ನಿಲುಮೆ ಬ್ಲಾಗ್ನಲ್ಲಿ ಪ್ರಕಟವಾದ ಪೋಸ್ಟ್ ಇಲ್ಲಿ ಪ್ರಕಟಿಸಿದ್ದೇವೆ.
ಇದಕ್ಕೆ ಮುನ್ನ
http://new-mediablog.blogspot.com/
ನೋಡಿ ಪತ್ರಕರ್ತರ ಬಗ್ಗೆ ತಿಳಿಯಿರಿ
ಇಂತದ್ದೊಂದು ತಲೆಬರಹ ಕೊಡುವುದೇ ಅಷ್ಟು ಚಂದ ಕಾಣುತ್ತಿಲ್ಲ,ಆದರೇನು ಮಾಡುವುದು ನಡೆದ ವಿಷಯವನ್ನ ಹೇಳ ಹೊರಟಾಗ ಹೀಗೆ ಆಗುತ್ತದೆ. ಕಳೆದ ತಿಂಗಳ ೨೭ರಂದು ಅರೆಹೊಳೆ ಸದಾಶಿವ ರಾವ್ ಅವರ ’‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು’ ಲೇಖನ ಹಾಗೆ ೨೫ರಂದು ರಶ್ಮಿ ಕಾಸರಗೋಡು ಅವರ ’‘ಎಂಡೋ ನಿಷೇಧಿಸಿ’ – ಶರದ್ ಪವಾರ್ ಗೊಂದು ಬಹಿರಂಗ ಪತ್ರ’ ಅನ್ನುವ ಲೇಖನವನ್ನ ನಿಲುಮೆಯ ಓದುಗರೆಲ್ಲ ನೋಡಿಯೆ ಇರುತ್ತೀರಿ. ಕಳೆದ ೨೮ರಂದು ’ಕರಾವಳಿ’ಯ ಪತ್ರಿಕೆಯೊಂದು ಏಕಾಏಕಿ ಲೇಖಕ/ನಿಲುಮೆಯ ಅನುಮತಿಯಿಲ್ಲದೆ ಈ ಲೇಖನಗಳನ್ನ ಕದ್ದಿದ್ದು ಅಲ್ಲದೇ ಕಡೆ ಪಕ್ಷ ಕೃಪೆ ಅಂತಲೂ ಹಾಕದೇ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ’ಕರಾವಳಿ’ಯ ಜನರಿಗೆ ಹಂಚಿದೆ.(ಆ ಪತ್ರಿಕೆಯ ಹೆಸರಿಗೆ ನಮ್ಮಿಂದ ಸ್ವಲ್ಪವು ಧಕ್ಕೆ ಬಾರದಿರಲಿ ಅನ್ನುವ ಏಕೈಕ ಉದ್ದೇಶದಿಂದ ಆ ಪತ್ರಿಕೆಯ ಹೆಸರನ್ನ ನೇರವಾಗಿ ಬರೆಯುತ್ತಿಲ್ಲ).
ಹಿಂದೊಮ್ಮೆ ರಾಕೇಶ್ ಶೆಟ್ಟಿಯವರ ‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !? ಅನ್ನುವ ಲೇಖನವನ್ನ ಮೈಸೂರು ಮೂಲದ ಯುವರಾಜಕಾರಣಿಯೊಬ್ಬರು ಕದ್ದಿದ್ದು ಅಲ್ಲದೇ ಅವರ ಹೆಸರನ್ನ ತೆಗೆದು ತನ್ನದೇ ಹೆಸರು/ಪೋಟೋ ಹಾಕಿಕೊಂಡಿದ್ದರು.ಕಡೆಗೆ ಎಚ್ಚರಿಸಿದ ಮೇಲೆ ತಪ್ಪಾಯಿತು ಅಂದಿದ್ದರು.ಅವ್ರಿಗೇನೋ ಬೌದ್ದಿಕ ಹಕ್ಕು ಅನ್ನುವುದೆಲ್ಲ ತಿಳಿದಿರಲಿಕ್ಕಿಲ್ಲ ಅಂದುಕೊಳ್ಳೋಣ.ಆದರೆ,ಕಂಡೋರಿಗೆಲ್ಲ ಬುದ್ದಿ ಹೇಳೊ ಪತ್ರಿಕೆಯವರಿಗೆ ಬೌದ್ದಿಕ ಹಕ್ಕು ಅನ್ನುವುದರ ಅರಿವಿಲ್ಲವೇ? ಈ ಇಬ್ಬರೂ ಲೇಖಕರು ಬೇರೊಂದು ಪತ್ರಿಕೆಗೆ ಬರೆಯುವವರು ಅದನ್ನ ಅನುಮತಿಯಿಲ್ಲದೆ ಪ್ರಕಟಿಸುವುದು ಪತ್ರಿಕಾ ಧರ್ಮವಲ್ಲ ಅನ್ನುವುದನ್ನ ನಾವು ಹೇಳಿಕೊಡಬೇಕಾ? ಸದಾಶಿವ ರಾವ್ ಅವರು ಆ ಪತ್ರಿಕೆಗೆ ಈ ಬಗ್ಗೆ ಪತ್ರ ಬರೆದು ಕೇಳಿದಾಗ ’ಇನ್ಮುಂದೆ ಈ ರೀತಿ ಆಗುವುದಿಲ್ಲ,ತಪ್ಪಾಗಿದೆ’ ಅಂದಿದ್ದಾರೆ.ಆದರೆ ರಶ್ಮಿಯವರು ಕರೆ ಮಾಡಿದರೂ ಸರಿಯಾಗಿದೆ ಉತ್ತರಿಸದೆ ನಿರ್ಲಕ್ಷಿಸಿದ್ದಾರೆ…! ಇದೆಂತ ಉದ್ಧಟತನ?
ವಿಷಯ ಹೆಚ್ಚು ಜನರಿಗೆ ತಲುಪಿಸುವ ಉದ್ದೇಶವೇನೋ ಒಳ್ಳೆಯದೇ,ಆದರೆ ಅದಕ್ಕೊಂದು ನೀತಿ-ರೀತಿ ಅನ್ನುವುದು ಇರುತ್ತದೆ.ಇದು ಕೇವಲ ಈ ಪತ್ರಿಕೆಯೊಂದರ ಚಾಳಿಯಲ್ಲ ಕೆಲವೊಂದು ಪತ್ರಿಕೆಗಳು ಈ ಹಿಂದೆ ಹೀಗೆ ಮಾಡಿರುವ ಉದಾಹರಣೆಗಳು ನಮಗೆ ಹಲವು ಬ್ಲಾಗುಗಳಲ್ಲಿ ಸಿಗುತ್ತವೆ.ಇನ್ಮುಂದಾದರೂ ಪತ್ರಿಕೆಗಳು ಪತ್ರಿಕಾ ಧರ್ಮವನ್ನ ಪಾಲಿಸಲಿ ಅನ್ನುವುದು ನಮ್ಮ ಆಶಯ.ಇಲ್ಲದಿದ್ದರೇ ಬುದ್ದಿ ಹೇಳೊ ಮಾಧ್ಯಮದ ಮಂದಿಯ ಬುದ್ದಿ ಎಲ್ಲಿದೆ ಅಂತ ಜನ ಕೇಳುವಂತಗಾಬಾರದು ನೋಡಿ…!
ಸದಾಶಿವ ರಾವ್ ಅವರು ’ಆ’ ಪತ್ರಿಕೆಗೆ ಬರೆದೆ ಪತ್ರವಿಲ್ಲಿದೆ.
ಪ್ರೀತಿಯ ಸ೦ಪಾದಕರಿಗೆ
ಅರೆಹೊಳೆ ಸದಾಶಿವ ರಾವ್ ಮಾಡುವ ನಮಸ್ಕಾರಗಳು
ದಿನಾ೦ಕ ೨೮.೦೪.೨೦೧೧ರ ತಮ್ಮ ಸ೦ಚಿಕೆಯಲ್ಲಿ ಪ್ರಕಟಿಸಿದ ನನ್ನ ಲೇಖನದ ಬಗ್ಗೆ ಬರೆಯಬೇಕಾದ ಅನಿವಾರ್ಯತೆ ಬ೦ತು.
ಮೊದಲಾಗಿ ನೀವು ‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು ಎ೦ಬ ನನ್ನ ಲೇಖನವನ್ನು ನನ್ನ ಅನುಮತಿ ಅಥವಾ ಅವಾಗಾಹನೆಗೆ ತರದೇ ಪ್ರಕಟಿಸಿದ್ದು ಬೇಸರವೆನಿಸಿತು. ಮತ್ತೆ ಲೇಖನದ ಪೂರ್ಣ ಪಾಠ ಪ್ರಕಟಿಸದೆ, ಲೇಖನದ ಒಟ್ಟು ಆಶಯ ಅಸ್ಪಷ್ಟ ವಾಗುವ೦ತೆ ಮಾಡಿದ್ದಿರಿ. ಲೇಖನದ ಶಿರ್ಶಿಕೆಗು ನೀವು ಪ್ರಕಟಿಸಿರುವ ‘ತು೦ಡು ಲೇಖನ’ ಕ್ಕೂ ಎಲ್ಲಿಯೂ ಸ೦ಬ೦ಧವೇ ಇಲ್ಲದ೦ತಾಗಿದೆ.
ಇನ್ನು ಒ೦ದು ಮುಖ್ಯ ವಿಚಾರವೆ೦ದರೆ, ನಾನು ನೇರವಾಗಿ ಅ ಲೇಖನವನ್ನು ತಮಗೆ ಕಳುಹಿಸಿರಲಿಲ್ಲ. ಅದು ನಾನು ನಿಯಮಿತವಾಗಿ ಬರೆಯುವ ಪತ್ರಿಕೆ ಹಾಗು ನಿಲುಮೆಗೆ ಅ೦ಕಣಕ್ಕೆ೦ದು ನಾನು ಸಿದ್ದ ಪಡಿಸಿದ ಲೇಖನ. ನನ್ನ ಅನಿಸಿಕೆಯ೦ತೆ ನೀವು ಅದನ್ನು ನಿಲುಮೆಯ ಮೂಲಕ ತೆಗೆದುಕೊ೦ಡಿದ್ದೀರಿ. ತಾವು ನಿಲುಮೆಯ ಕ್ರಪೆಯನ್ನು ಆ ಲೇಖನದಲ್ಲಿ ನಮುದಿಸಿದ್ದರೆ, ಈ ಯಾವ ಗೊ೦ದಲಗೂ ಉದ್ಭವಿಸುತ್ತಿರಲಿಲ್ಲವಾಗಿತ್ತು. ಅದನ್ನು ನೀವು ಮಾಡದ್ದು ಮತ್ತೊ೦ದು ಬೇಸರದ ವಿಚಾರ.
ಯಾವುದೇ ಪ್ರಕರಣವನ್ನು ಎಳೆಯುವುದು ನನಗಿಷ್ಟವಿಲ್ಲ. ಆದರೆ ತಾವು ಈ ವಿಷಯದಲ್ಲಿ ಪತ್ರಿಕಾ ಧರ್ಮವನ್ನು ನಿರ್ಲಕ್ಷಿಸಿದ್ದಿರಿ ಎ೦ಬುದು ಕ೦ಡು ಬರುತ್ತದೆ . ಇನ್ನು ಮು೦ದೆ ಇ೦ತಹಾ ಯಾವುದೇ ಬರಹಗಳನ್ನು ಬೇರೆಡೆಯಿ೦ದ ತೆಗೆದುಕೊ೦ಡಲ್ಲಿ, ದಯವಿಟ್ಟು ಅನುಮತಿಯೊ೦ದಿಗೆ ಅಥವಾ ಕನಿಷ್ಠ ಯಾರ ಕ್ರಪೆಯೆ೦ಬ ವಿಷಯದೊ೦ದಿಗೆ ಪ್ರಕಟಿಸುವಿರಾಗಿ ಭಾವಿಸುತ್ತೇನೆ.
ನಿಮ್ಮ ಉತ್ತರದ ನಿರಿಕ್ಷೆಯಲ್ಲಿರುತ್ತೇನೆ.
3 comments:
ಚೆನ್ನಾಗಿ ಹೇಳಿದ್ರಿ... ಫೋಟೊಗ್ರಾಫರ್ ಗಳ ಬಗ್ಗೆ ಬರೆದ್ರಿ.. ಇನ್ನು ಪತ್ರಕರ್ತರ ಬಗ್ಗೆ. ಚರ್ಚ್ ದಾಳಿ ಆಗುವಾಗ ಕಲ್ಲು ಹೊಡೆಯುತ್ತಿದ್ದ ಫೋಟೊಗ್ರಾಫರ್, ಪತ್ರಕರ್ತರ ಹೀನ ಕೆಲಸದ ಬಗ್ಗೆ ಸ್ವಲ್ಪ ವಿವರ ಕೊಡಿ;
ವಿವೇಕ್ ಪಾಯಸ್, ಬೊಂದೇಲ್..
ರಾಮಮೂರ್ತಿ, ಹಳೆಯಂಗಡಿ
..
ನೀವು ರಾಮನ ಬಗ್ಗೆ ಬರೆಯುತ್ತೇನೆ ಹೇಳಿ ಕೃಷ್ಣ ಲೀಲೆ ಬಗ್ಗೆ ಬರೆಯುತ್ತಿದ್ದೀರಿ, ನೀವು ಕೃಷ್ಣನ ಹಾಗೆ ಮಾಡಿಲ್ವಾ? ಪರ್ಸನಲ್ ವಿಚಾರಗಳ ಬಗ್ಗೆ ಬರೆಯುವುದು ಸರಿ ಇಲ್ಲ. ನಿಮ್ಮ ಹೆಸರು ಹಾಕದೆ ಈ ರೀತಿ ಬ್ಲಾಗ್ ಮಾಡುವುದೇ ತಪ್ಪು. ಅವರು ತಪ್ಪು ಮಾಡಿದ್ದರೂ ನೀವು ಹೀಗೆ ಹೇಳಲು ನೈತಿಕ ಹಕ್ಕಿಲ್ಲ.
krishna kumar-
nice niroopne... holike.. but innomme helutene antha heli, post hakuttilla. sareena ?
Post a Comment