

ಪತ್ರಕರ್ತರಿಗೆ ಇದು ಚುನಾವಣೆ ಕಾಲ. ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಮುಗಿದ ಬೆನ್ನಲ್ಲೇ ಈಗ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನಡೆಯುತ್ತಿದೆ. ನಾಳೆಯೇ ಚುನಾವಣೆ. ರಾಜ್ಯ ಹಾಗು ಜಿಲ್ಲಾ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆಗೆ ಇಂದು ಮತದಾನ ನಡೆಯುತ್ತಿದೆ. ಬಳಿಕ ತಾಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಗಳು ನಡೆಯುತ್ತವೆ.
ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಎಲ್ಲಡೆ ಒಳಜಗಳ, ಭಿನ್ನಮತ ಸಾಮಾನ್ಯ. ರಾಜಕಾರಣಿಗಳ, ಅಧಿಕಾರಿಗಳ ಭಿನ್ನಮತ ಬರೆಯುವ ಪತ್ರಕರ್ತರದ್ದು ಮಾತ್ರ ಬಗೆಹರಿಸಲಾಗದ ಭಿನ್ನಮತ, ಒಗ್ಗಟ್ಟೇ ಇಲ್ಲ, ಎಲ್ಲ ಬಿಕ್ಕಟ್ಟು. ಪೆಟ್ಟಿಗೆಯಲ್ಲಿ ಚೇಳು ಹಾಕಿ ಬಾಯಿ ಮುಚ್ಚದಿದ್ದರೂ ಹೊರ ಬರುವುದಿಲ್ಲವಂತೆ. ಹಾಗೆ ಪತ್ರಕರ್ತರ ಸ್ಥಿತಿ. ಗುಂಪುಗಾರಿಕೆ, ಜಾತೀಯತೆ, ಸ್ವಪ್ರತಿಷ್ಠೆ, ಇಸಮ್ ಗಳಿಗೆ ಸಿಕ್ಕಿ ನಲುಗಿ ಹೋಗಿದೆ. ಅಮೂಲ್ಯ ಆಸ್ತಿಯನ್ನು ಹೊಡೆಯುವ ಸೈಲೆಂಟ್ ಕಿಲ್ಲರ್ ಗಳು ಹುದ್ದೆಯಲ್ಲಿ ಭದ್ರವಾಗಿ ಬೇರೂರುತ್ತಿದ್ದಾರೆ. ವಿರೋಧಿಸಲು ಒಳ್ಳೆಯ ಪತ್ರಕರ್ತರಿಗೆ ಪುರುಸೊತ್ತು ಇಲ್ಲ,
ಕಾರ್ಯ ಮರೆತ ಪತ್ರಕರ್ತರೇ ಹೆಚ್ಚಾಗಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವುದು ರೂಢಿ ಮಾತು. ಸಂಘದಲ್ಲಿ ಕೆಟ್ಟವರ ಸಂಗವೇ ಹೆಚ್ಚಾಗಿದೆ ಎನ್ನುದು ಪತ್ರಕರ್ತರ ಬೋಂಗು. ಹೆಚ್ಚಿನವರು ಅಕ್ರಿಡಿಶನ್ ಕಾರ್ಡ್ ಮಾಡಿಕೊಳ್ಳುವುದು, ಸೈಟ್ ಹೊಡೆಯುವುದೇ ಕ್ರಿಯಾತ್ಮಕ ಕೆಲಸ ಎಂದುಕೊಂಡಿದದಾರೆ.
ಪತ್ರಕರ್ತರು ಗುತ್ತಿಗೆ ಕಾರ್ಮಿಕರಂತೆ ನೇಮಕಗೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಎಸೆಯಲಾಗುತ್ತದೆ, ಕಣ್ಣುಮುಚ್ಚುವುದರ ಒಳಗೆ ಕಿತ್ತು ಹಾಕುತ್ತಿದ್ದಾರೆ, ಜಾಣರೂ ಹೇಗೋ ಬಚಾವ್ ಆಗುತ್ತಾರೆ, ಸಾಮಾನ್ಯ ಪತ್ರಕರ್ತರ ಬಗ್ಗೆ ಸಂಘ ಕಿಂಚಿತ್ತಾದರೂ ಗಮನ ಹರಿಸಿದೆಯೇ ?
ಬುದ್ಧಿವಂತ ಎಂದು ಹೇಳಿಕೊಳ್ಳುವ ನಾಗರಿಕರು ಮತ ಚಲಾವಣೆಗೆ ಬರುವುದಿಲ್ಲವೋ ಹಾಗೆಯೇ ಪ್ರಮುಖ ಪತ್ರಿಕೆಗಳ, ಪ್ರಮಖ ಪತ್ರಕರ್ತರು ಚುನಾವಣೆಗೆ ಬರುವುದೇ ಇಲ್ಲ. ಪತ್ರಕರ್ತರ ಚುನಾವಣೆಯಲ್ಲಿ ಗುಂಡು, ತುಂಡು, ಹಣ, ಜಾತಿ ರಾಜಕೀಯ ನುಸುಳಿದೆ. ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಇದಕ್ಕೆ ಉದಾಹರಣೆ.
ರೈಗೆ ಜೈ
ಇನ್ನು ಮಂಗಳೂರಲ್ಲಿಯೂ ಚುನಾವಣೆ ನಡೆಯುತ್ತಿದೆ. ವಿ ಬಿ ಯ ಪುಷ್ಪರಾಜ್ ಮತ್ತು ವಿಕೆ ಹರೀಶ್ ರೈ ನಡುವೆ. ಇಬ್ಬರೂ ಸಭ್ಯರೇ. ಆದರೆ ಬಲಪಂಥೀಯ ಮತ್ತು ಎಡಪಂಥೀಯ ಎಂದು ವಿಭಾಗಆಗುವುದರಿಂದ ರೈಗೆ ಹೆಚ್ಚಿನವರು ಜೈ ಎನ್ನುತ್ತಾರೆ ಎಂಬುದು ಸತ್ಯ. ಈ ನಡುವೆ ಕೆಲ ಅವಕಾಶವಾದಿಗಳು ಎರಡೂ ತಂಡದಲ್ಲಿದ್ದೇವೆ ಎಂದು ಕನ್ನಿಂಗ್ ಬುದ್ಧಿ ಪ್ರದರ್ಶಿಸಿದ್ದಾರೆ. ಈ ಹಿಂದೆ ಅಧಿಕಾರ ಅನುಭವಿಸಿ ಹಾರಾಡಿದ ಇದೇ ಗೋಮುಖ ವ್ಯಾಘ್ರರು ಎಡಪಂಥೀಯರು ಎಂಬ ಕಾರಣಕ್ಕೆ ಹಿಂದೆ ಪುಷ್ಪರಾಜ್ ಗೂ, ಮುಂದುಗಡೆ ರೈಗೂ ಜೈ ಘೋಷ ಹಾಕಿದ್ದಾರೆ. ಒಟ್ಟಾರೆ ಚುನಾವಣೆಯಲ್ಲಿ ಅನೇಕ ಮಂದಿ ಹಳ್ಳಕ್ಕೆ ಬಿದ್ದಿದ್ದಾರೆ. ಪ್ರಜ್ಞಾವಂತ ಮಂಗಳೂರಿನ ಪತ್ರಕರ್ತರಿಗೆ ನರಿಗಳ ಬುದ್ಧಿ ತಿಳಿದುಬಿಟ್ಟಿದೆ.
No comments:
Post a Comment