ಬ್ಲಾಗ್ ಕುರಿತು ದೂರು ನೀಡಲು ಸಿದ್ಧತೆ ನಡೆದಿದೆ ಎಂದು ನನ್ನ ಹಿತೈಷಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರ ಎಚ್ಚರಿಕೆಗೆ ಥ್ಯಾಂಕ್ಸ್. ಇದರಲ್ಲಿಯೂ ಬೇಸರ ವಿಷಯ ಎಂದರೆ ಬಲಿತರೇ ದೂರು ಹಿಡಿದುಕೊಂಡು ಸಂತ್ರಸ್ತನ ಮುಖವಾಡ ಹಾಕಿಕೊಂಡಿರುವುದು.
ವಸ್ತು ವಿಷಯ ಎಂದರೆ ಇಲ್ಲಿ ಪ್ರಕಟವಾಗುವ ಪೋಸ್ಟ್ಗ್ ಗಳು ಕಾಲ್ಪನಿಕ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಕುರಿತಾಗಿ ಬರೆದದ್ದಲ್ಲ. ಯಾರ ತೇಜೋವಧೆ ಮಾಡುವ ಕೀಳು ಮಟ್ಟದ ಪ್ರಯತ್ನವೂ ಅಲ್ಲ. ಒಂದು ವೇಳೆ ಸನ್ನಿವೇಶ, ಪಾತ್ರ ಘಟನೆಗಳು ಹೋಲಿಕೆಯಾಗಿದ್ದಲ್ಲಿ ಅದಕ್ಕೆ ನಾನು ಹೊಣೆಯಲ್ಲ. ಭ್ರಷ್ಟಾಚಾರ, ದೌರ್ಜನ್ಯ , ಮೋಸ, ಹಲಾಲುಕೋರತನ ವಿರುದ್ಧ ಪ್ರಕಟವಾದ ಲೇಖನಗಳಲ್ಲಿ ಯಾರಿಗಾದರೂ ಇದು ತಮಗೆ ಬರೆದಿರಬಹುದು, ಅಥವಾ ಪಾತ್ರ ತಮ್ಮಂತೆಯೇ ಇರಬಹುದು ಎನಿಸಿದ್ದರೆ ಅದಕ್ಕೆ ಅವರೇ ಹೊಣೆ !ಈ ಮೂಲಕವಾದರೂ ಪ್ರಾಮಾಣಿಕರಾಗಲು ಪ್ರಯತ್ನಿಸಲಿ. -ಸಂಪಾದಕಿ
1 comment:
ಏನು ಹೆದರಿ ಬಿಟ್ಟಿರಾ? ಇನ್ನು ನೀವು ಬರೆಯೊಲ್ವಾ ಹೇಗೆ?
Post a Comment