ಸಮಯ ಜಂಪ್ ಟಿ ಆರ್ ಪಿ ಜಂಪ್ ಆಗಿದೆ. ಸುವರ್ಣ ಹಾಗೂ ಹೀಗೂ ಕುಂಟುತ್ತಾ ನಡೆಯುತ್ತಿದ್ದು, ಮುಂದಿನ ನಾಯಕನನ್ನು ಎದಿರು ನೋಡುತ್ತಾ ಸುವರ್ಣ ಯುಗಕ್ಕಾಗಿ ಕಾಯುತ್ತಿದೆ. ಸುವರ್ಣದಲ್ಲಿ ರಾಜಕೀಯ ಹಿರಿಯ ವರದಿಗಾರ ಸುಭಾಷ್ ಹೂಗಾರ ಮತ್ತು ರವಿರಾಜ ವಳಂಬೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ವಿಚಿತ್ರ ವರದಿಗಾರರಾದ ಶಂಕರ ಘಟ್ಟ ಚಂದ್ರೇಗೌಡ ನನ್ನು ನಿವಾಳಿಸಿ ಕಳುಹಿಸಿದ್ದಾರೆ. ಚಂದ್ರೇಗೌಡ ಎಂಬ ಗಿರಾಕಿ ಸಂಸ್ಥೆಯ ಎಲ್ಲ ಸೊತ್ತುಗಳನ್ನೂ ಸಂಪೂರ್ಣ ನುಭವಿಸಿದ ಸುಖ ಲೋಲುಪ. ಇಂಥ ಭಟ್ಟಂಗಿಗಳಿಂದಲೇ ಶಶಿಧರ ಭಟ್ಟರು ಮೈ ಸುಟ್ಟುಕೊಂಡರು. ಪರಮೇಶ್ವರ, ಚಂದ್ರ ಮೊದಲಾದವರ ಸಂಪಾದನೆ ನೋಡಿದ ಭಟ್ಟರು ಸುಮ್ಮನೆ ಯಾಕೆ ಉಳಿದು ಬಿಟ್ಟರು ಎಂಬ ಸಂಶಯ ಸಿಬ್ಬಂದಿ ವರ್ಗಕ್ಕೆ ಇತ್ತು. ಅಷ್ಟರಲ್ಲಿ ಭಟ್ಟರನ್ನು ಕಳುಹಿಸಿದ ಚಾನೆಲ್ ರಂಗನನ್ನು ಸೇರಿಸಿದ್ದರು. ಈಗ ಜಯಪ್ರಕಾಶ್ ಶೆಟ್ಟರು ಸುವರ್ಣದ ರಾಜಕೀಯ ಬ್ಯೂರೊ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೂಲತಃ ಈಟಿವಿ ಆಂಕರ್ ರಾಜಕೀಯದಲ್ಲಿ ಅಷ್ಟೇನೂ ಪಳಗಿಲ್ಲ. ರಂಗ ಇರುವವರೆಗೂ ಮೂಲೆ ಸೇರಿದ್ದರು. ಆದರೆ ಹಿರಿಯರೆಲ್ಲ ಬಿಟ್ಟು ಹೋದ ಬಳಿಕ ಸ್ಥಾನಕ್ಕೆ ಏರಿದ್ದಾರೆ.
ಶಶಿ ಅಸ್ತ :
ಶಶಿಧರ ಭಟ್ಟರು ಸಮಯ ನೋಡಿ ಸಮಯಕ್ಕೆ ಸೇರಿದ್ದರು. ಶಶಿ ಮೂಡಿದ ಎನ್ನುವಷ್ಟರಲ್ಲಿ ಮತ್ತೆ ಅಸ್ತಮಿಸುತ್ತಿರುವ ಲಕ್ಷಣ ಕಂಡು ಬಂದಿದೆ. ಸಮಯ ಸೇಲ್ ಆದರೆ ಭಟ್ಟರಿಗೆ ಮತ್ತೆ ಟೆಂಡರು ಕರೆಯುವವರು ಯಾರು ? ಎಂಬ ಪ್ರಶ್ನೆ ಮೂಡಿದೆ. ಸಮಯ ಆಧ್ಯಾತ್ಮಿಕದತ್ತ ವಾಲುವ ಎಲ್ಲ ಲಕ್ಷಣ ಕಾಣಿಸಿದೆ. ನಮ್ಮ ಸಂಸ್ಕೃತಿಯ ಅಂದರೆ ಋಷಿ ! , ಮಠ, ಮಂದಿರಗಳಿಗೆ ಹೆಚ್ಚಿನ "ಸಮಯ" ಮೀಸಲಿಡುವ ಸಾಧ್ಯತೆ ಗಳಿವೆ.
ರಂಗನಾಥನ ಗುಣ ...
ರಂಗ ಸುವರ್ಣ ದಲ್ಲಿ ಕ್ಯಾಪ್ಟನ್ ಆಗಿ ಬದಲಾದ ಮೇಲೆ ಪರ ವಿರೋಧ ಅಭಿಪ್ರಾಯಗಳು ಮೂಡಿದವು. ಏನೇ ಹೇಳಲಿ ಸಪ್ಪೆಗಿಂತ ವಿಚಿತ್ರ, ವಿಕ್ಷಿಪ್ತ ವ್ಯಕ್ತಿತ್ವ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬುವುದಕ್ಕೆ ರಂಗ ಸಾಕ್ಷಿ. ಎಷ್ಟೇ ದೂಷಿಸಿದರೂ ಅವರು ಹೋದ ಬಳಿಕ ಏನೋ ಕಳೆದುಕೊಂಡ ಅನುಭವ. ಮರೆತರೂ ಮರೆಯದ ಮಾಯೆ ರಂಗನಾಥರದ್ದು.
ಸುವರ್ಣದಲ್ಲಿ ಲಾದೆನ್ ಕುರಿತು ಅನುಭವ ! ಹೇಳಿಕೊಂಡ ಬೆಳಗರೆ ಜನಶ್ರೀಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಅವಕಾಶವಾದಿಗಳೆಂದರೆ ಹೀಗೆ.. ಎಲ್ಲೂ ಗಿಟ್ಟಿಸಿಕೊಳ್ಳುತ್ತಾರೆ, ಅವಶ್ಯಕತೆ ಇಲ್ಲಾ ಅಂದರೆ ಒದ್ದು ಹೊರಕಳುಹಿಸುತ್ತಾರೆ... ಒಂದಲ್ಲಾ ಒಂದು ದಿನ ಒದೆಸಿಕೊಂಡವರೆಲ್ಲಾ ಒಟ್ಟಾಗಿ ಒದೆಯುವ ದಿನ ದೂರ ಇಲ್ಲ.
No comments:
Post a Comment