Thursday

ಅಕ್ರಮ ದಂಧೆ: ವಿಕೆ ಸಿಬ್ಬಂದಿ ಸೆರೆ

ಹೇಳುವುದು ಶಾಸ್ತ್ರ ಕುಡಿಯುವುದು ಎಣ್ಣೆ (ಗುಂಡು) ಹಾಗಾಯ್ತು ಗಂಗಾವತಿ ವಿಕೆ ಆವೃತ್ತಿ ಮುಖ್ಯಸ್ಥನ ಪ್ರವೃತ್ತಿ. ವಿಷಯ ಏನಪ್ಪಾ ಅಂಥಂದ್ರೆ ಈ ಆವೃತ್ತಿ ವಿಕೆ ಸಿಬ್ಬಂದಿ ಯೊಬ್ಬ (ಲೋಕೇಶ ಗಂಗಾವತಿ) ಅಕ್ರಮ ಮದ್ಯ ತಯಾರಿಕೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಆದರೆ ವಿಕೆ ಹೆಸರು ಹೇಳಿ ತಪ್ಪಿಸಿಕೊಂಡಿದ್ದಾನೆ. ಈತನಿ ಅಕ್ರಮ ಸರಾಯಿ ಜಾಲದ ದಂಧೆಯಲ್ಲಿ ಮನೆಹಾಳ ಚಂದ್ರನಿಗೂ ಪಾಲಿದೆ ಎಂಬ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವುದೋ ಆಸ್ಪತ್ರೆಯಲ್ಲಿ ರಕ್ತ ನೀಡುವಾಗ ಹಣ ಪಡೆದರು ಎಂಬ ಕಾರಣಕ್ಕೆ ವಿಷಯ ಗೊತ್ತೇ ಇಲ್ಲದ ಮುಗ್ಧ ಗಂಗಾವತಿಯ ಜನಪ್ರಿಯ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಸರಣಿ ಲೇಖನಗಳನ್ನೇ ಬರೆಸಿದ. ಪರಣ್ಣ ವಸೂಲಿ ಏಕಣ್ಣ ಎಂದೆಲ್ಲಾ ಹಾಯ್ ಬೆಂಗೂರು ಗಿಂತಲೂ ಕೀಳಾಗಿ ಬರಹಗಳನ್ನು ಪ್ರಕಟಿಸಿದ.

ಎರಡು ನಾಲಿಗೆ ನೀಚನ ದುರ್ಬುಧಿ ನೋಡಿ. ಈತನ ಸಿಬ್ಬಂದಿಯೇ ಜಾಲದಲ್ಲಿ ಶಾಮೀಲಾಗಿದ್ದರೂ ಪತ್ರಿಕೆ ಹೆಸರನ್ನು ಬರೆಸದೆ ಆತನನ್ನು ಮನೆಗೆ ಕಳುಹಿಸಲು ಶಿಫಾರಸು ಮಾಡಿದ್ದಾನೆ. ಅದುವರೆಗೆ ಆತನ ಎಲ್ಲ ಅಕ್ರಮಗಳ ಬಗ್ಗೆ ಸಮ್ಮತಿ ನೀಡಿ ಲಾಭ ಪಡೆದು ಸಿಕ್ಕಿ ಬಿದ್ದ ಎಂದಾಕ್ಷಣ ನೀವಾಳಿಸಿದ್ದಾನೆ. ಒಳ್ಳೆಯವರನ್ನೇ ಕಿತ್ತು ಹಾಕಿದ ಕೀಚಕನಿಗೆ ತನ್ನವರು ದಂಧೆಯಲ್ಲಿ ಸಿಕ್ಕಿಬಿದ್ದಾಗ ರಕ್ಷಿಸದೆ ಒದ್ದೋಡಿಸುವುದು ದೊಡ್ಡ ವಿಚಾರವಲ್ಲ. ಆದರೆ ದೊಡ್ಡ ಸಂಸ್ಥೆ ಎನ್ನುವ ಸಣ್ಣ ಮನಸ್ಸಿನವರೇ ಇರುವ ಟೈಮ್ಸ್ ಈ ಬಗ್ಗೆ ಏನನ್ನುತ್ತದೆ ?


ಸ್ಥಳೀಯ ಚಾನೆಲ್ ಗಳು, ಸ್ಥಳೀಯ ಪತ್ರಿಕೆಗಳು ರಾಜ್ಯದ ನಂ.ವನ್ ಪತ್ರಿಕೆ (ಕೆಲವೇ ದಿನ) ಹೆಸರು ಹಾಕಿದ್ದಾರೆ. ಆದೆ ವಿಕೆ ಮಾತ್ರ ಏನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದೆ.


Tuesday

ಮಾಧ್ಯಮ ಸೇರುವ-ಬಿಡುವ ಪರ್ವ ಕಾಲ. ಶಶಿ, ವೆಂಕಟಿ, ಕುಂದೇಶ,


ಬಹಳ ದಿನಗಳ ವಿರಾಮ ಬಳಿಕ ಮತ್ತೆ ಪೆನ್ ಕೈ ಹಿಡಿಯುತ್ತಿದ್ದೇನೆ. ಮಾಧ್ಯಮದಲ್ಲಿ ಬೆಳವಣಿಗೆ ನಡೆಯುತ್ತಿದೆ. ಯಾರದೇ ಮುಖಪುಟ (ಫೇಸ್ ಬುಕ್) ನೋಡಿದರೂ ವೈರಾಗ್ಯ ಬಿಡುವ ಮಾತು ಆಡುತ್ತಿದ್ದಾರೆ. ಎಲ್ಲರೂ ಉಂಡೆನಾಮ ಹಾಕಿಸಿಕೊಳ್ಳುತ್ತಿದ್ದಾರೆ. ಒಳ್ಳೆಯ ಬೆಳವಣಿಗೆಯೋ ಕೆಟ್ಟ ಬೆಳವಣಿಗೆಯೋ ಗೊತ್ತಿಲ್ಲ. ಸಮಯ ಶಶಿಧರ ಭಟ್ಟರು ಸಮಯ ಬಿಡುವ ಸಮಯ ಬಂದಿದೆ. ವಿಕೆ ಯಿಂದ ಅರವಿಂದ ನಾವಡರು ಬಿಡುವ ಬಗ್ಗೆ ವಿಶ್ವೇಶ್ವರ ಭಟ್ಟರ ಜತೆ ಚರ್ಚೆ ನಡೆಸಿದ ಮಾಹಿತಿ ಬಂದಿದೆ. ವಿಕೆಯಿಂದ ಬಿಡಲು ಸಾಲುಗಟ್ಟಿ ನಿಂತಿರುವುದು ಮತ್ತು ವಿಜಯವಾಣಿ, ಕನ್ನಡಪ್ರಭ, ಪ್ರಜಾವಣಿ, ಸುವರ್ಣ ಚಾನೆಲ್ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿಭಾನ್ವಿತರಾದ ಸಾಪ್ತಾಹಿಕ ಮುಖ್ಯಸ್ಥೆ ವೆಂಕಟಲಕ್ಷ್ಮಿ, ಮಂಗಳೂರು ಮುಖ್ಯವರದಿಗಾರ ಜಿತೇಂದ್ರ ಕುಂದೇಶ್ವರ, ವಿನಾಯಕ ಕೋಡ್ಸರ, ಜಲರೆಡ್ಡಿ ಈಗಾಗಲೇ ಕೆಟ್ಟ ಬಾಸ್ ಕರಿಸ್ವಾಮಿಯ ದೌರ್ಜನ್ಯ ತಾಳದೆ ವಿಜಯ ಕರ್ನಾಟಕ ತೊರೆದಿದ್ದಾರೆ. ಇನ್ನು ಶಶಿಧರ ಭಟ್ಟರು ಸಮಯ ಬಿಡುವ ಬಗ್ಗೆ ಇತ್ತೀಚೆಗೆ 4 ತಿಂಗಳಿಂದ ಊಹಾಪೋಹಗಳಿದ್ದವು. ಇದೀಗ ಒಂದರ ಅಂತ್ಯ ಇನ್ನೊಂದರ ಆರಂಭ ಎಂದು ಭಟ್ಟರು ವೇದಾಂತ ಹೇಳುವ ಹಿಂದೆ ರಾಜೀನಾಮೆ ನೋವಿದೆ.

ಇನ್ನು ಎಂದಿನಂತೆ ಸಂಕೇಶ್ವರ ವಿಜಯವಾಣಿಗೆ ಉದಯವಾಣಿಯಿಂದ ಕ್ಯೂ ನಿಂತಿದೆ. ರವಿ ಹೆಗಡೆ ಅವರ ಬೆದರಿಕೆಗೆ ರಾಘವೇಂದ್ರ ಗಣಪತಿ, ಚಿಕ್ಕ ಗೌಡ, ದೊಡ್ಡ ಗೌಡರು ಹೊರಟಿದ್ದಾರೆ. ಸದ್ಯಕ್ಕೆ ಉಷಾಕಿರಣ ಟೀಮ್ ಇದೆ. ಸೆಟ್ ಮಾಡಿದ ಬಳಿಕ ವಿಕೆ ಹಳೆ ಪೌಂಡರ್ ಕೆಲಸಗಾರರನ್ನು ಸೇರ್ಪಡೆ ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಮಂಗಳೂರಿಂದ ಹರಗಿ ಪ್ರಯತ್ನಿಸುತ್ತಿದ್ದರೆ, ಕು.ನಾಥ ವಿಕೆಯಲ್ಲಿ ಸಮಸ್ಯೆ ಆದರೆ ಹೋಗುತ್ತೇನೆ ಎಂದಿರುವ ಮಾಹಿತಿ ಇದೆ. ಆದರೆ ರಾಮಕೃಷ್ಣನ ಬಾಸ್ ಅರುಣ್ ಈಗಾಗಲೆ ನಿರ್ಧಾರ ಕೈಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನದ ಆಫರ್ ನೀಡಲಾಗಿದೆ. ಅರುಣ್ ಹಿಂದೆ ಬಾಲದಂತೆ ಕಪಿ ಸೇನೆ ಸಾಗಲಿದೆ ಎನ್ನುವ ಗುಮಾನಿ ಇದೆ. ಪ್ರಿಂಟಿಂಗ್ ತಜ್ಞ ಜಿ.ಎಸ್. ಕುಲಕರ್ಣಿ ತನ್ನ ಸಂಬಂಧಿಕರನ್ನು ವಿಕೆ ಯಲ್ಲಿರುವ ಆಯಕಟ್ಟಿನ ಮುಖ್ಯಸ್ಥರನ್ನು ವಿಜಯವಾಣಿಗೆ ಕರೆಸಿಕೊಳ್ಳಲು ಮಾತುಕತೆ ನಡೆಸಿದ್ದಾರೆ.

ಜಿತೇಂದ್ರ ಕುಂದೇಶ್ವರ ರಾಜೀನಾಮೆ ಪತ್ರವನ್ನು ಬ್ಲಾಗ್ ಗೆ ಪೋಸ್ಟ್ ಮಾಡಿದ್ದು ಅದನ್ನು ಯಥಾವತ್ ಪ್ರಕಟಿಸುತ್ತಿದ್ದೇವೆ. ಓದುಗರ ನೋವು, ಸೀನಿಯರ್ ಗಳ ದಬ್ಬಾಳಿಕೆ, ಲೈಂಗಿಕ ಕಿರುಕುಳಗಳ ಬಗ್ಗೆ ನೀವು ಪೋಸ್ಟ್ ಮಾಡಬಹುದು.ವಿ

ವಿಕೆ ಗೆ ಕುಂದೇಶ್ವರ ಡೈವೋರ್ಸ್ !

ಸುಮಾರು 11 ವರ್ಷಗಳ ಕಾಲ ದುಡಿದ ವಿಜಯ ಕರ್ನಾಟಕದಿಂದ ದೂರವಾಗುತ್ತಿದ್ದೇನೆ. ಕಂಪನಿ ನನ್ನಿಂದ ಬಲವಂತದ ಡೈವೋರ್ಸ್ ಕೇಳಿದೆ.ನಕ್ಸಲ್, ಮಂಗಳೂರು ಟೆರರ್, ಅಂಡರ್ ವಲ್ಡ್, ಸರಣಿ ಹಂತಕ ಮೋಹನ, ಬೀದಿ ಮಕ್ಕಳ ಕುರಿತ ಸಾಮಾಜಿಕ ಕಳಕಳಿ, ಬುಡಕಟ್ಟು ಜನಾಂಗ ಕೊರಗರ ಬಗ್ಗೆ ಸರಣಿ ಲೇಖಗಳಿಗೆ ವಡ್ಡರ್ಸೆ, ಗ್ರಾಮೀಣ ವರದಿಗಾರಿಕೆಗೆ .ಗೋ. ಇತ್ತೀಚೆಗೆ ಮಾನವೀಯ ವರದಿಗಳಿಗೆ ಗವರ್ನರ್ ಕೈಯಲ್ಲಿ ಚರಕ ಅವಾರ್ಡ್ ಕೂಡಾ ಪಡೆದಿದ್ದೆ. ವಿಮಾನ ದುರಂತ ವರದಿಗಾಗಿ ಸಂಪಾದಕರಿಂದ ಶಹಬ್ಬಾಸ್ ಪತ್ರ, ಸಿಇಒ ರಿಂದ ವಿಶೇಷ ಪ್ರಶಂಸಾಪತ್ರ ಬಂದ ಆರೇ ತಿಂಗಳಲ್ಲಿ ಗಂಗಾವತಿಗೆ ವರ್ಗಾವಣೆ ಮಾಡಿಸಿದರು.ಿಸಂಪಾದಕರಿಂದ ಶಿಫಾರಸು, ಸಿ ನಿಂದ ಮೆಚ್ಚುಗೆ ಪತ್ರ ನೀಡಿದ್ದರು, ವಿಶ್ವೇಶ್ವರ ಭಟ್ಟರು ವಿಕೆ ಬಿಟ್ಟ ಬಳಿಕ ನನಗೆ ವರ್ಗಾವಣೆ ಪತ್ರ ಕೊಟ್ಟರು. ಇದರ ಹಿಂದೆ ಕು.ನಾಥನ ಕುಮ್ಮಕ್ಕಿತ್ತು. ಗಂಗಾವತಿಯಲ್ಲಿ ಕೆಟ್ಟ ಬಾಸ್ ಅನರ್ಹ ತುಲ್ಲುಹಾಳ ಚಂದ್ರ ನನಗೆ ಆಫೀಸ್ ಅಸಿಸ್ಟೆಂಟ್ ಕೆಲಸ ನೀಡಿ ಅವಮಾನಿಸಿದರು. ಬಳಿಕ ರಾಜೀನಾಮೆ ಪತ್ರ ಕೇಳಿದರು. ಕಿರುಕುಳಕ್ಕೆ ನೊಂದು ರಾಜೀನಾಮೆ ನೀಡಿದ್ದೇನೆ. ಹಣತಿನ್ನುವ ಭ್ರಷ್ಟರೇ ನನ್ನ ಮೇಲೆ ಸವಾರಿ ಮಾಡಿದರು ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಇದೆಂಥ ಅನ್ಯಾಯ?

-ಜಿತೇಂದ್ರ ಕುಂದೇಶ್ವರ ಮಾಜಿ ಪ್ರಧಾನ ವರದಿಗಾರ ವಿಕೆ.

Friday

ಗೂಗಲ್ ಸರ್ಚ್ ನಲ್ಲಿ ವಿ ಭಟ್ಟರು ನಂ.1 (ಮನೆ ವಿಳಾಸ)


ಸುವರ್ಣ ಚಾನೆಲ್ ಬ್ರೇಕಿಂಗ್ ಸುದ್ದಿ. ಅಚ್ಚರಿಯ ಬೆಳವಣಿಗೆಯಲ್ಲಿ ಗೂಗಲ್ ಸರ್ಚ್ ನಲ್ಲಿ ಅಗ್ರ ಸ್ಥಾನದಲ್ಲಿದ್ದ ಬ್ರಿಟ್ನಿ ಸ್ಪಿಯರ್ಸ್ ಈಗ ಎರಡನೇ ಸ್ಥಾನಕ್ಕೆ ಇಳಿದಿದ್ದಾಳೆ. ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟವರು ಭಾರತೀಯರು ಎನ್ನುವುದು ವಿಶೇಷ. ಯಾರೆಂದು ಬಲ್ಲಿರಾ ? ವಿ ಭಟ್ಟರು ! ಕರ್ನಾಟಕದ ಸುವರ್ಣ ಪ್ರಭೆಯ ಪೀಠಾರೋಹಣ ಬಳಿಕ ಮೊದಲನೇ ದಿನ ವಿಭಟ್ಟರ ಹೊಸ ಮನೆ ವಿಳಾಸವನ್ನು ಗೂಗಲ್ಹು ಸರ್ಚ್ ನಲ್ಲಿ ಹುಡುಕುವವರ ಸಂಖ್ಯೆ ಮಿಲಿಯಕ್ಕೇರಿದೆ !
ಮನೆ ಮುಂದೆ ಜೋಳಿಗೆ ಹಿಡಿದುಕೊಂಡು ಬಂದವರ ಸಂಖ್ಯೆ ಮಾಭ್ ನಲ್ಲಿದ್ದ ಕಾರಣ ಕೆಂಗೇರಿಯಿಂದಲೇ ಟ್ರಾಪಿಕ್ ಜಾಮ್ ಉಂಟಾಗಿದೆ. ಪೊಲೀಸರು ಕೊನೆಗೆ ಆಶ್ರು ವಾಯು ಸಿಡಿಸಬೇಕಾಯಿತು. ಭಟ್ಟರ ಮೊಬೈಲ್ ಕರೆಗಳ ಹಾವಳಿ ಎಷ್ಟಿತ್ತೆಂದರೆ ಮೊಬೈಲ್ ಚಾರ್ಜ್ ಮಾಡಿಸಲೆಂದೇ ಸಿಬ್ಬಂದಿ ನೇಮಿಸಿದ್ದಾರಂತೆ. ಅಂದ ಹಾಗೆ ಈ ಸುದ್ದಿ ಯಾವ ಮಾಧ್ಯಮದಲ್ಲಿಯೂ ಬಂದಿಲ್ಲ, ಏಕೆಂದರೆ ಬಂದವರೆಲ್ಲ ಪತ್ರಕರ್ತರೇ ಆಗಿದ್ದರಂತೆ.. !
ದೈತ್ಯ ಸಂಸ್ಥೆಯಲ್ಲಿ ಸಿಕ್ಕಿದ ಚಿಲ್ಲರೆ ಇನ್ ಕ್ರಿಮಿ ನೆಂಟ್ ಕಂಡು ಕೆಂಡವಾದ ಮಂದಿ ಕಂಡ ಕಂಡವರಲ್ಲಿ ಅವಲತ್ತುಕೊಂಡರಂತೆ. ದೊಡ್ಡ ದೊಡ್ಡ ಬಕಿಟ್ ಇಟ್ಟುಕೊಂಡವರ ಹುಂಡಿಯೂ ಭರ್ತಿಯಾಗಿಲ್ಲ ವಂತೆ. ಹೀಗಾಗಿ ಹೆಚ್ಚಿನ ದಕ್ಷಿಣೆ ಆಸೆಯಿಂದ ವಿ ಭಟ್ಟರ ಮನೆ ಮುಂದೆ ಮೈಲುದ್ದ ಕ್ಯೂ ನಿಂತಿದೆ. ಶತ್ರುಗಳನ್ನೂ ಪ್ರೀತಿಸುವ ಭಟ್ಟರು ನಮ್ಮನ್ನು ತೆಗೆದು ಹಾಕರು ಎಂಬ ನಂಬಿಕೆ.
ಕೆಪಿ ಟಿಕೆಟ್ ಆಕಾಂಕ್ಷಿಕಗಳ (ಸಂಭಾವ್ಯರ) ಮೂರನೇ ಪಟ್ಟಿ
1.ಎಚ್ ಕೆ... (ಲವಲವಿಕೆ ಮನುಷ್ಯ
2.. ಜೆ.ಕೆ.ಎಸ್. (ಗಂಡೆದೆ ಮನುಷ್ಯ)
3ಜೆ.ಕೆ. (ಕಂಡದ್ದು ಕೆಂಡದ ಹಾಗೆ ! )
4.ಜೀಕೆ (ಬದುಕಿದರೆ ಬೇಡಿ ತಿಂದೇನು )
4. ಸಿ ಕೆ (ಬದುಕಿದರೆ ಸಾಕು)
5. ಆರ್ ಎಂಡಿ (ಮುಂಡಿಗೆ ಹೂವಿನಂಥವರು )
6 ಎಚ್ ಆರ್ (ಮಾನವ ಸಂಪನ್ಮೂಲ ಅಲ್ಲ. ಎಲ್ಲದಕ್ಕೂ ಸೈ)
7 ಎಸ್ ಆರ್ ( ಯಾರಿಗೂ ರೇಗುವುದಿಲ್ಲ !)
8. ಆರ್ ಎನ್ ಕೆ.. (ಲವಲವಿಕೆ ಹುಡುಗ)


9.ವೈ ಕೆ (ಕಮರ್ಷಿಯಲ್ ಮನುಷ್ಯ)
10.ಎಂಬಿ. ಬಿಎಸ್
ಇತರ
ಆರ್್ ಕೆ..
ಕೆ.ಬಿ
ಎಸ್.ಕೆ.
ವಯ್ಟಿಂಗ್ ಲೀಸ್ಟ್
>ಎಲ್ ಕೆ
>ಕೆಕೆ
....
ಇನ್ನು ಎಸ್ ಕೆ ಅಂದರೆ ಸಂಕೇಶ್ವರ ಬಸ್ ಟಿಕೆಟ್ ಕಾಯ್ದಿರಿಸಿದವರು
ಎಲ್ಲ ಬ್ಯೂರೊಗಳಿಂದಲೂ ಅರ್ಜಿಗಳ ಮಹಾಪೂರ... ಬಂದಿದ್ದು ಪ್ರಮುಖರ ಮಾಹಿತಿ ಮಾತ್ರ ನೀಡಲಾಗಿದೆ.
ಯುಕೆ ಬಾಬಾ ಮತ್ತು 20 ಮಂದಿ .....ರು
ಆರ್ ಕೆ ಮತ್ತು ತಂಡ (ರೆಸ್ಪಾನ್ಸ್)
ಎ ಕೆ (ಬಿಎನ್ ಜಿ)
ಎಲ್ ಕೆ (ಬಿಎನ್ ಜಿ)
ಕೆಕೆ (ಬಿಎನ್ ಜಿ)

ವೆಯ್ಟಿಂಗ್ ಲೀಸ್ಟ್ ನ ಲ್ಲಿರುವನ್ನು ಮತ್ತು ಎರಡೂ ಕಡೆ ಆಕಾಂಕ್ಷಿಗಳನ್ನು ಪರಿಗಣಿಸುವ ಸಾಧ್ಯತೆ ಗಳು ಇಲ್ಲ ಎಂದು ಭಟ್ಟರ ಉನ್ನತ ಮೂಲಗಳು ತಿಳಿಸಿವೆ.10

Wednesday

ಹೊಸ ಪತ್ರಿಕೆಗೆ ಡಿ ಎನ್ ಎ ಟೆಸ್ಟ್ !

ವಿಜಯ ಸಂಕೇಶ್ವರ ಅವರು ಹೊಸ ಸಿ ಇ ಒ ನಿರೀಕ್ಷೆಯಲ್ಲಿದ್ದಾರೆ, ಒಂದು ವರ್ಷ ಪತ್ರಿಕೆ ಚೆನ್ನಾಗಿ ರೂಪಿಸಿದ ಬಳಿಕ ಎಂದಿನಂತೆ ಇಂಗ್ಲೀಷ್ ಪೇಪರ್ ಗೆ ಮಾರಾಟ ಮಾಡಲಿದ್ದಾರೆ. ಈ ಬಾರಿ ಡಿ ಎನ್ ಎ ಜತೆ ವ್ಯವಹಾರ ಕುದುರಿದೆ. ಹೀಗಾಗಿ ಎಷ್ಟೆ ಖರ್ಚಾದರೂ ತಲೆ ಬಿಸಿ ಮಾಡುವ ದರ್ದು ಇಲ್ಲ, ಏಕೆಂದರೆ ಅಡ್ವಾನ್ಸ್ ಸಿಕ್ಕಿಯಾಗಿದೆ, ಪತ್ರಕರ್ತರ ವಲಸೆಯೂ ಜೋರಾಗಿ ನಡಿಯುವ ಸಾದ್ಯತೆ ಇದೆ, ಈಗ ಹಳೆ ಉಷಾ ಕಿರಣ ಟೀಮ್ ಸೆಟ್ ಮಾಡುತ್ತಿರುವ ಸಂಕೇಶ್ವರ ಬಳಿಕ ಸ್ಟಾರ್ ಗಳನ್ನು ಬಳಗಕ್ಕೆ ಸೇರಿಸಲಿದ್ದಾರೆ. ನಂ. ವನ್ ಪತ್ರಿಕೆ ವಿಕೆಯಿಂದ ಬರುವ ಸ್ಟಾರ್ ಗಳಿಗೆ ಹೆಚ್ಚಿನ ಆಮಿಷ. ಆದರೆ ಬರುವವರ ಹಿನ್ನೆಲೆ ಬಗ್ಗೆ ಸಂಕೇಶ್ವರ ಬಹಳ ುಮೇದ ತೋರಿಸುತ್ತಿದ್ದಾರೆ.

ವಿಜಯಕ್ಕೆ ಇನ್ನು ಎರಡೇ ಮೆಟ್ಟಿಲು !

(ಮೀಡಿಯಾ ಮನ ಕೃಪೆ)ಎಡಿಶನ್, ೧೦ ಪ್ರಿಂಟಿಂಗ್ ಮೆಷಿನ್, ಒಬ್ಬ ಪ್ರಿಂಟಿಂಗ್ ತಂತ್ರಜ್ಞ !

ಸಂಕೇಶ್ವರ ಅವರ ಹೊಸ ಪತ್ರಿಕೆ ಕಾರ್ಯ ಬಿರುಸಿನಿಂದ ಸಾಗಿದೆ.ಎಸ್. ಕುಲಕರ್ಣಿ ವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಿ, ಸಂಕೇಶ್ವರರ ಜೊತೆ ಸೇರಿದ್ದಾರೆ. ಇವರೊಬ್ಬ ಪ್ರಿಂಟಿಂಗ್ ಡಾನ್ ಎನ್ನಬಹುದು!
ಮೂಲಗಳ ಪ್ರಕಾರ ಸಂಕೇಶ್ವರ ಅವರು ಒಂದೇ ಏಟಿಗೆ ೧೦ ಆವೃತ್ತಿ ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ. ೧೦ ಕಡೆಯೂ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸುವ ಉದ್ದೇಶ ಅವರದ್ದು. ಬಲು ಜೋರಿನಿಂದಲೇ ಮಾರುಕಟ್ಟೆ ಪ್ರವೇಶಿಸುವುದು ಸಂಕೇಶ್ವರರ ಉದ್ದೇಶ. ಪೂನಾ ಮೂಲದ ಮೊನೋಗ್ರಾಪ್ ಕಂಪನಿಯಾ ಅಶ್ವಥ ಆರಾಯಣ ಎಂಬವರ ಜೊತೆ ಶನಿವಾರ ಮಾತುಕತೆ ನಡೆಸಿದ್ದಾರೆ.ಉಳಿದ ಮಾಹಿತಿಗೆ ಮೀಡಿಯಾ ಮನ ನೋಡಿ/.

>ರಂಗ< ಸ್ಥಳಕ್ಕೆ ಕನ್ನಡ ಚಾನೆಲ್...

ರಂಗನಾಥರು ದಟ್ಸ್ ಕನ್ನಡಕ್ಕೆ ಕೊಟ್ಟ ಸಂದರ್ಶನ ಇದು...



ಕನ್ನಡ ಸುದ್ದಿ ಚಾನಲ್ಲುಗಳ ಸಾಲಿಗೆ ಸದ್ಯದಲ್ಲೇ ಹೊಸ ವಾಹಿನಿಯೊಂದು ಸೇರ್ಪಡೆಯಾಗಲಿದೆ. ಉದ್ದೇಶಿತ ವಾಹಿನಿಯು ಸುವರ್ಣ ಟಿವಿಯಲ್ಲಿ ಸಂಪಾದಕರಾಗಿದ್ದ ಎಚ್ ಆರ್ ರಂಗನಾಥ್ ಅವರ ಮುಂದಾಳತ್ವದಲ್ಲಿ ಜನ್ಮತಾಳಲಿದೆ.

ಇಂದಿನಿಂದ 80 ದಿನಗಳೊಳಗಾಗಿ ತಮ್ಮ ಚಾನಲ್ ಪ್ರಸಾರ ಆರಂಭಿಸಲಿದ್ದು. ಚಾನಲ್ ನಿರ್ಮಾಣ ಚಟುವಟಿಕೆಗಳು ಭರದಿಂದ ಸಾಗಿವೆ ಎಂದು ರಂಗನಾಥ್ ಇದೇ ಮೊದಲಬಾರಿಗೆ ಅಧಿಕೃತವಾಗಿ ಪ್ರಕಟಣೆ ಮಾಡಿದ್ದಾರೆ.

ಕನ್ನಡ ಟಿವಿ ವೀಕ್ಷಕರ ಆಶೋತ್ತರಗಳನ್ನು ಯಥಾವತ್ತಾಗಿ ಬಿಂಬಿಸುವ, ಮೊಟ್ಟ ಮೊದಲ ಜನಪರ ವಾಹಿನಿಯಾಗಿ ತಮ್ಮ ಚಾನಲ್ ರೂಪುಗೊಳ್ಳಲಿದೆ ಎಂದು ಅವರು ದಟ್ಸ್ ಕನ್ನಡಕ್ಕೆ ತಿಳಿಸಿದರು.

ಇಪ್ಪತ್ನಾಲ್ಕು ಗಂಟೆ ಕನ್ನಡದಲ್ಲಿ ಸುದ್ದಿ ನೀಡುವ ಟಿವಿ9, ಸುವರ್ಣ ನ್ಯೂಸ್, ಜನಶ್ರೀ ಮತ್ತು ಸಮಯ ಚಾನಲ್ಲುಗಳ ಸಾಲಿಗೆ ರಂಗ ಅವರ ಇನ್ನೂ ಹೆಸರಿಡದ ಚಾನಲ್, 5 ನೇ ವಾಹಿನಿಯಾಗಿ ಸೇರ್ಪಡೆಯಾಗುತ್ತದೆ.

ಇಪ್ಪತ್ತು ಸಾವಿರ ಚದರ ಅಡಿ ಜಾಗ ಇರುವ ಚಾನಲ್ ಕಚೇರಿ ಯಶವಂತಪುರದಲ್ಲಿ ತೆರೆಯಲಾಗಿದೆ. ಚಾನಲ್ ಸ್ಥಾಪನೆಗೆ ಅಗತ್ಯವಾಗ ತಾಂತ್ರಿಕ ಉಪಕರಣಗಳು, ಇಂಟೀರಿಯರ್ ಡೆಕೋರೇಷನ್ ಮತ್ತು ಅಗತ್ಯ ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ರಂಗಾ ಹೇಳಿದರು.

ನಿಮ್ಮ ಹೊಸ ಸಾಹಸಕ್ಕೆ ಬಂಡವಾಳ ಹಾಕುವವರು ಯಾರು ಎಂಬ ಪ್ರಶ್ನೆಗೆ ಸೀದಾ ನೇರ ಉತ್ತರ ನೀಡಲು ನಿರಾಕರಿಸಿದ ರಂಗ, ಕಪ್ಪುಹಣ ಮತ್ತು ರಾಜಕೀಯ ವ್ಯಕ್ತಿಗಳ ಹಣದಿಂದ ತಮ್ಮ ಚಾನಲ್ ಮುಕ್ತವಾಗಿರುತ್ತದೆ ಎಂದಷ್ಟೇ ಹೇಳಿದರು.

ತಮ್ಮ ಹೊಸ ಸಾಹಸ ಪತ್ರಕರ್ತರ ಪಾಲುದಾರಿಕೆಯಿಂದ ನಡೆಯುವ ಚಾನಲ್ ಆಗಿರುತ್ತದೆ ಎಂದೂ ಅವರು ಒತ್ತಿ ಹೇಳಿದರು. ತಾವು 1 ರು. ಸಂಬಳ ಪಡೆಯುವ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.

ತಮ್ಮ ಚಾನಲ್ ಲಾಭ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ. ಉದ್ಯಮ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಷ್ಟು ಆದಾಯ ಮಾಡಿದರಷ್ಟೇ ಸಾಕು ಎಂದ ರಂಗ, ಯಾವುದೇ ರಾಜಕೀಯ, ಉದ್ಯಮದ ಲಾಬಿಗಳಿಗೆ ಮಣಿಯದ ತಮ್ಮ ಸಂಸ್ಥೆ, ಸ್ವಚ್ಛ, ಸೀದಾ, ಸಾದಾ, ಪತ್ರಿಕೋದ್ಯಮದಲ್ಲಿ ಬಲವಾದ ನಂಬಿಕೆ ಇಟ್ಟ ಒಂದು ವಿನೂತನ ಮಾಧ್ಯಮ ಸಂಸ್ಥೆ ಆಗಲಿದೆ ಎಂದರು.

ಚಾನಲ್ ಆರಂಭಿಸುವುದಕ್ಕೆ ಮೂಲ ಬಂಡವಾಳ 10 ಕೋಟಿ ರು. ಬೇಕು. ಪ್ರತೀ ತಿಂಗಳು 1 ಕೋಟಿ ರು. ಪುನರಾವರ್ತಿತ ವೆಚ್ಚದಂತೆ ವರ್ಷಕ್ಕೆ 25 ಕೋಟಿ ರು. ಬಂಡವಾಳ ಅಗತ್ಯ ಎಂದು ನುಡಿದರು.

Friday

ರಾಘವಾಂಕ ಚರಿತ, ಕುಮಾರ ಪತನ, ವಿಶ್ವೇಶ್ವರ ವಿಜಯ ತ್ರೀ ಶತಕಂ ಇದಂ


ವಿಕ ಚಕ್ರಾಧಿಪತ್ಯವ ಧಿಕ್ಕರಿಸಿ, ಹಾಲಾಹಲವ ಉಂಡು ಭಕ್ತರ ರಕ್ಷಿಸಿ ತಾ ನೀಲ ಕಂಠನೆನಿಸಿದ ತ್ಯಾಗಮೂರ್ತಿ ವಿಶ್ವೇಶ್ವರ ಕೈಲಾಸ ಸೇರಿ ಧನಲಕ್ಷ್ಮೀ ಸಹಿತಂ ಚಂದಂದಿಂ ಆಡಳಿತ ನಡೆಸುತ್ತಿರೆ, ವಿನಾಯಕ, ಮುರುಗ ಸರ್ವ ದೇವ, ಭೂತ ಗಣಂಗಳಿಗೆ ಚೈತನ್ಯ ಸಂಗಡಂ ಭಡ್ತಿಯ ನೀಡಿ ತನ್ನ ಪ್ರತಾಪವಂ ತೋರಿಸುತ ಅಭಯಂ ಗೈಯುತ್ತಿರಲಾಗಿ, ಇತ್ತ ಭರತ ಖಂಡದ ವಿಕ ಚಕ್ರಾಧಿಪತಿ ರಘುಕುಲ ತಿಲಕ ರಾಘವ ಲಂಡನಾ ನಗರಕ್ಕೆರಜಾ ಮಜಾ ಬಿಜಯಂ ಗೈಯುತ್ತಿರಲು..

ಇತ್ತ ಭೂಲೋಕದ ಪಂಪಾಮಾರ್ಗದೊಳು ವೈಕುಂಠ ದ್ವಾರದಲ್ಲಿ ನಿಂತಿರ್ಪ ಅಶೋಕಿಲಾಲ ಮತ್ತು ಕರಿ ಮುಖದ ಗಣಪ ತಾನೇ ದ್ವಾರಪಾಲಕರೆಂದಿನಿಪ ಜಯ ವಿಜಯರೆಂಬ ಗರ್ವದೊಳು ಪ್ರಕಾಶಮಾನ ಆಡಳಿತ ನಡೆಸುತಿರೆ, ಕೆಂಚಣ್ಣ, ಕರಿಯಣ್ಣ ನನಗೆ ಎನೂ ಗೊತ್ತಿಲ್ಲಣ್ಣ ಎಂದುಸಿರದನೂ....

ಅರರೇ...ಇದೇನಿದು... ಮಂಗನೂರಿನ ಸಾಮ್ರಾಜ್ಯದೊಳು ಬಂಡಾಯ ಭುಗಿಲೇಳುತಿರೆ.. ಕುಮಾರ ತನ್ನ ಕಪಿ ಸೇನೆ ಜಾಗೃತಗೊಳಿಸುತ್ತಿರಲು... ಇವರ ಮಂಗಾಟವ ಕಂಡು ಬೆದರದ ಮೈಸೂರಿನ ಝೂ ನಾಡ ಅಧಿಪತಿಯಾಗಿ ಈ ಪರಿಯ ಅಸಂಖ್ಯ ಕಂಡಿರ್ಪ ನಾವಡ, ತನ್ನ ಚೆಂಡೆ ಮದ್ದಳೆ ಬಾರಿಸುತಿರಲು, ಈ ಚರ್ಮ ವಾದ್ಯಕೆ ಕಪಿಸೇನೆ ವಿಲ ವಿಲನೆ ಒದರಾಡಿ ಹಾ ರಾಮಾ, ಹಾ ಕೃಷ್ಣ ಪ್ರಲಾಪಿಸುತಿರಲಾಗಿ..

ಸೀರೆ ಪ್ರಸಂಗವಾದರೆ ಕೃಷ್ಣ ನೆನೆಸು ಬಾ, ಯಾರಿಗಾದರೂ ಕಾಡಿಗೋ, ನೀರಿಲ್ಲದ ನಾಡಿಗೋ ಅಟ್ಟಬೇಕಾದರೆ ವನವಾಸಿ ಕುಮಾರ-ರಾಮನ ನೆನೆಯೋ,

ಅಯ್ಯೋ ಇದೇನಿದು ನಾ ಕಾಣುತಿರೆ.. ಇದು ನಾವಡನ ಬಸಿರು, ಕುಮಾರನ ಹೆಸರಾಯ್ತು, ಇದು ಎಂಚಪೊರ್ಲಾಂಡು, ಇದಂ ಎತ್ತಣಿಂದೆತ್ತ ಸಂಬಂಧವಯ್ಯಾ

ಎಂದು ದಾಸ ವರೇಣ್ಯ ಚಾಡಿ ದಾಸ, ಹೊನ್ನು, ಕ್ವಾಟರ್ ದಾಸ, ಹರ ಹರಾ ಹರಾಮಿ ಕೊಳಕು ಬಾಯಿಯಿಂದಂ ಕುವಚನಗಳನ್ನು ಉದುರಿಸಿ, ಹಲುಬಿದ ಎಂಬಲ್ಲಿಗೆ ಒಂದು ಷಟ್ಪದಿ ಮುಕ್ತಾಯಂ.

ಇತ್ತ ಇದ್ದಲ್ಲಿಯೇ ಚರಂಡಿ ಹೂಳೊಳು ನಲುಗುತ್ತಿರೆ ವ ರದ್ದಿಗಾರರು ಇನ್ ಕ್ರಿಮಿನೆಂಟ್ ಇಲ್ಲದೆ ನಾ ಕೆಲಸ ಮಾಡೆವು ಎಂದು ಕಂಪನಿಗಳಲ್ಲಿ ತಾ ಕ್ರಿಮಿಗಳೆಂಬ ಕೊಂಚಮೂ ಮಾಹಿತಿ ಇಲ್ಲದೆ ಒದರುತ್ತಿರಲು.. ನೆಟ್ ಗಳೇ ನೆಟ್ ವರ್ಕ ಆಗಿರ್ಪ ಬರಿದೇ ಕಾಸು ಹಾಸೆನ್ನುವ, ಹಳೆ ಫೈಲುಗಳನೇ ದೋಸೆಯಂತೆ ಮಗುಚಿ ಹಾಕುತ್ತ ಬರಿದೇ ತಮ್ಮ ನಾಮಕರಣವ ಮಾಡತಿರ್ಪ ಪರ್ತಕರ್ತರ ಕಂಡು ವಿಹ್ವಲನಾದ ಕೆಲಸ ಖೋರ ನಾವಡ, ಮುದಿ ಹುಲಿಗಳಿಗೆ ರಾಘವ ಕೊಡಮಾಡಿದ ರಿಂಗ್ ಹಿಡಿದು ಚೆಂದದಿಂ ಆಡಿಸುತ್ತಿರಲು, ಕಪಿಸೇನೆ ಬಾಲ ಮುದುರಿ ರೋದಿಸುತ್ತಿರಲು... ಇಲ್ಲಿಗೆ ಪಂಚಪದಿ ಮುಕ್ತಾಯಂ

(ಕೃಪೆ: ರಾಘಾವಂಕ ಚರಿತ ಮತ್ತು ವಿಶ್ವೇಶ್ವರ ವಿಜಯ)

Saturday

ಮೂವರು ರೋಲ್ ಕಾಲ್ ಪತ್ರಕರ್ತರೂ ಮಾಧ್ಯಮಗಳೂ



ಪತ್ರಿಕೋದ್ಯಮಿಗಳು ಹೇಗೆ ಬೆಳೆಯುತ್ತಾರೆ ಎಂಬುದು ಬಟಾ ಬಯಲಾಗುತ್ತಿದೆ. ನಮ್ಮ ಬೆಂಗಳೂರಿನ ಮೂರು ಖತರ್ನಾಕ್ ವರದಿಗಾರರು ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿ ದೋಚಲು ಹೊಂಚು ಹಾಕಲು ಹೋಗಿ ಇಂಗು ತಿಂದ ಮಂಗನಂತಾಗಿದ್ದಾರೆ.



ಈ ಬ್ಲ್ಯಾಕ್ ಮೇಲ್ ಪತ್ರಕರ್ತರನ್ನು ಬೆಂಗಳೂರಿನ ಕಳ್ಳ ಪೊಲೀಸರು ಬಂಧಿಸಿಲ್ಲ. ಈ ಸುದ್ದಿಯನ್ನು ಎಲ್ಲ ಪತ್ರಿಕೆಗಳು ಪ್ರಕಟಿಸಿಲ್ಲ. ಪ್ರಕಟಿಸಿದವರು ವರದಿಗಾರರ ಹೆಸರು ಹಾಕಿಲ್ಲ. ಒಬ್ಬಾತ ಅಹಿಂದೂ ಪತ್ರಿಕೆಯ ತುಂಬಾ ಹಳೆಯ ವರದಿಗಾರ ಮತ್ತು ಕಸುಬಿನಲ್ಲಿ ಪಳಗಿದ ಹಳೇ ಗಿರಾಕಿ. ಇನ್ನಿಬ್ಬರು ಪತ್ರಿಕೋದ್ಯಮದಲ್ಲಿ ಇರದ ಉ ಟಿವಿ ವಂಚಕರು. ಯಾವ ಟಿವಿ ಚಾನಲುಗಳು ಎಫ್ ಐ ಆರ್, ಪೋಲೀಸ್, ಕ್ರೈಮ್ ಸ್ಟೋರಿಗಾಗಿ ಅರ್ಧ ಗಂಟೆ ಕಾರ್ಯಕ್ರಮ ಮಾಡುವ ಮನಸ್ಸು ಮಾಡಿಲ್ಲ.



ಕುಲ ಬಾಂಧವರ ಬಗ್ಗೆ ಅಸ್ಟೊಂದು ಕನಿಕರ. ಖದೀಮರು ಸಚಿವೆ ಶೋಭಾ ಕರಂದ್ಲಾಜೆ ಹೆಸರು ಹೇಳಿಕೊಂಡು ಡೀಲ್ ಮಾಡಲು ಹೋಗಿದ್ದರು. ಆಂಧ್ರ ಕರೆಂಟು ಕಂಪೆನಿಗೆ ಸರಕಾರ ೧೭ ಕೋಟಿ ಹಣಕೊಡಲು ಇತ್ತು. ಅದನ್ನು ವಸೂಲು ಮಾಡಲು ಕಂಪನಿಯಿಂದ ಹತ್ತು ಪೆರ್ಸೆಂಟ್ ಕೇಳಲಾಗಿತ್ತು. ಇದರ ಹಿಂದಿರುವ ಸೂತ್ರದಾರ ಒಬ್ಬ ಬಿಜೆಪಿ ಎಮೆಲ್ಸಿ ಇದ್ದಾನೆ.ಯಡ್ಡಿ ಸರಕಾರ ಬಂದ ಮೇಲೆ ಪತ್ರಿಕೋದ್ಯಮದ ಭ್ರಷ್ಟಚಾರ ಪರಕಾಷ್ಟೆ. ತಲುಪಿದೆ. ವಿಧಾನಸೌಧ, ಎಂ ಎಸ್ ಕಟ್ಟಡ, ಸಿಟಿ ಕಾರ್ಪೊರೇಷನ್ ದೊಡ್ಡ ಅಡ್ಡಗಾಲು. ಮಿಡ್ಲು ಮ್ಯಾನ್ ಬೇಕಾಗಿಲ್ಲ. ಬಿಲ್ ಪಾಸು ಮಾಡುತ್ತಾರೆ, ಟೆಂಡರ್ ಫಿಕ್ಸ್ ಆಗುತ್ತೆ. ಹೀಗಿದೆ ಪತ್ರಿಕೋದ್ಯಮ.



ಕೃಪೆ: ನ್ಯೂ ಮೀಡಿಯಾ ಬ್ಲಾಗ್.....



ಪೇಪರ್ "ಖುಸಿತ" ವಿಸಯ ! ಇದು ವಿಕೆ ವಿಸ್ಮಯ



ವಿಶಿಷ್ಟ ರಂಗನಾಥ, ವಿಚಿತ್ರ ಅನಾಥರ ಬಗ್ಗೆ ಬರೆದಷ್ಟು ಮುಗಿಯದು. ಮಂಗಳೂರಿನ ವಿಕೆಯಲ್ಲಿ ಮೂಡಿ ಬರುತ್ತಿರುವ ಅಭಿಯಾನ ಪ್ರೆಸ್ ಕ್ಲಬ್ ಗಳಲ್ಲಿ ಸಕಾರಾತ್ಮಕವಾಗಿ ಚರ್ಚೆ ಆಗುತ್ತಿದ್ದರೆ ಒಳಗೊಳಗೆ ಚೇಳುಗಳು ಕೊತ ಕೊತ ಕುದಿಯುತ್ತಿವೆ. ನಾವಡ ಎಕ್ಸ್ ಪೆರಿಮೆಂಟ್ ಗಳಿಂದ ತಾನು ಎಕ್ಸ್ ಚೀಪ್ ಆಗಿಬಿಟ್ಟರೆ ಎಂಬ ಭಯ. ಕೊನೆಗೆ ಅನಾಥನಾಗಿಬಿಟ್ಟರೆ ಎಂಬ ಹೆದರಿಕೆ ಆಸ್ಥಾನ ಸಂಪಾದಕೆ.



ಪೇಪರ್ ಸಂಖ್ಯೆ ಇಳಿಯುತ್ತಿದೆ ಎಂಬ ದೂರು ನೀಡಿ ನಾವಡರನ್ನು ನೀವಾಳಿಸಬಹುದೋ ಎಂಬ ದುರಾಸೆ. ಕಳೆದ ಬಾರಿ ಜಾಹೀರಾತು ವಿಭಾಗ ಮೂಲಕ ಹಣಿಯಲು ಯತ್ನಿಸಿದ್ದರೂ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ ದೂರನ್ನು ಈ ಬಾರಿ ಸರ್ಕುಲೇಶನ್ ವಿಭಾಗ ಮೂಲಕ ಪ್ರಸರಣಕ್ಕೆ ಷಡ್ಯಂತ್ರ ನಡೆಯುತ್ತಿದೆ. ಅಭಿಯಾನದ ಪರಿಣಾಮ ಸರ್ಕುಲೇಶನ್ ಇಳಿದಿದೆ ಎಂಬ ವರಾತ ಎತ್ತಿರುವ ಅನಾಥ ಪಡೆ ದೂರು ಸಿ ಇ ಒಗೆ ನೀಡುವಂತೆ ಎಲ್ಲರ ಬಳಿ ದಂಬಾಲು ಬೀಳುತ್ತಿದೆ. ಏಕೆಂದರೆ ಸಂಪಾದಕರಿಗೆ ಹೇಳಿದರೆ ಕ್ಯಾರೆ ಅನ್ನದೆ ನಾವಡರಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬ ಹೆದರಿಕೆ, ಇದು ಹಿಂದಿನ ಅನುಭವ ಕುನಾಥಗೆ ಲಭಿಸಿದೆ.



ಹೀಗಾಗಿ ಸ್ಥಳೀಯ ಹೆಡ್ಡ್ ಗಳ ಬಳಿ " ಬೇರೆ ಯಾರಲ್ಲಿಯೂ ಹೇಳುವುದು ಬೇಡ ನೀವು ಸಿ ಇ ಒಗೆ ದೂರು ನೀಡಿ' ಎಂದು ಚಾಡಿ ಕೆಲಸ ಹೇಳಲು ಆರಂಭಿಸಿದ್ದಾನೆ.



ಈ ಬಾರಿ ಸರ್ಕುಲೇಶನ್ ಮೂಲಕ ಮಣಿಯದಿದ್ದರೆ ಇನ್ನು ಮಂಗಳೂರಿ ಗಣ್ಯರ ಮೂಲಕ ದೂರು ಕೊಡಿಸಬೇಕು ಎಂಬ ಸ್ಕೆಚ್ ರೆಡಿಯಾಗುತ್ತಿದೆ. ನಾವಡರು ಎಷ್ಟೇ ಚಾಣಾಕ್ಷ ನಾದರೂ ಕುನಾಥ ಕೌಟಿಲ್ಯದ ಮುಂದೆ ಯಶಸ್ವಿಯಾಗುವುದೇ ಎಂಬ ಬಗ್ಗೆ ಪ್ರೆಸ್ ಕ್ಲಬ್ ನಲ್ಲಿ ಚರ್ಚೆ ನಡೆಯುತ್ತಿದೆ.



ಅಲ್ಲ ಸ್ವಾಮಿ ಕುನಾಥನ ಹಿಂದೆ ಮಾಡಿದ ಎಡವಟ್ಟಿನಿಂದ ಪತ್ರಿಕೆ ಸಂಖ್ಯೆ ಇಳಿದಿರಬಹುದು, ಒಂದು ತಿಂಗಳ ಅಭಿಯಾನದಿಂದ ಪತ್ರಿಕೆ ಇಳಿಯುವುದಾದರೂ ಹೇಗೆ ? ಕೃಷ್ಣ ಪರಮಾತ್ಮನೇ ಬಲ್ಲ. ಇದರ ಪ್ರಭಾವ ಏನಿದ್ದರೂ ಮುಂದಿನ ೩ ತಿಂಗಳ ಬಳಿಕ ಗೊತ್ತಾಗಬಹುದು. ಮಿಂಚು ಹೊಡೆದ ಬಳಿಕ ಸಿಡಿಲು ಬರುತ್ತದೆ. ಆದರೆ ಭೂಕಂಪ ಆದ ಬಳಿಕ ಸುನಾಮಿ ಬರಲು ಅನೇಕ ಗಂಟೆಗಳು ಹಿಡಿಯುತ್ತವೆ. ಇದೇ ರೀತಿ ವ್ಯತ್ಯಾಸ ತಿಳಿಯದ ದಡ್ಡರು ಕತ್ತೆಗೆ ಮೂರೇ ಕಾಲು ಎನ್ನುತ್ತಾರೆ.

Tuesday

ರಂಗಾಯಣ -ಟೀವಿ ೫


ಹೌದು ರಂಗಾಯಣ ಎಲ್ಲೀವರೆಗೆ ಬಂತು ಎಂದು ಓದುಗರು ಕೇಳಿದ್ದಾರೆ. ಪ್ರಪಂಚವೇ ಹಾಗೆ. ಚಲಾವಣೆಯಲ್ಲಿದ್ದರೆ ಮಾತ್ರ ನೆನಪು, ಇಲ್ಲಾಂದ್ರೆ ಮರೆತೇ ಹೋಗುತ್ತೆ, ಇದು ಮನಸ್ಸಿನ ಹುಟ್ಟುಗುಣ. ಹಾಗೇನೇ ಕಿರು ತೆರೆ ಪರದೆಯಿಂದ ರಂಗ ಮರೆಯಾದ ಬಗ್ಗೆ ಮರೆತೇ ಹೋಗಿತ್ತು. ವಿಷಯ ಏನಪ್ಪಾ ಅಂದ್ರೆ ಮತ್ತೆ ಆಂಧ್ರ ಟೀವಿ ೫ ಹಿಡಿದುಕೊಂಡು ಕರ್ನಾಟಕಕ್ಕೆ ದಾಂಗುಡಿ ಇಡುತ್ತಿದ್ದಾರೆ ನಮ್ಮ ರಂಗನಾಥರು. ಟೀವಿ ೫ ಹೆಸರು ಮಾತ್ರ ಖರೀದಿ ಮಾಡಿದ್ದಾರೆ. ಉಳಿದೆಲ್ಲ ಸಂಪನ್ಮೂಲ ರಂಗಣ್ಣನೇ ವಹಿಸ್ಕೋಬೇಕು. ಈಗ ಹಣ ಹೇಗೆ ಹೊಂದಿಸೋದು ಎಂಬ ಬಗ್ಗೆ ಮಾತ್ರ ಚಿಂತೆ. ಹಿಂದೆ ಮಾಡಿಟ್ಟ ಹಣ ಸ್ವಲ್ಪ ಇದೆ, ಸುವರ್ಣ ಚಾನೆಲ್ ಶೇರ್ ಹಣ. ದೊಡ್ಡದಾಗಿ ರಂಗಕ್ಕೆ ಇಳಿಯಲು ಹಣ ಇಷ್ಟು ಸಾಲದು. ವಂತಿಗೆ ಎತ್ತಿ ಅಭ್ಯಾಸ ಇದ್ದರೂ ಅಷ್ಟೂ ಸಂಗ್ರಹವಾಗುವುದು ಡೌಟ್. ರಾಜಕೀಯ ನಾಯಕರ ಸಹವಾಸ ಕಷ್ಟ. ಧನಿಕರ ಬಳಿ ಹೋಗಬಹುದು ಆದರೆ ಕೊನೆಗೆ ಕನಿಕರ ತೋರದೆ ಕಿತ್ತು ಹಾಕುತ್ತಾರೆ. ಹೀಗಾಗಿ ಸಹಾಯ ಧನ ಸಂಗ್ರಹ ಚಿಂತೆಯಿಂದ ಸ್ವಲ್ಪ ವಿಳಂಬ ಆಗುತ್ತಿದೆ. ಆದರೂ ಶೀಘ್ರದಲ್ಲಿಯೇ ಹೊಸ ಕನ್ನಡ ಚಾನೆಲ್ ಮೂಲಕ ರಂಗಾಯಣ, ರಾಮಾಯಣ ಕದನ ನೋಡಬಹುದು.
ಸುವರ್ಣ ಪ್ರಭೆ
ಇಷ್ಟರಲ್ಲಿಯೇ ಸುವರ್ಣ-ಕೆಪಿ ಒಟ್ಟಾಗಿ ಬೆಂಗಳೂರಿನ ಎಂಜಿ ರೋಡ್ ನಲ್ಲಿ ಭವ್ಯ ಕಟ್ಟೋಣದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಒಳ್ಳೆ ಕ್ಯಾಫ್ಟನ್ ನಿರೀಕ್ಷೆಯಲ್ಲಿದ್ದಾರೆ ರಾಜೀವ್ ಚಂದ್ರ ಶೇಖರ್. ವಿ ಭಟ್ಟರು ಸಮರ್ಥರು ಆದರೆ ಅವರಿನ್ನೂ ವಿಕೆ ಹ್ಯಾಂಗ್ ಓವರ್ ನಿಂದ ಹೊರ ಬಂದಿಲ್ಲ ಅಂಥಾ ಕಾಣುತ್ತೆ. ಇದಕ್ಕೆ ಕೆಪಿಯ ಭಾನುವಾರದ ಅಂಕಣವೇ ಸಾಕ್ಷಿ. (ಆದರೆ ಅದರಲ್ಲಿಯೂ ಓದುಗರಿಗೆ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ವಿಶೇಷ). ಹಳೆಯ ಶಿಲಾಯುಗದ ನೆನಪು ಮಾಸಿದ ಬಳಿಕ ಹೊಸ ಪ್ರಭೆಯಿಂದ ಸುವರ್ಣ ಯುಗಕ್ಕೆ ಚಾಲನೆ ಸಿಗಬಹುದು. ಅಲ್ಲೀವರೆಗೆ ಏನ್ ಮಾಡ್ತಾರೆ ಅನ್ನೋದನ್ನು ನಾವೂ ನೋಡ್ತಾ ಇರ್ತೀವಿ.

Sunday

ನೋ-ಎಡಿಟರ್ ೫ ಸಾವಿರ ಓದುಗರು !


ಮಾಧ್ಯಮಗಳಲ್ಲಿನ ಒಳ ಸುಳಿಗಳ ಕುರಿತು, ಅನ್ಯಾಯ, ದೌರ್ಜನ್ಯಗಳ ವಿರುದ್ಧ ರೂಪುಗೊಂಡಿರುವ ಬ್ಲಾಗ್ ಕಳೆದ ಎರಡು ತಿಂಗಳಲ್ಲಿ ೫ ಸಾವಿರ ಓದುಗರನ್ನು ಸಂಪಾದಿಸಿ ದಾಖಲೆ ಮಾಡಿದೆ. ೪ ವರ್ಷಗಳ ಹಿಂದೆ ಬ್ಲಾಗ್ ಆರಂಭಗೊಂಡಿದ್ದರೂ. ಹೊಸ ಖದರ್ ನಲ್ಲಿ ಮಾರ್ಚ್ ಅಂತ್ಯದಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಪೇಸ್ ಬುಕ್ ಗೆಳೆಯರ ಸಹಕಾರದಿಂದ ಪತ್ರಕರ್ತರ ಒಳ್ಳೆ ಗುಣ ಮತ್ತು ಅವಗುಣಗಳ ಬಗ್ಗೆ ಬರೆಯಲು ಸಾಧ್ಯವಾಯಿತು. ಇದೆಲ್ಲ ಶ್ರೇಯ ಎಂದಿನಂತೆ ಸುದ್ದಿಮನೆಯ ಬಾಣಸಿಗರಿಗೆ ಸಲ್ಲುತ್ತದೆ. ಅವಸರದ ಕೆಲಸದ ನಡುವೆಯೂ ಸ್ವಲ್ಪ ಹೊತ್ತು ನೋ ಎಡಿಟರ್ ನೋಡುವ ಪರಿಪಾಠ ಬೆಳೆಸಿಕೊಂಡಿರುವುದು ಒಳ್ಳೆ ಬೆಳವಣಿಗೆ. ಕನಿಷ್ಠ ವಾರಕ್ಕೆ ಎರಡು ಬಾರಿ ಒಳ್ಳೆ ಸುದ್ದಿ (ಕೆಟ್ಟದ್ದು-ಒಳ್ಳೆಯದು ನಿಮ್ಮ ವಿವೇಚನೆಗೆ ಬಿಟ್ಟಿದ್ದು) ಕೊಡಲು ಪ್ರಯತ್ನಿಸುತ್ತೇನೆ-
ನೊ- ಎಡಿಟರ್ ಸಂಪಾದಕಿ!

ನೊ -ಎಡಿಟರ್ ಪರಿಣಾಮ.. ಕೀಚಕರ ನಿರ್ನಾಮ !


ಲೈಂಗಿಕವಾಗಿ ಪೀಡಿಸುವ ಚೀಪ್ ಬ್ಯೂರೊಗಳಿಗೆ ತಕ್ಕ ಪಾಠ. ಈ ಬಗ್ಗೆ ನೋ-ಎಡಿಟರ್ ಮೊದಲೇ ಎಚ್ಚರಿಕೆ ನೀಡಿತ್ತು. ಒಂದು ವಿಕೆಟ್ ಉರುಳಿದೆ.. ಇದು ಬ್ಲಾಗ್ ಸದಾಶಯ ಪರಿಣಾಮ. ಕೀಚಕರ ಬಗ್ಗೆ ಈ ಗಾಗಲೇ ಎರಡು ಇಮೇಲ್ ಗಳು ಬಂದಿವೆ. ಒಂದು ತನಿಖೆ ಹಂತದಲ್ಲಿದ್ದು, ಇನ್ನೊಂದನ್ನು ಪರಿಶೀಲಿಸಬೇಕಾಗಿದೆ. ಹೈದರಾಬಾದ್ ಮೂಲದ ಟಿವಿ ಚಾನೆಲ್ ಒಂದರಲ್ಲಿರುವ ಕೀಚಕ ನಿಗೆ ಸದ್ಯದಲ್ಲಿಯೇ ಶಾಸ್ತಿ ಆಗುವ ಸಾಧ್ಯತೆ ಇದೆ.
ಕಚೇರಿಗಳಲ್ಲಿ ದುಡಿಯುವ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುವ ಕೀಚಕರು ಇನ್ನಾದರೂ ಎಚ್ಚೆತ್ತುಕೊಂಡು ತಪ್ಪು ತಿದ್ದಿಕೊಂಡರೆ ಬಚಾವ್ ಆಗುತ್ತೀರಿ ಇಲ್ಲವಾದರೆ ಎಚ್ಚರಿಕೆ ಬಗ್ಗೆ "ವಿಸಿಲ್'" ಊದುವ ಕೆಲಸ ಬ್ಲಾಗ್ ಮಾಡಬೇಕಾಗುತ್ತದೆ.

Tuesday

ಲೈಂಗಿಕ ಪೀಡಕ ಬ್ಯೂರೊ ಚೀಪ್ ಗಳೇ ಎಚ್ಚರ..

(ಸಂಪಾದಕೀಯಬ್ಲಾಗ್ ಕೃಪೆ) ಪ್ರಮುಖ ಪತ್ರಿಕೆಯೊಂದರ ಬ್ಯೂರೋ ಮುಖ್ಯಸ್ಥರಿಂದ ನಿನ್ನೆ ರಾಜೀನಾಮೆ ಪಡೆದು ಹೊರಹಾಕಲಾಗಿದೆ. ಆತ ತನ್ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅಶ್ಲೀಲ ಇ-ಮೇಲ್ ಕಳುಹಿಸಿದ್ದು ಇದಕ್ಕೆ ಕಾರಣ. ಈ ಇ-ಮೇಲ್ ಅನ್ನು ನೇರವಾಗಿ ಪತ್ರಿಕೆಯ ಸಂಪಾದಕರಿಗೆ ರವಾನಿಸಿದ ದಿಟ್ಟ ಮಹಿಳೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಸಂಪಾದಕರೂ ಹಿಂದೆಮುಂದೆ ನೋಡದೆ ಬ್ಯೂರೋ ಮುಖ್ಯಸ್ಥರನ್ನು ಸೇವೆಯಿಂದ ಕಿತ್ತು ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕಡೆಗೆ ಬ್ಯೂರೋ ಮುಖ್ಯಸ್ಥನ ಮನವಿಯ ಮೇರೆಗೆ ಆತನಿಂದ ರಾಜೀನಾಮೆ ಪಡೆದು ಸಾಗಹಾಕಲಾಗಿದೆ.ಈ ಬ್ಯೂರೋ ಮುಖ್ಯಸ್ಥರ ಮೇಲೆ ಆರೋಪಗಳ ಮಹಾಪೂರವೇ ಹಿಂದಿನಿಂದಲೇ ಇದ್ದವು. ಆದರೂ ಆತನನ್ನು ಕಾಣದ ಕೈಗಳು ರಕ್ಷಿಸುತ್ತಲೇ ಬಂದಿದ್ದವು. ಈತನ ವಿರುದ್ಧದ ಆರೋಪಗಳ ಕುರಿತು ಹಿಂದೆ ಸಂಪಾದಕೀಯದಲ್ಲೂ ತಾವು ಓದಿರುತ್ತೀರಿ. ದೂರು ಕೊಟ್ಟ ಮಹಿಳೆಯ ಹೆಸರು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಇಡೀ ಘಟನೆಯ ಸಂಸ್ಥೆ, ವ್ಯಕ್ತಿಗಳ ಹೆಸರನ್ನು ನಾವು ಇಲ್ಲಿ ಕಾಣಿಸುತ್ತಿಲ್ಲ.ಇದು ಕೇವಲ ಒಂದು ಅಶ್ಲೀಲ ಇ-ಮೇಲ್‌ನಿಂದ ಆಗಿರುವ ರಾದ್ಧಾಂತದಂತೆ ಕಾಣುತ್ತಿಲ್ಲ. ನೊಂದ ಮಹಿಳೆ ಲೈಂಗಿಕ ಕಿರುಕುಳದ ದೂರನ್ನೂ ನೀಡಿದ್ದಾರೆ ಎಂಬ ಮಾಹಿತಿಯಿದೆ. ಇದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಎಲ್ಲ ಸಾಧ್ಯತೆಗಳೂ ಇದ್ದಿದ್ದರಿಂದಾಗಿ ಪತ್ರಿಕಾ ಸಂಸ್ಥೆ ಆತುರಾತುರವಾಗಿ ಕ್ರಮ ಕೈಗೊಂಡಿದೆ. ಪತ್ರಕರ್ತ ದೊಡ್ಡ ಶಿಕ್ಷೆಯಿಂದ ಪಾರಾಗಿ ಚಿಕ್ಕ ಶಿಕ್ಷೆ ಅನುಭವಿಸಿದ್ದಾನೆ.ಇದು ಒಂದು ಘಟನೆ ಮಾತ್ರವಲ್ಲ. ಇಂಥದ್ದು ಅಲ್ಲಲ್ಲಿ, ಆಗಾಗ ನಡೆಯುತ್ತಲೇ ಇವೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಸುದ್ದಿಸಂಪಾದಕರೊಬ್ಬರು ತಮ್ಮ ಅಧೀನ ಮಹಿಳಾ ಸಿಬ್ಬಂದಿಗೆ ಮದುವೆಯಾಗು ಎಂದು ಪೀಡಿಸಿದ ಪರಿಣಾಮ ಇತ್ತೀಚಿಗೆ ಆಕೆ ಪತ್ರಿಕೆಯನ್ನೇ ತೊರೆದುಹೋದರು. ದೊಡ್ಡ ಸ್ಥಾನದಲ್ಲಿ ಕುಳಿತ ಕೆಲ ಕೀಚಕ ಪತ್ರಕರ್ತರು ತಮ್ಮ ಕೈಕೆಳಗಿನ ಮಹಿಳೆಯರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಆದರೆ ಇದ್ಯಾವುದೂ ಸುದ್ದಿಯಾಗುವುದಿಲ್ಲ. ಯಾಕೆಂದರೆ ಸುದ್ದಿ ಮಾಡುವವರೇ ಇಲ್ಲಿ ಆರೋಪಿಗಳು.ನಿಜ, ಇದು ಕೇವಲ ಮಾಧ್ಯಮರಂಗದ ಸಮಸ್ಯೆ ಮಾತ್ರವಲ್ಲ. ಉದ್ಯೋಗಸ್ಥ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಇಂಥ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಇಂಥ ಕೀಚಕರನ್ನು ಎದುರಿಸುವ ಧೈರ್ಯ, ಸಾಮರ್ಥ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಲೇಬೇಕು. ಈ ಪ್ರಕರಣದಲ್ಲಿ ಆದಂತೆ ಇಂಥವರನ್ನು ಮನೆಗೆ, ಜೈಲಿಗೆ ಅಟ್ಟುವ ಸಾಹಸವನ್ನು ತೋರಬೇಕಿದೆ.

ಬಿಸಿಲ ನಾಡಿನ ಪಜೆವಾಣಿಯಿಂದ ಉದಯ ಅಸ್ತ

ಶಂಕರ ಭಟ್ಟರ ಉದಯ ಆಗದೆ ಅಸ್ತವಾಗಿದೆ ಶಂಕರ ಭಟ್ಟರನ್ನು ಪಜೆವಾಣಿಯಿಂದ ಮೇ ೩೧ ರಂದು ಅವರನ್ನು ಗುಲ್ಬರ್ಗಆಫೀಸಿನಿಂದ ರಾಜಿನಾಮೆ ಪಡೆದು ಕಳುಹಿಸಲಾಗಿದೆ. ಭಟ್ಟರು ಗುಲ್ಬರ್ಗ ಕಚೇರಿಯ ಪ್ರಧಾನ ವರದಿಗಾರರು. ಬ್ಯೂರೊ ಮುಖ್ಯಸ್ಥರು. ಕಳೆದ ವರ್ಷ ಹುಬ್ಬಳ್ಳಿಯಿಂದ ವರ್ಗಾವಣೆ ಆಗಿತ್ತು.
ಕೆಲವು ಅವ್ಯವಹಾರದಲ್ಲಿ ಅವರ ಹೆಸರು ಬಂದಿತ್ತು ಎನ್ನುವುದು ವಿರೋಧಿಗಳ ಆರೋಪ. ಅದಕ್ಕಾಗಿ ಕೆಲಸದಿಂದ ತೆಗೆದು ಹಾಕಿಲ್ಲ. ಬದಲಾಗಿ ಹುಬ್ಬಳ್ಳಿ ಇರುವಾಗ ಮಾಡಿದ ಸಮಾಜ ಸೇವಾ ಕೆಲಸಕ್ಕಾಗಿ ಕೂಡ ಅಲ್ಲ. ಹುಬ್ಬಳಿಯಿಂದ ಗುಲ್ಬರ್ಗಕ್ಕೆ ಹೋದ ಅನಂತರ ಅವರು ಬರೆದ ಒಂದು ಪತ್ರ ಅವರನ್ನು ಬಳಿ ತೆಗೆದುಕೊಂಡಿದೆ. ಅದು ಒಂದು ಹೆಣ್ಣು ಮಗಳಿಗೆ ಸಂಬಂದಿಸಿದ್ದು. ಆಕೆ ಇವರ ಮಗಳಂತೆ ಇದ್ದವಳು. ಅದೇಕೋ ಸ್ವಲ್ಪ ಹಳಸಿತ್ತು.
ಪಜೆವಾಣಿ ಇತಿಹಾಸದಲ್ಲೇ ಒಂದು ಅಪೂರ್ವ ಘಟನೆ.
(ನ್ಯೂಮೀಡಿಯಾಬ್ಲಾಗ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ಕೃಪೆ)

ಸಂಕೇಶ್ವರ ಇನ್ನೊಂದುವಿಜಯ ಪತಾಕೆ (ಪತ್ರಿಕೆ)

(ಸಂಪಾದಕೀಯ ಕೃಪೆ)
ಮಾಧ್ಯಮ ಕ್ಷೇತ್ರದಲ್ಲಿ ವಿಜಯ ಸಂಕೇಶ್ವರರ ಎರಡನೇ ಇನ್ನಿಂಗ್ಸ್ ಇದು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಗಳಿಸಿದ ಭರ್ಜರಿ ಯಶಸ್ಸು ಈಗ ಇತಿಹಾಸ. ವಿಜಯ ಕರ್ನಾಟಕದ ಮೂಲಕ ಸಂಕೇಶ್ವರರು ಎಬ್ಬಿಸಿದ ಬಿರುಗಾಳಿ ಕರ್ನಾಟಕದ ಪತ್ರಿಕಾಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು. ಸಂಕೇಶ್ವರರು ತಮ್ಮ ವ್ಯಾವಹಾರಿಕ ಜಾಣ್ಮೆಯನ್ನು ಪ್ರಯೋಗಿಸಿ ವಿಜಯ ಕರ್ನಾಟಕವನ್ನು ನಂ.೧ ಮಾಡುವಲ್ಲಿ ಯಶಸ್ವಿಯಾಗಿದ್ದರು. ವಿಶ್ವೇಶ್ವರ ಭಟ್ಟರಂಥ ಪ್ರಯೋಗಶೀಲ ಸಂಪಾದಕರು ಲಭಿಸಿದ್ದೂ ಸಹ ಅವರಿಗೆ ಅನುಕೂಲಕರವಾಗಿತ್ತು. ಕನ್ನಡ ಪತ್ರಿಕಾರಂಗದಲ್ಲಿ ಹಿಂದೆಂದೂ ಕಾಣದಂಥ ಬೆಲೆಸಮರವನ್ನು ಆರಂಭಿಸಿ, ಇತರ ಎಲ್ಲ ಪತ್ರಿಕೆಗಳಿಗೆ ಹೊಡೆತ ಕೊಡುವಲ್ಲಿ ಸಂಕೇಶ್ವರರು ಯಶಸ್ವಿಯಾಗಿದ್ದರು. ಇವತ್ತಿನ ಪತ್ರಿಕೆಯನ್ನು ನಾಳೆ ಓದುವಂಥ ವ್ಯವಸ್ಥೆಯಿದ್ದ ರಾಜ್ಯದ ಮೂಲೆಮೂಲೆಯ ಹಳ್ಳಿಗಳಿಗೆ ಬೆಳಿಗ್ಗೆ ೬ ಗಂಟೆಗೆಲ್ಲ ತಮ್ಮ ವಿಶಾಲ ನೆಟ್‌ವರ್ಕ್‌ನ ಮೂಲಕ ತಲುಪಿಸಿದ್ದು ಸಂಕೇಶ್ವರರ ಮಹತ್ವಪೂರ್ಣ ಸಾಧನೆ. ಇತರ ಪತ್ರಿಕೆಗಳ ಓದುಗರನ್ನು ಕಿತ್ತುಕೊಳ್ಳುವುದರ ಜತೆಜತೆಗೆ ಹೊಸ ಓದುಗರನ್ನು ಸೃಷ್ಟಿಸಿದ್ದು ವಿಜಯ ಕರ್ನಾಟಕದ ಹೆಮ್ಮೆ. ಆದರೆ ವಿಜಯ ಕರ್ನಾಟಕ ತನ್ನ ಬೆಲೆ ಸಮರದ ಮೂಲಕ ಸಣ್ಣ ಪತ್ರಿಕೆಗಳ ಬೇರುಗಳನ್ನೇ ಅಲ್ಲಾಡಿಸಿಬಿಟ್ಟಿತು. ಹಲವಾರು ಪತ್ರಿಕೆಗಳು ಮುಚ್ಚಿಹೋಗುವಂಥ ಪರಿಸ್ಥಿತಿ ನಿರ್ಮಾಣವಾಯಿತು.

ಸಂಕೇಶ್ವರರು ತಮ್ಮ ವಿಜಯ ಕರ್ನಾಟಕವನ್ನು ಅದರ ಜತೆಗೆ ಉಷಾಕಿರಣ ಎಂಬ ತಮ್ಮದೇ ಪರ್ಯಾಯ ಪತ್ರಿಕೆಯನ್ನು, ವಿಜಯ ಟೈಮ್ಸ್ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಟೈಮ್ಸ್ ದೊರೆಗಳಿಗೆ ಮಾರುವುದರ ಮೂಲಕ ತಮ್ಮ ಮೊದಲ ಇನ್ನಿಂಗ್ಸ್ ಮುಗಿಸಿದ್ದರು. ಹೀಗೆ ಪತ್ರಿಕೆಗಳನ್ನು ಮಾರುವಂತಾಗಲು ನಿರ್ಮಾಣಗೊಂಡ ಸನ್ನಿವೇಶಗಳಿಗೆ ಹಲವು ಆಯಾಮಗಳಿವೆ. ಕಾರಣಗಳು ಮಾತ್ರ ಇನ್ನೂ ನಿಗೂಢ.

ಈಗ ಮತ್ತೊಂದು ಇನ್ನಿಂಗ್ಸ್ ಆಡಲು ಸಂಕೇಶ್ವರರು ಪ್ಯಾಡು ಕಟ್ಟಿ ಇಳಿಯುತ್ತಿದ್ದಾರೆ. ಹೇಳಿಕೇಳಿ ಅವರು ಅಪ್ಪಟ ವ್ಯವಹಾರಸ್ಥರು. ರಾಜಕೀಯ ಜಾಣ್ಮೆಯಿಲ್ಲದೆ ಆ ಕ್ಷೇತ್ರದಲ್ಲಿ ಏಟು ತಿಂದಿದ್ದೇನೋ ನಿಜ. ಆದರೆ ವ್ಯವಹಾರದಲ್ಲಿ ಅವರು ನಿಸ್ಸೀಮರೆಂದು ಎಲ್ಲರಿಗೂ ಗೊತ್ತಿರುವುದರಿಂದಲೇ ಹೊಸ ಪತ್ರಿಕೆಯ ಸ್ವರೂಪ, ಉದ್ದೇಶ, ಗುರಿ ಇತ್ಯಾದಿಗಳ ಕುರಿತು ಮಾಧ್ಯಮ ಪಂಡಿತರಲ್ಲಿ ಸಾಕಷ್ಟು ಕುತೂಹಲವಿದೆ.

ಅದೆಲ್ಲ ಸರಿ, ಸಂಕೇಶ್ವರರ ಹೊಸ ಪತ್ರಿಕೆಗೆ ಸಾರಥಿಗಳು ಯಾರು? ನಮಗೆ ಗೊತ್ತಾಗಿರುವ ಮಾಹಿತಿ ಪ್ರಕಾರ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ ಹಾಗು ತಿಮ್ಮಪ್ಪ ಭಟ್ಟರ ಹೆಸರು ಮುಂಚೂಣಿಯಲ್ಲಿದೆ. ಇಬ್ಬರೂ ಸಜ್ಜನರು, ಸಂಭಾವಿತರು. ಇಬ್ಬರಿಗೂ ಹೊಸ ಪತ್ರಿಕೆಯನ್ನು ನಿರ್ವಹಿಸಲು ಬೇಕಾದ ಅನುಭವವಿದೆ. ಈ ಪೈಕಿ ಉದಯವಾಣಿ ಮಾಜಿ ಸಂಪಾದಕರಾದ ತಿಮ್ಮಪ್ಪ ಭಟ್ಟರು ಸಂಕೇಶ್ವರರ ಹೊಸ ಪತ್ರಿಕೆಯಲ್ಲಿ ಇದ್ದೇ ಇರುತ್ತಾರೆ ಎಂಬುದು ನಮಗೆ ಗೊತ್ತಾದ ಖಚಿತ ಮಾಹಿತಿ.

ಶರ್ಮಾಜಿ" ಠೀವಿ ಹೋಯ್ತು ! ಜೋತಿಶಿಗೆಶನಿಗ್ರಹ ಪೀಡೆ

ಮತ್ತೊಂದು ಸಂತಸದ ವಿಷಯ. ಜೀ ಟಿವಿಯ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದಿಂದ ನರೇಂದ್ರ ಶರ್ಮ ಅವರನ್ನು ತೊಲಗಿಸಲಾಗಿದೆ. ಇದು ನಮಗೆ ಗೊತ್ತಾಗಿರುವ ಮಾಹಿತಿ. ಜೀ ಟಿವಿಗೆ ಒಂದು ಥ್ಯಾಂಕ್ಸ್ ಹಾಗು ಜಗನ್ಮಾತೆಗೆ ಕೋಟಿ ವಂದನೆ. ಬಾಯಿಬಡುಕ ನರೇಂದ್ರ ಶರ್ಮನನ್ನು ತೊಲಗಿಸಿ ಎಂದು ನಾವೆಲ್ಲರೂ ಆರಂಭಿಸಿದ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಕಡೆಗೂ ಯಶಸ್ವಿಯಾಗಿದೆ. ಜೀ ಟಿವಿ ಮುಖ್ಯಸ್ಥರಿಗೆ ಸಾವಿರಾರು ಪತ್ರಗಳನ್ನು ಬರೆದು ಈ ಕೊಳಕು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕೋರಿದ ಎಲ್ಲರ ಶ್ರಮವೂ ಸಾರ್ಥಕಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು.

ನರೇಂದ್ರ ಶರ್ಮ ಅನಾಮತ್ತಾಗಿ ಮೂರು ಚಾನಲ್‌ಗಳನ್ನು ಸುತ್ತಾಡಿ ಮುಗಿಸಿಯಾಗಿದೆ. ಕಸ್ತೂರಿ, ಸುವರ್ಣ ಹಾಗು ಜೀ ಟಿವಿಗಳ ಪ್ರಯಾಣ ಮುಗಿದಾಗಿದೆ. ಮುಂದೆ ಆತ ಇನ್ನ್ಯಾವ ಚಾನಲ್ ಹಿಡಿಯುತ್ತಾರೋ ಕಾದು ನೋಡಬೇಕು. ಆದರೆ ಈತನ ವಿರುದ್ಧ ಎದ್ದಿರುವ ಆಕ್ರೋಶವನ್ನು ಗಮನಿಸಿರುವ ಇತರ ಚಾನಲ್‌ಗಳು ಈ ಸೆರಗಿನ ಕೆಂಡವನ್ನು ಕಟ್ಟಿಕೊಂಡರೆ ಎದುರಿಸುವ ಅಪಾಯಗಳನ್ನು ಈಗಾಗಲೇ ಊಹಿಸಿರಬಹುದು. ಇನ್ನುಳಿದದ್ದು ಅವರಿಗೆ ಸೇರಿದ್ದು. (ಸಂಪಾದಕೀಯ)

ಅನಾಥಗೆ ಸ್ವಾಮೀಜಿ ರಕ್ಷೆ !


ಭಜರಂಗ ದಳದ ಪ್ರಧಾನ ಮಾರ್ಗದರ್ಶಕ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ ಕಾಲಿಗೆ ರೆಸಿಡೆಂಟ್ ಎಡಿಟರ್ರ್ ವಿಕೆ ಅನಾಥ ಬಿದ್ದಿರುವ ಲೇಟೆಸ್ಟ್ ಸುದ್ದಿ ಬಂದಿದೆ. ಶ್ರೀರಾಮ ಸೇನೆ ಬಜರಂಗ ದಳದ ಕಂಟ್ರೋಲ್ ಹೊಂದಿರುವ ವಜ್ರದೇಹಿ ಮಠಕ್ಕೆ ಕುನಾಥ ಭೇಟಿ ಕೊಡುವುದು ಹೊಸತಲ್ಲ. ತನ್ನನ್ನು ಎಬ್ಬಿಸಲಾಗುತಿರುವ ಬಗ್ಗೆ ಕೇಳಿಕೊಂಡಿದ್ದಾನೆ. ...
ಹೆಚ್ಚಿನ ವಿವರಗಳಿಗೆ ನ್ಯೂವ್ ಮೀಡಿಯಾಬ್ಲಾಗ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ನೋಡಿ

Monday

ರಾಮ -ರಾಘವ ಯುದ್ಧ.. ಕು. ಸನ್ನದ್ಧ



ರಾಘವನ ಮೇಲೆ ರಾಮನೇ ಕುಂಭಕರ್ಣನ ಜತೆ ಸೇರಿ ಯುದ್ಧ ಘೋಷಿಸಿದರೆ... ಹೌದು ಸ್ವಾಮಿ ಇದು ಕಲಿಕಾಲ. ವಿಕೆ ರಾಮ ಮತ್ತು ಕುಂಭಕರ್ಣ (ಕುನಾಥ) ಮಂಗ ಳೂರಿನ ಕಪಿಸೇನೆ ಬಳಸಿಕೊಂಡು ರಾಘವ ಮತ್ತು ಲಕ್ಷ್ಮಣ (ನಾವಡ)ರನ್ನು ಮಣಿಸಲು ಪಕ್ಕಾ ಸ್ಕೆಚ್ ರೂಪಿಸಿದ್ದಾರೆ.
ಪ್ರತಿಯೊಬ್ಬ ಎದುರಾಳಿಯನ್ನು ದಾಖಲೆಯ ಬಲೆಯಲ್ಲಿ ಕೆಡವಿ ಗೆದ್ದು ಬಿಡುವುದು ಇವರ ವೈಶಿಷ್ಟ್ಯ. ಈ ಬಾರಿ ಮಾತ್ರ ಸಂಪಾದಕರಿಗೇ ಕೆಡ್ಡಾ ತೋಡಿದ್ದಾರೆ ರಾಮನ ಬಂಟರು ! ವಿಶ್ವ ಈಶ್ವರನೇ ಇರಲಿ, ರಾಘವನೇ ಬರಲಿ ಅವರ ವಿರುದ್ಧ ಅಭಿಯಾನ ನಡೆಸುವುದೇ ಇವರ ಕೆಲಸ. ಈಗ ರಾಘವ, ನಾವಡರ ಸರದಿ.
ಪ್ರತಿ ದಿನ ಮರಣವಾಣಿಯಲ್ಲಿ ಬಂದ ಜಾಹೀರಾತುಗಳು ಮತ್ತು ಜಾಹೀರಾತು ಸುದ್ದಿಗಳ ಕಟ್ಟಿಂಗ್ ರೆಡಿ ಮಾಡುವುದಷ್ಟೇ ಜಾಹೀರಾತು ಸಿಬ್ಬಂದಿ ಕೆಲಸ ಆಗಿಬಿಟ್ಟಿದೆ. ಒಂಥರಾ ಮುಷ್ಕರ ಹೂಡಿದ್ದಾರೆ. ಕೆಲಸ ಮಾಡದಿದ್ದರೆ ಜಾಹೀರಾತು ಬರುವುದಾದರೂ ಹೇಗೆ.. ಶ್ರೀರಾಮಚಂದ್ರನೇ ಬಲ್ಲ.



" ಜಾಹೀರಾತು ಸುದ್ದಿ ಪ್ರಕಟವಾಗದೆ ಲಕ್ಷಗಟ್ಟಲೆ ಜಾಹೀರಾತು ಮಿಸ್ ಆಗುತ್ತಿದೆ. ಇದರಿಂದ ನನಗೆ, ಅದಕ್ಕಿಂತಲೂ ಕಂಪನಿಗೆ ಹೆಚ್ಚು ನಷ್ಟ ಆಗಿದೆ'



ಎಂಬ ಒಕ್ಕಣೆ ವಿವರಗಳನ್ನು ಗ್ರಾಮೀಣ ಅರೆಕಾಲಿಕ ವರದಿಗಾರಿಂದ ಪಡೆದು ಅದರ ದಾಖಲೆ ಮೂಟೆಗಳನ್ನು ಬೆಂಗಳೂರಿಗೆ ನೀಡಿದ್ದಾರೆ. ಜಾಹೀರಾತು ಸುದ್ದಿಗಳಿಗೆ ಕಠಿಣ ನಿಬಂಧನೆ ಹೇರಿದ್ದರಿಂದ ಒಂದು ತಿಂಗಳಲ್ಲಿ 20 ಲಕ್ಷ ರೂ. ಆದಾಯ ಖೋತಾ ಆಗಿದೆ ಎಂಬ ವಿಶೇಷ ನೋಟ್ ಕೂಡಾ ನೀಡಿದ್ದಾರೆ. ಕಮಲ ಪಕ್ಸದ ಭಟ್ಟರ ನೇತೃತ್ವದಲ್ಲಿ ಫೈಲ್ ರೆಡಿಯಾಗಿದೆ. ಇನ್ನೇನು ಸಿಇಒ ನೋಡಿ ಓಕೆ ಅಂದರೆ, ನಾವು ಗೆದ್ದೆವು ಎಂಬ ಭ್ರಮೆಯಲ್ಲಿ ಇದ್ದಾರೆ ಕಪಿ ಸೇನೆ ನಾಯಕರು.



ಆದರೆ ಬುಡಕ್ಕೆ ಬಂದು ಬಿಟ್ಟಿದೆ. ಆರಾಮನ 35 ಲಕ್ಷದ ವೈಭವೋಪೇತ ಅರಮನೆ, ಹೊಸ ಕಾರು, ಕುಂಭಕರ್ಣ (ನಾಥ)ನ ೨೮ಲಕ್ಷದ ಉರುವಮನೆ, ಕಾರು, ಇದಕ್ಕೆ ಒಟ್ಟಾದ ವಂತಿಗೆ, ದುಬೈ ಹಣದ ಬಗ್ಗೆ ಕಂಪನಿ ತನಿಖೆ ನಡೆಸಿದರೆ... ! ಘನ ಘೋರ ಯುದ್ಧದಲ್ಲಿ ಭಸ್ಮಾಸುರನಂತೆ ಸ್ವತಃ ತಲೆ ಮೇಲೆ ಕೈ ಇಟ್ಟು ಸಾಯಬೇಕು ಇದೆಲ್ಲಾ ಬೇಕಾ ?

ಶಶಿ ಜಾರಿದಾ.. ಬಾ..ರವಿ ಮೂಡಿದ..

ಸಮಯ ಜಂಪ್ ಟಿ ಆರ್ ಪಿ ಜಂಪ್ ಆಗಿದೆ. ಸುವರ್ಣ ಹಾಗೂ ಹೀಗೂ ಕುಂಟುತ್ತಾ ನಡೆಯುತ್ತಿದ್ದು, ಮುಂದಿನ ನಾಯಕನನ್ನು ಎದಿರು ನೋಡುತ್ತಾ ಸುವರ್ಣ ಯುಗಕ್ಕಾಗಿ ಕಾಯುತ್ತಿದೆ. ಸುವರ್ಣದಲ್ಲಿ ರಾಜಕೀಯ ಹಿರಿಯ ವರದಿಗಾರ ಸುಭಾಷ್ ಹೂಗಾರ ಮತ್ತು ರವಿರಾಜ ವಳಂಬೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ವಿಚಿತ್ರ ವರದಿಗಾರರಾದ ಶಂಕರ ಘಟ್ಟ ಚಂದ್ರೇಗೌಡ ನನ್ನು ನಿವಾಳಿಸಿ ಕಳುಹಿಸಿದ್ದಾರೆ. ಚಂದ್ರೇಗೌಡ ಎಂಬ ಗಿರಾಕಿ ಸಂಸ್ಥೆಯ ಎಲ್ಲ ಸೊತ್ತುಗಳನ್ನೂ ಸಂಪೂರ್ಣ ಻ನುಭವಿಸಿದ ಸುಖ ಲೋಲುಪ. ಇಂಥ ಭಟ್ಟಂಗಿಗಳಿಂದಲೇ ಶಶಿಧರ ಭಟ್ಟರು ಮೈ ಸುಟ್ಟುಕೊಂಡರು. ಪರಮೇಶ್ವರ, ಚಂದ್ರ ಮೊದಲಾದವರ ಸಂಪಾದನೆ ನೋಡಿದ ಭಟ್ಟರು ಸುಮ್ಮನೆ ಯಾಕೆ ಉಳಿದು ಬಿಟ್ಟರು ಎಂಬ ಸಂಶಯ ಸಿಬ್ಬಂದಿ ವರ್ಗಕ್ಕೆ ಇತ್ತು. ಅಷ್ಟರಲ್ಲಿ ಭಟ್ಟರನ್ನು ಕಳುಹಿಸಿದ ಚಾನೆಲ್ ರಂಗನನ್ನು ಸೇರಿಸಿದ್ದರು. ಈಗ ಜಯಪ್ರಕಾಶ್ ಶೆಟ್ಟರು ಸುವರ್ಣದ ರಾಜಕೀಯ ಬ್ಯೂರೊ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೂಲತಃ ಈಟಿವಿ ಆಂಕರ್ ರಾಜಕೀಯದಲ್ಲಿ ಅಷ್ಟೇನೂ ಪಳಗಿಲ್ಲ. ರಂಗ ಇರುವವರೆಗೂ ಮೂಲೆ ಸೇರಿದ್ದರು. ಆದರೆ ಹಿರಿಯರೆಲ್ಲ ಬಿಟ್ಟು ಹೋದ ಬಳಿಕ ಸ್ಥಾನಕ್ಕೆ ಏರಿದ್ದಾರೆ.
ಶಶಿ ಅಸ್ತ :
ಶಶಿಧರ ಭಟ್ಟರು ಸಮಯ ನೋಡಿ ಸಮಯಕ್ಕೆ ಸೇರಿದ್ದರು. ಶಶಿ ಮೂಡಿದ ಎನ್ನುವಷ್ಟರಲ್ಲಿ ಮತ್ತೆ ಅಸ್ತಮಿಸುತ್ತಿರುವ ಲಕ್ಷಣ ಕಂಡು ಬಂದಿದೆ. ಸಮಯ ಸೇಲ್ ಆದರೆ ಭಟ್ಟರಿಗೆ ಮತ್ತೆ ಟೆಂಡರು ಕರೆಯುವವರು ಯಾರು ? ಎಂಬ ಪ್ರಶ್ನೆ ಮೂಡಿದೆ. ಸಮಯ ಆಧ್ಯಾತ್ಮಿಕದತ್ತ ವಾಲುವ ಎಲ್ಲ ಲಕ್ಷಣ ಕಾಣಿಸಿದೆ. ನಮ್ಮ ಸಂಸ್ಕೃತಿಯ ಅಂದರೆ ಋಷಿ ! , ಮಠ, ಮಂದಿರಗಳಿಗೆ ಹೆಚ್ಚಿನ "ಸಮಯ" ಮೀಸಲಿಡುವ ಸಾಧ್ಯತೆ ಗಳಿವೆ.
ರಂಗನಾಥನ ಗುಣ ...
ರಂಗ ಸುವರ್ಣ ದಲ್ಲಿ ಕ್ಯಾಪ್ಟನ್ ಆಗಿ ಬದಲಾದ ಮೇಲೆ ಪರ ವಿರೋಧ ಅಭಿಪ್ರಾಯಗಳು ಮೂಡಿದವು. ಏನೇ ಹೇಳಲಿ ಸಪ್ಪೆಗಿಂತ ವಿಚಿತ್ರ, ವಿಕ್ಷಿಪ್ತ ವ್ಯಕ್ತಿತ್ವ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬುವುದಕ್ಕೆ ರಂಗ ಸಾಕ್ಷಿ. ಎಷ್ಟೇ ದೂಷಿಸಿದರೂ ಅವರು ಹೋದ ಬಳಿಕ ಏನೋ ಕಳೆದುಕೊಂಡ ಅನುಭವ. ಮರೆತರೂ ಮರೆಯದ ಮಾಯೆ ರಂಗನಾಥರದ್ದು.
ಸುವರ್ಣದಲ್ಲಿ ಲಾದೆನ್ ಕುರಿತು ಅನುಭವ ! ಹೇಳಿಕೊಂಡ ಬೆಳಗರೆ ಜನಶ್ರೀಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಅವಕಾಶವಾದಿಗಳೆಂದರೆ ಹೀಗೆ.. ಎಲ್ಲೂ ಗಿಟ್ಟಿಸಿಕೊಳ್ಳುತ್ತಾರೆ, ಅವಶ್ಯಕತೆ ಇಲ್ಲಾ ಅಂದರೆ ಒದ್ದು ಹೊರಕಳುಹಿಸುತ್ತಾರೆ... ಒಂದಲ್ಲಾ ಒಂದು ದಿನ ಒದೆಸಿಕೊಂಡವರೆಲ್ಲಾ ಒಟ್ಟಾಗಿ ಒದೆಯುವ ದಿನ ದೂರ ಇಲ್ಲ.

Sunday

ಪಜೆವಾಣಿ ಮಹೀ ಪಡೆ ಹಿಟ್ 'ವಿಕೆ' ಟ್


ವಿಕೆಯನ್ನು ಮಣ್ಣು ಮುಕ್ಕಿಸುತ್ತೇನೆ, ತಿಂಗಳ ಒಳಗೆ ಸರ್ಕುಲೇಶನ್ ೨೫ ಸಾವಿರ ಮಾಡಿ ತೋರಿಸುತ್ತೇನೆ ಎಂದು ಮುನ್ನುಗ್ಗುತ್ತಿದ್ದ ಮಂಗಳೂರು ಪಜೆವಾಣಿ ಚೀಪ್ ಬ್ಯೂರೊ ಈಗ ಪಜೆ ಹಾಕಿ ಮಲಗಿದ್ದಾರೆ ! ವಿಕೆಗಿಂತ ಮೊದಲು ಎಡಿಶನ್ ಆರಂಭಿಸಿದರೂ ಅದರ ಹತ್ತನೇ ಒಂದು ಅಂಶ ಮಾತ್ರ ಪ್ರಸರಣ ಇರುವ ಬಗ್ಗೆ ಚಿಂತಿತರಾಗಿದ್ದ ಆಡಳಿತ ಮಂಡಳಿಗೆ ಭರವಸೆ ಮಹಾಪೂರ ನೀಡಿದ್ದೇ ವಿಕೆಯ ಮಾಜಿ ಉದ್ಯೋಗಿ ಮಹಿ. ಮಂಗಳೂರಿನ ವಿಕೆಯನ್ನು ಮಲಗಿಸಿ ಪಜೆವಾಣಿ ಪ್ರಸರಣವನ್ನು ಹೇಗಾದರೂ ಮಾಡಿ ಮೇಲೆತ್ತುತ್ತೇನೆ ಎಂದು ಮ್ಯಾನೇಜ್ ಮೆಂಟ್ ಗೆ ಭರವಸೆ ನೀಡಿದ್ದ ಮಹಿ ಪಡೆಯ ಸಾಮ್ರಾಜ್ಯ ಈಗ ಅವನತಿಯಲ್ಲಿದೆ.
ಪ್ರತಿ ದಿನ ವಿಕೆ ನೋಡಿ ಈ ಸುದ್ದಿ ಬಂದಿಲ್ಲ. ಆ ಸುದ್ದಿ ಬಂದಿಲ್ಲ ಎಂದು ಗ್ರಾಮೀಣ ಮತ್ತು ನಗರ ಸುದ್ದಿಗಾರರ ಬೆಂಡೆತ್ತುತ್ತಿದ್ದ ಪರಾಕ್ರಮ ಕಂಡೇ ಸಿಬ್ಬಂದಿ ಇವರಿಗೆ ಭಸ್ಮಾಸುರ ಎಂದು ಹೇಳಿ ತೃಪ್ತಿ ಪಟ್ಟುಕೊಳ್ಳುತ್ತಿದ್ದರು. ಒಂದಿಬ್ಬರು ಹೊಸ ಮುಖಗಳಿಗೆ ಮಣೆ ಹಾಕಿ ಸೀನಿಯರ್ ಗಳನ್ನು ದೂರ ಇಟ್ಟು ಎಲ್ಲ ಬ್ಯೂರೋ ಚೀಫ್ ಗಳ ಚೀಪ್ ಮೆಂಟಾಲಿಟಿ ತೋರಿಸಿ ಕೊನೆಗೆ ಸಾಧಿಸಿದ್ದು ಮಾತ್ರ ಶೂನ್ಯ. ತಳ ಹಿಡಿದ ಪಜೆವಾಣಿ ಮೇಲೆ ಬಂದಿಲ್ಲ. ಪತ್ರಿಕೆ ಗುಣಮಟ್ಟ ಸುಧಾರಿಸಿತೇ ಹೊರತು ಓದುಗರು ಹೆಚ್ಚಲಿಲ್ಲ. ಪ್ರತಿ ತಿಂಗಳು ಪತ್ರಿಕೆ ಸಂಖ್ಯೆ ಹೆಚ್ಚಾಯಿತೇ ಎಂದು ಆಸೆ ಕಣ್ಣುಗಳಿಂದ ನೋಡುತ್ತಿದ್ದದ್ದೇ ಬಂತು.
ಅನಂತಮೂರ್ತಿ ದೂರು !
ಸಂಗ್ರಾಹಕರನ್ನು ಪೀಡಿಸುವ ಈ ಧೋನಿ ವಿರುದ್ಧ ಅನಂತಮೂರ್ತಿ ಮಹಾಶಯರು ಶಾಂತ ಕುಮಾರ್ ಬಳಿ ದೂರು ನೀಡಿದ್ದರು. ಸುದ್ದಿ ಸಂಗ್ರಾಹಕರಿಗೂ ಜ್ಞಾನಪೀಠ ಅನಂತಮರ್ತಿಗೂ ಏನು ಸಂಬಂಧ ಎಂದು ಕೇಳಬೇಡಿ, ಯಾರೋ ಶಿಷ್ಯರ ಮೂಲಕ ಮಹಿ ಕಿತಾಪತಿಗಳನ್ನು ಮ್ಯಾನೇಜ್ ಮೆಂಟ್ ಗೆ ನೀಡಿದ್ದಾರೆ. ಶಾಂತಕುಮಾರ್ ಕರೆಸಿ ಮಾತನಾಡಿದ್ದಾರೆ.
ನನ್ನಿಂದ ಪತ್ರಿಕೆ ಪ್ರಸರಣ ಸಂಖ್ಯೆ ಹೆಚ್ಚಿಸಲು ಸಾಧ್ಯವಿಲ್ಲ ಎಂದ ಮಹಿ ವರ್ಗಾವಣೆ ಕೇಳಿದ್ದಾರೆ. ಆದರೆ ಇನ್ನೂ ಒಂದು ವರ್ಷ ಅಲ್ಲೇ ಮಣ್ಣು ಹೊರುವಂತೆ ಮ್ಯಾನೇಜ್ ಮೆಂಟ್ ಸೂಚಿಸಿದೆ. ಈಗ ಶಿಕ್ಷೆ ರೂಪದಲ್ಲಿ ಸೂರೆ ಹೋದ ಮಂಗಳೂರು ಕೋಟೆಯನ್ನು ಕಾವಲು ಕಾಯುತ್ತಿದ್ದಾರೆ ದೊರೆ ರಾಜಾಧಿರಾಜ ಪತ್ರಿಕಾ ಕುಲತಿಲಕ ಶ್ರೀ ಶ್ರೀ ಮಹೇಂದ್ರವರ್ಮ ಮಹಾರಾಜರು.
ಲಗೋರಿ, ತಿಲ್ಲಾನ ಬದಿಗಿಟ್ಟು ಈಗ
ಹಿಟ್ ವಿಕೆಟ್:
ಹೌದು ಈಗ ವಿಕೆ ಪ್ರಸರಣ ಹೆಚ್ಚಿಸುತ್ತೇನೆ ಎಂದು ಭರವಸೆ ನೀಡಿ ಬಂದ ನಾವಡರ ಕತೆಯೂ ಭಿನ್ನವಾಗಿಲ್ಲ. ಒಳಗೊಳಗೆ ಕತ್ತಿಮಸೆಯುತ್ತಿರುವ ಪೈಯ್ಡ್ ನ್ಯೂಸ್ ನ ಅನೈತಿಕ ಸಂಬಂಧದ ಆ ರಾಮ-ನಾಥ ಪಡೆ ನಾವಡರನ್ನು ಹಿಟ್ ವಿಕೆಟ್ ಮಾಡಿಸಲು ತಂತ್ರ ರೂಪಿಸಿದೆ. ಸುದ್ದಿಸಂಗ್ರಾಹಕರ ಮೂಲಕವೇ ದೂರುಗಳನ್ನು ರೆಡಿ ಮಾಡಿ ಮ್ಯಾನೇಜ್ ಮೆಂಟ್ ಗೆ ಒಪ್ಪಿಸಿದೆ. ಪಾಪ ನಾವಡ ಕತೆ ಗೋವಿಂದ.. ಒಡ್ಡೋಲಗ ಆರಂಭದಲ್ಲಿಯೇ ಅಕಟಕಟಾ.. ಮತ್ತು (ಅ)ಮಂಗಳ ಹಾಡು ಕೇಳಿಬರುತ್ತಿದೆ. ದ್ರೌಪದಿ ವಸ್ತ್ರಾಪಹರಣಕ್ಕೆ ಬಂದ ಕೃಷ್ಣ ಇಲ್ಲಿ (ರಾಘವ) ರಕ್ಷಣೆಗೆ ಬರುತ್ತಾನೆಯೋ ಕಾದು ನೋಡಬೇಕಿದೆ..