Sunday

ಪಜೆವಾಣಿ ಮಹೀ ಪಡೆ ಹಿಟ್ 'ವಿಕೆ' ಟ್


ವಿಕೆಯನ್ನು ಮಣ್ಣು ಮುಕ್ಕಿಸುತ್ತೇನೆ, ತಿಂಗಳ ಒಳಗೆ ಸರ್ಕುಲೇಶನ್ ೨೫ ಸಾವಿರ ಮಾಡಿ ತೋರಿಸುತ್ತೇನೆ ಎಂದು ಮುನ್ನುಗ್ಗುತ್ತಿದ್ದ ಮಂಗಳೂರು ಪಜೆವಾಣಿ ಚೀಪ್ ಬ್ಯೂರೊ ಈಗ ಪಜೆ ಹಾಕಿ ಮಲಗಿದ್ದಾರೆ ! ವಿಕೆಗಿಂತ ಮೊದಲು ಎಡಿಶನ್ ಆರಂಭಿಸಿದರೂ ಅದರ ಹತ್ತನೇ ಒಂದು ಅಂಶ ಮಾತ್ರ ಪ್ರಸರಣ ಇರುವ ಬಗ್ಗೆ ಚಿಂತಿತರಾಗಿದ್ದ ಆಡಳಿತ ಮಂಡಳಿಗೆ ಭರವಸೆ ಮಹಾಪೂರ ನೀಡಿದ್ದೇ ವಿಕೆಯ ಮಾಜಿ ಉದ್ಯೋಗಿ ಮಹಿ. ಮಂಗಳೂರಿನ ವಿಕೆಯನ್ನು ಮಲಗಿಸಿ ಪಜೆವಾಣಿ ಪ್ರಸರಣವನ್ನು ಹೇಗಾದರೂ ಮಾಡಿ ಮೇಲೆತ್ತುತ್ತೇನೆ ಎಂದು ಮ್ಯಾನೇಜ್ ಮೆಂಟ್ ಗೆ ಭರವಸೆ ನೀಡಿದ್ದ ಮಹಿ ಪಡೆಯ ಸಾಮ್ರಾಜ್ಯ ಈಗ ಅವನತಿಯಲ್ಲಿದೆ.
ಪ್ರತಿ ದಿನ ವಿಕೆ ನೋಡಿ ಈ ಸುದ್ದಿ ಬಂದಿಲ್ಲ. ಆ ಸುದ್ದಿ ಬಂದಿಲ್ಲ ಎಂದು ಗ್ರಾಮೀಣ ಮತ್ತು ನಗರ ಸುದ್ದಿಗಾರರ ಬೆಂಡೆತ್ತುತ್ತಿದ್ದ ಪರಾಕ್ರಮ ಕಂಡೇ ಸಿಬ್ಬಂದಿ ಇವರಿಗೆ ಭಸ್ಮಾಸುರ ಎಂದು ಹೇಳಿ ತೃಪ್ತಿ ಪಟ್ಟುಕೊಳ್ಳುತ್ತಿದ್ದರು. ಒಂದಿಬ್ಬರು ಹೊಸ ಮುಖಗಳಿಗೆ ಮಣೆ ಹಾಕಿ ಸೀನಿಯರ್ ಗಳನ್ನು ದೂರ ಇಟ್ಟು ಎಲ್ಲ ಬ್ಯೂರೋ ಚೀಫ್ ಗಳ ಚೀಪ್ ಮೆಂಟಾಲಿಟಿ ತೋರಿಸಿ ಕೊನೆಗೆ ಸಾಧಿಸಿದ್ದು ಮಾತ್ರ ಶೂನ್ಯ. ತಳ ಹಿಡಿದ ಪಜೆವಾಣಿ ಮೇಲೆ ಬಂದಿಲ್ಲ. ಪತ್ರಿಕೆ ಗುಣಮಟ್ಟ ಸುಧಾರಿಸಿತೇ ಹೊರತು ಓದುಗರು ಹೆಚ್ಚಲಿಲ್ಲ. ಪ್ರತಿ ತಿಂಗಳು ಪತ್ರಿಕೆ ಸಂಖ್ಯೆ ಹೆಚ್ಚಾಯಿತೇ ಎಂದು ಆಸೆ ಕಣ್ಣುಗಳಿಂದ ನೋಡುತ್ತಿದ್ದದ್ದೇ ಬಂತು.
ಅನಂತಮೂರ್ತಿ ದೂರು !
ಸಂಗ್ರಾಹಕರನ್ನು ಪೀಡಿಸುವ ಈ ಧೋನಿ ವಿರುದ್ಧ ಅನಂತಮೂರ್ತಿ ಮಹಾಶಯರು ಶಾಂತ ಕುಮಾರ್ ಬಳಿ ದೂರು ನೀಡಿದ್ದರು. ಸುದ್ದಿ ಸಂಗ್ರಾಹಕರಿಗೂ ಜ್ಞಾನಪೀಠ ಅನಂತಮರ್ತಿಗೂ ಏನು ಸಂಬಂಧ ಎಂದು ಕೇಳಬೇಡಿ, ಯಾರೋ ಶಿಷ್ಯರ ಮೂಲಕ ಮಹಿ ಕಿತಾಪತಿಗಳನ್ನು ಮ್ಯಾನೇಜ್ ಮೆಂಟ್ ಗೆ ನೀಡಿದ್ದಾರೆ. ಶಾಂತಕುಮಾರ್ ಕರೆಸಿ ಮಾತನಾಡಿದ್ದಾರೆ.
ನನ್ನಿಂದ ಪತ್ರಿಕೆ ಪ್ರಸರಣ ಸಂಖ್ಯೆ ಹೆಚ್ಚಿಸಲು ಸಾಧ್ಯವಿಲ್ಲ ಎಂದ ಮಹಿ ವರ್ಗಾವಣೆ ಕೇಳಿದ್ದಾರೆ. ಆದರೆ ಇನ್ನೂ ಒಂದು ವರ್ಷ ಅಲ್ಲೇ ಮಣ್ಣು ಹೊರುವಂತೆ ಮ್ಯಾನೇಜ್ ಮೆಂಟ್ ಸೂಚಿಸಿದೆ. ಈಗ ಶಿಕ್ಷೆ ರೂಪದಲ್ಲಿ ಸೂರೆ ಹೋದ ಮಂಗಳೂರು ಕೋಟೆಯನ್ನು ಕಾವಲು ಕಾಯುತ್ತಿದ್ದಾರೆ ದೊರೆ ರಾಜಾಧಿರಾಜ ಪತ್ರಿಕಾ ಕುಲತಿಲಕ ಶ್ರೀ ಶ್ರೀ ಮಹೇಂದ್ರವರ್ಮ ಮಹಾರಾಜರು.
ಲಗೋರಿ, ತಿಲ್ಲಾನ ಬದಿಗಿಟ್ಟು ಈಗ
ಹಿಟ್ ವಿಕೆಟ್:
ಹೌದು ಈಗ ವಿಕೆ ಪ್ರಸರಣ ಹೆಚ್ಚಿಸುತ್ತೇನೆ ಎಂದು ಭರವಸೆ ನೀಡಿ ಬಂದ ನಾವಡರ ಕತೆಯೂ ಭಿನ್ನವಾಗಿಲ್ಲ. ಒಳಗೊಳಗೆ ಕತ್ತಿಮಸೆಯುತ್ತಿರುವ ಪೈಯ್ಡ್ ನ್ಯೂಸ್ ನ ಅನೈತಿಕ ಸಂಬಂಧದ ಆ ರಾಮ-ನಾಥ ಪಡೆ ನಾವಡರನ್ನು ಹಿಟ್ ವಿಕೆಟ್ ಮಾಡಿಸಲು ತಂತ್ರ ರೂಪಿಸಿದೆ. ಸುದ್ದಿಸಂಗ್ರಾಹಕರ ಮೂಲಕವೇ ದೂರುಗಳನ್ನು ರೆಡಿ ಮಾಡಿ ಮ್ಯಾನೇಜ್ ಮೆಂಟ್ ಗೆ ಒಪ್ಪಿಸಿದೆ. ಪಾಪ ನಾವಡ ಕತೆ ಗೋವಿಂದ.. ಒಡ್ಡೋಲಗ ಆರಂಭದಲ್ಲಿಯೇ ಅಕಟಕಟಾ.. ಮತ್ತು (ಅ)ಮಂಗಳ ಹಾಡು ಕೇಳಿಬರುತ್ತಿದೆ. ದ್ರೌಪದಿ ವಸ್ತ್ರಾಪಹರಣಕ್ಕೆ ಬಂದ ಕೃಷ್ಣ ಇಲ್ಲಿ (ರಾಘವ) ರಕ್ಷಣೆಗೆ ಬರುತ್ತಾನೆಯೋ ಕಾದು ನೋಡಬೇಕಿದೆ..

No comments: