
ಏನಾಯಿತು ಎಂದು ತಿಳಿಯುವಷ್ಟರಲ್ಲಿ ಬಂದು ಹೋಯಿತು. ಇದಕ್ಕೆ ಮಿಂಚಿನಂತೆ ಬಂದು ಹೋದ ಅಧಿಕಾರ ಎನ್ನಬಹುದು. ಹಮೀದ ಪಾಳ್ಯ ಸುವರ್ಣ ನ್ಯೂಸ್ ಮುಖ್ಯಾ ಎಂದೇ ಎಲ್ಲರೂ ಹೇಳಿದ್ದೇ ಹೇಳಿದ್ದು, ಬ್ಲಾಗ್ ಗಳು ಸರ್ವೆ ಮಾಡಿ ಅಟ್ಟಕ್ಕೆ ಏರಿಸಿದ್ದೇ ಏರಿಸಿದ್ದು. ತಪ್ಪಲ್ಲ, ಎಲ್ಲರ ಜತೆಯೂ ಚೆನ್ನಾಗಿರುವ ಪಾಳ್ಯ ಪಾಳೇಗಾರಿಕೆ ಮನುಷ್ಯನಲ್ಲ. ಆದರೆ ಹಣವಂತ, ಅಧಿಕಾರವಂತರ ಬಳಿ ಅತಿಯಾದ ಸ್ನೇಹವೇ ಶಂಕಿಸಲು ಕಾರಣ.
ರಂಗಣ್ಣ ಹೋದ ಮೇಲೆ ತಾನೇ ಮುಖ್ಯಸ್ಥ ಎಂದು ಪಾಳ್ಯ ಸಿಕ್ಕ ಸಿಕ್ಕವರಿಗೆ, ಮಂತ್ರಿ ಮಹೋದಯರಿಗೆ ಫೋನು ಮಾಡಿ ಹೇಳಿದ್ದೇ ಬಂತು. ಸುವರ್ಣ ನ್ಯೂಸ್ ಸ್ಟಾಫ್ ಕೂಡ ಪಾಳ್ಯನೇ ಪಾಳೇಗಾರ ಎಂದು ಕೊಂಡಿದ್ದರು. ಅವಕಾಶವಾದಿ ರವಿ ಬೆಳಗರೆ ಸ್ಟುಡಿಯೊಕ್ಕೆ ಬಂದು ಲಾದೆನ್ ಬಗ್ಗೆ ಬೊಗಳೆ ಬಿಟ್ಟದ್ದು, ಬಳಿಕ ಆಸ್ಥಾನ ಪತ್ರಿಕೆಯಲ್ಲಿ ಪಾಳ್ಯನ ಫೋಟೊ ಹಾಕಿ ರುಣ ತೀರಿಸಿದ್ದು ಎಲ್ಲ ಸುವರ್ಣ ಮ್ಯಾನೇಜ್್ ಮೆಂಟ್್ ಕಣ್ಣಿಗೆ ಬಿದ್ದಿದೆ. ಕ್ಲೈಮ್ಯಾಕ್ಸ್ ನಲ್ಲಿ ಕತೆ ಗೊತ್ತಾಗಿದೆ. ಪಾಳ್ಯನ ಡೆಸಿಗ್ನೇಶನ್ ಬದಲಾಗಿಲ್ಲ ಬದಲಾಗಿ ಮಂಡಳಿ ಕೆಲವು ಅದಿಕಾರಕ್ಕೆ ಕತ್ತರಿ ಹಾಕಿದೆ. ರಂಗಣ್ಣ ಹೋದಾಗ ನೋಡಿಕೋ ಅಂದದ್ದೇ ತಪ್ಪಾಯಿತು. ಬೆರಳು ತೋರಿಸಿದರೆ ದೇಹವನ್ನೇ ನುಂಗಲು ಹೋಗುವುದೇ ?
ಸುವರ್ಣ ನ್ಯೂಸ್ ಗೆ ಪ್ರಮೋಶನ್ ಪಡೆದ ಶ್ಯಾಮ್ ನೋಡಿಕೊಳ್ಳುತಿದ್ದಾರೆ. ಖಚಿತ ಮೂಲಗಳ ಪ್ರಕಾರ ಕೆ.ಪಿ. ಸ್ಟಾರ್ ವಿಶ್ವೇಶ್ವರ ಭಟ್ಟರು ಯಾವುದೇ ಸಮಯದಲ್ಲಿ ಸುವರ್ಣ ನ್ಯೂಸ್ ಮುಖ್ಯಸ್ಥರಾಗಬಹುದು. ಆದರೆ ಕೆಪಿಗೆ ಚಾರ್ಮ ನೀಡುವುದರಲ್ಲಿ ಸದ್ಯ ಬ್ಯುಸಿ ಆಗಿರುವ ಭಟ್ಟರು, ಕೆಲವು ಸಮಯದ ಬಳಿಕ ಒಡ್ಡೋಲಗ ನಡೆಸಲಿದ್ದಾರೆ. ಈಗಾಗಲೇ ಭಟ್ಟರ ಜಾಹೀರಾತು ಸುವರ್ಣ ನ್ಯೂಸ್ ನಲ್ಲಿ ಬರುತಿದೆ. ಜಾಹೀರಾತು ಗುಣಮಟ್ಟ (ಕ್ಯಾಮೆರಾ- ಐಡಿಯಾ) ಅಷ್ಟೇನು ಚೆನ್ನಾಗಿಲ್ಲವಾದರೂ ಅಭಿಮಾನಿಗಳು ಖುಷ್ ಆಗಿದ್ದಾರೆ, ವರ್ಕ್ ಔಟ್ ಆಗುತ್ತಿದೆ ಎಂಬ ವರ್ತಮಾನ ಸುದ್ದಿಮನೆಗಳಲ್ಲಿ ಕತೆಯಾಗಿ ಕೇಳಿ ಬರುತ್ತಿದೆ.
ಈ ವಿಷಯ ಒತ್ತಟ್ಟಿಗಿರಲಿ, ರಂಗ ಹೊರ ಹೋದ ಮೇಲೆ ಸುವರ್ಣ ಬೆಳ್ಳಿ ರೇಟ್ ನಂತೆ ಇಳಿದಿದೆ. ಸ್ಟಾರ್ ಬೇಕೆಂಬ ಕಾರಣಕ್ಕೆ ರವಿ ಬೆಳಗೆರಯನ್ನು ಕರೆದು ತರಲಾಯಿತು. ಎಲ್ಲೆಡೆ ಲಾಭ ಗಿಟ್ಟಿಸುವ ರವಿ ಇಲ್ಲೂ ಲಾಟರಿ ಹೊಡೆದಿದ್ದಾರೆ. ಜನಶ್ರೀ ಬೆಳಗೆರೆಯನ್ನು ಮರಳಿ ಕರೆದಿದೆ. ಆದರೆ ಪಾಳ್ಯ ಪಾಲಿಗೂ ರವಿ ವಕ್ರ ಶನಿಯಾಗಿ ಪರಿಣಮಿಸಿದ್ದಾರೆ. ಈ ಬಗ್ಗೆ ಗುರುಗಳಲ್ಲಿ ಕೇಳಿದಾಗ ಶುಕ್ರ ಮೌಢ್ಯ, ಗುರುಬಲ ಇಲ್ಲ, ಅಧಿಕಾರ ನಷ್ಟ ಯೋಗ ಇದೆ ಎಂದು ಹೇಳಿ ಶೂನ್ಯದಲ್ಲಿ ಚಿನ್ನದ ಉಂಗುರ ನೀಡಿ ಹರಸಿದ್ದಾರೆ. ಆದರೆ ಇದೇ ಉಂಗುರ ಉರುಳಾದೀತು ಎಂಬ ಹೆದರಿಕೆ ಪಾಳ್ಯರಿಗೆ.
ಇನ್ನು ನೇರ ನಿಷ್ಟುರ ರಂಗ ಭಾರದ್ವಾಜನ ಕಥೆ. ಪಾಳ್ಯನನ್ನು ಎಳೆತಂದ್ದದ್ದು ಭಾರದ್ವಾಜ. ಇಬ್ಬರು ಒಳ್ಳೆಯವರೇ. ಆದರೆ ಭಾರದ್ವಾಜ ರಂಗನಿಂದ ಹೊರ ದಬ್ಬಿಸಿಕೊಂಡಾಗ ಪಾಳ್ಯ ಕ್ಯಾಪ್ಟನ್ ರಂಗನಿಗೆ ಸಾಥ್ ನೀಡಿ, ಬಾರದ್ವಾಜನಮನಸ್ಸಿಗೆ ಶಾಕ್ ನೀಡಿದರು. ದೊಡ್ಡ ದೊಡ್ಡ ತಲೆಗಳೇ ಬೋಳಾಗುತ್ತಿರುವುದನ್ನು ನೋಡಿದ ಮೇಲೂ ಪಾಳ್ಯ ಅರ್ಥ ಮಾಡಿಕೊಂಡಿಲ್ಲ. ಲಕ್ಷ್ಮೀ ಚಂಚಲೆ ಎಂಬುದನ್ನು ಅರಿಯಬೇಕು. ಈ ಟಿವಿ ಮೋಣ, ಕ್ಯಾಪ್ಟನ್ ( ಗಡ್ಡ )ರಂಗ, ಬುದ್ಧಿ ಜೀವಿ ಶಶಿದರ ಭಟ್ಟ ಮಕಾಡೆ ಮಲಗಿ, ಈಗ ಹೊರಳುತ್ತಿರುವುದನ್ನು ನೋಡಿದ ಮೇಲೂ ಈ ರೀತಿ ಮಾಡುವುದು ಸರಿ ಅಲ್ಲ. ಇನ್ನೂ ಕಾಲ ಮಿಂಚಿಲ್ಲ. ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡ ಅಭಿಮನ್ಯು ಆಗಬೇಡಿ, ತೊಡೆ ಮುರಿದುಕೊಂಡ ಕೌರವನೂ ಬೇಡ, ದೃತರಾಷ್ಟನಂತೆ ಕಣ್ಣು ಮುಚ್ಚಿರುವುದು ಬೇಡ ಧರ್ಮರಾಯನಂತಿರಬೇಕು ಎಂಬ ನಿರೀಕ್ಷೆ ಇಲ್ಲ, ಕನಿಷ್ಠ ನಕುಲ-ಸಹದೇವರಂತೆರಗಳೆ ಮಾಡದೆ ಕೆಲಸ ಮಾಡಿಕೊಂಡಿದ್ದರೆ ನಮಗೂ ನಿಮ್ಮನ್ನು ಪರದೆಯಲ್ಲಿ ನೋಡಿ ಖುಷಿ ಪಡುತ್ತೇವೆ. ಜೈ ಭವಾನಿ
No comments:
Post a Comment