Monday

ರಾಮ -ರಾಘವ ಯುದ್ಧ.. ಕು. ಸನ್ನದ್ಧ



ರಾಘವನ ಮೇಲೆ ರಾಮನೇ ಕುಂಭಕರ್ಣನ ಜತೆ ಸೇರಿ ಯುದ್ಧ ಘೋಷಿಸಿದರೆ... ಹೌದು ಸ್ವಾಮಿ ಇದು ಕಲಿಕಾಲ. ವಿಕೆ ರಾಮ ಮತ್ತು ಕುಂಭಕರ್ಣ (ಕುನಾಥ) ಮಂಗ ಳೂರಿನ ಕಪಿಸೇನೆ ಬಳಸಿಕೊಂಡು ರಾಘವ ಮತ್ತು ಲಕ್ಷ್ಮಣ (ನಾವಡ)ರನ್ನು ಮಣಿಸಲು ಪಕ್ಕಾ ಸ್ಕೆಚ್ ರೂಪಿಸಿದ್ದಾರೆ.
ಪ್ರತಿಯೊಬ್ಬ ಎದುರಾಳಿಯನ್ನು ದಾಖಲೆಯ ಬಲೆಯಲ್ಲಿ ಕೆಡವಿ ಗೆದ್ದು ಬಿಡುವುದು ಇವರ ವೈಶಿಷ್ಟ್ಯ. ಈ ಬಾರಿ ಮಾತ್ರ ಸಂಪಾದಕರಿಗೇ ಕೆಡ್ಡಾ ತೋಡಿದ್ದಾರೆ ರಾಮನ ಬಂಟರು ! ವಿಶ್ವ ಈಶ್ವರನೇ ಇರಲಿ, ರಾಘವನೇ ಬರಲಿ ಅವರ ವಿರುದ್ಧ ಅಭಿಯಾನ ನಡೆಸುವುದೇ ಇವರ ಕೆಲಸ. ಈಗ ರಾಘವ, ನಾವಡರ ಸರದಿ.
ಪ್ರತಿ ದಿನ ಮರಣವಾಣಿಯಲ್ಲಿ ಬಂದ ಜಾಹೀರಾತುಗಳು ಮತ್ತು ಜಾಹೀರಾತು ಸುದ್ದಿಗಳ ಕಟ್ಟಿಂಗ್ ರೆಡಿ ಮಾಡುವುದಷ್ಟೇ ಜಾಹೀರಾತು ಸಿಬ್ಬಂದಿ ಕೆಲಸ ಆಗಿಬಿಟ್ಟಿದೆ. ಒಂಥರಾ ಮುಷ್ಕರ ಹೂಡಿದ್ದಾರೆ. ಕೆಲಸ ಮಾಡದಿದ್ದರೆ ಜಾಹೀರಾತು ಬರುವುದಾದರೂ ಹೇಗೆ.. ಶ್ರೀರಾಮಚಂದ್ರನೇ ಬಲ್ಲ.



" ಜಾಹೀರಾತು ಸುದ್ದಿ ಪ್ರಕಟವಾಗದೆ ಲಕ್ಷಗಟ್ಟಲೆ ಜಾಹೀರಾತು ಮಿಸ್ ಆಗುತ್ತಿದೆ. ಇದರಿಂದ ನನಗೆ, ಅದಕ್ಕಿಂತಲೂ ಕಂಪನಿಗೆ ಹೆಚ್ಚು ನಷ್ಟ ಆಗಿದೆ'



ಎಂಬ ಒಕ್ಕಣೆ ವಿವರಗಳನ್ನು ಗ್ರಾಮೀಣ ಅರೆಕಾಲಿಕ ವರದಿಗಾರಿಂದ ಪಡೆದು ಅದರ ದಾಖಲೆ ಮೂಟೆಗಳನ್ನು ಬೆಂಗಳೂರಿಗೆ ನೀಡಿದ್ದಾರೆ. ಜಾಹೀರಾತು ಸುದ್ದಿಗಳಿಗೆ ಕಠಿಣ ನಿಬಂಧನೆ ಹೇರಿದ್ದರಿಂದ ಒಂದು ತಿಂಗಳಲ್ಲಿ 20 ಲಕ್ಷ ರೂ. ಆದಾಯ ಖೋತಾ ಆಗಿದೆ ಎಂಬ ವಿಶೇಷ ನೋಟ್ ಕೂಡಾ ನೀಡಿದ್ದಾರೆ. ಕಮಲ ಪಕ್ಸದ ಭಟ್ಟರ ನೇತೃತ್ವದಲ್ಲಿ ಫೈಲ್ ರೆಡಿಯಾಗಿದೆ. ಇನ್ನೇನು ಸಿಇಒ ನೋಡಿ ಓಕೆ ಅಂದರೆ, ನಾವು ಗೆದ್ದೆವು ಎಂಬ ಭ್ರಮೆಯಲ್ಲಿ ಇದ್ದಾರೆ ಕಪಿ ಸೇನೆ ನಾಯಕರು.



ಆದರೆ ಬುಡಕ್ಕೆ ಬಂದು ಬಿಟ್ಟಿದೆ. ಆರಾಮನ 35 ಲಕ್ಷದ ವೈಭವೋಪೇತ ಅರಮನೆ, ಹೊಸ ಕಾರು, ಕುಂಭಕರ್ಣ (ನಾಥ)ನ ೨೮ಲಕ್ಷದ ಉರುವಮನೆ, ಕಾರು, ಇದಕ್ಕೆ ಒಟ್ಟಾದ ವಂತಿಗೆ, ದುಬೈ ಹಣದ ಬಗ್ಗೆ ಕಂಪನಿ ತನಿಖೆ ನಡೆಸಿದರೆ... ! ಘನ ಘೋರ ಯುದ್ಧದಲ್ಲಿ ಭಸ್ಮಾಸುರನಂತೆ ಸ್ವತಃ ತಲೆ ಮೇಲೆ ಕೈ ಇಟ್ಟು ಸಾಯಬೇಕು ಇದೆಲ್ಲಾ ಬೇಕಾ ?

2 comments:

Anonymous said...

vijaya karnataka davara bagge olleya vishya brithidri, manglur aficeninda thegedu hakiruva jeethesh kundeshwara baggenu bariyiri.aathanige neeru illada urige kalisidhare. idarinda nondhu kelsa bidthananthe...

Anonymous said...

-ರಾಜೇಶ್ ಕಾರ್ಲ
ಕುಮಾರಗೆ ನೀವು ಕುಂಭ ಕರ್ಣ ಹೇಳಿದ್ದು ಏಕೆ. 6 ತಿಂಗಳು ನಿದ್ದೆ ಮತ್ತು 6 ತಿಂಗಳು ಮನೆಯಲ್ಲ ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕಾ ?