್ಳಿಯ ಚೀಪ್ ಬ್ಯೂರೊಗಳು ಈಗಾಗಲೇ ಹೊರಡಲು ನಿರ್ಧರಿಸಲಾಗಿದೆ. ಅರ್ಧಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಜತೆಯಲ್ಲಿ ಬರಲು ಕಂಬಾರ ನಾತ ಸಂಕೇಶ್ವರ ಬಳಿ ಹೇಳಿಕೊಂಡಿದ್ದಾರೆ. ಮಂಗಳೂರಿನ ಸ್ಥಾನಿಕ ಸಂಪಾದಕ ಹುದ್ದೆಗೆ ಅನೇಕ ಮಂದಿ ಕಣ್ಣಿಟ್ಟಿರುವುದರಿಂದ ಬೋಳು ತಲೆ ಬಾಲ್ಡಿಗೆ ಬಿಸಿಯಾಗಿ ತ್ತು. ಮಂಗಳೂರಿಗೆ ಸಂಕೇಶ್ವರ ಬಂದಾಗ ತಾನು ತಮ್ಮ ಪತ್ರಿಕೆಗೆ ಸೇರುತ್ತೇನೆ, ಸಹಾಯಕ ಸಂಪಾದಕ ಪೋಸ್ಟ್ ನೀಡಬೇಕು ಎಂದುಕೈ ಕಾಲು ಹಿಡಿದ್ದ.
ಅತ್ತ ವಿ ಭಟ್ಟರು ವಿಕ ದ ಪ್ರತಿಭಾನ್ವಿತರನ್ನು ಸೆಳೆದುಕೊಳ್ಳುತ್ತಿದ್ದಾರೆ. ವಿಕ ಆರಂಭದಿಂದಲೇ ರೆಸಿಡೆಂಟ್ (ಮನೆಯಲ್ಲಿ) ಸಂಪಾದಕರಾಗಿ ತಳ ಊರಿದ ಸೋಮಾರಿ ಚೀಪ್ ಬ್ಯೂರೊಗಳ ಕುತಂತ್ರದಿಂದ ನಿಷ್ಠೂರವಾದಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಇಲ್ಲ ಟ್ರಾನ್ಸ್ ಫರ್ ಆಗುತ್ತಿದ್ದಾರೆ. ಒಟ್ಟಾರೆ ಕೊನೆಗೆಉಳಿಯುವುದು ಕೆಲಸಕ್ಕೆ ಬಾರದ, ಹೊಸ ಚಿಂತನೆ ಇಲ್ಲದ, ಕೇವಲ ಬಕಿಟ್ ಹೊಂದಿರುವ ಬಾಲ್ಡಿಗಳು, ಕೆಲವೇ ಮಂದಿ ಮುದಿಯರು, ಸೋಮಾರಿಗಳು, ಮುಗ್ಧರು ಮಾತ್ರ.

ಭವಿಷ್ಯದ ಬೊಗಳೇ ದಾಸರು

ಇನ್ನು ನಮ್ಮ ಪ್ರಳಯಾಂತಕ ನರೇಂದ್ರ ಸ್ವಾಮಿಯ ವಿಷಯಕ್ಕೆ ಬರೋಣ. ಈತ ಮಾತು-ಕಥೆ ಎಂಬ ಸಾರ್ವಜನಿಕ ಕಾರ್ಯಕ್ರಮಗಳನ್ನು ಆರಂಭಿಸಿದ್ದಾನೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದ ಪ್ರಸಾರ ನಿನ್ನೆ ಮತ್ತು ಮೊನ್ನೆ ಜೀ ಟಿವಿಯಲ್ಲಿ ಪ್ರಸಾರವಾಯಿತು. ಅಲ್ಲಿ ಆತನ ಪ್ರಕಾಂಡ ಪಾಂಡಿತ್ಯವನ್ನು ಕೇಳದವರೇ ದುರ್ಭಾಗ್ಯವಂತರು. ಕೆಲವು ಸ್ಯಾಂಪಲ್ ಇಲ್ಲಿವೆ ನೋಡಿ.

ನೋಡಿ, ನನ್ನ ವಿರುದ್ಧ ಪತ್ರಿಕೆಗಳಲ್ಲಿ, ಅಲ್ಲಿ-ಇಲ್ಲಿ ಏನೇನೋ ಬರೆದುಕೊಳ್ತಾ ಇದ್ದಾರೆ. ಬರಕೊಳ್ಳಲಿ ನಾನು ಕೇರ್ ಮಾಡಲ್ಲ. ನಾನು ಆತ್ಮವನ್ನು ನಂಬಿದ್ದೇನೆ. ಆತ್ಮವನ್ನು ಯಾರೂ ನೋಡಲಾಗದು, ಮುಟ್ಟಲಾಗದು, ನಾಶಗೊಳಿಸಲಾಗದು.
ನನ್ನ ಪ್ರಕಾರ ಆತ್ಮ ಎಂದರೆ ಎಷ್ಟೋ ದಿನ ಒಗೆಯದೆ ಕೊಳೆತು ನಾರುವ ಲಂಗೋಟಿ ಇದ್ದಂತೆ. ಈ ಲಂಗೋಟಿಯನ್ನು ಯಾರೂ ನೋಡಲಾಗದು, ಮುಟ್ಟಲಾಗದು, ನಾಶಪಡಿಸಲಾಗದು. ಉಡುಪಿಯಲ್ಲಿ ಒಂದು ಕಾರ್ಯಕ್ರಮದಲ್ಲೂ ಇದನ್ನೇ ಹೇಳಿದೆ. ಅಲ್ಲಿದ್ದ ಸ್ವಾಮೀಜಿ ನನ್ನ ಮಾತನ್ನು ಒಪ್ಪಿದರು, ಒಳ್ಳೆ ಹೋಲಿಕೆ ಕೊಟ್ಟಿದ್ದೀರಿ ಅಂದರು.

ಇದು ನರೇಂದ್ರ ಸ್ವಾಮಿಯ ವಾದಸರಣಿ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳು ನಮಗೆ ಗೊತ್ತು. ನರೇಂದ್ರ ಸ್ವಾಮಿಯದು ಲಂಗೋಟಾದ್ವೈತ ಸಿದ್ಧಾಂತ. ಅದನ್ನು ಪ್ರಸಾರ ಮಾಡುವ ಜೀ ವಾಹಿನಿಯೇ ಧನ್ಯ.

ಬೆಳಗಾವಿಯ ಒಬ್ಬಾಕೆ ಧೈರ್ಯ ತಂದುಕೊಂಡು ನರೇಂದ್ರ ಸ್ವಾಮಿಯನ್ನು ಕೇಳಿಯೇ ಬಿಟ್ಟಳು: ಎಲ್ಲ ಸರಿ ಗುರೂಜಿ, ನಿಮಗೆ ನಮ್ಮ ನೈಟಿ ಮೇಲೆ ಯಾಕೆ ಕಣ್ಣು?

ನರೇಂದ್ರ ಸ್ವಾಮಿ ಒಮ್ಮೆ ಮೋಹಕವಾಗಿ ನಕ್ಕು.. ದರಿದ್ರ ಕಣ್ರೀ, ಕೊಳೆ ತುಂಬಿಕೊಂಡಿರುತ್ತೆ ನೈಟಿ. ರಾತ್ರಿ ಗಂಡನ ಜೊತೆನೋ.... ಮಲಗಿ ಎದ್ದು ಬೆಳಿಗ್ಗೆ ಹಾಗೇ ಅಡುಗೆ ಮನೆಗೆ ಬರ‍್ತೀರಿ. ಅಲ್ಲಿರೋದು ಏನು? ಒಲೆ ಬೆಂಕಿ. ಬೆಂಕಿ ಅಂದ್ರೆ ಆದಿಶಕ್ತಿ. ಈಚೆಗಾಗಿರ‍್ತೀರಿ (ಮುಟ್ಟು), ಹಂಗೇ ಅಡುಗೆ ಮನೆಗೆ ಬರ‍್ತೀರಿ. ದರಿದ್ರ ಮೆಟ್ಟಿಕೊಳ್ಳದೇ ಇರುತ್ತಾ. ನೈಟಿ ಚೆನ್ನಾಗಿರಲ್ಲ ಅಂತೀನಪ್ಪ, ನಿಮ್ಮ ನೈಟಿ ಕಟ್ಕೊಂಡು ನನಗೇನಾಗಬೇಕು.. ಎಂದು ನುಡಿಯಿತು.

ನರೇಂದ್ರ ಸ್ವಾಮಿ ಬಿಟ್ವೀನ್ ದ ಲೈನ್ಸ್ ಏನನ್ನು ಹೇಳಿದ ಅನ್ನೋದು ಎಲ್ಲ ಹೆಣ್ಣುಮಕ್ಕಳಿಗೂ ಚೆನ್ನಾಗಿಯೇ ಅರ್ಥವಾಗಿರಬೇಕು. ಆದರೂ ಅವು ಪೆಚ್ಚು ಮುಖ ಮಾಡಿಕೊಂಡು ಕುಳಿತಿದ್ದವೇ ವಿನಃ ಪ್ರತಿಭಟಿಸಲಿಲ್ಲ.

ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಕರೆಂಟೇ ಇರಲ್ಲ, ಬರ‍್ಕೊಂಡು ಬಿಡಿ. ಆಮೇಲೆ ಏನ್ ಮಾಡ್ತೀರಾ? ನಿಮ್ಮ ಲೈಟು, ಫ್ರಿಡ್ಜು, ಮಿಕ್ಸಿ ಯಾವುದೂ ವರ್ಕ್ ಆಗಲ್ಲ. ಎಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ತೀರಾ?...

ಹೀಗೆ ಹೇಳುತ್ತಲೇ ಹೋಯಿತು ನರೇಂದ್ರ ಸ್ವಾಮಿ. ಅದು ಹಾಗೆ ವಟಗುಟ್ಟುತ್ತಲೇ ಇರಲಿ. ಈತನೂ ಸೇರಿದಂತೆ ಎಲ್ಲ ಚಾನಲ್‌ಗಳ ಭಂಡ, ಮೂಢ ಜ್ಯೋತಿಷಿಗಳ ವಿರುದ್ಧ ಒಂದು ಸಣ್ಣ ಆಂದೋಲನ ಹುಟ್ಟಿಕೊಂಡಿದೆ. ಈ ಕೋಡಂಗಿ ಜ್ಯೋತಿಷಿಗಳ ಉಪಟಳ ನಿಯಂತ್ರಿಸುವುದು ಹೇಗೆ? ಎಂಬ ಪೋಸ್ಟ್‌ಗೆ ೪೭ ಮಂದಿ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಮಂದಿ ಇ-ಮೇಲ್ ಮೂಲಕ ಸಲಹೆಗಳನ್ನು ನೀಡಿದ್ದಾರೆ. ಏನು ಮಾಡಬಹುದು ಎಂಬ ಕುರಿತು ಸಾಕಷ್ಟು ವಿಸ್ತ್ರತವಾಗಿ ಚರ್ಚೆ ಆಗಿದೆ. ಈ ಚರ್ಚೆ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ.

ನಾಳೆಯ ಹೊತ್ತಿಗೆ ಈ ಜ್ಯೋತಿಷಿಗಳ ವಿರುದ್ಧದದ ನಮ್ಮ ಪ್ರಜಾಸತ್ತಾತ್ಮಕ ಹೋರಾಟದ ವಿವಿಧ ಸಾಧ್ಯತೆಗಳನ್ನು ಪಟ್ಟಿ ಮಾಡಿ, ಆ ಪ್ರಕಾರವಾಗಿ ಮುಂದುವರೆಯೋಣ.

ಒಂದು ಹಳೆಯ ಜೋಕ್ ಕೇಳಿಸಿಕೊಳ್ಳಿ: ಚಾನಲ್ ಒಂದರ ಜ್ಯೋತಿಷ್ಯ ಕಾರ್ಯಕ್ರಮಕ್ಕೆ ಯುವತಿಯೊಬ್ಬಳು ಕರೆ ಮಾಡುತ್ತಾಳೆ. ಆಕೆಯ ಪ್ರಶ್ನೆ ತನ್ನ ಅಣ್ಣನನ್ನು ಕುರಿತಾಗಿತ್ತು. ಅಣ್ಣ ತುಂಬಾ ಕುಡಿಯುತ್ತಿದ್ದಾನೆ, ಹೇಗೆ ಬಿಡಿಸುವುದು ಅನ್ನೋದು ಆಕೆಯ ಪ್ರಶ್ನೆ.

ನೋಡಮ್ಮಾ, ರಮ್ ಇದೆಯಲ್ಲಾ ಅದು ರಾಹು, ವಿಸ್ಕಿ ಇದೆಯಲ್ಲ ಅದು ಕೇತು. ಒಂದು ಬಾಟಲಿ ರಮ್, ಒಂದು ಬಾಟಲಿ ವಿಸ್ಕಿ ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಡು, ಅವನು ಕುಡಿಯುವುದನ್ನು ಬಿಟ್ಟುಬಿಡುತ್ತಾನೆ.

ಆಕೆ ಮತ್ತೆ ಪ್ರಶ್ನಿಸುತ್ತಾಳೆ. ಗುರೂಜಿ, ನೀರಲ್ಲಿ ಬಿಡಬೇಕಾ?

ಮತ್ತಿನ್ನೇನು ನೀರಿಗೆ ಬಿಡದೇ ನೀನೇ ಕುಡೀತೀಯಾ, ಕುಡಿ... ಗುರೂಜಿ ಸಿಡುಕುತ್ತಾರೆ.

ಆ ಗುರೂಜಿ ಯಾರು ಅಂತ ಹೇಳಬೇಕಾಗಿಲ್ಲ ಅಲ್ಲವೇ?
ಜಪಾನ್್ ಸುನಾಮಿ ದುರಂತದಲ್ಲಿ ಸಾವಿರಾರು ಮಂದಿ ಸತ್ತಾಗ ಪಾಪಿ ಹೇಳಿದ್ದು, " ಹಾವು ತಿನ್ನೋರು ಅದಕ್ಕೆ ಹೀಗಾಗಿದೆ' ! ಏನು ಹೇಳಬೇಕು ಬೊಗಳೆ ಭವಿಷ್ಯಗಾರನಬಗ್ಗೆ !
ಕೃಪೆ: ಸಂಪಾದಕೀಯ

ಪತ್ರಕರ್ತ ರ ಸಂಪುಟ- ಆಡಳಿತ ಮಂಡಳಿಗೆ ಸಂಕಟ

ಒಂದು ವೇಳೆ ಪತ್ರಕರ್ತರೆಲ್ಲ ಸೇರಿ ಒಂದು ಸರಕಾರ ರಚಿಸಿದರೆ ಯಾರ‍್ಯಾರಿಗೆ ಯಾವ ಯಾವ ಸಚಿವ ಸ್ಥಾನ ದೊರೆಯಬಹುದು? ತಮಾಷೆಯಾಗಿ ನಮ್ಮ ಅನಾಮಿಕ ಓದುಗರೊಬ್ಬರು ಒಂದು ಪಟ್ಟಿಯನ್ನು ಕಳುಹಿಸಿದ್ದಾರೆ. ಓದಿ, ಹೊಟ್ಟೆ ತುಂಬಾ ನಕ್ಕು ಬಿಡಿ.
ವಿಶ್ವೇಶ್ವರ ಭಟ್: ಮುಖ್ಯಮಂತ್ರಿ (ಮಾಹಿತಿ ತಂತ್ರಜ್ಞಾನ, ಶಿಕ್ಷಣ ವಿತ್ತ)
ರಂಗನಾಥ್ ಎಚ್.ಆರ್.: ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ
ಕುಮಾರನಾಥ (ಮಂಗಳೂರು ವಿಕ) :ಗೃಹ (ಮನೆಯಿಂದಲೇ ಕಾರ್ಯಾಚರಣೆ) ಇಲಾಖೆ ಸಹಾಯಕ ಸಚಿವ
ರವಿ ಬೆಳಗೆರೆ: ಸಹಾಯಕಶಿಕ್ಷಣ ಮತ್ತು ಅಪಹರಣ, ಗಣಿ ಮತ್ತು ಭೂವಿಜ್ಞಾನ
ದು.ಗು.ಲಕ್ಷ್ಮಣ್: ಮುಜರಾಯಿ
ಕೆ.ಎನ್.ಶಾಂತಕುಮಾರ್: ಕ್ರೀಡೆ
ಪದ್ಮರಾಜ ದಂಡಾವತಿ: ಲೋಕೋಪಯೋಗಿ
.ರಾಘವನ್: ಹಣಕಾಸು, ಕಂದಾಯ
ರಾಧಾಕೃಷ್ಣ ಬಡ್ತಿ: ನೀರಾವರಿ
ಲಕ್ಷ್ಮಣ ಕೊಡಸೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಜಿ.ಎನ್.ಮೋಹನ್: ಒಳಾಡಳಿತ, ಗುಪ್ತಚರ ಇಲಾಖೆ
ಅಶೋಕ್ ರಾಮ್: ಚರಂಡಿ ಮತ್ತು ಒಳಚರಂಡಿ ಮಂಡಳಿ
ಚಿದಂಬರ ಬೈಕಂಪಾಡಿ (ಮಂಗಳೂರು) : ಕೃಷಿ, ತೋಟಗಾರಿಕೆ
ಸಂಧ್ಯಾ ಪೈ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಿರಾಶ್ರಿತರ ಪುನರ್ವಸತಿ
ಗಿರೀಶ್ ರಾವ್ (ಜೋಗಿ): ಗ್ರಂಥಾಲಯ
ಕರಿಸ್ವಾಮಿ : () ಸಹಕಾರ
ಜಯಪ್ರಕಾಶ್ ನಾರಾಯಣ : ಸಹಾಯಕ ಗುಪ್ತ ಚರ ಇಲಾಖೆ
ಪಿ.ತ್ಯಾಗರಾಜ್: ಇಂಧನ
ಕನ್ನಡಪ್ರಭ ಡಾ ವೆಂಕಿ: ವೈದ್ಯಕೀಯ ಶಿಕ್ಷಣ
ಕರಾವಳಿ ಅಲೆ ಸೀತಾರಾಂ: ಕಾರಾಗೃಹ
ರವಿ ಹೆಗಡೆ: ವಿಜ್ಞಾನ ಮತ್ತು ತಂತ್ರಜ್ಞಾನ
ಇಂದ್ರಜಿತ್ ಲಂಕೇಶ್: ಯುವಜನ ಸೇವೆ
ತುಫೈಲ್ ಮೊಹಮ್ಮದ್: ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ
ಗಂಗಾಧರ ಮೊದಲಿಯಾರ್: ವಾರ್ತಾ ಮತ್ತು ಪ್ರಚಾರ
ಪ್ರತಾಪ್ ಸಿಂಹ: ಪಂಚ ವಾರ್ಷಿಕ ಯೋಜನೆ

ವಿನಾಯಕ ಭಟ್ ಮೂರೂರು, ಶಿವಪ್ರಸಾದ್ ಟಿ.ಆರ್.: ದೆಹಲಿ ವಿಶೇಷ ಪ್ರತಿನಿಧಿಗಳು
ಡಾ. ಆರ್.ಪೂರ್ಣಿಮ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಲಕ್ಷ್ಮಣ ಹೂಗಾರ್: ಸಮಾಜ ಕಲ್ಯಾಣ
ಶಿವಸುಬ್ರಹ್ಮಣ್ಯ: ಅರಣ್ಯ
ಲೋಕೇಶ್ ಕಾಯರ್ಗ : ಕಾರ್ಮಿಕ
ಅರವಿಂದ ನಾವಡ: ರೇಷ್ಮೆ
ದೀಪಕ್ ತಿಮ್ಮಯ ಮತ್ತು ರಾಧಿಕಾ ಭಾರದ್ವಾಜ್: ವಯಸ್ಕರ ಶಿಕ್ಷಣ
ತಿಮ್ಮಪ್ಪ ಭಟ್: ಸಣ್ಣ ಉಳಿತಾಯ್

ನಿಗಮ ಮಂಡಳಿಗೆ ಮೊದಲ ಪ್ರಾಶಸ್ತ್ಯ:
ಉಮಾಪತಿ ಮತ್ತು ದಿನೇಶ್ ಅಮೀನ್ ಮಟ್ಟು, ಕೆ.ವಿ.ಪ್ರಭಾಕರ್


ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಒದಗಿಸಲಾಗುವುದು.
ಕೃಪೆ:ಸಂಪಾದಕೀಯ ( ಸ್ವಲ್ಪ ಎಡಿಟ್ ಮಾಡಲಾಗಿದೆ)

Friday

ಚೇತನಾ ಬರೆದಾಗ

ಕನ್ನಡಪ್ರಭದಲ್ಲಿ ತಸ್ಲೀಮಾ ನಸ್ರೀನ್ ಅವರ ಅನುವಾದಿತ ಲೇಖನವೊಂದು ಪ್ರಕಟಗೊಂಡಿದ್ದು, ಆನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಗಲಭೆ ನಡೆದಿದ್ದು, ಗಲಭೆಯಲ್ಲಿ ಇಬ್ಬರು ಬಲಿಯಾಗಿದ್ದು, ಮೂಲ ಲೇಖನವನ್ನು ತಿರುಚಲಾಗಿದೆ ಎಂದು ಸ್ವತಃ ತಸ್ಲೀಮಾ ನಸ್ರೀನ್ ಸ್ಪಷ್ಟನೆ ನೀಡಿದ್ದು ನಿಮಗೆ ನೆನಪಿರಬಹುದು. ಕನ್ನಡಪ್ರಭ ಸಾಪ್ತಾಹಿಕದಲ್ಲಿ ಸಿಂಧು ಎಂಬ ಹೆಸರಿನಲ್ಲಿ ಪ್ರಕಟಗೊಂಡ ಈ ಲೇಖನವನ್ನು ಬರೆದಿದ್ದು ಚೇತನಾ ತೀರ್ಥಹಳ್ಳಿಯವರು ಎಂಬ ವದಂತಿಯನ್ನು ಹಬ್ಬಿಸಲಾಗಿತ್ತು. ಇದರಿಂದಾಗಿ ಚೇತನಾ ಸಾಕಷ್ಟು ನೊಂದಿದ್ದರು. ಈಗ ಲೇಖನ ಬರೆದದ್ದು ಯಾರು ಎಂಬುದು ಬಹಿರಂಗವಾಗಿದೆ. ಆ ದಿನಗಳಲ್ಲಿ ತಾವು ಅನುಭವಿಸಿದ ನೋವನ್ನು ಚೇತನಾ ಇದೀಗ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ. ಅವರ ಅನುಮತಿ ಪಡೆದು ಈ ಬರಹವನ್ನು ಸಂಪಾದಕೀಯದಲ್ಲಿ ಪ್ರಕಟಿಸಬೇಕು ಎನ್ನುವಷ್ಟರಲ್ಲಿ ಅವರೇ ಈ ಲೇಖನವನ್ನು ಪ್ರಕಟಣೆಗಾಗಿ ಮೇಲ್ ಮಾಡಿದ್ದಾರೆ. ಚೇತನಾ ಅವರ ಈ ಲೇಖನ ಅವರ ವಿರುದ್ಧ ಪಿತೂರಿ ನಡೆಸಿದವರ ಕಣ್ತೆರೆಸಲಿ ಎಂಬುದು ನಮ್ಮ ಆಶಯ. ಚೇತನಾ ಅವರಿಗೆ ನಮ್ಮ ನೈತಿಕ ಬೆಂಬಲವಿರುತ್ತದೆ

ಕ.ಪ್ರ,. ತಸ್ಲಿಮಾ ವಿವಾದದ ಹಿಂದೆ ಜೇಪಿ: ಚೇತನ ತೀರ್ಥಳ್ಳಿ

ವರ್ಷದ ಹಿಂದಿನ ಮಾತು. ತಸ್ಲಿಮಾ ಮಾತುಗಳನ್ನ ಮಹಾಶಯರೊಬ್ಬರು ಹುಡುಗಿ ಹೆಸರಲ್ಲಿ ಅನುವಾದಿಸಿ ಕ.ಪ್ರ.ದಲ್ಲಿ ಪ್ರಕಟಿಸಿದ್ದರು. ಪರಿಣಾಮ- ಬೆಂಕಿ ಬಿದ್ದಿತ್ತು. ಎರಡು ಜೀವ ಹೋಗಿತ್ತು. ನಾನು ಆಗ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಕಪ್ಪು ಚುಕ್ಕೆ ಅದು. ಜೊತೆಗೆ ವೈಯಕ್ತಿಕ ನಷ್ಟವೂ. ನನ್ನ ಕೆಲವು ಗೆಳೆಯರು, ಮನಸು- ಹೃದಯಗಳೊಂದೂ ಇಲ್ಲದೆ ಬುದ್ಧಿಯಲ್ಲಷ್ಟೆ ಜೀವಿದುವವರು- ಇಂಥವರೆಲ್ಲ ಅದು ನಾನು ಎಂದು ತೀರ್ಮಾನಿಸಿಬಿಟ್ಟಿದ್ದರು. ಕೆಲವರ ಚುಚ್ಚು ಮಾತು, ಮೆಸೇಜುಗಳು, ಕಮೆಂಟುಗಳು ಮತ್ತಷ್ಟು ಜನರ ಹಾದಿ ತಪ್ಪಿಸಿ ನನ್ನೆದುರು ನಿಲ್ಲಿಸಿದ್ದವು. ಈ ಮಧ್ಯೆ ಒಂದೆರಡು ಬೆದರಿಕೆ ಕರೆಗಳೂ ಬಂದು, ನಾನು ಸಂಪಾದಕರ ಬಳಿ ಓಡಿ ರಕ್ಷಣೆ ಕೊಡಿಸುವಂತೆಯೂ ಕೇಳಬೇಕಾಗಿ ಬಂತು.
ಅದೆಲ್ಲ ಈಗ ನಡೆದ ಹಾಗಿದೆ. ಅಂದಿನ ಕ.ಪ್ರ.ಸಂಪಾದಕರು ಮಹಾವಲಸೆಯಿಂದ ಚೇತರಿಸಿಕೊಂಡು ಪತ್ರಿಕೆ ಕಟ್ಟುತ್ತಿದ್ದ ಅವಧಿಯದು. ಮ್ಯಾಗಜಿನ್‌ನ ಸಂಪೂರ್ಣ ಜವಾಬ್ದಾರಿ ಪುರವಣಿ ಸಂಪಾದಕರ ಮೇಲೆಯೆ ಇತ್ತು. ಅಂದಿನ ಸಂಪಾದಕರು ನಂಬಿ ಕೆಟ್ಟರು. ನಂಬಿದ್ದೇ ನನ್ನ ತಪ್ಪು, ಅದು ನನ್ನ ಬೇಜವಾಬ್ದಾರಿತನ ಅಂತ ಆಮೇಲೆ ಬಹಳ ಬಾರಿ ಬಹಳ ಕಡೆ ಅವಲತ್ತುಕೊಂಡಿದ್ದು ಕೇಳಿದ್ದೇನೆ. ಪುರವಣಿ ಸಂಪಾದಕರು ತಮ್ಮ ಗೆಳೆಯ ಕಳಿಸಿಕೊಟ್ಟ ಲೇಖನವನ್ನು ವಿವೇಚನೆ ಇಲ್ಲದೆ ಪ್ರಕಟಿಸಿಬಿಟ್ಟರು. ಆ ಗೆಳೆಯನಾದರೂ ಮತ್ತೊಂದು ಪತ್ರಿಕೆಯ ಕೆಲಸಗಾರನಾಗಿದ್ದ, ಜವಾಬ್ದಾರಿ ಹುದ್ದೆಯಲ್ಲಿದ್ದ, ಹೊರ ಜಗತ್ತಿಗೆ ಬುದ್ಧಿವಂತನಂತೆ ಪೋಸ್ ಕೊಡುವವನಾಗಿದ್ದ. ಆ ಅವಿವೇಕದ ಲೇಖನವನ್ನು ಒಂದು ಹುಡುಗಿಯ ಹೆಸರಲ್ಲಿ ಪ್ರಕಟಿಸಲಾಯ್ತು. ಕೆಲವರು ಅದು ಪುರವಣಿ ಸಂಪಾದಕರೇ ಎಂದೂ, ಕೆಲವರು ಅವರ ಗೆಳತಿ ಇರಬಹುದೆಂದೂ ಊಹಿಸಿಕೊಂಡರು. ಪುರುಸೊತ್ತಿನಲ್ಲಿದ್ದು, ನನ್ನ ಮೇಲೆ ಏನಾದರೊಂದು ಆಕ್ಷೇಪ ಇಟ್ಟುಕೊಂಡಿದ್ದ ಕೆಲವರ ಬಾಯಿಗೆ ನಾನು ಬಿದ್ದೆ. ಮತ್ತವೇ ಕೋಮುವಾದಿ, ಬಲಪಂಥೀಯ, ಕೇಸರಿ ಮದ್ಯದಂತಹ ಕಿತ್ತೋದ ಡೈಲಾಗುಗಳು, ಕುಹಕಗಳು.
ಚೇತನಾ ತೀರ್ಥಹಳ್ಳಿ
ಅಷ್ಟೆಲ್ಲ ಬೇಸರಪಟ್ಟುಕೊಳ್ಳುವ ಅಗತ್ಯವಿದ್ದಿಲ್ಲ, ಆದರೂ ನೋವಾಗಿಬಿಟ್ಟಿತು. ಆ ಒಂದು ತಿಂಗಳ ನನ್ನ ಒಳಗುದಿ ಹೇಳಿಕೊಳ್ಳಲು ಆಗದಂಥದ್ದು. ಪತ್ರಕರ್ತ ಮಿತ್ರರು ಕೆಲವರು ಈ ಗಾಸಿಪ್ ಅನ್ನು ಮತ್ತಷ್ಟು ವ್ಯಾಪಕಗೊಳಿಸುವಲ್ಲಿ ಸಕ್ರಿಯರಾಗಿದ್ದ ಬಹಳ ಬೇಸರ ಮಾಡಿತ್ತು. ಕೆಲವರಂತೂ ಕಾಲ್ ಮಾಡಿ ಆರೋಪವನ್ನು ನನ್ನ ಮೇಲೆ ಹೇರಿದರು. ಅಷ್ಟು ಶ್ರಮ ತೆಗೆದುಕೊಂಡರು.
ಈಗ, ಈಗ ಏನು? ಐದಾರು ತಿಂಗಳ ಹಿಂದಿನಿಂದಲೇ ಜೆಪಿ ಯ ಹೆಸರು ಬಹಿರಂಗಗೊಂಡು ಹರಿದಾಡುತ್ತಿದೆ. ಈಗಲಂತೂ ಅದು ಅಧಿಕೃತವಾಗಿ ಘೋಷಣೆಯಾಗಿದೆ. ಹೊರಗಿನವರ ಮಾತು ಬಿಡಿ, ಪತ್ರಿಕೋದ್ಯಮದ ಒಳಗಿನವರ ಬಗ್ಗೆ ರೇಜಿಗೆಯಾಗುತ್ತಿದೆ. ಅವತ್ತು ಕರೆ ಮಾಡಿ, mail ಮಾಡಿ ದೂಷಿಸುವ ಕಷ್ಟ ತೆಗೆದುಕೊಂಡ ಯಾರಿಗೂ ಇವತ್ತು sorry ಕೇಳಲು ನೆನಪಾಗುತ್ತಿಲ್ಲ. ಗಾಸಿಪ್ ಮಾಡುವವರ ಹಣೆಬರಹವೆ ಇಷ್ಟಲ್ಲ? ಟೊಳ್ಳು ಜನ. ಮರೆವು ಜಾಸ್ತಿ.
ಸಾಲದ್ದಕ್ಕೆ ಈಗ ಪ್ರಣತಿಯ ಭೂತ ಮೆಟ್ಟಿಕೊಂಡಿದೆ. ಅನವಶ್ಯಕವಾಗಿ ನಾನು ನಾನಲ್ಲ ಅನ್ನುವ ಸಮಜಾಯಿಷಿ ಕೊಟ್ಟುಕೊಳ್ಳಬೇಕಾಗಿದೆ. ಅದು ಕೂಡ ಸುಮ್ಮನೆ ಗಾಸಿಪ್ ಎಂದು ಗೊತ್ತಿದ್ದೇ ಸಾಂಕ್ರಾಮಿಕ ಹರಡುವಿಕೆಯ ವೈರಸ್ ಗಳಾಗುತ್ತಿದ್ದಾರೆ ಸಹಪತ್ರಕರ್ತರು. ಅದನ್ನು ಇಲ್ಲಿಗೇ ನಿಲ್ಲಿಸಿಬಿಟ್ಟರೆ ಒಳ್ಳೆಯದು. ಇಲ್ಲವಾದರೆ, ನನಗೆ ಕೆಟ್ಟದ್ದು.
ಇನ್ನೂ ಹೇಳಬೇಕನಿಸಿದ್ದು-ಬ್ಲಾಗ್ ಜಗತ್ತಿನ ತುಂಬ ಪತ್ರಿಕೋದ್ಯಮದ ವಾಚ್‌ಡಾಗ್‌ಗಳು ತುಂಬಿಕೊಳ್ಳುತ್ತಿದ್ದಾರೆ. ಕೆಲವರು ಹಿಂದೆಮುಂದೆ ನೋಡದೆ ಸ್ವಾರಸ್ಯಕರ ಗಾಸಿಪ್, ಅರೆಬರೆ ಮಾಹಿತಿ, ತಪ್ಪು ಅರ್ಥ ಕೊಡುವ ಸುದ್ದಿಗಳನ್ನೆಲ್ಲ ಪ್ರಕಟಿಸುತ್ತಿದ್ದಾರೆ. ಕೆಲವರು ಚೆನ್ನಾದ ವಿಶ್ಲೆಷಣೆ ನಡೆಸ್ತಿದ್ದರೂ ನಡುನಡುವೆ ಬಕೆಟ್ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. (ಬಕೆಟ್ ಈಗ ಸಖತ್ ಚಾಲ್ತಿಯಲ್ಲಿರುವ ಪದ. ಅದಕ್ಕೆ ಪರ್ಯಾಯ ಸಿಗ್ತಿಲ್ಲ). ಯಾರಿಗೂ ಇದರ ಪರಿಣಾಮದ ಅರಿವು ಇದ್ದ ಹಾಗಿಲ್ಲ. ಪತ್ರಿಕೆ, ವೆಬ್ ಗಳಲ್ಲಿ ಬರುತ್ತಿರುವ ಸುದ್ದಿಗಳಿಂದಾಗಿ ಜರ್ನಲಿಸಮ್ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಇತ್ತ ತಲೆ ಹಾಕಲು ಹೆದರುವಂಥ ಮಾಹೋಲ್ ನಿರ್ಮಾಣವಾಗ್ತಿದೆ. ಇಷ್ಟು ದಿನ ಜನ ರಾಜಕಾರಣ ಅಂದರೆ ಮೂಗು ಮುರೀತಿದ್ದರು, ಇನ್ನು ಖಚಡಾ ಕೆಲಸಕ್ಕೆಲ್ಲ ಇದೇನು ಜರ್ನಲಿಸಮ್ಮಾ ಅಂತ ಕೇಳುವ ಕಾಲವೂ ಬರಬಹುದು. ಹಾಗಂತ ನಾವು ಬೇರೆ ಬೇರೆ ಪತ್ರಿಕೆಯಲ್ಲಿದ್ದೂ ಗೆಳೆತನ ಇಟ್ಟುಕೊಂಡಿರುವ ಹೆಣ್ಣುಮಕ್ಕಳು ಆನ್‌ಲೈನ್ ಚಾಟ್‌ನಲ್ಲಿ ಹತಾಶರಾಗ್ತಿದೇವೆ.
ಎಲ್ಲಿಂದ ಎಲ್ಲಿಗೆ ಏನು ಲಿಂಕೋ? ತಮ್ಮಂದಿರಲ್ಲಿ ಒಬ್ಬ, ನನ್ನ ಕ್ಲಾರಿಫಿಕೇಶನ್ ಗಳ ನಂತರವೂ ನನ್ನ ಬಗ್ಗೆ ಅನುಮಾನ ಇರಿಸಿಕೊಂಡಿದ್ದ. ಈಗ ತಾನೆ ಯಾವುದೋ ಬ್ಲಾಗ್ ನೋಡಿ ‘ಸಿಂಧು ನೀವಲ್ಲ ಅಂತ ಖಾತ್ರಿ ಆಯ್ತು’ ಅಂತ ಸರ್ಟಿಫಿಕೇಟ್ ಕೊಟ್ಟ. ಹಾಗಾದರೆ ನಂಬಿಕೆ, ಅಧಿಕೃತತೆಯ ಮಾನದಂಡ ಏನು? ವೈಯಕ್ತಿಕ ವಿಶ್ವಾಸಕ್ಕಿಂತ ಕಂಡು ಕೇಳಿಲ್ಲದ ಮುಖಗಳ ಮಾತೇ ಪ್ರಮಾಣವಾಗುತ್ತದಲ್ಲ, ಯಾಕೆ? ಅವತ್ತು ಗಾಸಿಪ್ ನಂಬಿ ನೋವು ಕೊಟ್ಟವರು ನಂಬಿದ್ದೂ ಇಂಥವೇ ಸಾಕ್ಷಿಗಳನ್ನು. ವ್ಯಕ್ತಿಯನ್ನು ಸ್ವಂತ ಅನ್ನಿಸಿಕೆ, ಅಳತೆಯಿಂದ ತೂಗಿ ನೋಡಲು ಸಾಧ್ಯವೇ ಇಲ್ಲವಾ? ಯಾರನ್ನ ಕೇಳುವುದು?
ಇಷ್ಟಕ್ಕೂ ಇಲ್ಲಿ ಆ ಹುಡುಗ, ಅಗ್ಗದ ಸಾಕ್ಷಿಗಳನ್ನು ನಂಬುವ ಮನಸ್ಥಿತಿಗಳ ಪ್ರತಿನಿಧಿ ಮಾತ್ರ...

ಕೃಪೆ: ಸಂಪಾದಕೀಯ ಬ್ಲಾಗ್ ಗೆ ಚೇತನಾ ತೀರ್ಥಳ್ಳಿ ಬರೆದ ಪತ್ರ

ಕ್ಯಾಫ್ಟನ್ ರಂಗನ ಮೇಜರ್ ದುರಂತ !

ಅಯ್ಯೋ ಯಾಕೆ ಹೀಗಾಯ್ತು? ರಂಗ ಬಿಡ್ತಾರೆ ಅನ್ನೋ ಸುದ್ದಿಯನ್ನು ಮಾಡಲು ಸ್ಫೋಟಿಸಿದ್ದೆ ಮೀಡಿಯಾಮನ. ಬಹುಷಃ ನೀವು ಬೇರಾವುದೋ ಕೆಲಸದಲ್ಲಿ ಬ್ಯುಸಿ ಆಗಿರಬೇಕು ಅನ್ಸುತ್ತೆ. ಅದ್ಕೆ ನನಗೆ ಸಿಕ್ಕ ಅಧಿಕೃತ ಮಾಹಿತಿಯನ್ನು ಪೋಸ್ಟ್ ಮಾಡುತ್ತಿದ್ದೇನೆ. ಸಾಧ್ಯವಾದರೆ ಬಳಸಿಕೊಳ್ಳಿ.

ಕ್ಯಾಪ್ಟನ್ ರಂಗನ ಕಪ್ತಾನಗಿರಿ ಮುಗಿದಿದೆ. ಅವರ ಸರ್ವಾಧಿಕಾರಿ ಧೋರಣೆಗೆ ಪೆಟ್ಟು ಬಿದ್ದಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ರಂಗ ಹಾಗೂ ಶಿವಸ್ವಾಮಿ ಎಂಬುವರನ್ನು ಕರೆದ ಮ್ಯಾನೇಜ್ಮೆಂಟ್ `ನಿಮ್ಮಿಂದ ಕಚೇರಿ ವಾತಾವರಣ ಹಾಳಾಗುತ್ತಿದೆ. ಇದೆಲ್ಲ ಸರಿಯಲ್ಲ' ಎಂದು ಎಚ್ಚರಿಸಿದೆ. ಅದರೂ ರಂಗ ತಮ್ಮ ಸರ್ವಾಧಿಕಾರಿ ಧೋರಣೆ ಬದಲಿಸಿಕೊಳ್ಳಲಾರದೆ ಎಲ್ಲರನ್ನೂ ಏಕವಚನದಲ್ಲಿ ಬಯ್ಯುತ್ತ, ಸಿಟ್ಟು ಮಾಡಿಕೊಳ್ಳುತ್ತ ನಂಗೆ ಇದೆಲ್ಲ ಬೇಡ ಎಂದು ಚೇಮ್ಬರಿನ ಬಾಗಿಲು ಹಾಕಿ ಮನೆ ದಾರಿ ಹಿಡಿಯುತ್ತಿದ್ದರು.

ಆದರೆ ಇಂದು ಮ್ಯಾನೇಜ್ಮೆಂಟ್ ನವರೇ ಹೋಗಿ, ನಿಮ್ಮ ಸಹವಾಸ ಸಾಕು ಎಂದರೂ `ಹೊಸ ಸಂಪಾದಕರು ಬರುವವರೆಗೆ ಇರುತ್ತೇನೆ' ಎನ್ನುತ್ತಿದ್ದಾರಂತೆ. ಇದೆಂಥ ವಿಪರ್ಯಾಸ! ಅಲ್ಲದೆ ರಂಗ ಅವರು ತಮ್ಮ ಸಹೋದ್ಯೋಗಿಗಳ ಬಳಿ `ನಂಗೆ ಆರೋಗ್ಯ ಚೆನ್ನಾಗಿಲ್ಲ. ಅದ್ಕೆ ನ್ಯೂಸ್, ಪ್ರೋಗ್ರಾಮ್ಸ್ ಮಾತ್ರ ನೋಡ್ಕೋತೀನಿ. ಆಡಳಿತ ನಿರ್ವಹಣೆ ನನ್ನಿಂದ ಸಧ್ಯ ಇಲ್ಲ ಅಂತ ಮ್ಯಾನೇಜ್ಮೆಂಟ್ ಗೆ ಹೇಳಿದೀನಿ. ನಾನೆಲ್ಲೂ ಹೋಗಲ್ಲ' ಅಂತ ಪುಂಗಿ ಊದುತ್ತಿದ್ದಾರಂತೆ.

ಇದನ್ನೆಲ್ಲಾ ಕೇಳಿಸಿಕೊಂಡ ಮ್ಯಾನೇಜ್ಮೆಂಟ್ `ಅವ್ರ ಆರೋಗ್ಯ ಸರಿ ಇಲ್ಲ ಅಂತಾನೆ ಅವ್ರಿಗೆ ರಾಜೀನಾಮೆ ಕೊಡಿ ಅಂದ್ವಿ. ಅವ್ರು ಒಪ್ಪಲಿಲ್ಲ. ಆದ್ದರಿಂದ ರಂಗ ಅವರನ್ನು ಹಲವು ಕೆಲಸಗಳಿಂದ ಮುಕ್ತಿಗೊಳಿಸಿದ್ದೇವೆ. ಅವರು ಇನ್ಮುಂದೆ ಕೇವಲ ಸಂಪಾದಕೀಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. ಅವರು ಜುಗಲ್ಬಂದಿ ಹಾಗೂ ಪಬ್ಲಿಕ್ ವಾಯ್ಸ್ ಕಾರ್ಯಕ್ರಮ ಮಾತ್ರ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಕರೆಸುವ ಜವಾಬ್ದಾರಿಯನ್ನು ನಾಲ್ಕೈದು ದಿನಗಳಲ್ಲಿ ರಚನೆಯಾಗಲಿರುವ ಕೋರ್ ಕಮಿಟಿ ಮಾಡಲಿದೆ. ಅಂದರೆ ಕ್ಯಾಪ್ಟನ್ ರಂಗ ಅವ್ರು ಕೇವಲ ಕಾರ್ಯಕ್ರಮ ನಿರೂಪಕರು ಮಾತ್ರ!' ಎಂದು ಮ್ಯಾನೇಜ್ಮೆಂಟ್ ಸ್ಪಷ್ಟವಾಗಿ ಹೇಳಿದೆ.

ಮುಂದಿನ ಬದಲಾವಣೆ ವರೆಗೆ ನಿರೂಪಕ ಹಮೀದ್ ಪಾಳ್ಯ ಸಂಪಾದಕೀಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಂಗ ಅವರು ಇತ್ತೀಚಿಗೆ ಹತಾಶೆಗೆ ಒಳಗಾಗಿದ್ದರಾ? ಅವರು ವರ್ತಿಸುತ್ತಿದ್ದ ರೀತಿ ನೋಡಿದರೆ ಹೌದು ಎನ್ನುತ್ತಾರೆ ಸುವರ್ಣ ನ್ಯೂಸ್ ನ ಹಲವರು. ಟಿವಿ ೯ ನಲ್ಲಿ ವಿಶೇಷ ವರದಿ ಬಂದರೂ ಅದು ನಮ್ಮಲ್ಲಿ ಯಾಕೆ ಬರಲಿಲ್ಲ ಎಂದು ದಬಾಯಿಸುತ್ತಿದ್ದರಂತೆ. ಅವರ ಅಧಿಕಾರಾವಧಿಯ ಆರಂಭದಿಂದ ಕೊನೆವರೆಗೂ ಅವರು ಟಿವಿ ೯ ಅನ್ನು ಯಶಸ್ವಿಯಾಗಿ ಅನುಕರಣೆ ಮಾಡಿದರು. ಎರಡು ವಾರದ ಹಿಂದೆ ಸುವರ್ಣ ನ್ಯೂಸ್ ಪಿಸಿಆರ್ (ಪ್ಯಾನೆಲ್ ಕಂಟ್ರೋಲ್ ರೂಂ) ನಲ್ಲಿದ್ದ ಇಬ್ಬರ ಮೇಲೆ ಹಲ್ಲೆಯನ್ನೂ ನಡೆಸಿದ್ದರಂತೆ ರಂಗ. ಇದನ್ನು ತಿಳಿದ ಮ್ಯಾನೇಜ್ಮೆಂಟ್ ಅವರಿಂದ ರಾಜೀನಾಮೆ ಪಡೆಯಲು ಮುಂದಾಯಿತು.

ಇದೇನೇ ಇರಲಿ. ರಂಗ ಮತ್ತು ರವಿ ಹೆಗ್ಡೆ ಕಳೆದ ಒಂದೂವರೆ ವರ್ಷದಲ್ಲಿ ಸುವರ್ಣ ನ್ಯೂಸ್ ನಲ್ಲಿ ಮಾಡಬಾರದ ಎಲ್ಲ ಅನಾಹುತಗಳನ್ನೂ ಮಾಡಿದ್ದಾರೆ. *(ಕಳೆದ ಒಂದೂವರೆ ತಿಂಗಳಿನಿಂದ ರವಿ ಹೆಗ್ಡೆ ಉದಯವಾಣಿ ಸಂಪಾದಕರು.) ಮುಖ್ಯವಾಗಿ ಹೇಳುವುದಾದರೆ, ವೇತನ ತಾರತಮ್ಯ. ರವಿ ಹೆಗ್ಡೆ ಎಲ್ಲ ಮಹಿಳಾ ಆಂಕರ್ ಗಳ ಸಂಬಳವನ್ನು ಹೆಚ್ಚಿಸಿದರು. ಆದರೆ ಇತರ ಮಹಿಳಾ ಸಿಬ್ಬಂದಿಗೆ metarnity ರಜೆಯ ಸಂಬಳ ಕೊಡುವುದಕ್ಕೂ ನಿರಾಕರಿಸಿದ ಉದಾಹರಣೆಗಳಿವೆ. ಯಾಕೆ ಈ ತಾರತಮ್ಯ?

ರಂಗ ಅವರಂತೂ ತಮ್ಮವರಿಗೆ ಅಂದರೆ ಲಾಬಿ ಮಾಡುವವರಿಗೆ, ಬಕೆಟ್ ಹಿಡಿಯುವವರಿಗೆ, ಭ್ರಷ್ಟಾಚಾರ ಮಾಡುವವರಿಗೆ ಮನಸೋ ಇಚ್ಛೆ ವೇತನ ಹೆಚ್ಚಿಸಿದರು. ಸಂಬಳ ಹೆಚ್ಚಿಸಿಕೊಳ್ಳಬೇಕು ಎನಿಸಿದವರೆಲ್ಲ ಅವರಿಗೆ ಕಚೇರಿ ಒಳಗಿನ, ಹೊರಗಿನ ಮಾಹಿತಿಗಳನ್ನು ನೀಡುತ್ತ, ತನಗೆ ಬೇರೆ ಚಾನಲ್ ನಿಂದ ಆಫರ್ ಇದೆ ಎಂದರೆ ಸಾಕು. ಇಲ್ಲ, ನೀನೆಲ್ಲೂ ಹೋಗಬೇಡ. ಸಂಬಳ ಜಾಸ್ತಿ ಮಾಡ್ತೀನಿ ಎಂದು ಅದೇ ತಿಂಗಳಲ್ಲೇ ಸ್ಯಾಲರಿ ಹೆಚ್ಚಿಸುತ್ತಿದ್ದರು.

ಕೆಲವರಿಗಂತೂ ಆರು ತಿಂಗಳಲ್ಲಿ ಮೂರು ಬಾರಿ ಸಂಬಳ ಹೆಚ್ಚಳವಾದ ಉದಾಹರಣೆಗಳೂ ಇವೆ. ಆರು ತಿಂಗಳ ಹಿಂದೆ 25 ಸಾವಿರ ರೂ. ಪಡೆಯುತ್ತಿದ್ದವರು ಈಗ 45 ಸಾವಿರ ರೂ. ಪಡೆಯುತ್ತಿದ್ದಾರೆ! ಆರಂಭದಿಂದಲೂ ಇಲ್ಲೇ ಇರುವ ಕೆಲವರ ಸಂಬಳ 12 ಸಾವಿರವೂ ದಾಟಿಲ್ಲ. ಕೆಲ ಕಾಪಿ ಎಡಿಟರ್, ರಿಪೋರ್ಟರ್ ಗಳು ಈಗಲೂ 6 ರಿಂದ 8 ಸಾವಿರ ಸಂಬಳ ಪಡೆಯುತ್ತಿದ್ದಾರೆ. ಅದೇ ಸುವರ್ಣ ನ್ಯೂಸ್ ಗೆ ಕನ್ನದಪ್ರಭದಿಂದ ವರ್ಷದ ಹಿಂದಷ್ಟೇ ಬಂದ ಕೆಲವರು 38000, 45000 ರೂ. ಸಂಬಳ ಪಡೆಯುತ್ತಿದ್ದಾರೆ. ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿರುವ ನಿಷ್ಠಾವಂತರಿಗೆ ಉಂಡೆ ನಾಮ ಹಾಕುವಲ್ಲಿ ರಂಗ ಯಶಸ್ವಿಯಾಗಿದ್ದಾರೆ.

ಇನ್ನೂ ಒಂದು ಸೋಜಿಗವಿದೆ- ಸುವರ್ಣ ನ್ಯೂಸ್ ಪತ್ರಿಕೆಗೆ ಅಂತಾ ಕನ್ನದಪ್ರಭದಿಂದ ಬಂದ 15 ಕ್ಕೂ ಹೆಚ್ಚು ಮಂದಿಗೆ 20000 , 40000 ಸಂಬಳ ನೀಡಲಾಗಿತ್ತು. ಕೆಲಸವೇ ಇಲ್ಲದೆ ಅವರೆಲ್ಲ ಓತ್ಲಾ ಹೊಡೆಯುತ್ತ ಸಂಬಳ ಎಣಿಸುತ್ತಿದ್ದರು. ಇದನ್ನೆಲ್ಲಾ ಮಾಡಿದ್ದು ರಂಗ ಮತ್ತು ರವಿ ಹೆಗ್ಡೆ. *(ಈಗ ಅದೇ ರವಿ ಹೆಗ್ಡೆ ಉದಯವಾಣಿಯಲ್ಲಿ ಸುವರ್ಣ ನ್ಯೂಸ್ ನಿಂದ ಬಂದವರಿಗೆ ಅಷ್ಟು ಸಂಬಳ ಕೊಡಿಸಲಾಗದೆ ಒದ್ದಾಡುತ್ತಿದ್ದಾರೆ ಎಂಬುದು ಬೇರೆ ಮಾತು.) ಕಾರ್ಯಕ್ಷಮತೆ ನೋಡಿ ಸಂಬಳ ಕೊಡಬೇಕೇ ಹೊರತು ಲಾಬಿ, ಬಕೆಟ್ ಹಿಡಿಯುವವರಿಗೆಲ್ಲ ಮನಬಂದಂತೆ ಸಂಬಳ ಕೊಟ್ಟರೆ ಹೇಗೆ? ಸುವರ್ಣ ನ್ಯೂಸ್ ನಲ್ಲಿ ರಂಗ ಮಾಡಿರುವ ಅನಾಹುತ ಸರಿಪಡಿಸಲು ವರ್ಷವೇ ಬೇಕಾದೀತು.
ಕೃಪೆ: ಮೀಡಿಯಾ ಮನ

ಮಾಡಿದಮೇಲೆ ಕಂಡೆ ಕಾಣುತ್ತೆ ಬಿಡಿ!

ಸಂಪಾದಕೀಯ ಬ್ಲಾಗ್ ಯಾರದ್ದು?

ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಕೆಲವೇ ದಿನಗಳಲ್ಲಿ ನಿಮಗೆ ತಿಳಿಸುತ್ತೇವೆ.
ಹೇಗೆ ಅಂತೀರಾ?

ಅದಕ್ಕಾಗಿ ನೀವು ತುಸು ಕಾಯಬೇಕು. ಏನಂತೀರಾ?

ಎಲ್ಲರ ತನಿಖೆ ಮಾಡುವ, ತಾವೇ ಮಾಧ್ಯಮಲೋಕದ ಪರಮ ಪ್ರಚಂಡರು ಎಂಬಂತೆ ಪೋಸು ಕೊಡುವ ಇವರು ಯಾರು ಎಂಬುದನ್ನು ತಿಳಿದುಕೊಳ್ಳುವುದು ಬೇಡವಾ?
ಇವರ ತನಿಖೆಯನ್ನೂ ಮಾಡೋಣ..
.
ಇವರು ಈಗಾಗಲೇ ಬೃಹಸ್ಪತಿಗಳು. ಇವರು ಯಾರ ಮೇಲೆ ಬೇಕಾದರೂ ಕಾಮೆಂಟ್ ಮಾಡಬಲ್ಲರು. ಎಲ್ಲರೂ ಇವರಿಗೆ ಕಿವಿ ಹಿಂಡಿಸಿಕೊಳ್ಳಲು ಅನುಮತಿ ಕೊಟ್ಟುಬಿಟ್ಟಿದ್ದಾರೆ. ಹಾಗಿದೆ ಇವರ ಧೋರಣೆ !

ನಿಮ್ಮ ಕುತೂಹಲ ತಣಿಸಲು ನಾವು ಸಿದ್ಧ. ಆರ್ ಯು ರೆಡಿ ?
( ಕೃಪೆ :ಸುದ್ದಿರಂಗ ಬ್ಲಾಗ್ )

....................

ಏನೇನ್ ಮಾಡ್ತೀವಿ ನೋಡ್ತಾ ಇರಿ!

ಹಾಗಂತ ಕಪ್ರ ಜಾಹೀರಾತು ಪ್ರಕಟಿಸುತ್ತಿದೆ. ಜಾಹೀರಾತುಗಳೇನೋ ಚೆನ್ನಾಗಿವೆ. ಆದರೆ ಪತ್ರಿಕೆಯಲ್ಲಿ ತುಂಬಾ ಹೊಸದೇನು ಕಾಣುತ್ತಿಲ್ಲ. ಒಂದೆರಡು ಅಂಕಣಕಾರರು, ಸ್ವಲ್ಪ ವಿನ್ಯಾಸದಲ್ಲಿ ಬದಲಾವಣೆ ಹೊರತುಪಡಿಸಿ ಹೊಸದೇನು ಓದುಗರಾದ ನಮಗೆ ಕಂಡಿಲ್ಲ.

ಹೀಗಾಗಿ ನಮ್ಮ ದ್ರಷ್ಟಿಯಲ್ಲಿ ಏನೇನ್ ಮಾಡ್ತೀವಿ ನೋಡ್ತಾ ಇರಿ ಎಂಬುದು ಸ್ವಲ್ಪ ಧಿಮಾಕಿನ ಮಾತು. ಪತ್ರಿಕೆಯಲ್ಲಿ ಏನೇ ಹೊಸತು ಮಾಡಿದರು ಎಲ್ಲರಿಗು ಕಾಣುತ್ತದೆ. ಕಂಡಾಗ ನೋಡುತ್ತಾರೆ. ಅದು ಬಿಟ್ಟು ಏನೇನ್ ಮಾಡ್ತೀವಿ ನೋಡ್ತಾ ಇರಿ!ಅಂದ್ರೆ?

ನಮಗೇನು ಅದೇ ಕೆಲಸಾನ? ಕಪ್ರ ದವರು ಏನು ಮಾಡಿದ್ರು? ಅದ್ರಲ್ಲಿ ಹೊಸದೇನು? ಎಂದು ಹುಡುಕ್ತಾ ಕೂತ್ಕೊಬೇಕ?

ಜನಕ್ಕೆ ಅದೆಲ್ಲ ಬೇಕಾಗಿಲ್ಲ. ಬೆಳಗ್ಗೆದ್ದು ಪೇಪರ್ ಓದುವಾಗ ಅದು ಇಷ್ಟವಾಗಬೇಕು. ಆಸಕ್ತಿಕರವಾಗಿ ಓದಿಸಿಕೊಂಡು ಹೋಗಬೇಕು. ಆಕರ್ಷಕವಾಗಿರಬೇಕು. ಇಷ್ಟೇ. ಅದು ಬಿಟ್ಟು ನೀವು ಏನೇನ್ ಮಾದಿದ್ರು ನೋಡ್ತಾ ಇರೋಕೆ ಜನಕ್ಕೆ ಪುರುಸೊತ್ತಿಲ್ಲ.

ಗೊತ್ತಾಯ್ತ ಸ್ವಾಮಿ ಸಂಪಾದಕರೆ?

ಸ್ವಲ್ಪ ಧಿಮಾಕು ಕಡಿಮೆ ಮಾಡ್ಕೊಳ್ಳಿ. ಅದು ಆರೋಗ್ಯಕ್ಕೆ ಒಳ್ಳೇದಲ್ಲ.
ಕೃಪೆ: ಮೀಡಿಯಾ ಮನ